Home
ಸುದ್ದಿಜಾಲ

OnePlus: ಒನ್‌ಪ್ಲಸ್‌ನ ಈ ಫೋನ್‌ಗಿದೆ 2000ರೂ.ಗಳ ಫ್ಲಾಟ್ ರಿಯಾಯಿತಿ! ಇಷ್ಟೇ ಅಲ್ಲಾ...

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು (OnePlus smartphone) ವಿಶೇಷ ಫೀಚರ್ಸ್‌ ಆಯ್ಕೆ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಅದರಂತೆ ಇತ್ತೀಚೆಗೆ ಲಾಂಚ್‌ ಆಗಿರುವ ಹೊಸ ಒನ್‌ಪ್ಲಸ್‌ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಪ್ಲಾಟ್‌ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ.

ಹೌದು, ಈ ವಿಷಯ ಕೇಳಿ ಒನ್‌ಪ್ಲಸ್‌ ಫೋನ್‌ ಖರೀದಿ ಮಾಡುವವರಿಗೆ ಖಂಡಿತಾ ಸಂತಸ ಆಗಿರುತ್ತದೆ. ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G (OnePlus Nord CE 3 Lite 5G) ಗೆ ಕೇವಲ ಪ್ಲಾಟ್‌ ಡಿಸ್ಕೌಂಟ್‌ ಮಾತ್ರವಲ್ಲದೆ ವಿನಿಮಯ ಆಫರ್ ಹಾಗೂ ಬ್ಯಾಂಕ್‌ ಆಫರ್ ಅನ್ನೂ ಸಹ ನೀಡಲಾಗುತ್ತಿದೆ. ಇದರಿಂದಾಗಿ ಇನ್ನೂ ಕಡಿಮೆ ಬೆಲೆಗೆ ನೀವು ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ ಎಲ್ಲಿ ಈ ಆಫರ್?, ಈ ಫೋನ್‌ನ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್‌ನ ಈ ಫೋನ್‌ಗಿದೆ 2000ರೂ.ಗಳ ಫ್ಲಾಟ್ ರಿಯಾಯಿತಿ! ಇಷ್ಟೇ ಅಲ್ಲಾ...

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌ಗೆ ಆಫರ್: ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ (Amazon) ಇದೀಗ ಈ ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌ಗೆ 2000 ರೂ.ಗಳ ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 17,999 ರೂ.ಗಳ ಬೆಲೆಗೆ ಲಿಸ್ಟ್‌ ಮಾಡಲಾಗಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G ಫೋನ್‌ ಸಾಮಾನ್ಯ ದರ 19,999 ರೂ.ಗಳಾಗಿದೆ. ಆದರೆ ಮೊದಲೇ ತಿಳಿಸಿದಂತೆ ಪ್ಲಾಟ್‌ ಡಿಸ್ಕೌಂಟ್‌ ನಂತರ ನೀವು ಇದನ್ನು 17,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಕೆಲವು ಬ್ಯಾಂಕ್ ಕಾರ್ಡ್‌ಗಳಿಗೆ 1,350 ರೂ.ವರೆಗೆ ಹೆಚ್ಚುವರಿ ರಿಯಾಯಿತಿ ಸಹ ಲಭ್ಯವಿದೆ. ಖರೀದಿದಾರರು ತಮ್ಮ ಹಳೆಯ ಡಿವೈಸ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನು ಸಹ ಹೊಂದಿದ್ದಾರೆ, ಫೋನ್‌ನ ಕಾರ್ಯಕ್ಷಮತೆಗೆ ತಕ್ಕಂತೆ 16,950 ರೂ.ವರೆಗೂ ಡಿಸ್ಕೌಂಟ್‌ ಸಿಗಲಿದೆ.

ಒನ್‌ಪ್ಲಸ್‌ನ ಈ ಫೋನ್‌ಗಿದೆ 2000ರೂ.ಗಳ ಫ್ಲಾಟ್ ರಿಯಾಯಿತಿ! ಇಷ್ಟೇ ಅಲ್ಲಾ...

