Home
ಸುದ್ದಿಜಾಲ

ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ವಾಚ್‌ ಬೆಲೆ ಇಳಿಕೆ; ಅಗ್ಗದ ದರದಲ್ಲಿ ನಿಮ್ಮ 'ಕೈ'ಗೆ!

ಗ್ರಾಹಕ ಎಲೆಕ್ಟ್ರಾನಿಕ್ಸ್‌ ತಯಾರಿಕಾ ವಿಭಾಗದಲ್ಲಿ ಒನ್‌ಪ್ಲಸ್‌ ತನ್ನದೇ ಆದ ಜನಪ್ರಿಯತೆ ಗಳಿಸಿಕೊಂಡಿದೆ. ಈ ಕಂಪೆನಿಯ ಯಾವುದೇ ಡಿವೈಸ್‌ಗಳಿಗೂ ಈ ಕ್ಷಣಕ್ಕೂ ಭಾರೀ ಬೇಡಿಕೆ ಇದೆ. ಅದರಂತೆ ಕಂಪೆನಿಯು ಸಹ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸುಧಾರಿತ ಫೀಚರ್ಸ್‌ ಇರುವ ಸ್ಮಾರ್ಟ್‌ ಡಿವೈಸ್‌ಗಳನ್ನು ಪರಿಚಯಿಸುತ್ತಿದ್ದು, ಅದರಂತೆ ಧರಿಸಬಹುದಾದ ಡಿವೈಸ್‌ಗಳ ವಿಭಾಗದಲ್ಲಿ ಒನ್‌ಪ್ಲಸ್‌ ಸ್ಮಾರ್ಟ್‌ವಾಚ್‌ಗಳಿಗೆ ಭಾರೀ ಬೇಡಿಕೆಯೇ ಇದೆ.

ನಾರ್ಡ್‌ ಸ್ಮಾರ್ಟ್‌ವಾಚ್‌ ಬೆಲೆ ಇಳಿಕೆ; ಅಗ್ಗದ ದರದಲ್ಲಿ ನಿಮ್ಮ 'ಕೈ'ಗೆ!

ಹೌದು, ಒನ್‌ಪ್ಲಸ್‌ನ ಡಿವೈಸ್‌ಗಳು ಸಾಮಾನ್ಯವಾಗಿ ಸ್ವಲ್ಪ ಹೆಚ್ಚಿನ ಬೆಲೆ ಹೊಂದಿರುತ್ತವೆ. ಇದಕ್ಕೆ ಕಾರಣ ಡಿವೈಸ್‌ಗಳ ಕಾರ್ಯಕ್ಷಮತೆ ಹಾಗೂ ಫೀಚರ್ಸ್‌. ಅದಾಗ್ಯೂ ನೀವು ಈ ವೇಳೆ ಕೈಗೆಟಕುವ ದರದಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ವಾಚ್‌ (OnePlus Smartwatch) ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ಇದೊಂದು ಸದಾವಕಾಶ. ಯಾಕೆಂದರೆ ಒನ್‌ಪ್ಲಸ್‌ ತನ್ನ ಸ್ಮಾರ್ಟ್‌ವಾಚ್‌ ದರವನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಗುಡ್‌ ನ್ಯೂಸ್‌ ನೀಡಿದೆ. ಹಾಗಿದ್ರೆ, ಯಾವ ವಾಚ್‌ಗೆ ಎಷ್ಟು ದರ ಕಡಿಮೆ ಮಾಡಲಾಗಿದೆ?. ಈ ವಾಚ್‌ನ ಪ್ರಮುಖ ಫೀಚರ್ಸ್‌ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಒನ್‌ಪ್ಲಸ್‌ನ ಯಾವ ಸ್ಮಾರ್ಟ್‌ವಾಚ್‌ ಗೆ ದರ ಇಳಿಕೆ
ಒನ್‌ಪ್ಲಸ್‌ನ ಒನ್‌ಪ್ಲಸ್‌ ನಾರ್ಡ್‌ ವಾಚ್‌(OnePlus Nord Watch) ಅನ್ನು ಅಕ್ಟೋಬರ್‌ 2022 ರಲ್ಲಿ ಅನಾವರಣ ಮಾಡಲಾಗಿತ್ತು. ಅದೂ ಸಹ ಬಜೆಟ್‌ ಬೆಲೆಯಲ್ಲಿ. ಆದರೆ, ಇದೀಗ ಹಠಾತ್‌ ಆಗಿ ವಾಚ್‌ನ ದರದಲ್ಲಿ ಇಳಿಕೆ ಮಾಡಲಾಗಿದೆ.

