Home
ಸುದ್ದಿಜಾಲ

ಈ ಜನಪ್ರಿಯ ಒನ್‌ಪ್ಲಸ್‌ ಫೋನಿನ ಆಫರ್‌ ಬೆಲೆ ತಿಳಿದ್ರೆ, ನೀವು ವಾವ್‌ ಅಂತೀರಾ!

ಒನ್‌ಪ್ಲಸ್‌ ಸಂಸ್ಥೆಯ ಬಹುತೇಕ ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ. ಆ ಪೈಕಿ ಒನ್‌ಪ್ಲಸ್‌ ನಾರ್ಡ್‌ CE 3 5G ಮೊಬೈಲ್‌ ಕೂಡಾ ಒಂದಾಗಿದೆ. ಇದೀಗ ಈ ಸ್ಮಾರ್ಟ್‌ಫೋನ್‌ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಸಖತ್‌ ರಿಯಾಯಿತಿ ಪಡೆದಿದ್ದು, ಒನ್‌ಪ್ಲಸ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಭಾರೀ ಖುಷಿ ಎನಿಸಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 5G ಮೊಬೈಲ್‌ ಶೇ. 7% ರಷ್ಟು ನೇರ ರಿಯಾಯಿತಿ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ 8GB RAM + 128GB ವೇರಿಯಂಟ್‌ ಫೋನ್‌ 24,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಇದರೊಂದಿಗೆ ಬ್ಯಾಂಕ್‌ ಆಫರ್‌ ಸಹ ಗ್ರಾಹಕರಿಗೆ ಲಭ್ಯ ಆಗಲಿವೆ.

ಈ ಜನಪ್ರಿಯ ಒನ್‌ಪ್ಲಸ್‌ ಫೋನಿನ ಆಫರ್‌ ಬೆಲೆ ತಿಳಿದ್ರೆ, ನೀವು ವಾವ್‌ ಅಂತೀರಾ!

ಅಂದಹಾಗೆ ಒನ್‌ಪ್ಲಸ್‌ನ ಈ ಫೋನ್‌ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 782G SoC ಪ್ರೊಸೆಸರ್‌ ಸಾಮರ್ಥ್ಯದ ಹೊಂದಿದೆ. ಇದರ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಇದೆ. ಇನ್ನುಳಿದಂತೆ ಒನ್‌ಪ್ಲಸ್‌ ನಾರ್ಡ್‌ CE 3 5G ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಈ ಜನಪ್ರಿಯ ಒನ್‌ಪ್ಲಸ್‌ ಫೋನಿನ ಆಫರ್‌ ಬೆಲೆ ತಿಳಿದ್ರೆ, ನೀವು ವಾವ್‌ ಅಂತೀರಾ!

ಒನ್‌ಪ್ಲಸ್‌ ನಾರ್ಡ್‌ CE 3 5G - ಫೀಚರ್ಸ್‌

ಒನ್‌ಪ್ಲಸ್‌ ನಾರ್ಡ್‌ CE 3 5G ಮೊಬೈಲ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,080 x 2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 87.9% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ಈ ಜನಪ್ರಿಯ ಒನ್‌ಪ್ಲಸ್‌ ಫೋನಿನ ಆಫರ್‌ ಬೆಲೆ ತಿಳಿದ್ರೆ, ನೀವು ವಾವ್‌ ಅಂತೀರಾ!

ಒನ್‌ಪ್ಲಸ್‌ ನಾರ್ಡ್‌ CE 3 5G ಮೊಬೈಲ್‌ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 782G SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM + 128GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ 12GB RAM + 256GB ಸ್ಟೋರೇಜ್ ವೇರಿಯೆಂಟ್‌ ಆಯ್ಕೆಯಲ್ಲಿಯೂ ಸಹ ದೊರೆಯಲಿದೆ.

ಒನ್‌ಪ್ಲಸ್‌ ನಾರ್ಡ್‌ CE 3 5G ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ 4cm ಮ್ಯಾಕ್ರೋ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ CE 3 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಪಡೆದಿದ್ದು, ಇದು 80W SuperVOOC ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯ 5G, 4G LTE, Wi-Fi, ಬ್ಲೂಟೂತ್ 5.2, NFC, GPS, A-GPS ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌, ಇ-ಕಂಪಾಸ್‌, ಐಆರ್ ಬ್ಲಾಸ್ಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು ಟೆಂಪ್‌ರೇಚರ್‌ ಸೆನ್ಸಾರ್‌ ಒಳಗೊಂಡಿದೆ.

Best Mobiles in India

English summary
OnePlus Nord CE 3 5G attractive price drop on amazon website. check out all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+