ಇನ್ನು ಈ ಸ್ಮಾರ್ಟ್‌ಫೋನ್ ಲೈಮ್ ಮತ್ತು ಕ್ರೋಮ್ಯಾಟಿಕ್ ಗ್ರೇ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದ್ದು, 8GB RAM ಮತ್ತು 128GB ಇಂಟರ್‌ ಸ್ಟೋರೇಜ್ ಆಯ್ಕೆಯ ಫೋನ್‌ಗೆ ಮಾತ್ರ ಈ ಮೇಲೆ ತಿಳಿಸಿದ ಆಫರ್ ಅನ್ವಯ ಆಗಲಿದೆ. ಆದರೆ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ ಖರೀದಿಯಲ್ಲಿ ಈ ಆಫರ್ ಅನ್ವಯ ಆಗುವುದಿಲ್ಲ ಅನ್ನೋದು ನಿಮ್ಮ ಗಮನಕ್ಕೆ ಇರಲಿ.

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G ಫೀಚರ್ಸ್: ಈ ಸ್ಮಾರ್ಟ್‌ಫೋನ್ ಪಂಚ್-ಹೋಲ್ ವಿನ್ಯಾಸದೊಂದಿಗೆ FHD + ರೆಸಲ್ಯೂಶನ್ ಹೊಂದಿರುವ ದೊಡ್ಡ 6.72 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120 ರಿಫ್ರೆಶ್ ರೇಟ್‌ ಹೊಂದಿದೆ. ಅಲ್ಲದೆ ಗೊರಿಲ್ಲಾ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದ್ದು, ಡಿಸ್‌ಪ್ಲೇ ಮೇಲೆ ನಿಮ್ಮ ಫಿಂಗರ್‌ಪ್ರಿಂಟ್ ಅನ್ನು ಬಳಕೆ ಮಾಡಿಕೊಂಡು ಫೋನ್ ಅನ್ನು ಅನ್‌ಲಾಕ್ ಮಾಡಬಹುದು.

ಒನ್‌ಪ್ಲಸ್‌ನ ಈ ಫೋನ್‌ಗಿದೆ 2000ರೂ.ಗಳ ಫ್ಲಾಟ್ ರಿಯಾಯಿತಿ! ಇಷ್ಟೇ ಅಲ್ಲಾ...

ಇದರೊಂದಿಗೆ ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, 108 ಮೆಗಾಪಿಕ್ಸೆಲ್‌ನ ರೆಸಲ್ಯೂಶನ್ ಹೊಂದಿರುವ ಮುಖ್ಯ ಕ್ಯಾಮೆರಾದ ಜೊತೆಗೆ ಇತರೆ ಸೆನ್ಸರ್‌ ಆಯ್ಕೆ ಪಡೆದಿದೆ. ಇದರೊಂದಿಗೆ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮತ್ತು ವಿಡಿಯೋ ಕರೆಗಳಿಗಾಗಿ ಈ ಫೋನ್‌ 16 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಮೈಕ್ರೊ ಎಸ್‌ಡಿ ಕಾರ್ಡ್‌ನೊಂದಿಗೆ ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಉಳಿದಂತೆ ಈ ಫೋನ್ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಬೆಂಬಲ ಪಡೆದಿದ್ದು, ವಿಶೇಷ ಚಾರ್ಜರ್‌ನೊಂದಿಗೆ ಸೂಪರ್ ಫಾಸ್ಟ್ ಅನ್ನು ಚಾರ್ಜ್ ಬೆಂಬಲ ಪಡೆದಿದೆ. ಅಂದರೆ ಕೇವಲ ಅರ್ಧ ಗಂಟೆಯಲ್ಲಿ 80% ವರೆಗೆ ಚಾರ್ಜಿಂಗ್‌ ಆಗಲಿದೆ. ಜೊತೆಗೆ, ಇದು ಚಾರ್ಜ್ ಮಾಡಲು ಮತ್ತು ಕಂಟೆಂಟ್‌ ಅನ್ನು ವರ್ಗಾಯಿಸಲು ಯುಎಸ್‌ಬಿ ಟೈಪ್‌-ಸಿ ಪೋರ್ಟ್ ಆಯ್ಕೆ ಪಡೆದಿದೆ. ಈ ಫೋನ್ ಆಕ್ಸಿಜನ್‌ಒಎಸ್ 13.1ಅನ್ನು ರನ್‌ ಮಾಡಲಿದ್ದು, 5G, ವೈ-ಫೈ, ಬ್ಲೂಟೂತ್ ಮತ್ತು ಜಿಪಿಎಸ್‌ ನಂತಹ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

Best Mobiles in India

English summary
OnePlus Nord CE 3 Lite 5G is not only offering a flat discount but also an exchange offer and a bank offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+