ಒನ್‌ಪ್ಲಸ್‌ನ ನಾರ್ಡ್‌ ವಾಚ್‌ನ ಬೆಲೆ ಎಷ್ಟು?
ಒನ್‌ಪ್ಲಸ್‌ನ ನಾರ್ಡ್‌ ವಾಚ್‌ ಅನ್ನು ಅನಾವರಣ ಮಾಡಿದಾಗ ಪರಿಚಯಾತ್ಮಕ ಬೆಲೆಯಾಗಿ ಇದಕ್ಕೆ 4,999ರೂ. ಗಳ ಬೆಲೆ ನಿಗದಿ ಮಾಡಲಾಗಿತ್ತು. ಅದರಂತೆ ಗ್ರಾಹಕರು ಸಹ ಈ ವಾಚ್‌ ಅನ್ನು ಹೆಚ್ಚು ಹೆಚ್ಚಾಗಿಯೇ ಖರೀದಿ ಮಾಡಿದ್ದರು.ಇದರ ನಡುವೆ ಈಗ 4,999 ರೂ. ಗಳ ಸ್ಮಾರ್ಟ್‌ವಾಚ್‌ 4,499 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ ಒನ್‌ಪ್ಲಸ್‌ ಈ ವಾಚ್‌ಗೆ 500 ರೂ. ಗಳ ದರ ಇಳಿಕೆ ಮಾಡಲಾಗಿದೆ.

ಒನ್‌ಪ್ಲಸ್‌ನ ನಾರ್ಡ್‌ ವಾಚ್‌ಗೆ ಬ್ಯಾಂಕ್‌ ರಿಯಾಯಿತಿ ಏನು?
ಒನ್‌ಪ್ಲಸ್‌ನ ನಾರ್ಡ್‌ ಸ್ಮಾರ್ಟ್‌ವಾಚ್‌ ಅನ್ನು ಕೆಲವು ಬ್ಯಾಂಕ್‌ ಆಫರ್‌ ಮೂಲಕ ಇನ್ನೂ ಸಹ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಅಂದರೆ ನಿಮ್ಮ ಬಳಿ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಇದ್ದರೆ ಹೆಚ್ಚುವರಿಯಾಗಿ ಈ ವಾಚ್‌ಮೇಲೆ 500ರೂ. ಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದು. ಹಾಗೆಯೇ MobiKwik ವಾಲೆಟ್ ಮೂಲಕ ಖರೀದಿ ಮಾಡಿದರೂ ಸಹ ಗ್ರಾಹಕರು 500ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇಷ್ಟೆಲ್ಲಾ ಆಫರ್‌ ಜೊತೆಗೆ ಈ ವಾಚ್‌ ಅನ್ನು ಕೇವಲ 3,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ನಾರ್ಡ್‌ ಸ್ಮಾರ್ಟ್‌ವಾಚ್‌ ಬೆಲೆ ಇಳಿಕೆ; ಅಗ್ಗದ ದರದಲ್ಲಿ ನಿಮ್ಮ 'ಕೈ'ಗೆ!

