ರಸ್ತೆಬದಿ ರೆಸ್ಯೂಮ್ ಹಿಡಿದು ನಿಂತ ನಿರಾಶ್ರಿತನಿಗೆ 'ಗೂಗಲ್‌'ನಿಂದ ಉದ್ಯೋಗದ ಆಫರ್!!

  |

  ನಿಮ್ಮ ಜೀವನದಲ್ಲಿ ಎಂದಾದರೂ ಪವಾಡ ನಡೆಯಬಹುದು ಎಂದು ನೀವು ಅಂದುಕೊಂಡಿದ್ದರೆ ಈ ಒಂದು ಘಟನೆ ನಿಮಗೆ ಸ್ಪೂರ್ತಿಯಾಗಬಹುದು. ಕೆಲಸವಿಲ್ಲದೆ ರಸ್ತೆ ಬದಿಯಲ್ಲಿದ್ದ ನಿರಾಶ್ರಿತನೋರ್ವನಿಗೆ ಗೂಗಲ್‌, ನೆಟ್‌ಫ್ಲಿಕ್ಸ್ ಮತ್ತು ಲಿಂಕ್ಡ್ ಇನ್‌ ನಂತಹ ತಂತ್ರಜ್ಞಾನ ದೈತ್ಯ ಸಂಸ್ಥೆಗಳು ಭಾರೀ ಸಂಬಳದ ಉದ್ಯೋಗದ ಕೊಡುಗೆ ನೀಡಿ ಆಶ್ಚರ್ಯಗೊಳಿಸಿವೆ.

  ಹೌದು, ಇದು ವಾಸ್ತವವೇ ಆದರೂ ಟೆಕ್‌ ಜಗತ್ತಿನ ಒಂದು ಪವಾಡವೇ ಎನ್ನಬೇಕಿದೆ. 'ನಾನು ನಿರಾಶ್ರಿತ, ಯಶಸ್ಸಿಗಾಗಿ ಹಸಿದಿದ್ದೇನೆ; ನನ್ನ ರೆಸ್ಯೂಮ್ ಅನ್ನು ಸ್ವೀಕರಿಸಿ' ಎಂಬ ದೊಡ್ಡ ಫ‌ಲಕವನ್ನು ಕೈಯಲ್ಲಿ ಹಿಡಿದುಕೊಂಡು ಅಮೆರಿಕದ ಸಿಲಿಕಾನ್‌ ವ್ಯಾಲಿಯ ರಸ್ತೆ ಬದಿಯಲ್ಲಿ ನಿಂತು ಬೇಡುತ್ತಿದ್ದ ನಿರಾಶ್ರಿತ ವ್ಯಕ್ತಿಯೋರ್ವನಿಗೆ ಇಂತಹ ಪವಾಡದ ಅನುಭವವಾಗಿದೆ.

  ರಸ್ತೆಬದಿ ರೆಸ್ಯೂಮ್ ಹಿಡಿದು ನಿಂತ ನಿರಾಶ್ರಿತನಿಗೆ 'ಗೂಗಲ್‌'ನಿಂದ ಉದ್ಯೋಗದ ಆಫರ್!

  ರೆಸ್ಯೂಮ್ ಅನ್ನು ಸ್ವೀಕರಿಸಿ ಎಂಬ ನಿರಾಶ್ರಿತ ವ್ಯಕ್ತಿಯ ಫೋಟೋ ಕ್ಲಿಕ್ಕಿಸಿದ ಮಹಿಳೆಯೊಬ್ಬಳು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿದ ಪರಿಣಾಮವಾಗಿ ಯಾರೂ ನಂಬದಿರುವಂತಹ ಇಂತಹ ಪವಾಡವೇ ನಡೆದುಹೋಗಿದೆ. ಹಾಗಾದರೆ, ಏನಿದು ಕುತೋಹಲಕಾರಿ ಸ್ಟೋರಿ? ನಿರಾಶ್ರಿತನಿಗೆ ಅದೃಷ್ಟ ಒಲಿದು ಬಂದದ್ದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಯಶಸ್ಸಿಗಾಗಿ ಹಸಿದಿದ್ದೇನೆ!

