Home
ಸುದ್ದಿಜಾಲ

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್ ಶೀಘ್ರದಲ್ಲೇ ಲಾಂಚ್‌: ಬೆಲೆ, ನಿರೀಕ್ಷಿತ ಫೀಚರ್ಸ್‌ ಏನು?

ಒನ್‌ಪ್ಲಸ್‌ನ ಯಾವುದೇ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಭಾರೀ ಬೇಡಿಕೆ ನಿರ್ಮಾಣ ಮಾಡುತ್ತವೆ. ಅದರಂತೆ ಈ ವರ್ಷ ಒನ್‌ಪ್ಲಸ್‌ 11 ಮತ್ತು ಒನ್‌ಪ್ಲಸ್‌ 11R ಅನ್ನು ಲಾಂಚ್‌ ಮಾಡಲಾಗಿದ್ದು, ಈ ಫೋನ್‌ಗಳ ಕ್ರೇಜ್ ಕಡಿಮೆಯಾಗುವ ಮುನ್ನವೇ ಈಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಾಗುತ್ತಿದೆ.

ಹೌದು, ಒನ್‌ಪ್ಲಸ್ ಫೋನ್‌ಗೆ ಮಾರುಕಟ್ಟೆಯಲ್ಲಿ ಭಾರೀ ಕ್ರೇಜ್‌ ಇದ್ದು, ಈ ನಡುವೆ ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್ (OnePlus Nord CE 3 Lite ) ಸ್ಮಾರ್ಟ್‌ಫೋನ್‌ ಅನಾವರಣಕ್ಕೆ ದಿನಗಣನೆ ಆರಂಭ ಆಗಿದೆ. ಈ ಫೋನ್‌ ವೃತ್ತಾಕಾರದ ರಿಯರ್‌ಕ್ಯಾಮೆರಾ ಮಾಡ್ಯುಲ್‌ ಹೊಂದಿದ್ದು, ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗಿದ್ರೆ, ಲೀಕ್‌ ಆದ ಮಾಹಿತಿ ಪ್ರಕಾರ ಈ ಫೋನ್‌ನ ಫೀಚರ್ಸ್‌ ಗಮನಿಸೋಣ ಬನ್ನಿ.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್ ಶೀಘ್ರದಲ್ಲೇ ಲಾಂಚ್‌: ನಿರೀಕ್ಷಿತ ಫೀಚರ್ಸ್ ಏನು?

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ ಡಿಸ್‌ಪ್ಲೇ ವಿವರ: ಮುಂಬರುವ ಈ ವಿಶೇಷ ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿರಲಿದ್ದು, ಇದು ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆಯೋ ಅಥವಾ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆಯೋ ಕಾದುನೋಡಬೇಕು. ಜೊತೆಗೆ 120Hz ರಿಫ್ರೆಶ್‌ ರೇಟ್‌ ಬೆಂಬಲವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ ಪ್ರೊಸೆಸರ್‌ ಯಾವುದಿರಬಹುದು?: ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದ್ದು, ಈ ಪ್ರೊಸೆಸರ್ ಈಗಾಗಲೇ ಲಾಂಚ್‌ ಆಗಿರುವ ಐಕ್ಯೂ Z6, ಮೊಟೊ G62 ಹಾಗೂ ವಿವೋ T1 ನಂತಹ ಮಿಡ್ ರೇಂಜ್‌ ಫೋನ್‌ಗಳಲ್ಲಿ ಕಂಡುಬಂದಿದೆ. ಇನ್ನುಳಿದಂತೆ ಈ ಫೋನ್ 6GB/4GB RAM ಆಯ್ಕೆಯೊಂದಿಗೆ ಕಾಣಿಸಿಕೊಳ್ಳಲಿದೆಯಂತೆ.