3,999 ರೂ. ಗಳ ಬೆಲೆಯ ಮೌಲ್ಯ ಹೊಂದಿದೆಯಾ ಒನ್‌ಪ್ಲಸ್‌ನ ನಾರ್ಡ್‌?
ಇಷ್ಟೆಲ್ಲಾ ಆಫರ್‌ ನಡುವೆಯೂ 3,999ರೂ. ಗಳನ್ನು ಕೊಟ್ಟು ಖರೀದಿ ಮಾಡುವಷ್ಟು ಈ ವಾಚ್‌ ಮೌಲ್ಯ ಹೊಂದಿದೆಯಾ ಎಂಬ ಪ್ರಶ್ನೆ ನಿಮ್ಮಲ್ಲಿ ಏನಾದರೂ ಮನೆಮಾಡಿದ್ದರೆ ಅದಕ್ಕೆ ಇಲ್ಲಿದೆ ವಿವರ. ಅಂದರೆ 5,000 ರೂ. ಗಳ ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳಲ್ಲಿ ಈ ವಾಚ್‌ ಸಹ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ವಾಚ್‌ ಇತರೆ ವಾಚ್‌ಗಳಿಗಿಂತ ಕೊಂಚ ಹೆಚ್ಚಿನ ಫೀಚರ್ಸ್‌ ಹೊಂದಿದೆ.

ಇನ್ನು ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೊಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ನೀಡಲಿದೆ. ಜೊತೆಗೆ 500nits ಬ್ರೈಟ್‌ನೆಸ್‌ ಆಯ್ಕೆ ನೀಡಲಾಗಿರುವುದರಿಂದ ನೀವು ಮಧ್ಯಾಹ್ನದ ಬಿರು ಬಿಸಿಲಿನಲ್ಲೂ ಮಸುಕಿಲ್ಲದ ನೋಟವನ್ನು ಈ ವಾಚ್‌ನಲ್ಲಿ ಕಾಣಬಹುದಾಗಿದೆ.

ನಾರ್ಡ್‌ ಸ್ಮಾರ್ಟ್‌ವಾಚ್‌ ಬೆಲೆ ಇಳಿಕೆ; ಅಗ್ಗದ ದರದಲ್ಲಿ ನಿಮ್ಮ 'ಕೈ'ಗೆ!

ಇದರೊಂದಿಗೆ 105 ಫಿಟ್‌ನೆಸ್ ಮೋಡ್‌ ಆಯ್ಕೆ ಪಡೆದುಕೊಂಡಿದ್ದು, ಹೃದಯ ಬಡಿತ, ಒತ್ತಡ, ರಕ್ತದ ಆಮ್ಲಜನಕದ ಮಟ್ಟ ಮತ್ತು ಇನ್ನೂ ಹೆಚ್ಚಿನ ಆರೋಗ್ಯ ಸಂಬಂಧಿ ವಿಷಯಗಳ ಮೇಲೆ ಇದು ಕೆಲಸ ಮಾಡಲಿದೆ. ಬ್ಲೂಟೂತ್ ಆವೃತ್ತಿ 5.2 ಹೊಂದಿರುವ ಈ ವಾಚ್‌, ಆಂಡ್ರಾಯ್ಡ್‌ 6.0 ಹಾಗೂ ಐಓಎಸ್ 11 ಮತ್ತು ಇನ್ನೂ ಹೆಚ್ಚಿನ ಓಎಸ್‌ ಡಿವೈಸ್‌ಗಳಿಗೆ ಹೊಂದಿಕೆಯಾಗುತ್ತದೆ.

ಇದರ ಬ್ಯಾಟರಿ ವಿಚಾರಕ್ಕೆ ಬಂದರೆ, ಒಂದು ಪೂರ್ಣ ಚಾರ್ಜ್‌ನಲ್ಲಿ 10 ದಿನಗಳ ಬ್ಯಾಕಪ್‌ ನೀಡಲಿದೆ. ಹಾಗೆಯೇ 30 ದಿನಗಳ ಸ್ಟ್ಯಾಂಡ್‌ಬೈ ಸಮಯ ಹೊಂದಿದೆ. ಇದರೊಂದಿಗೆ ಈ ಡಿವೈಸ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಪ್ರಮಾಣೀಕರಿಸಲಾಗಿದೆ.

Best Mobiles in India

English summary
Oneplus nord watch gets a price drop. whereby customers can get for just Rs 4,499. This watch can be purchased Also through ICICI and MobiKwik, further discounts will be available.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+