ಬೆಂಗಳೂರಿಗರಿಗೆ ಮತ್ತೊಂದು ಸಿಹಿಸುದ್ದಿ ನೀಡಿತು 'ಒನ್‌ಪ್ಲಸ್'!
ಸ್ಮಾರ್ಟ್‌ಪೋನ್ ಖರೀದಿಗೆ ಜನರು ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ 'ನಂಬರ್ 1' ಮಾರಾಟಗಾರ ಕಂಪೆನಿ 'ಒನ್‌ಪ್ಲಸ್' ಬೆಂಗಳೂರಿಗರಿಗೆ ಸಿಹಿಸುದ್ದಿ ನೀಡಿದೆ. ನಗರದ ಜಯನಗರದ 4ನೇ ಬ್ಲಾಕ್‌ನಲ್ಲಿ ಮತ್ತೊಂದು ಒನ್‌ಪ್ಲಸ್ ಮಳಿಗೆಯನ್ನು ಆರಂಭಿಸುವ ಮೂಲಕ ಆಫ್‌ಲೈನ್ ಮಾರುಕಟ್ಟೆಯ ಅನುಭವವನ್ನು ಹೆಚ್ಚಿಸಲು ಮುಂದಾಗಿದೆ.
ಭಾರತದ ಗ್ರಾಹಕರು ಆನ್‌ಲೈನಿನಲ್ಲಿ ಮೊಬೈಲ್ ಖರೀದಿಸುವುದಕ್ಕೂ ಮುನ್ನ ಮಳಿಗೆಗೆ ಹೋಗಿ ಅದನ್ನು ಪರಿಶೀಲಿಸಿದ ಬಳಿಕ ಅದನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಮನೋಧರ್ಮ ಹೊಂದಿದ್ದಾರೆ. ಹಾಗಾಗಿ, ಆಫ್‌ಲೈನ್ ಮಳಿಗೆಗಳನ್ನು ತೆರೆಯಲು ಗಮನ ನೀಡುತ್ತಿದ್ದೇವೆ ಎಂದು ಒನ್‌ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್‌ವಾಲ್ ಅವರು ಹೇಳಿದ್ದಾರೆ.

ದೇಶದಲ್ಲಿ ಒನ್‌ಪ್ಲಸ್‌ನ ಮೊದಲ ಆಫ್‌ಲೈನ್ ಮಳಿಗೆಯನ್ನು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆರಂಭಿಸಲಾಗಿತ್ತು. ಇಲ್ಲಿ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಮಳಿಗೆಗಳನ್ನು ಆರಂಭಿಸುವ ಮೂಲಕ ಬೆಂಗಳೂರಿನ ಗ್ರಾಹಕರಿಗೆ ಒನ್‌ಪ್ಲಸ್ ಸೇವೆಯನ್ನು ಹೆಚ್ಚು ವಿಸ್ತರಿಸುವತ್ತ ನಾವು ಗಮನಹರಿಸಿದ್ದೇವೆ ಎಂದು ಅವರು ತಿಳಿಸಿದರು.
ಇನ್ನು ಒನ್‌ಪ್ಲಸ್ ಕಂಪೆನಿಗೆ ಭಾರತ ಅತ್ಯಂತ ಹೆಚ್ಚು ಆದಾಯ ತಂದು ಕೊಡುವ ದೇಶಗಳಲ್ಲಿ ಒಂದಾಗಿದೆ. 2017 ರಲ್ಲಿ ಕಂಪನಿಯ ಒಟ್ಟಾರೆ ಆದಾಯದ ಶೇ 3ನೇ ಒಂದು ಭಾಗದಷ್ಟು ಆದಾಯ ಭಾರತದ ಮಾರುಕಟ್ಟೆಯಿಂದಲೇ ಬಂದಿದೆ. ಹಾಗಾಗಿ, ಭಾರತದಲ್ಲಿ ಮತ್ತಷ್ಟು ಆಫ್‌ಲೈನ್ ಮಳಿಗೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಒನ್‌ಪ್ಲಸ್ ಹೆಜ್ಜೆ ಇಟ್ಟಿದೆ ಎಂದು ಅವರು ಹೇಳಿದರು.

ಕೌಂಟರ್‌ಪಾಯಿಂಟ್ ಮಾರ್ಕೆಟ್ ಮಾನಿಟರ್ ಸರ್ವೀಸ್ ಡೇಟಾ ಪ್ರಕಾರ, 2018ರ ಎರಡನೇ ತ್ರೈಮಾಸಿಕದ ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಒನ್‌ಪ್ಲಸ್ ಮೊದಲ ಸ್ಥಾನ ಪಡೆದು ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪೆನಿಗಳನ್ನು ಹಿಂದಿಕ್ಕಿದೆ. ವಾರ್ಷಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಇದಾಗಿದ್ದು, ಶೇ.284 ರಷ್ಟು ಪ್ರಗತಿ ಸಾಧಿಸಿದೆ.
ಓದಿರಿ: ರಸ್ತೆಬದಿ ರೆಸ್ಯೂಮ್ ಹಿಡಿದು ನಿಂತ ನಿರಾಶ್ರಿತನಿಗೆ 'ಗೂಗಲ್'ನಿಂದ ಉದ್ಯೋಗದ ಆಫರ್!!


Click it and Unblock the Notifications