Home
ಸುದ್ದಿಜಾಲ

ಇಂದು ಒನ್‌ಪ್ಲಸ್‌ ನಾರ್ಡ್‌ CE4 ಫಸ್ಟ್‌ ಸೇಲ್‌!..ಗ್ರಾಹಕರಿಗೆ ಉಚಿತ ಗಿಫ್ಟ್‌ ಸಿಗಲಿದೆ!

ಮೊಬೈಲ್‌ ಪ್ರಿಯರ ನೆಚ್ಚಿನ ಸಂಸ್ಥೆಗಳಲ್ಲಿ ಒಂದಾದ ಒನ್‌ಪ್ಲಸ್‌ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಒನ್‌ಪ್ಲಸ್‌ ನಾರ್ಡ್‌ CE4 (OnePlus Nord CE4 5G) ಸ್ಮಾರ್ಟ್‌ಫೋನ್ ಈಗಾಗಲೇ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್‌ ಇಂದು (ಏಪ್ರಿಲ್‌ 4 ರಂದು) ಅಧಿಕೃತ ಒನ್‌ಪ್ಲಸ್‌ ಆನ್‌ಲೈನ್ ಸ್ಟೋರ್ ಹಾಗೂ ಅಮೆಜಾನ್ ಪ್ಲಾಟ್‌ಫಾರ್ಮ್ ಮೂಲಕ ಫಸ್ಟ್‌ ಸೇಲ್‌ ಆರಂಭ ಮಾಡಲಿದೆ.

ಹೌದು, ಒನ್‌ಪ್ಲಸ್‌ ನಾರ್ಡ್‌ CE4 ಸ್ಮಾರ್ಟ್‌ಫೋನ್‌ ಇಂದು ಅಮೆಜಾನ್‌ ತಾಣದ ಮೂಲಕ ಮಧ್ಯಾಹ್ನ್ 12 ಗಂಟೆಗೆ ಫಸ್ಟ್‌ ಸೇಲ್‌ ಪ್ರಾರಂಭ ಮಾಡಲಿದ್ದು, ಫ್ರಿ ಗಿಫ್ಟ್‌ ಘೋಷಿಸಿದೆ. ಈ ಫೋನ್‌ 8GB RAM + 128GB ಹಾಗೂ 8GB RAM + 256GB ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಈ ಫೋನ್‌ 100w ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಸಹ ಪಡೆದುಕೊಂಡಿದೆ.

ಇಂದು ಒನ್‌ಪ್ಲಸ್‌ ನಾರ್ಡ್‌ CE4 ಫಸ್ಟ್‌ ಸೇಲ್‌!..ಗ್ರಾಹಕರಿಗೆ ಉಚಿತ ಗಿಫ್ಟ್‌!

ಇನ್ನು ಈ ಫೋನಿನ 8GB + 128GB ವೇರಿಯಂಟ್‌ ಬೆಲೆಯು 24,999ರೂ. ಆಗಿದ್ದು, 8GB RAM + 256GB ಸ್ಟೋರೇಜ್‌ ವೇರಿಯಂಟ್‌ ದರವು 26,999ರೂ. ಆಗಿದೆ. ಹಾಗೆಯೇ ಅಮೆಜಾನ್‌ ತಾಣದಲ್ಲಿ ಕೆಲವು ರಿಯಾಯಿತಿ ಆಫರ್‌ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯ ಆಗಲಿವೆ. ಹಾಗಾದರೆ ಒನ್‌ಪ್ಲಸ್‌ ನಾರ್ಡ್‌ CE4 ಫೋನಿನ ಇತರೆ ಫೀಚರ್ಸ್‌ ಯಾವುವು ಹಾಗೂ ಆಫರ್‌ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ ನಾರ್ಡ್‌ CE4 - ಫೀಚರ್ಸ್‌

ಒನ್‌ಪ್ಲಸ್‌ ನಾರ್ಡ್‌ CE4 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 2412 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ ಹೊಂದಿದೆ. ಇದರ ಜೊತೆಗೆ 210Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 2160Hz PWM ಡಿಮ್ಮಿಂಗ್‌, ಹೆಚ್‌ಡಿಆರ್‌ 10+ ಸೌಲಭ್ಯ ಇವೆ.

