OnePlus: ಒನ್‌ಪ್ಲಸ್ ನಾರ್ಡ್ CE 4 ಫೋನ್‌ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್‌ಗೆ ನಾಲ್ಕೇ ದಿನ ಬಾಕಿ
ಒನ್‌ಪ್ಲಸ್ (OnePlus) ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ಒನ್‌ಪ್ಲಸ್ ಇನ್ನೇನು ಕೆಲವೇ ದಿನಗಳಲ್ಲಿ ಒನ್‌ಪ್ಲಸ್ ನಾರ್ಡ್ CE 4 ಸ್ಮಾರ್ಟ್‌ಫೋನ್ (OnePlus Nord CE 4 smartphone) ಅನ್ನು ಲಾಂಚ್ ಮಾಡಲಿದೆ. ಆದರೆ, ಈ ಫೋನ್ ಲಾಂಚ್ ಆಗುವ ಮುನ್ನವೇ ಇದರ ಬೆಲೆ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಹೌದು, ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಈ ನಡುವೆ ಒನ್‌ಪ್ಲಸ್ ನಾರ್ಡ್ CE 4 ಫೋನ್ ಖರೀದಿ ಮಾಡಲು ಸಾಕಷ್ಟು ಜನರು ಕಾದು ಕುಳಿತಿದ್ದು, ಅವರಿಗೆ ಗುಡ್‌ನ್ಯೂಸ್ ಒಂದನ್ನು ನೀಡಲಾಗಿದೆ. ಅದುವೇ ಈ ಫೋನ್‌ನ ಬೆಲೆ ವಿವರ. ಹಾಗಿದ್ರೆ, ಇದರ ಭಾರತದಲ್ಲಿ ಯಾವ ಬೆಲೆಗೆ ಲಾಂಚ್ ಆಗಲಿದೆ?, ಪ್ರಮುಖ ಫೀಚರ್ಸ್ ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ ನಾರ್ಡ್ CE 4 ಫೋನ್: ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಏಪ್ರಿಲ್ 1 ರಂದು ಅನಾವರಣ ಆಗಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಇದರ ಆರಂಭಿಕ ಬೆಲೆ 8GB RAM + 128GB ಸ್ಟೋರೇಜ್‌ಗಾಗಿ 24,999 ರೂ.ಗಳಾಗಿರಲಿದೆ. ಅದರಲ್ಲೂ 8GB RAM + 256GB ಇಂಟರ್ ಸ್ಟೋರೇಜ್‌ನಲ್ಲೂ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಈ ಫೋನ್ 26,999 ರೂ. ಗಳ ಬೆಲೆ ಹೊಂದಿರಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಒನ್‌ಪ್ಲಸ್ ನಾರ್ಡ್ 3 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ 8GB RAM + 128GB ಸ್ಟೋರೇಜ್‌ಗಾಗಿ 26,999 ರೂ.ಗಳ ಬೆಲೆಯೊಂದಿಗೆ ಬಿಡುಗಡೆ ಮಾಡಿತ್ತು. ಹಾಗೆಯೇ 12GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 28,999 ರೂ.ಗಳ ಬೆಲೆ ನಿಗದಿ ಮಾಡಲಾಗಿತ್ತು ಅನ್ನೋದನ್ನು ಈ ವೇಳೆ ನೆನಪಿಸಿಕೊಳ್ಳಬಹುದಾಗಿದೆ.

ಈ ಫೋನ್ 6.7 ಇಂಚಿನ ಫ್ಲೂಯಿಡ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆಯಲಿದ್ದು, 120Hz ರಿಫ್ರೆಶ್ ರೇಟ್ ಮತ್ತು 93.4 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬರುತ್ತದೆ ಈಗಾಗಲೇ ಮಾಹಿತಿಯನ್ನು ದೃಢಪಡಿಸಲಾಗಿದೆ. ಕಂಪನಿಯು ತನ್ನ ಹೊಸ 5G ಫೋನ್ ಇತ್ತೀಚಿನ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7 ಜನ್ 3 ಚಿಪ್ ಅನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ.
ಇದರ ಜೊತೆಗೆ ಈ ಫೋನ್‌ನಲ್ಲಿ 100W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಆಯ್ಕೆ ಇದ್ದು, ಇದು ಕಂಪನಿಯ ಪ್ರಕಾರ 29 ನಿಮಿಷಗಳಲ್ಲಿ 1-100 ಪ್ರತಿಶತದಷ್ಟು ಚಾರ್ಜ್ ಮಾಡಬಹುದಂತೆ. ಹಾಗೆಯೇ ಈ ಫೋನ್ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಲೀಕ್ ಮಾಹಿತಿ ಮೂಲಕ ತಿಳಿದುಬಂದಿದೆ.

ಉಳಿದಂತೆ ಈ ಫೋನ್‌ನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ LYT-600 ಪ್ರಾಥಮಿಕ ರಿಯರ್ ಸೆನ್ಸರ್ ಬರಬಹುದು. 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾವೈಡ್ ಕ್ಯಾಮೆರಾ ಆಯ್ಕೆ ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್‌ನಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಒನ್‌ಪ್ಲಸ್ ಏಸ್ 3 ಪ್ರೊ ಲಾಂಚ್‌ಗೆ ಸಿದ್ಧತೆ: ಈ ವರ್ಷದ ಆರಂಭದಲ್ಲಿ ಏಸ್ 3 ಬಿಡುಗಡೆಯ ನಂತರ ಮತ್ತು ಏಸ್ 3V ಅನ್ನು ಕಳೆದ ವಾರ ಚೀನಾದಲ್ಲಿ ಲಾಂಚ್ ಮಾಡಲಾಗಿತ್ತು. ಆದರೆ, ಈಗ ಒನ್‌ಪ್ಲಸ್ ಚೀನಾದಲ್ಲಿ ಏಸ್ ಲೈನ್-ಅಪ್‌ನಲ್ಲಿನ ಟಾಪ್-ಎಂಡ್ ಫೋನ್ ಏಸ್ 3 ಪ್ರೊ ಅನ್ನು ಪ್ರಾರಂಭಿಸಲು ಸಜ್ಜಾಗುತ್ತಿದೆ.
ಈ ಫೋನ್ ಸಂಬಂಧ ಕೆಲವು ಮಾಹಿತಿ ಲೀಕ್ ಆಗಿದ್ದು, ಅದರಲ್ಲಿ ಲೀಕರ್ ಡಿಜಿಟಲ್ ಚಾಟ್ ಸ್ಟೇಷನ್ ಪ್ರಕಾರ, ಏಸ್ 3 ಪ್ರೊ ಸ್ಮಾರ್ಟ್‌ಫೋನ್ 1.5K 8T LTPO ಕರ್ವ್ಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆಯಂತೆ. ಅಲ್ಲದೆ 120Hz ರಿಫ್ರೆಶ್ ರೇಟ್ ಅನ್ನು ಈ ಫೋನ್ ಹೊಂದಿರಲಿದ್ದು, 6000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಈ ಫೋನ್ ಅನ್ನು ಆಗಸ್ಟ್ 2024 ರಲ್ಲಿ ನಿರೀಕ್ಷಿಸಬಹುದಾಗಿದೆ.


Click it and Unblock the Notifications