  ಯಾವುದೇ ದೇಶದಲ್ಲಿಯೇ ಆಗಲಿ ನಿರಾಶ್ರಿತರು ಇತರರನ್ನು ಬೇಡುವುದು ಹಣಕ್ಕಾಗಿ ಮಾತ್ರ. ಆದರೆ, ಅಮೆರಿಕದ ಸಿಲಿಕಾನ್‌ ವ್ಯಾಲಿಯ ರಸ್ತೆ ಬದಿಯಲ್ಲಿ ನಿಂತು ನಿರಾಶ್ರಿತನೋರ್ವ ಬೇಡುತ್ತಿದ್ದದ್ದು, 'ಯಶಸ್ಸಿಗಾಗಿ ಹಸಿದಿದ್ದೇನೆ, ನನ್ನ ರೆಸ್ಯೂಮ್ ಅನ್ನು ಸ್ವೀಕರಿಸಿ' ಎಂದು ಮಾತ್ರ. ಇಂತಹ ಒಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

  ಅನಾಮಿಕ ವ್ಯಕ್ತಿಗೆ ಸಹಾಯ!

  ನಿರಾಶ್ರಿತನ ಈ ಒಂದು ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಓರ್ವ ಮಹಿಳೆ ಕಾರಣವಾಗಿದ್ದಾರೆ. ಈ ಯುವಕನ ಕುರಿತಾಗಿ "ಫುಲ್ ಮೇಕಪ್‌ ಆಲ್‌ಕೆಮಿಸ್ಟ್' ಎಂಬ ಟ್ವಿಟರ್ ನಾಮಾಂಕಿತ ಮಹಿಳೆಯು ತನ್ನ ಟ್ವೀಟ್ಟರ್‌ನಲ್ಲಿ ಸರಣಿ ಟ್ವಿಟ್‌ಗಳ ಮೂಲಕ ಅನಾಮಿಕ ವ್ಯಕ್ತಿಗೆ ಸಹಾಯ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.ಅವರ ಎಲ್ಲಾ ಟ್ವಿಟ್‌ಗಳು ವೈರಲ್ ಆಗಿವೆ.

  ಗಮನ ಸೆಳೆದ ಟ್ವಿಟ್ 1

  ರಸ್ತೆ ಬದಿ ಹಣ ಬೇಡುವ ಬದಲು, ಈ ಯುವಕ ತನಗೆ ಉದ್ಯೋಗ ಕೊಡಿರೆಂದು ಬೇಡಿ ತನ್ನ ರೆಸ್ಯೂಮ್ ತೋರಿಸುತ್ತಿರುವುದನ್ನು ನಾನಿಂದು ಕಂಡೆ. ಸಿಲಿಕಾನ್‌ ವ್ಯಾಲಿಯಲ್ಲಿ ಯಾರಾದರೂ ಈತನಿಗೆ ನೆರವಾದರೆ ಅದು ನಿಜಕ್ಕೂ ಒಂದು ಒಳ್ಳೆಯ ಕೆಲಸ. ಆ ಮೂಲಕ ಈ ಡೇವಿಡ್‌ಗೆ ಬದುಕಿನಲ್ಲಿ ಮೇಲೆ ಬರಲು ಸಾಧ್ಯ ಎಂದು ಮಹಿಳೆ ಮೊದಲ ಟ್ವಿಟ್ ಮಾಡಿದ್ದಾರೆ.

  ಗಮನ ಸೆಳೆದ ಟ್ವಿಟ್ 2

  ನಾನು ಡೇವಿಡ್‌ ಜತೆಗೆ ಸುಮಾರು ಒಂದು ತಾಸು ಕಾಲ ಮಾತನಾಡಿದೆ. ಹಣ ಇಲ್ಲದೆ ತಾನು ಪಾರ್ಕ್‌ಗಳಲ್ಲಿ ಮಲಗುತ್ತಿರುವುದಾಗಿ ಆತ ಹೇಳಿದ. ಫ್ರೀ ಲ್ಯಾನ್ಸ್ ಕೆಲಸ ಪಡೆಯಲು ತಾನು ಇನ್ನೂ ಪ್ರಯತ್ನಿಸುತ್ತಿದ್ದೇನೆ. ಇಂಟರ್ ವ್ಯೂ ಎದುರಿಸುವುದು, ಅರ್ಜಿ ಹಾಕುವುದು ನಡೆದೇ ಇದೆ ಎಂದ' ಎಂದು ನಂತರದ ಟ್ವಿಟ್‌ಗಳಲ್ಲಿ ಅವರು ಡೇವಿಡ್ ಕಥೆಯನ್ನು ತಿಳಿಸಿದ್ದಾರೆ.

