Home
ಸುದ್ದಿಜಾಲ

OnePlus ಓಪನ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬೆಲೆ ಲೀಕ್‌, ನಿರೀಕ್ಷಿತ ಫೀಚರ್ಸ್‌ ಏನು?

ಒನ್‌ಪ್ಲಸ್‌ (OnePlus) ಫೋನ್‌ಗೆ ಭಾರತದಲ್ಲಿ ಹೆಚ್ಚಿನ ಕ್ರೇಜ್‌ ಇದೆ. ಯಾಕೆಂದರೆ ಈ ಫೋನ್‌ಗಳ ಕಾರ್ಯಕ್ಷಮತೆ ಹಾಗೂ ದೀರ್ಘಬಾಳಿಕೆ, ಬ್ಯಾಟರಿ ಸಾಮರ್ಥ್ಯ ಗ್ರಾಹಕರನ್ನು ಸೆಳೆಯದೇ ಇರದು. ಈ ನಡುವೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬಂದಿರುವ ಒನ್‌ಪ್ಲಸ್ ಇದೀಗ ಓಪನ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಸಂಬಂಧ ಭಾರೀ ಸದ್ದು ಮಾಡುತ್ತಿದೆ.

ಹೌದು, ಭಾರತದಲ್ಲಿ ಒನ್‌ಪ್ಲಸ್ ಓಪನ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಲಾಂಚ್‌ ಆಗುವ ನಿರೀಕ್ಷೆಯಿದ್ದು, ಇದಕ್ಕೂ ಮೊದಲೇ ಈ ಫೋನ್‌ನ ಬೆಲೆ ಬಗ್ಗೆ ಮಾಹಿತಿ ಲೀಕ್‌ ಆಗಿದೆ. ಹಾಗಿದ್ರೆ, ಈ ಫೋನ್‌ನ ಬೆಲೆ ಎಷ್ಟು?, ಫೀಚರ್ಸ್‌ ಏನು?, ಯಾವಾಗ ಲಾಂಚ್‌ ಆಗುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

OnePlus ಓಪನ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬೆಲೆ ಲೀಕ್‌,ನಿರೀಕ್ಷಿತ ಫೀಚರ್ಸ್‌ ಏನು?

ಒನ್‌ಪ್ಲಸ್ ಓಪನ್ ಫೋಲ್ಡಬಲ್ ಸ್ಮಾರ್ಟ್‌ಫೋನ್: ಒನ್‌ಪ್ಲಸ್‌ ಓಪನ್ (OnePlus open foldable smartphone) ಒನ್‌ಪ್ಲಸ್‌ ನ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿದೆ. ಇದು ಈ ತಿಂಗಳ ಕೊನೆಯಲ್ಲಿ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ತಿಳಿದುಬಂದಿದ್ದು, ಅಧಿಕೃತ ದೃಢೀಕರಣದ ಮೊದಲೇ ಫೋನ್‌ನ ನಿರೀಕ್ಷಿತ ಫೀಚರ್ಸ್‌ ಮತ್ತು ವಿನ್ಯಾಸದ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಅದರಲ್ಲೂ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಎಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಅದರ ಬೆಲೆಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಇದರಿಂದಾಗಿ ಈ ಫೋನ್‌ ಅತ್ಯಂತ ದುಬಾರಿ ಎಂದು ತಿಳಿದುಬಂದಿದೆ. ನಿಖರವಾಗಿ ಹೇಳುವುದಾದರೆ ಈ ಫೋನ್‌ ಸುಮಾರು 1.2 ಲಕ್ಷದ ಆಸುಪಾಸಿನಲ್ಲಿ ಲಭ್ಯ ಇರಲಿದೆ ಎಂದು ಉಲ್ಲೇಖ ಮಾಡಲಾಗಿದೆ. ಈ ಮಾಹಿತಿ ನಿಜವೇ ಆದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5 ಗಿಂತ ಕಡಿಮೆ ದರದಲ್ಲಿ ಲಭ್ಯ ಆಗಲಿದೆ ಎನ್ನಬಹುದು.

ಇತ್ತೀಚೆಗೆ ಲಾಂಚ್‌ ಆಗಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5 ಸ್ಮಾರ್ಟ್‌ಫೋನ್‌ (Samsung Galaxy Z Fold 5 smartphone) ಬೆಲೆ 1,54,999ರೂ.ಗಳಾಗಿದೆ. ಪರಿಣಾಮ ಇನ್ನೂ ಕೂಡ ಮಾರುಕಟ್ಟೆಯಲ್ಲಿ ಯಾವುದೇ ಬಜೆಟ್-ಸ್ನೇಹಿ ಫೋಲ್ಡಬಲ್‌ ಫೋನ್ ಲಾಂಚ್‌ ಆಗಿಲ್ಲ. ಇದರೊಂದಿಗೆ ಗೂಗಲ್‌ ಸಹ ತನ್ನ ಪಿಕ್ಸೆಲ್‌ ಫೋಲ್ಡ್‌ (Google Pixel Fold) ಮೂಲಕ ಭಾರೀ ಸದ್ದು ಮಾಡುತ್ತಿದೆಯಾದರೂ ಅದನ್ನು ಇನ್ನೂ ಭಾರತಕ್ಕೆ ಪರಿಚಯಿಸಿಲ್ಲ. ಈ ಎಲ್ಲಾ ಕಾರಣದಿಂದ ಒನ್‌ಪ್ಲಸ್‌ನ ಈ ಫೋನ್‌ ಕಡೆ ಜನರು ವಾಲಬಹುದು ಎನ್ನಲಾಗಿದೆ.

