Home
ಸುದ್ದಿಜಾಲ

ಇಂದು ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಫಸ್ಟ್‌ ಸೇಲ್‌; ಆರಂಭದಲ್ಲೇ ಬಿಗ್ ಆಫರ್‌!

ಜನಪ್ರಿಯ ಒನ್‌ಪ್ಲಸ್‌ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ 'ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G' ಸ್ಮಾರ್ಟ್‌ಫೋನ್ ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಈ ಫೋನ್‌ ಇಂದು (ಏ. 11 ರಂದು) ಒನ್‌ಪ್ಲಸ್‌ ಆನ್‌ಲೈನ್ ಸ್ಟೋರ್ ಹಾಗೂ ಅಮೆಜಾನ್ ಇಂಡಿಯಾ ತಾಣದಲ್ಲಿ ಮೊದಲ ಸೇಲ್‌ ಪ್ರಾರಂಭಿಸಲಿದೆ.

ಹೌದು, ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಇಂದು ಫಸ್ಟ್‌ ಸೇಲ್‌ ಶುರು ಮಾಡಲಿದ್ದು, ಭರ್ಜರಿ ಆಫರ್‌ ಸಹ ಘೋಷಿಸಿದೆ. ಈ ಫೋನ್‌ 8GB RAM + 128GB ಮತ್ತು 8GB RAM + 256GB ವೇರಿಯಂಟ್‌ ಆಯ್ಕೆ ಪಡೆದಿದೆ. ಇನ್ನು ಬೇಸ್‌ ವೇರಿಯಂಟ್‌ನ ಆರಂಭಿಕ ಬೆಲೆಯು 19,999ರೂ. ಆಗಿದೆ. ಹಾಗಾದರೆ ಈ ಫೋನಿನ ಇತರೆ ಫೀಚರ್ಸ್‌ ಯಾವುವು ಹಾಗೂ ಆಫರ್‌ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇಂದು ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಫಸ್ಟ್‌ ಸೇಲ್‌; ಆರಂಭದಲ್ಲೇ ಆಫರ್!

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಡಿಸ್‌ಪ್ಲೇ: ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, 91.4% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 391ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಪ್ರೊಸೆಸರ್‌: ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ನಲ್ಲಿ ಆಕ್ಸಿಜನ್‌ OS 13.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದರೊಂದಿಗೆ RAM ಅನ್ನು ವಾಸ್ತವಿಕವಾಗಿ 8GB ವರೆಗೆ ವಿಸ್ತರಿಸಬಹುದು. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಇಂದು ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಫಸ್ಟ್‌ ಸೇಲ್‌; ಆರಂಭದಲ್ಲೇ ಆಫರ್!

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಕ್ಯಾಮೆರಾ: ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ HM6 ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI ವಿಶ್ಯುಯಲ್‌ ಎಫೆಕ್ಟ್‌, ಸ್ಲೋ ಮೋಷನ್‌ ವಿಡಿಯೋ, ಡ್ಯುಯಲ್ ವ್ಯೂ ವಿಡಿಯೋ, HDR, ನೈಟ್‌ಸ್ಕೇಪ್, ಪೋಟ್ರೇಟ್ ಮೋಡ್ ಅನ್ನು ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಬ್ಯಾಟರಿ: ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 67W ಸೂಪರ್‌ ವೂಕ್‌ ವೈರ್ಡ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, 3.5mm ಆಡಿಯೋ ಜಾಕ್, ಬ್ಲೂಟೂತ್ 5.1, GPS/ A-GPS ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಇ-ದಿಕ್ಸೂಚಿ, ಆಂಬಿಯೆಂಟ್‌ ಲೈಟ್‌, ಗೈರೊಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಬೆಂಬಲಿಸಲಿದೆ.

ಇಂದು ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಫಸ್ಟ್‌ ಸೇಲ್‌; ಆರಂಭದಲ್ಲೇ ಆಫರ್!

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಬೆಲೆ: ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 8GB RAM + 128GB ಸ್ಟೋರೇಜ್ ಆಯ್ಕೆಗೆ 19,999ರೂ. ಬೆಲೆ ಹೊಂದಿದೆ. ಇದರ 8GB RAM + 256GB ಆಯ್ಕೆಯು 21,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ನೀಲಿಬಣ್ಣದ ಲೈಮ್ ಮತ್ತು ಕ್ರೋಮ್ಯಾಟಿಕ್ ಗ್ರೇ ಬಣ್ಣ ಆಯ್ಕೆಗಳಲ್ಲಿ ಬರಲಿದೆ. ಏಪ್ರಿಲ್ 11 ರಿಂದ ಒನ್‌ಪ್ಲಸ್‌ ಆನ್‌ಲೈನ್ ಸ್ಟೋರ್, ಅಮೆಜಾನ್ ಇಂಡಿಯಾ ಮೂಲಕ ಖರೀದಿಸಬಹುದಾಗಿದೆ.

ಲಾಂಚ್‌ ಆಫರ್‌ ಏನಿರಲಿದೆ: ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌ ಅನ್ನು ನೀವು ICICI ಕಾರ್ಡ್‌ಗಳು ಮತ್ತು EMI ಮೂಲಕ ಖರೀದಿಸಿದರೆ 1,000ರೂ. ಗಳ ತ್ವರಿತ ರಿಯಾಯಿತಿ ಸಿಗಲಿದೆ.

Best Mobiles in India

English summary
OnePlus Nord CE 3 Lite 5G First Sale Today Via Amazon; Offer Price, Specifications and more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+