ಒನ್‌ಪ್ಲಸ್‌ ನಾರ್ಡ್‌ CE 3 ಕ್ಯಾಮೆರಾ ರಚನೆ ಹೇಗಿರಲಿದೆ? : ಕ್ಯಾಮೆರಾ ವಿಚಾರದಲ್ಲಿ ಲೀಕ್‌ ಆದ ಮಾಹಿತಿಗಳು ದ್ವಂದ್ವದಿಂದ ಕೂಡಿದ್ದು, ಅದರಂತೆ ಕೆಲವು ವರದಿಗಳು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರುತ್ತದೆ ಎಂದು ಹೇಳುತ್ತಿದ್ದರೆ ಇನ್ನು ಕೆಲವು ವರದಿಗಳು 64 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಆಯ್ಕೆ ಇರಬಹುದು ಎಂದು ಹೇಳುತ್ತಿವೆ. ಅದಾಗ್ಯೂ ಈ ಕ್ಯಾಮೆರಾ ಆಯ್ಕೆಯಲ್ಲಿ ಅಲ್ಟ್ರಾ-ವೈಡ್ ಕ್ಯಾಮೆರಾ ಲೆನ್ಸ್ ಆಯ್ಕೆ ನೀಡಲಾಗುತ್ತದೆಯೋ ಇಲ್ಲವೋ ಕಾದು ನೋಡಬೇಕು.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್ ಶೀಘ್ರದಲ್ಲೇ ಲಾಂಚ್‌: ನಿರೀಕ್ಷಿತ ಫೀಚರ್ಸ್ ಏನು?

ಒನ್‌ಪ್ಲಸ್‌ ನಾರ್ಡ್‌ CE 3 ಬ್ಯಾಟರಿ ಸಾಮರ್ಥ್ಯ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸಲಿದ್ದು, 67W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಆಯ್ಕೆಯನ್ನು ಪಡೆದಿದ್ದೇ ಆದರೆ ಈ ವಿಭಾಗದಲ್ಲಿ ಇದು ಒನ್‌ಪ್ಲಸ್‌ನ ಮೊದಲ ಫೋನ್‌ ಆಗಿ ಗುರುತಿಸಿಕೊಳ್ಳಲಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ನಿರೀಕ್ಷಿತ ಬೆಲೆ ಹಾಗೂ ಲಭ್ಯತೆ: ಕಳೆದ ವರ್ಷ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಯ 6GB RAM ಮತ್ತು 128GB ಸ್ಟೋರೇಜ್‌ ಆಯ್ಕೆ ಇರುವ ಫೋನ್‌ ಅನ್ನು 19,999 ರೂ. ಗಳ ಬೆಲೆಯೊಂದಿಗೆ ಲಾಂಚ್ ಮಾಡಲಾಗಿತ್ತು. ಅದರಂತೆ ಈ ನಾರ್ಡ್‌ CE 3 ಲೈಟ್‌ಸಹ ಇದರ ಆಸುಪಾಸಿನ ಬೆಲೆ ಹೊಂದಬಹುದು ಎಂದು ಹೇಳಲಾಗುತ್ತಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್ ಶೀಘ್ರದಲ್ಲೇ ಲಾಂಚ್‌: ನಿರೀಕ್ಷಿತ ಫೀಚರ್ಸ್ ಏನು?

ಇನ್ನುಳಿದಂತೆ ಈ ಫೋನ್ ಲೈಮ್ ಕಲರ್ ಆಯ್ಕೆಯನ್ನು ಪಡೆಯಲಿದೆ ಎನ್ನಲಾಗಿದ್ದು, ಇದರೊಂದಿಗೆ ಇತರೆ ಬಣ್ಣದಲ್ಲೂ ಸಹ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಭಾರತದಲ್ಲಿ ಏಪ್ರಿಲ್ 4 ರಂದು ಈ ಒನ್‌ಪ್ಲಸ್ ನಾರ್ಡ್ ಬಡ್ಸ್ 2 ಜೊತೆಗೆ ಒನ್‌ಪ್ಲಸ್‌ ನಾರ್ಡ್‌ CE 3 ಲಾಂಚ್‌ ಆಗಲಿದೆ ಎನ್ನಲಾಗಿದೆ.

Best Mobiles in India

English summary
OnePlus Nord CE 3 Lite smartphone is being unveiled in India in a few days, know about its expected features and price details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+