ಹೊಸ ಒನ್‌ಪ್ಲಸ್ ಮೊಬೈಲ್ ಖರೀದಿಸಲು ಇದಕ್ಕಿಂತ ಒಳ್ಳೆಯ ಆಫರ್ ಬೇಕೆ?
ಸದ್ಯ ಹಬ್ಬದ ಸಂದರ್ಭ ಆಗಿರುವುದರಿಂದ ಇ ಕಾಮರ್ಸ್ ತಾಣಗಳಲ್ಲಿ ಭರ್ಜರಿ ರಿಯಾಯಿತಿ ಕೊಡುಗೆಗಳು ಜಾರಿ ಆಗಿವೆ. ಹಾಗೆಯೇ ಕೆಲವು ಮೊಬೈಲ್ ಬ್ರ್ಯಾಂಡ್‌ಗಳು ತಮ್ಮ ಅಧಿಕೃತ ವೆಬ್‌ಸೈಟ್ ಮೂಲಕವೂ ವಿಶೇಷ ರಿಯಾಯಿತಿ ಘೋಷಿಸಿವೆ. ಅದೇ ರೀತಿ ಒನ್‌ಪ್ಲಸ್ ಮೊಬೈಲ್ ಸಂಸ್ಥೆಯು ತನ್ನ ನಾರ್ಡ್ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗೆ ಸಖತ್ ಡಿಸ್ಕೌಂಟ್ ತಿಳಿಸಿದೆ.
ಹೌದು, ಒನ್‌ಪ್ಲಸ್ ಸಂಸ್ಥೆಯು ಹಬ್ಬದ ಪ್ರಯುಕ್ತ ಒನ್‌ಪ್ಲಸ್ ನಾರ್ಡ್ (OnePlus Nord series) ಸರಣಿಯ ಕೆಲವು ಮೊಬೈಲ್ ಹಾಗೂ ಇತರೆ ಕೆಲವು ಡಿವೈಸ್‌ಗಳಿಗೆ ಆಕರ್ಷಕ ಡಿಸ್ಕೌಂಟ್ ಲಭ್ಯ ಮಾಡಿದೆ. ಅದರಲ್ಲಿ ಮುಖ್ಯವಾಗಿ ಒನ್‌ಪ್ಲಸ್ ನಾರ್ಡ್ CE 3 (OnePlus Nord CE3) ಕೂಡಾ ಗ್ರಾಹಕರು ಹುಬ್ಬೇರಿಸುವಂತಹ ರಿಯಾಯಿತಿ ಕೊಡುಗೆಗಳನ್ನು ಪಡೆದುಕೊಂಡಿದೆ. ಹಾಗಾದರೆ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಹಬ್ಬದ ಆಫರ್ ಏನಿದೆ?
ಒನ್‌ಪ್ಲಸ್ ನಾರ್ಡ್ CE 3 ಅನ್ನು ಖರೀದಿಸುವ ಗ್ರಾಹಕರು 2,000ರೂ. ಗಳ ವಿಶೇಷ ಬೆಲೆ ಕೂಪನ್ ರಿಯಾಯಿತಿ ಪಡೆಯುವುದರ ಜೊತೆಗೆ 2000ರೂ. ತ್ವರಿತ ಬ್ಯಾಂಕ್ ರಿಯಾಯಿತಿ ಅನ್ನು ಕೂಡಾ ಪಡೆಯಬಹುದು. ಅಲ್ಲದೇ 2x ರೆಡ್‌ಕಾಯಿನ್ಸ್ ಪಡೆಯಬಹುದು. ಇನ್ನು ನಾರ್ಡ್ 3 5G ಖರೀದಿಯೊಂದಿಗೆ ಗ್ರಾಹಕರು ಉಚಿತ ಒನ್‌ಪ್ಲಸ್ ನಾರ್ಡ್ ಬಡ್ಸ್ 2R (OnePlus Nord Buds 2r) ಡಿವೈಸ್ ಅನ್ನು ಪಡೆಯಬಹುದು. ಆದರೆ ಈ ಕೊಡುಗೆ ಸ್ಟಾಕ್ ಇರುವವರೆಗೆ ಮಾತ್ರ ಎಂಬುದನ್ನು ಗಮನಿಸಿ.
ಒನ್‌ಪ್ಲಸ್ ನಾರ್ಡ್ CE 3 ಫೋನಿನ ಫೀಚರ್ಸ್ ಹೀಗಿದೆ
ಈ ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಡಿಸ್‌ಪ್ಲೇಯ 120Hz ರಿಫ್ರೆಶ್ ರೇಟ್ ಪಡೆದಿದೆ. ಹಾಗೆಯೇ ಒನ್‌ಪ್ಲಸ್ ನಾರ್ಡ್ CE 3 ಮೊಬೈಲ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 782G SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಅದರೊಂದಿಗೆ ಅಡ್ರಿನೋ 642L GPU ಸಪೋರ್ಟ್ ಕೂಡಾ ಪಡೆದುಕೊಂಡಿದೆ.
ಇನ್ನು ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಸಹ ಒಳಗೊಂಡಿದ್ದು, ಇದರೊಂದಿಗೆ 8 GB RAM + 128 GB ಮತ್ತು 12 GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಅಲ್ಲದೇ ಒನ್‌ಪ್ಲಸ್ ನಾರ್ಡ್ CE 3 ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ.
ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ನಲ್ಲಿದೆ. ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹಾಗೂ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ. ಅಲ್ಲದೇ ಇದು ನೈಟ್‌ಸ್ಕೇಪ್ ಅಲ್ಟ್ರಾ, ನೈಟ್ ಪೋರ್ಟ್ರೇಟ್, ಒಐಎಸ್ ನಂತಹ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಒನ್‌ಪ್ಲಸ್ ಸಂಸ್ಥೆಯ ಈ ಮೊಬೈಲ್ 5,000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 80w ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಅಂಡ್ರಾಯ್ಡ್ 13 ಓಎಸ್ ಸಫೋರ್ಟ್ ಪಡೆದಿದ್ದು, ಇದಲ್ಲದೇ ಆಕ್ಸಿಜನ್ 13.1 ಸ್ಕೀನ್ ಓಎಸ್ ಸಪೋರ್ಟ್ ಸಹ ಪಡೆದಿದೆ. ಹಾಗೆಯೇ ಸದ್ಯ ಚಾಲ್ತಿ ಇರುವ ಕನೆಕ್ಟಿವಿಟಿ ಸೌಲಭ್ಯಗಳು ಇದರಲ್ಲಿ ಸೇರಿವೆ.


Click it and Unblock the Notifications