  ಗಮನ ಸೆಳೆದ ಟ್ವಿಟ್ 3

  ಈ ಡೇವಿಡ್‌ ಸಿಲಿಕಾನ್‌ ವ್ಯಾಲಿಗೆ ತುಂಬಾ ಆಸೆ ಆಕಾಂಕ್ಷೆಗಳೊಂದಿಗೆ ಬಂದಿದ್ದ. ಆದರೆ, ಇಲ್ಲಿ ಉದ್ಯೋಗ ಪಡೆಯಲು ವಿಫಲನಾದ. ಆತನ ಬಳಿ ಇದ್ದ ಹಣವೆಲ್ಲವೂ ಖರ್ಚಾಗಿ ಹೋಗಿತ್ತು. ಕೊನೆಗೆ ಫ್ರೀ ಲ್ಯಾನ್ಸರ್ ಕೆಲಸ ಪಡೆಯಲು ಕೂಡ ಆತ ವಿಫಲನಾದ ಎಂಬ ಡೇವಿಡ್‌ನ ಕರುಣಾಜನಕ ಕಥೆಯನ್ನು ಟ್ವಿಟ್ ಮೂಲಕ ಹೇಳಿದ್ದಾರೆ.

  ಪವಾಡ ಸೃಷ್ಟಿಸಿದ ಅವರ ಟ್ವಿಟ್‌ಗಳು!

  ಆಕೆ ಟ್ವಿಟರ್‌ನಲ್ಲಿ, ನಿರಾಶ್ರಿತನಾಗಿರುವ, ಯಶಸ್ಸಿಗಾಗಿ ಹಸಿದಿರುವ' ಡೇವಿಡ್‌ ಬಗ್ಗೆ ಬರೆದ ಟ್ವೀಟ್‌ಗಳು ಅಸಂಖ್ಯಾತ ಟ್ವಿಟರಾಟಿಗಳನ್ನು ಸೆಳೆದಿದೆ. ದೊಡ್ಡ ದೊಡ್ಡ ಕಂಪೆನಿಗಳ ಕಣ್ಣಿಗೂ ಅದು ಬಿದ್ದ ಪರಿಣಾಮ ಪವಾಡವನ್ನೇ ಸೃಷ್ಟಿಸಿದೆ. ಗೂಗಲ್‌, ನೆಟ್‌ ಫ್ಲಿಕ್ಸ್‌ ಮತ್ತು ಲಿಂಕ್ಡ್ ಇನ್‌ ನಂತಹ ಟೆಕ್‌ ದಿಗ್ಗಜ ಸಂಸ್ಥೆಗಳು ಡೇವಿಡ್‌ಗೆ ಉದ್ಯೋಗದ ಆಫರ್ ಅನ್ನು ನೀಡಿವೆ.

  ಅಚ್ಚರಿಯಾದ ಮಹಿಳೆ!

  ಗೂಗಲ್‌, ನೆಟ್‌ ಫ್ಲಿಕ್ಸ್ ಮತ್ತು ಲಿಂಕ್ಡ್ ಇನ್‌ ನಂತಹ ಟೆಕ್‌ ದಿಗ್ಗಜ ಸಂಸ್ಥೆಗಳು ಡೇವಿಡ್‌ಗೆ ಉದ್ಯೋಗದ ಆಫರ್ ನೀಡಿರುವುದರಿಂದ 'ಫುಲ್‌ ಮೇಕಪ್‌ ಆಲ್‌ಕೆಮಿಸ್ಟ್' ಟ್ವಿಟರ್ ನಾಮಾಂಕಿತ ಮಹಿಳೆಗೆ ಈಗ ಅಚ್ಚರಿಯಾಗಿದೆ. ನಿಜವಾಗಿಯೂ ಇದೊಂದು ಪವಾಡ ಎಂದು ಉದ್ಗರಿಸಿ, ಈ ಘಟನೆಯ ಬಗ್ಗೆ ಸಾರ್ಥಕತೆ ಮತ್ತು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Who doesn't like the comforts of free-flow of money despite not having to work? Well, most people do. It's almost a dream for some to get an endless supply of money, similar to Nickleback's rockstar song and just live life king size.to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more