ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗುತ್ತಿದೆ OnePlus Open 2!..ಬಿಗ್ ಬ್ಯಾಟರಿ ಸಾಧ್ಯತೆ!
ಒನ್‌ಪ್ಲಸ್ (OnePlus) ಮೊಬೈಲ್ ಸಂಸ್ಥೆಯು ಒನ್‌ಪ್ಲಸ್ ಓಪನ್ ಹೆಸರಿನ ಫೋಲ್ಡಬಲ್ ಫೋನ್ ಅನ್ನು ಕಳೆದ ವರ್ಷ ಬಿಡುಗಡೆ ಮಾಡಿತ್ತು. ಇದೀಗ ಸಂಸ್ಥೆಯು ಒನ್‌ಪ್ಲಸ್ ಓಪನ್ ಫೋನಿನ ಉತ್ತರಾಧಿಕಾರಿ ಆಗಿ ಒನ್‌ಪ್ಲಸ್ ಓಪನ್ 2 (OnePlus Open 2) ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಸಕಲ ತಯಾರಿ ನಡೆಸಿದೆ. ಈ ಮೂಲಕ ಸ್ಯಾಮ್‌ಸಂಗ್, ವಿವೋ ಸಂಸ್ಥೆಗಳ ಫೋಲ್ಡೆಬಲ್ ಫೋನ್‌ಗಳಿಗೆ ಟಕ್ಕರ್ ನೀಡುವ ಸೂಚನೆಗಳಿವೆ. ಅಂದಹಾಗೆ ಬರಲಿರುವ ನೂತನ ಒನ್‌ಪ್ಲಸ್ ಓಪನ್ 2 (OnePlus Open 2) ಸ್ಮಾರ್ಟ್‌ಫೋನ್ ಕೆಲವು ಲೀಕ್ ಫೀಚರ್ಸ್ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.
ಹೌದು, ಒನ್‌ಪ್ಲಸ್ ಓಪನ್ 2 (OnePlus Open 2) ಸ್ಮಾರ್ಟ್‌ಫೋನ್ ಈಗಾಗಲೇ ಫೋನ್ ಪ್ರಿಯರ ಕುತೂಹಲ ಹೆಚ್ಚಿಸಿದೆ. ಇನ್ನು ಈ ಫೋನ್ ಸಾಕಷ್ಟು ಹೊಸ ಅಪ್‌ಡೇಟ್‌ಗಳೊಂದಿಗೆ ಎಂಟ್ರಿ ಕೊಡುವ ನಿರೀಕ್ಷೆಗಳು ಇದ್ದು, ಮುಖ್ಯವಾಗಿ 6,000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಫೋನ್ ಬರುವ 2025 ರಲ್ಲಿ ಮಾರುಕಟ್ಟಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ.

ವೇಗದ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಸಾಧ್ಯತೆ
ಟಿಪ್‌ಸ್ಟರ್ ಮಾಹಿತಿ ಪ್ರಕಾರ, ಪ್ರೊಸೆಸರ್ ಸಾಮರ್ಥ್ಯದಲ್ಲಿ ಅಪ್‌ಗ್ರೇಡ್ ಇರಲಿದೆ ಎನ್ನಲಾಗಿದೆ. ಒನ್‌ಪ್ಲಸ್ ಓಪನ್ 2 (OnePlus Open 2) ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಇದು ಆಂಡ್ರಾಯ್ಡ್ 15 ಓಎಸ್ ಸಪೋರ್ಟ್ ಇರುವ OxygenOS 15 ನಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಇವೆ.
ಪವರ್‌ಫುಲ್ ಬ್ಯಾಟರಿ ಪವರ್ ನಿರೀಕ್ಷೆ
ಇತ್ತೀಚಿನ ಕೆಲವು ವದಂತಿಯ ಪ್ರಕಾರ, ಮುಂದೆ ಬರಲಿರುವ ಹೊಸ ಒನ್‌ಪ್ಲಸ್ ಓಪನ್ 2 ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಒಂದು ವೇಳೆ ಇದು ನಿಜವಾಗಿದ್ದರೆ, ಈ ಹಿಂದಿನ ಆವೃತ್ತಿಗಿಂತ ಇದು ಗಣನೀಯ ಅಪ್‌ಗ್ರೇಡ್ ಆಗಿರಲಿದೆ.
ಇನ್ನು ಬರಲಿರುವ ಹೊಸ ಒನ್‌ಪ್ಲಸ್ ಓಪನ್ 2 ಫೋನ್ ಹಗುರವಾದ ಮತ್ತು ತೆಳ್ಳಗಿನ ವಿನ್ಯಾಸವನ್ನು ಪಡೆದಿರುವ ನಿರೀಕ್ಷೆಗಳಿವೆ. ಅಲ್ಲದೇ ಫ್ಲ್ಯಾಗ್‌ಶಿಪ್ ಅಲ್ಟ್ರಾ-ಫ್ಲಾಟ್ ಫೋಲ್ಡಿಂಗ್ ಡಿಸ್‌ಪ್ಲೇ ಮತ್ತು ಹೈ-ರೆಸಲ್ಯೂಶನ್ ಕವರ್ ಸ್ಕ್ರೀನ್ ಅನ್ನು ಪಡೆದಿರಲಿದೆ ಎಂದು ಹೇಳಲಾಗುತ್ತದೆ. ಜೊತೆಗೆ ಒನ್‌ಪ್ಲಸ್ ಓಪನ್ 2 ಪೆರಿಸ್ಕೋಪ್ ಕ್ಯಾಮೆರಾ ಲೆನ್ಸ್ ಅನ್ನು ಹೊಂದಿರುತ್ತದೆ ಎಂದು ಟಿಪ್‌ಸ್ಟರ್ ಸೂಚಿಸಿದ್ದಾರೆ.
ಒನ್‌ಪ್ಲಸ್ ಓಪನ್ ಫೀಚರ್ಸ್ ಹೀಗಿವೆ
ಈ ಹಿಂದಿನ ಒನ್‌ಪ್ಲಸ್ ಓಪನ್ (OnePlus Open) 2440 x 2268 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 7.82 ಇಂಚಿನ ProXDR ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್, 2,800 nits ಬ್ರೈಟ್‌ನೆಸ್ ಮತ್ತು 1440Hz PMW ಫ್ರೀಕ್ವೆನ್ಸಿ ಡಿಮ್ಮಿಂಗ್ ಸೌಲಭ್ಯ ಅನ್ನು ಹೊಂದಿದೆ.
ಇದರೊಂದಿಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 Gen 2 SoC ಚಿಪ್‌ಸೆಟ್ ಪ್ರೊಸೆಸರ್ ಸಪೋರ್ಟ್ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಅಲ್ಲದೇ ಇದು 16GB RAM ಮತ್ತು 512GB ಸ್ಟೋರೇಜ್ ಆಯ್ಕೆ ಒಳಗೊಂಡಿದ್ದು, ಇದು ಆಂಡ್ರಾಯ್ಡ್ 14 ಆಧಾರಿತ Oxygen OS ನಲ್ಲಿ ಕೆಲಸ ನಿರ್ವಹಿಸಲಿದೆ. ಅಲ್ಲದೇ ಇದು 4805mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಕೂಡಾ ಪಡೆದಿದೆ. ಇದಕ್ಕೆ ಪೂರಕವಾಗಿ 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.


Click it and Unblock the Notifications








