Home
ಸುದ್ದಿಜಾಲ

ಒನ್‌ಪ್ಲಸ್‌ ನಾರ್ಡ್‌, ಒನ್‌ಪ್ಲಸ್‌ 8 ಡಿವೈಸ್‌ಗೆ ಭಾರಿ ಡಿಸ್ಕೌಂಟ್!

ಒನ್‌ಪ್ಲಸ್ ಸಂಸ್ಥೆಯ ಒನ್‌ಪ್ಲಸ್ ನಾರ್ಡ್ ಫೋನ್ ಅಥವಾ ಒನ್‌ಪ್ಲಸ್ ಟಿವಿ ಉತ್ಪನ್ನಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಲು ಬಯಸುವಿರಾ?..ಹಾಗಿದ್ದರೇ ಒನ್‌ಪ್ಲಸ್‌ ಉತ್ಪನ್ನಗಳ ಖರಿದಿಗೆ ಇದುವೇ ರೈಟ್‌ ಟೈಮ್ ಆಗಿದೆ. ಏಕೆಂದರೇ ಒನ್‌ಪ್ಲಸ್‌ ಸಂಸ್ಥೆಯು ತನ್ನ ಕೆಲವು ಆಯ್ದ ಉತ್ಪನ್ನಗಳ ಮೇಲೆ ಈಗ ಭರ್ಜರಿ ಡಿಸ್ಕೌಂಟ್‌ ಕೊಡುಗೆಗಳನ್ನು ಘೋಷಿಸಿದೆ.

ಐಸಿಐಸಿಐ ಬ್ಯಾಂಕಿನ

ಹೌದು, ಒನ್‌ಪ್ಲಸ್‌ ಸಂಸ್ಥೆಯು ಇದೀಗ ಐಸಿಐಸಿಐ ಬ್ಯಾಂಕಿನ ಸಹಭಾಗಿತ್ವದಲ್ಲಿ ವಿಶೇಷ ಸೀಮಿತ ಸಮಯದ ಕೊಡುಗೆಯನ್ನು ನೀಡುವುದಾಗಿ ಒನ್‌ಪ್ಲಸ್ ಘೋಷಿಸಿದೆ. ಈ ಅವಧಿಯಲ್ಲಿ ಗ್ರಾಹಕರು ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಬಳಸಿ ಖರೀದಿಸಿದರೇ 8,000 ರೂ.ಗಳವರೆಗೆ ತ್ವರಿತ ರಿಯಾಯಿತಿ ದೊರೆಲಿದೆ. ಇನ್ನು ಈ ವಿಶೇಷ ಕೊಡುಗೆಯು ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 9 ರವರೆಗೆ ಇರಲಿದೆ.

ಒನ್‌ಪ್ಲಸ್‌-ಐಸಿಐಸಿಐ ಬ್ಯಾಂಕ್ ಆಫರ್

ಒನ್‌ಪ್ಲಸ್‌-ಐಸಿಐಸಿಐ ಬ್ಯಾಂಕ್ ಆಫರ್

ಈ ಕೊಡುಗೆಯಲ್ಲಿ ಒನ್‌ಪ್ಲಸ್ ಸಂಸ್ಥೆಯ ಕೆಲವು ಆಯ್ದ ಉತ್ಪನ್ನಗಳಿಗೆ ಮಾತ್ರ ಡಿಸ್ಕೌಂಟ್ ಲಭ್ಯ. ಒನ್‌ಪ್ಲಸ್ ನಾರ್ಡ್, ಒನ್‌ಪ್ಲಸ್ 7T, ಒನ್‌ಪ್ಲಸ್ 8, ಮತ್ತು 8 ಪ್ರೊ, ಮತ್ತು ಪ್ರೀಮಿಯಂ ಒನ್‌ಪ್ಲಸ್ Q1 ಸ್ಮಾರ್ಟ್‌ ಟಿವಿಗಳು ಸೇರಿದಂತೆ ಕಂಪನಿಯ ಜನಪ್ರಿಯ ಉತ್ಪನ್ನಗಳು ಇದರಲ್ಲಿವೆ. ಅಮೆಜಾನ್ ಇಂಡಿಯಾ ವೆಬ್‌ಸೈಟ್ ಮತ್ತು ಒನ್‌ಪ್ಲಸ್ ಮಳಿಗೆಗಳು ಸೇರಿದಂತೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಈ ಕೊಡುಗೆಗಳು ಲಭ್ಯವಿದೆ. ಹಾಗೆಯೇ ನೋ-ಕಾಸ್ಟ್‌ EMI ಆಯ್ಕೆ ಸಹ ಲಭ್ಯವಾಗಲಿದೆ.

