Home
ಸುದ್ದಿಜಾಲ

ಇತ್ತೀಚಿನ ಈ ಒನ್‌ಪ್ಲಸ್‌ ಫೋನ್‌ ಬೆಲೆಯಲ್ಲಿ ದಿಢೀರ್‌ ಇಳಿಕೆ!..ಗ್ರಾಹಕರು ಖುಷ್!

ಸ್ಮಾರ್ಟ್‌ಫೋನ್‌ ವಲಯದಲ್ಲಿ ಒನ್‌ಪ್ಲಸ್‌ ಕಂಪನಿಯು ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಹೆಚ್ಚಾಗಿ ಗುರುತಿಸಿಕೊಂಡಿದೆ. ಆ ಪೈಕಿ ಇದೀಗ ಕಂಪನಿಯ ಜನಪ್ರಿಯ ಫೋನ್‌ಗಳಲ್ಲಿ ಒಂದಾದ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಈಗ ಭರ್ಜರಿ ಬೆಲೆ ಇಳಿಕೆ ಕಂಡಿದ್ದು, ಗ್ರಾಹಕರನ್ನು ಫೋನಿನತ್ತ ತಿರುಗಿ ನೋಡುವಂತೆ ಆಗಿದೆ.

ಹೌದು, ಒನ್‌ಪ್ಲಸ್‌ ಸಂಸ್ಥೆಯ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನ್‌ ಪ್ರೈಸ್‌ನಲ್ಲಿ ಈಗ 2,000ರೂ. ಇಳಿಕೆ ಆಗಿದೆ. ಇನ್ನು ಈ ಫೋನ್ 6GB RAM + 128GB ಮತ್ತು 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಎರಡು ವೇರಿಯಂಟ್‌ ಬೆಲೆಯಲ್ಲಿ ಕಡಿತ ಆಗಿದೆ. ಅಂದಹಾಗೆ ಈ ಫೋನ್‌ ಕಳೆದ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿತ್ತು.

ಇತ್ತೀಚಿನ ಈ ಒನ್‌ಪ್ಲಸ್‌ ಫೋನ್‌ ಬೆಲೆಯಲ್ಲಿ ದಿಢೀರ್‌ ಇಳಿಕೆ!..ಗ್ರಾಹಕರು ಖುಷ್!

ಇನ್ನು ಬೆಲೆ ಇಳಿಕೆ ಬಳಿಕ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್‌ 6GB + 128GB ವೇರಿಯಂಟ್‌ 17,999ರೂ. ಬೆಲೆ ಪಡೆದಿದ್ದು, ಅದೇ ರೀತಿ 8GB RAM + 128GB ಸ್ಟೋರೇಕ್‌ ವೇರಿಯಂಟ್‌ ಬೆಲೆಯು 19,999ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್‌ ಹಾಗೂ ಬ್ಲೂ ಬಣ್ಣ ಆಯ್ಕೆಗಳಲ್ಲಿ ಲಭ್ಯ. ಹಾಗಾದರೆ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ : ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನ್‌ 1,080 x 2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.59 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇಯು 202ppi ಪಿಕ್ಸೆಲ್ ಸಾಂದ್ರತೆ ಯನ್ನು ಒಳಗೊಂಡಿದೆ. ಇದು 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇನ್ನು ಗೇಮಿಂಗ್‌ ಗಾಗಿ 240Hz ರೀಫ್ರೆಶ್‌ ರೇಟ್ ಅನ್ನು ಪಡೆದಿದೆ. ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಪಡೆದುಕೊಂಡಿದೆ.

ಪ್ರೊಸೆಸರ್‌ ಪವರ ಮಾಹಿತಿ ಇಲ್ಲಿದೆ : ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗ್ನ್ 695 SoC ಪ್ರೊಸೆಸರ್‌ ಪ್ರೊಸೆಸರ್‌ ಪವರ್‌ ಅನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್‌ ಸಪೋರ್ಟ್‌ ಹೊಂದಿದೆ. ಹಾಗೆಯೇ 6GB RAM + 128 GB ಮತ್ತು 8GB RAM + 128 GB ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳನ್ನು ಈ ಫೋನ್‌ ಪಡೆದಿದೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್ ಆಯ್ಕೆ ಏನು : ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದ್ದು,, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳ ಮಾಹಿತಿ : ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಇದು ಯುಎಸ್‌ಬಿ ಟೈಪ್‌-ಸಿ ಮೂಲಕ 33W ಸೂಪರ್VOOC ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈಫೈ 6, ಬ್ಲೂಟೂತ್ 5.2, NFC, GPS ಮತ್ತು A-GPS ಸೇರಿವೆ. ಹಾಗೆಯೇ ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಇದು ಹೊಂದಿದೆ.

ಕಲರ್ ಆಯ್ಕೆ ಮತ್ತು ಮೆಮೊರಿ ಮಾಹಿತಿ : ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನ್‌ 6GB RAM + 128 GB ಸ್ಟೋರೇಜ್ ಹಾಗೂ 8GB RAM + 128 GB ಸ್ಟೋರೇಜ್ ರೂಪಾಂತರದ ವೇರಿಯಂಟ್‌ ಆಯ್ಕೆ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್‌ ಹಾಗೂ ಬ್ಲೂ ಬಣ್ಣ ಆಯ್ಕೆಗಳಲ್ಲಿ ಲಭ್ಯ.

Best Mobiles in India

English summary
OnePlus Nord CE 2 Lite Price Cut in India: check offer price and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+