Home
ಸುದ್ದಿಜಾಲ

OnePlus: ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 ಬೆಲೆ ಇಳಿಕೆ; ಖರೀದಿಸಲು ಯೋಗ್ಯವೇ...?

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು (OnePlus smartphone) ಭಾರತದಲ್ಲಿ ವಿಶೇಷವಾದ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಹೊಸ ಹೊಸ ಫೋನ್‌ಗಳು ಅನಾವರಣ ಆಗುತ್ತಿದ್ದು, ಈ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಈಗ ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 (OnePlus Nord CE 3) ಬೆಲೆ ಇಳಿಕೆ ಮಾಡಲಾಗಿದೆ.

ಹೌದು, ಒನ್‌ಪ್ಲಸ್‌ ನಾರ್ಡ್‌ CE 3 ಭಾರತದಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ದೇಶದಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಕೆಲವು ದಿನಗಳ ಹಿಂದಷ್ಟೇ ಅನಾವರಣ ಮಾಡಲಾಗಿತ್ತು. ಹಾಗಿದ್ರೆ, ಈಗ ಈ ಫೋನ್‌ಗೆ ಇರುವ ಆಫರ್ ಏನು?, ಇದರ ಫೀಚರ್ಸ್‌ ಏನು?, ಈ ಬೆಲೆಗೆ ಈ ಫೋನ್‌ ಅನ್ನು ಖರೀದಿ ಮಾಡಲು ಯೋಗ್ಯವೇ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 ಬೆಲೆ ಇಳಿಕೆ; ಖರೀದಿಸಲು ಯೋಗ್ಯವೇ...?

ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಈ ಫೋನ್‌ಗೆ ಇದೀಗ ಆಫರ್ ಘೋಷಣೆ ಮಾಡಲಾಗಿದೆ. 4,009 ರೂ.ಗಳ ದೊಡ್ಡ ರಿಯಾಯಿತಿಯನ್ನು ನೀಡಲಾಗಿದೆ. 8GB RAM + 128GB ಸ್ಟೋರೇಜ್ ವೇರಿಯಂಟ್‌ ಅನ್ನು 22,990 ರೂ.ಗಳ ರಿಯಾಯಿತಿ ದರದಲ್ಲಿ ಲಿಸ್ಟ್‌ ಮಾಡಲಾಗಿದ್ದು, ಇದನ್ನು 26,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಅನಾವರಣ ಮಾಡಲಾಗಿತ್ತು.

ಅದಾಗ್ಯೂ ನೀವು ಕೆಲವು ಬ್ಯಾಂಕ್‌ ಅಫರ್ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ದರದಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಅಂದರೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ 2,000 ರೂ. ರಿಯಾಯಿತಿ ಕೊಡುಗೆಯೂ ಇದೆ. ಇದರಿಂದಾಗಿ ಇದರ ಬೆಲೆ 20,990 ರೂ.ಗಳಿಗೆ ಇಳಿಯುತ್ತದೆ. ಅಲ್ಲದೆ ಇಎಂಐ ಆಯ್ಕೆಗಳನ್ನು ಸಹ ನೀಡಲಾಗಿದ್ದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ ಫೀಚರ್ಸ್‌: ಈ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 782G SoC ಪ್ರೊಸೆಸರ್‌ ನಲ್ಲಿ ಕೆಲಸ ಮಾಡಲಿದ್ದು, ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿದೆ. ಜೊತೆಗೆ ಈ ಫೋನ್‌ 100W ಚಾರ್ಜಿಂಗ್ ಬೆಂಬಲವನ್ನು ಪಡೆದಿದ್ದು, ಕ್ಷಣಮಾತ್ರದಲ್ಲಿ ಚಾರ್ಜ್‌ ಆಗಲಿದೆ.

ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 ಬೆಲೆ ಇಳಿಕೆ; ಖರೀದಿಸಲು ಯೋಗ್ಯವೇ...?

