Home
ಸುದ್ದಿಜಾಲ

OnePlus: ಇಂದು ಲಾಂಚ್ ಆಗಲಿದೆ ಬಹುನಿರೀಕ್ಷಿತ ಒನ್‌ಪ್ಲಸ್‌ ನಾರ್ಡ್ CE 4! ನಿರೀಕ್ಷಿತ ಬೆಲೆ, ಫೀಚರ್ಸ್‌ ಬಗ್ಗೆ ತಿಳಿಯಿರಿ

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು (OnePlus smartphones) ಭಾರತದಲ್ಲಿ ಸುನಾಮಿಯನ್ನೇ ಎಬ್ಬಿಸಲಿವೆ. ಈ ನಡುವೆ ಬಹುನಿರೀಕ್ಷಿತ ಒನ್‌ಪ್ಲಸ್‌ ನಾರ್ಡ್ CE 4 ಸ್ಮಾರ್ಟ್‌ಫೋನ್‌ (OnePlus Nord CE 4 smartphone) ಇಂದು ಭಾರತದಲ್ಲಿ ಲಾಂಚ್‌ ಆಗುತ್ತಿದ್ದು, ಗ್ರಾಹಕರು ಇದಕ್ಕಾಗಿ ಕಾದು ಕುಳಿತಿದ್ದಾರೆ.

ಹೌದು, ಒನ್‌ಪ್ಲಸ್‌ ನಾರ್ಡ್ CE 4 ಸ್ಮಾರ್ಟ್‌ಫೋನ್‌ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳು ಸದ್ದು ಮಾಡುತ್ತಿದ್ದವು. ಅಂತೆಯೇ ಈ ಫೋನ್ ಹೊಸ ಬಣ್ಣದ ವೇರಿಯಂಟ್‌ನಲ್ಲಿ ಬರುವ ನಿರೀಕ್ಷೆಯಿದೆ. ಅಲ್ಲದೆ ಈ ಫೋನ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ನ ಬೆಲೆ ಎಷ್ಟಿರಬಹುದು?, ಫೀಚರ್ಸ್‌ ಏನಿರಬಹುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಇಂದು ಲಾಂಚ್ ಆಗಲಿದೆ ಬಹುನಿರೀಕ್ಷಿತ ಒನ್‌ಪ್ಲಸ್‌ ನಾರ್ಡ್ CE 4!

ಒನ್‌ಪ್ಲಸ್‌ ನಾರ್ಡ್ CE 4 ಸ್ಮಾರ್ಟ್‌ಫೋನ್‌ ಲೈವ್‌ ವೀಕ್ಷಣೆ ಹೇಗೆ?: ಒನ್‌ಪ್ಲಸ್ ಇಂದು ಭಾರತದಲ್ಲಿ ನಾರ್ಡ್‌ CE 4 ಅನ್ನು ಲಾಂಚ್‌ ಮಾಡಲಿದೆ. ಈ ಫೋನ್‌ ಅನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲಾಂಚ್‌ ಮಾಡಲಾದ ಒನ್‌ಪ್ಲಸ್‌ ನಾರ್ಡ್‌ CE 3 (OnePlus Nord CE 3) ಗಿಂತ ಉತ್ತಮ ಫೀಚರ್ಸ್‌ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಈ ಸ್ಮಾರ್ಟ್‌ಫೋನ್‌ನ ಬಿಡುಗಡೆ ಕಾರ್ಯಕ್ರಮವನ್ನು ಕಂಪನಿಯ ಯೂಟ್ಯೂಬ್‌ ಚಾನಲ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಈ ಕಾರ್ಯಕ್ರಮ ಇಂದು ಸಂಜೆ 6:30 ಕ್ಕೆ ಪ್ರಾರಂಭವಾಗುತ್ತದೆ.

ಒನ್‌ಪ್ಲಸ್‌ ನಾರ್ಡ್ CE 4 ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 6.7 ಇಂಚಿನ ಫ್ಲೂಯಿಡ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದ್ದು, 120Hz ನ ರಿಫ್ರೆಶ್ ರೇಟ್‌ ಮತ್ತು 93.4 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

ಇಂದು ಲಾಂಚ್ ಆಗಲಿದೆ ಬಹುನಿರೀಕ್ಷಿತ ಒನ್‌ಪ್ಲಸ್‌ ನಾರ್ಡ್ CE 4!

ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 5G ಸಂಪರ್ಕ ಬೆಂಬಲ ಪಡೆದಿದ್ದು, 8GB LPDDR4x RAM ನೊಂದಿಗೆ ವರ್ಚುವಲ್ RAM ಆಯ್ಕೆ ಸಹ ಇರಲಿದೆ. ಅಲ್ಲದೆ 100W ಸೂಪರ್‌ವೂಕ್ ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದ್ದು, ಕೇವಲ 29 ನಿಮಿಷಗಳಲ್ಲಿ 1 ರಿಂದ 100 ಪ್ರತಿಶತದಷ್ಟು ಫೋನ್‌ ಚಾರ್ಜ್‌ ಆಗಲಿದೆ ಎಂದು ಈಗಾಗಲೇ ಲೀಕ್ ಆದ ಮಾಹಿತಿಗಳಿಂದ ತಿಳಿದುಬಂದಿದೆ.

ಹಾಗೆಯೇ ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದ್ದು, ಸಂಭಾವ್ಯವಾಗಿ ಸೋನಿ LYT-600, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ಸ್‌ ಅನ್ನು ಪಡೆದಿರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ ಮತ್ತು 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾವೈಡ್ ಕ್ಯಾಮೆರಾವನ್ನು ಈ ಫೋನ್‌ ಹೊಂದಿರಲಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.

ಒನ್‌ಪ್ಲಸ್‌ ನಾರ್ಡ್‌ CE 4 ನಿರೀಕ್ಷಿತ ಬೆಲೆ: ಒನ್‌ಪ್ಲಸ್‌ ನಾರ್ಡ್‌ CE 4 ಭಾರತದಲ್ಲಿ 24,999 ರೂ.ಬೆಲೆಯಲ್ಲಿ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ ಲಭ್ಯ ಇರಲಿದೆ ಎಂದು ಹೇಳಲಾಗಿದ್ದು, 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಫೋನ್‌ 26,999 ರೂ. ಗಳ ಬೆಲೆ ಹೊಂದಿರಬಹುದು ಎನ್ನಲಾಗಿದೆ.

ಇಂದು ಲಾಂಚ್ ಆಗಲಿದೆ ಬಹುನಿರೀಕ್ಷಿತ ಒನ್‌ಪ್ಲಸ್‌ ನಾರ್ಡ್ CE 4!

ಒನ್‌ಪ್ಲಸ್‌ ನಾರ್ಡ್‌ CE 3 5G ಬೆಲೆಯನ್ನು ಗಮನಿಸುವುದಾದರೆ ಈ ಫೋನ್‌ ಭಾರತದಲ್ಲಿ 8GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 26,999 ರೂ.ಗಳ ಆರಂಭಿಕ ಬೆಲೆ ಹೊಂದಿದೆ. ಹಾಗೆಯೇ 12GB RAM ಮತ್ತು 128GB ಯ ಸ್ಟೋರೇಜ್ ಹೊಂದಿರುವ ಟಾಪ್‌ ವೇರಿಯಂಟ್‌ ಫೋನ್ 28,999 ರೂ. ಗಳ ಬೆಲೆ ಹೊಂದಿದೆ.

Best Mobiles in India

English summary
OnePlus Nord CE 4 is making a huge noise in the smartphone market. this phone will be launched today in a new color variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+