OnePlus: ಒನ್‌ಪ್ಲಸ್‌ನ ಈ ಫೋನ್‌ಗೆ 40% ರಿಯಾಯಿತಿ! 50 MP ಕ್ಯಾಮೆರಾ... ಅತ್ಯುತ್ತಮ ಪ್ರೊಸೆಸರ್
ಒನ್‌ಪ್ಲಸ್ (OnePlus) ಫೋನ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಅಫರ್ ಬೆಲೆಯಲ್ಲಿ ಲಭ್ಯ ಇದೆ ಅಂದರೆ ಬಿಡೋಕಾಗುತ್ತಾ?. ಒನ್‌ಪ್ಲಸ್ ಫೋನ್ ವಿಭಾಗದಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿವೆ. ಈ ನಡುವೆ ಬಹಳ ಜನಪ್ರಿಯತೆ ಪಡೆದುಕೊಂಡಿದ್ದ ಫೋನ್‌ಗೆ ಬೃಹತ್ ರಿಯಾಯಿತಿ ನೀಡಲಾಗಿದೆ.
ಹೌದು, ಒನ್‌ಪ್ಲಸ್ ನಾರ್ಡ್ N20 SE ಸ್ಮಾರ್ಟ್‌ಫೋನ್‌ಗೆ (OnePlus Nord N20 SE smartphone) ದೊಡ್ಡ ಮಟ್ಟದಲ್ಲಿ ರಿಯಾಯಿತಿ ನೀಡಲಾಗಿದೆ. ಈ ಫೋನ್ ಬರೋಬ್ಬರಿ 50 ಮೆಗಾಪಿಕ್ಸೆಲ್‌ನ ವೈಡ್ ಆಂಗಲ್ ಸೆನ್ಸರ್, ಮೀಡಿಯಾಟೆಕ್ ಹಿಲಿಯೋ G35 CPU ಪ್ರೊಸೆಸರ್ (MediaTek Helio G35 CPU processor) ಬಲ ಪಡೆದುಕೊಂಡಿದೆ. ಹಾಗಿದ್ರೆ ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರವನ್ನು ತಿಳಿಯೋಣ ಬನ್ನಿ.

ಇದಿಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಹಾಗೂ ವಿನಿಯಮ ಆಫರ್ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಬಹುದು. ಅಂದರೆ ಈ ಫೋನ್ ಖರೀದಿಗೆ ಏಳು ಬ್ಯಾಂಕ್ ಅಫರ್ ಲಭ್ಯ ಇವೆ. ಪ್ರಮುಖವಾಗಿ ಎಸ್‌ಬಿಐ (SBI) ಕ್ರೆಡಿಟ್ ಕಾರ್ಡ್ ನಾನ್-ಇಎಮ್‌ಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, ಎಸ್‌ಬಿಐ ಡೆಬಿಟ್ ಕಾರ್ಡ್ ನಾನ್-ಇಎಮ್‌ಐ ವ್ಯವಹಾರದ ಮೇಲೂ 10% ತ್ವರಿತ ರಿಯಾಯಿತಿ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ 9 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಇಎಮ್‌ಐ ವ್ಯವಹಾರದ ಮೇಲೆ ಹೆಚ್ಚುವರಿ 500 ರಿಯಾಯಿತಿ ಸಿಗಲಿದೆ. ಇದರೊಂದಿಗೆ ಕ್ಯಾಶ್‌ಬ್ಯಾಕ್, ನೋ ಕಾರ್ಸ್ ಇಎಮ್‌ಐ, ಪರ್ಟನಲರ್ ಆಫರ್ ಸಹ ಲಭ್ಯ ಇದೆ.
ಒನ್‌ಪ್ಲಸ್ ನಾರ್ಡ್ N20 SE ಡಿಸ್‌ಪ್ಲೇ ವಿವರ: ಈ ಫೋನ್ 6.56 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಈ ಡಿಸ್‌ಪ್ಲೆನ ಆಕಾರ ಅನುಪಾತವು 20: 9 ಮತ್ತು ಅದರ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ 1600 x 720 ಪಿಕ್ಸೆಲ್ ಆಗಿದೆ. ಇದರೊಂದಿಗೆ ದೃಶ್ಯ ಗುಣಮಟ್ಟ 267ppi ಪಿಕ್ಸೆಲ್ ಸಾಂದ್ರತೆ ಮತ್ತು 60Hz ರಿಫ್ರೆಶ್ ರೇಟ್ ಆಯ್ಕೆ ಮೂಲಕ ಉತ್ತಮ ಅನುಭವ ನೀಡಲಿದೆ.
ಒನ್‌ಪ್ಲಸ್ ನಾರ್ಡ್ N20 SE ಪ್ರೊಸೆಸರ್ ಮಾಹಿತಿ: ಈ ಸ್ಮರ್ಟ್‌ಫೋನ್ ಆಕ್ಟಾ-ಕೋರ್ ಸಿಪಿಯು ಎರಡು ಕಾರ್ಟೆಕ್ಸ್ A53 ಪ್ರೊಸೆಸರ್‌ಗಳನ್ನು ಒಳಗೊಂಡಿದೆ, ಪ್ರತಿಯೊಂದೂ ಕ್ರಮವಾಗಿ 2.3GHz ಮತ್ತು 1.8GHz ಕ್ವಾಡ್-ಕೋರ್ ವೇಗವನ್ನು ಹೊಂದಿರುತ್ತದೆ. ಅಂದರೆ 4GB RAM, ಪವರ್ ವಿಆರ್ GE8320 ಜಿಪಿಯು ಮತ್ತು ಮೀಡಿಯಾಟೆಕ್ ಹಿಲಿಯೋ G35 ಸಿಪಿಯು ಜೊತೆಗೆ ಉತ್ತಮ ಕಾರ್ಯಕ್ಷಮತೆ ನಿರೀಕ್ಷೆ ಮಾಡಬಹುದು.

ಒನ್‌ಪ್ಲಸ್ ನಾರ್ಡ್ N20 SE ಕ್ಯಾಮೆರಾ ರಚನೆ: ಈ ವಿಶೇಷ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, 50 ಮೆಗಾಪಿಕ್ಸೆಲ್ f/1.8 ದ್ಯುತಿರಂಧ್ರದೊಂದಿಗೆ ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ f/2.4 ರ ದ್ಯುತಿರಂಧ್ರದೊಂದಿಗೆ ಡೆಪ್ತ್-ಸೆನ್ಸಿಂಗ್ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆಲ್ಫಿ ಸೆನ್ಸರ್ ಹೊಂದಿದೆ. ಕೊನೆಯದಾಗಿ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ.


Click it and Unblock the Notifications