ನಾರ್ಡ್‌ CE 3 ಸ್ಮಾರ್ಟ್‌ಫೋನ್ ದೊಡ್ಡ ಕ್ಯಾಮೆರಾ ಸೆನ್ಸರ್‌ ಆಯ್ಕೆ ಪಡೆದಿದೆ. ಆದರೆ, ಅಲ್ಟ್ರಾ-ವೈಡ್ ಮತ್ತು ಸೆಲ್ಫಿ ಕ್ಯಾಮೆರಾಗಳಲ್ಲಿನ ಸುಧಾರಣೆಗಳು ಹೊಸ ಪುನರಾವರ್ತನೆಯೊಂದಿಗೆ ಕಡಿಮೆ ಆಗಿವೆ. ಇದರ ಹಳೆಯ ಮಾದರಿಯು ಇನ್ನೂ ನಯವಾದ ಮತ್ತು ಶಕ್ತಿಯುತ ಸ್ಮಾರ್ಟ್‌ಫೋನ್ ಆಗಿದ್ದು, ಮಧ್ಯಮ ಶ್ರೇಣಿಯ ಖರೀದಿದಾರರ ದೈನಂದಿನ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಫೋನ್ 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ.

ಒನ್‌ಪ್ಲಸ್‌ ಏಸ್‌ 3 ಪ್ರೊ ಹೊಸ ಸೌಲಭ್ಯದೊಂದಿಗೆ: ಈ ನಡುವೆ ಒನ್‌ಪ್ಲಸ್‌ ಏಸ್‌ 3 ಪ್ರೊ ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಅದರ ಮೊದಲ ಫೀಚರ್ಸ್‌ ಅನ್ನು ಆನ್‌ಲೈನ್‌ನಲ್ಲಿ ಬಹಿರಂಗಪಡಿಸಲಾಗಿದ್ದು, ಡಿಜಿಟಲ್ ಚಾಟ್ ಸ್ಟೇಷನ್ ಪ್ರಕಾರ, ಹೊಸ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3, 16 GB RAM ಮತ್ತು 1 TB ಇಂಟರ್‌ ಸ್ಟೋರೇಜ್‌ ಹೊದಿರಲಿದೆ ಎನ್ನಲಾಗಿದೆ.

ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 ಬೆಲೆ ಇಳಿಕೆ; ಖರೀದಿಸಲು ಯೋಗ್ಯವೇ...?

ಈ ಫೋನ್ 50 ಮೆಗಾಪಿಕ್ಸೆಲ್‌ ಸೋನಿ IMX890 ಸೆನ್ಸರ್‌ ಅನ್ನು ಹೊಂದಿರಲಿದೆ. ಇದು ಸಾಕಷ್ಟು ಇತರ ಒನ್‌ಪ್ಲಸ್‌ ಡಿವೈಸ್‌ಗಳಲ್ಲಿ ಕಂಡುಬರುತ್ತದೆ. ಆದರೆ, ಟೆಲಿಫೋಟೋ ಲೆನ್ಸ್ ಅನ್ನು ಬಿಟ್ಟುಬಿಡುವ ಮತ್ತೊಂದು ಏಸ್ ಫೋನ್ ಇದಾಗಿರಲಿದೆ ಎಂದು ಡಿಜಿಟಲ್ ಚಾಟ್ ಸ್ಟೇಷನ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಸ್ಮಾರ್ಟ್‌ಫೋನ್ 1220p ಸಾಮರ್ಥ್ಯದ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ ಹೊಂದಿರಲಿದ್ದು, ಒನ್‌ಪ್ಲಸ್‌ ಏಸ್‌ 3 ರೀತಿಯಲ್ಲೇ 6.78 ಇಂಚಿನ OLED ಡಿಸ್‌ಪ್ಲೇ ಆಗಿರಬಹುದು ಎನ್ನಲಾಗಿದೆ. ಇದರ ಜೊತೆಗೆ ಇದರರ್ಥ ಒನ್‌ಪ್ಲಸ್‌ 100W ಚಾರ್ಜಿಂಗ್ ಬೆಂಬಲದೊಂದಿಗೆ 5,500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ.

Best Mobiles in India

English summary
OnePlus Nord CE 3 is available in India at a low price. By this you can save huge money. This smartphone was unveiled in the country a few days ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+