ಒನ್‌ಪ್ಲಸ್ 8 ಸರಣಿ

ಒನ್‌ಪ್ಲಸ್ 8 ಸರಣಿ

ಸಂಸ್ಥೆಯ ಜನಪ್ರಿಯ ಒನ್‌ಪ್ಲಸ್ 8 ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್‌ ಲಭ್ಯ. 3 ಅಥವಾ 6 ತಿಂಗಳ ನೋ-ಕಾಸ್ಟ್ ಇಎಂಐ ಆಯ್ಕೆ ಸಿಗಲಿದೆ. ಹಾಗೆಯೇ 3,000 ರೂ.ಗಳ ತ್ವರಿತ ರಿಯಾಯಿತಿ ಸಹ ದೊರೆಯಲಿದೆ.

ಒನ್‌ಪ್ಲಸ್ 7 ಸರಣಿ

ಒನ್‌ಪ್ಲಸ್ 7 ಸರಣಿ

ಒನ್‌ಪ್ಲಸ್ 8 ಸರಣಿಯ ಪೀಳಿಗೆಯ ಜನಪ್ರಿಯ ಮಾಡೆಲ್‌ ಒನ್‌ಪ್ಲಸ್ 7 ಸರಣಿಯ ಫೋನ್‌ಗಳು ಆಫರ್‌ನಲ್ಲಿ ಲಭ್ಯ. ಈ ಸರಣಿಯ ಒನ್‌ಪ್ಲಸ್ 7T, ಮತ್ತು ಒನ್‌ಪ್ಲಸ್‌ 7Tಪ್ರೊ ಫೋನ್‌ಗಳಿಗೂ 3 ಅಥವಾ 6 ತಿಂಗಳ ನೋ-ಕಾಸ್ಟ್ ಇಎಂಐ ಆಯ್ಕೆ ಸಿಗಲಿದೆ. ಹಾಗೂ 3,000 ರೂ. ರಿಯಾಯಿತಿ ಅವಕಾಶ ಇದೆ.

ಒನ್‌ಪ್ಲಸ್ ನಾರ್ಡ್

ಒನ್‌ಪ್ಲಸ್ ನಾರ್ಡ್

ಒನ್‌ಪ್ಲಸ್‌ ಕಂಪನಿಯ ಹೊಸ ಒನ್‌ಪ್ಲಸ್ ನಾರ್ಡ್ ಆರಂಭಿಕ ಬೆಲೆಗೆ 24,999 ರೂ. ಆಗಿದೆ. ಹಾಗೆಯೇ 12GB RAM ಮತ್ತು 256GB ಸಂಗ್ರಹದ ಟಾಪ್-ಎಂಡ್ ವೇರಿಯಂಟ್ ದರವು 29,999 ರೂ. ಆಗಿದೆ. ಈ ಕೊಡುಗೆಯಲ್ಲಿ ಈ ಫೋನ್ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆ ಪಡೆದಿದ್ದು, ಹಾಗೂ 1,000 ರೂ ರಿಯಾಯಿತಿ ಪಡೆಯಲಿದೆ.

ಒನ್‌ಪ್ಲಸ್‌ ಟಿವಿ

ಒನ್‌ಪ್ಲಸ್‌ ಟಿವಿ

ಒನ್‌ಪ್ಲಸ್ ಕಂಪನಿಯ ಒನ್‌ಪ್ಲಸ್‌ ಟಿವಿ Q1 ಮತ್ತು Q1 ಪ್ರೊ ಮಾಡೆಲ್ ಸಹ 3 ಅಥವಾ 6 ತಿಂಗಳ ನೋ-ಕಾಸ್ಟ್ ಇಎಂಐ ಆಯ್ಕೆಯಲ್ಲಿ ಲಭ್ಯ. ಒನ್‌ಪ್ಲಸ್ ಟಿವಿ ಕ್ಯೂ 1 ಪ್ರೊ ಖರೀದಿಯ ಮೇಲೆ 8,000 ರೂ.ಗಳ ವರೆಗೂ ತ್ವರಿತ ರಿಯಾಯಿತಿ ಆಯ್ಕೆ ಇರಲಿದೆ. ಮತ್ತು ಒನ್‌ಪ್ಲಸ್ ಟಿವಿ ಕ್ಯೂ 1 ನೇರ ಖರೀದಿ ರಿಯಾಯಿತಿಯನ್ನು 5,000 ರೂ. ರಿಯಾಯಿತಿ ಸಿಗಲಿದೆ.

Best Mobiles in India

English summary
The OnePlus Nord, which retails at a starting price of Rs 24,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+