ಇಂದು ಒನ್‌ಪ್ಲಸ್‌ ನಾರ್ಡ್‌ CE4 ಫಸ್ಟ್‌ ಸೇಲ್‌!..ಗ್ರಾಹಕರಿಗೆ ಉಚಿತ ಗಿಫ್ಟ್‌!

ಒನ್‌ಪ್ಲಸ್‌ ನಾರ್ಡ್‌ CE4 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಅಡ್ರಿನೋ 720 ಜಿಪಿಯು ಸಪೋರ್ಟ್‌ ಸಹ ಪಡೆದುಕೊಂಡಿದೆ. ಅಲ್ಲದೆ 8GB RAM + 128GB ಹಾಗೂ 8GB RAM + 256GB ಸ್ಟೋರೇಜ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಇದು ಆಕ್ಸಿಜೆನ್‌ 14 ಓಎಸ್‌ ಸಪೋರ್ಟ್‌ ಪಡೆದಿದೆ.

ಒನ್‌ಪ್ಲಸ್‌ ನಾರ್ಡ್‌ CE4 ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಬ್ಯದಲ್ಲಿ ಇದೆ. ಎರಡನೇ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಸೆನ್ಸರ್‌ ಕ್ಯಾಮೆರಾ ರಚನೆ ನೀಡಲಾಗಿದೆ.

ಒನ್‌ಪ್ಲಸ್‌ ನಾರ್ಡ್‌ CE4 ಫೋನ್ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 100W ಸೂಪರ್‌ವೂಕ್‌ ಫಾಸ್ಟ್‌ ಚಾರ್ಜರ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಇದು ಕೇವಲ 29 ನಿಮಿಷಗಳಲ್ಲಿ ಫೋನ್‌ ಬ್ಯಾಟರಿಯನ್ನು ಭರ್ತಿ ಮಾಡಲಿದೆ ಎಂದು ಒನ್‌ಪ್ಲಸ್‌ ಹೇಳಿಕೊಂಡಿದೆ.

ಒನ್‌ಪ್ಲಸ್‌ ನಾರ್ಡ್‌ CE4 ಫೋನ್ 5G ಡ್ಯುಯಲ್ 5G ಸಿಮ್‌ ಕಾರ್ಡ್‌ಗಳು, ಬ್ಲೂಟೂತ್ ಆವೃತ್ತಿ 5.4, ಡ್ಯುಯಲ್-ಬ್ಯಾಂಡ್ ವೈ-ಫೈ , ಜಿಪಿಎಸ್‌, ಗ್ಲೋನಾಸ್, 7 5G ಬ್ಯಾಂಡ್‌ ಕನೆಕ್ಟಿವಿಟಿ ಸೌಲಭ್ಯಗಳನ್ನು ಇದು ಪಡೆದುಕೊಂಡಿದೆ. ಇದರ ಜೊತೆಗೆ ಯುಎಸ್‌ಬಿ 2.0 ಪೋರ್ಟ್, ಹೈ-ರೆಸ್ ಆಡಿಯೋ ಸಪೋರ್ಟ್‌, ಐಆರ್‌ ಬ್ಲಾಸ್ಟರ್ ಹಾಗೂ IP54 ರೇಟಿಂಗ್‌ ಸಹ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ ನಾರ್ಡ್‌ CE4 ಫೋನ್ 8GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆಯು 24,999ರೂ.ಗಳ ಆಗಿದೆ. ಅಲ್ಲದೇ 8GB RAM + 256GB ವೇರಿಯಂಟ್‌ ದರವು 26,999ರೂ.ಗಳ ಆಗಿದೆ. ಇನ್ನು ಈ ಫೋನ್ ಡಾರ್ಕ್ ಕ್ರೋಮ್ ಮತ್ತು ಸೆಲಡಾನ್ ಮಾರ್ಬಲ್ ಕಲರ್‌ ಆಯ್ಕೆಯಲ್ಲಿ ಲಭ್ಯ. ಹಾಗೆಯೇ ಈ ಫೋನ್‌ ಖರೀದಿಯೊಂದಿಗೆ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2r ಇಯರಬಡ್ಸ್‌ ಡಿವೈಸ್‌ ಉಚಿತ ಎಂದು ಕಂಪನಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

Best Mobiles in India

English summary
OnePlus Nord CE4 First Sale Today via Amazon website. Check offer Price, Free gift from official website and More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+