ಇನ್ನು ಒನ್‌ಪ್ಲಸ್ ಕಂಪೆನಿಯು ಈ ಹಿಂದೆ ಒನ್‌ಪ್ಲಸ್ 9 ಪ್ರೊನ 256GB ಸ್ಟೋರೇಜ್‌ ಗೆ 69,999ರೂ.ನಿಗದಿ ಮಾಡಿ ಲಾಂಚ್‌ ಮಾಡಿತ್ತು. ಜೊತೆಗೆ ಒನ್‌ಪ್ಲಸ್ 10 ಪ್ರೊ ನ 256GB ವೇರಿಯಂಟ್ ಅನ್ನೂ ಸಹ 71,999ರೂ.ಗಳಿಗೆ ಪರಿಚಯಿಸಿತ್ತು. ಮತ್ತೊಂದೆಡೆ ಜೆನ್ ಒನ್‌ಪ್ಲಸ್‌ 11 5G ಯ 256GB ಸ್ಟೋರೇಜ್‌ಗೆ ಮಾತ್ರ 61,999 ರೂ.ಗಳನ್ನು ನಿಗದಿ ಮಾಡಿದ್ದು, ಮಾರುಕಟ್ಟೆಯಲ್ಲಿ ಬಹಳ ಸಂಚಲನವನ್ನೇ ಉಂಟು ಮಾಡಿತ್ತು. ಈ ಮೂಲಕ ಮಾರುಕಟ್ಟೆಯಲ್ಲಿ ಇತರೆ ಫೋನ್‌ಗಳ ವಿರುದ್ಧ ತನ್ನದೇ ಆದ ಚಾಣಾಕ್ಷ್ ಬುದ್ದಿಯ ಮೂಲಕ ಬೆಲೆಯನ್ನು ನಿಗದಿ ಮಾಡಿಕೊಂಡು ಬರುತ್ತಿದೆ.

OnePlus ಓಪನ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬೆಲೆ ಲೀಕ್‌,ನಿರೀಕ್ಷಿತ ಫೀಚರ್ಸ್‌ ಏನು?

ಉಳಿದಂತೆ ಲೀಕ್‌ ಆದ ಮಾಹಿತಿ ಪ್ರಕಾರ ಈ ಒನ್‌ಪ್ಲಸ್‌ ಓಪನ್‌ ಒಪ್ಪೋ ಫೈಂಡ್ N2 (Oppo Find N2) ನಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ. ಯಾಕೆಂದರೆ ಒನ್‌ಪ್ಲಸ್‌ನ ಸಹ-ಸಂಸ್ಥಾಪಕ ಪೀಟ್ ಲೌ ಅವರು 2021 ರಲ್ಲಿ ಮೊದಲ-ಜೆನ್ ಒಪ್ಪೋ ಫೈಂಡ್‌ N ಅನ್ನು ಘೋಷಣೆ ಮಾಡಿದ್ದರು. ಇದಾದ ನಂತರ ಒನ್‌ಪ್ಲಸ್‌ನಲ್ಲಿ ಈ ಎಲ್ಲಾ ಬೆಳವಣಿಗೆ ಜರುಗುತ್ತಿವೆ. ಅದರಂತೆ ಈ ಫೋನ್ ವಿಶಾಲವಾದ ಬಾಡಿಯನ್ನು ಹೊಂದಿರಲಿದ್ದು, ಇದರೊಂದಿಗೆ ದೊಡ್ಡ ಗಾತ್ರದ ಕವರ್ ಡಿಸ್‌ಪ್ಲೇ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಇದರೊಂದಿಗೆ ಈ ಫೋನ್‌ ಸ್ನಾಪ್ಡ್ರಾಗನ್ 8+ ಜನ್ 2 SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಅಮೋಲೆಡ್ ಡಿಸ್‌ಪ್ಲೇ ಮೂಲಕ ಹೆಚ್ಚು ಆಕರ್ಷಕವಾಗಿರಲಿದೆ ಎಂದು ಹೇಳಲಾಗಿದೆ ಹಾಗೂ ಇದು 2K ಸಾಮರ್ಥ್ಯದೊಂದಿಗೆ 120Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದುಕೊಂಡಿದ್ದು, ಬಳಕೆದಾರರಿಗೆ ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್‌ನಲ್ಲಿ ಹೊಸ ಅನುಭವ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

100W ಸೂಪರ್‌ ವೂಕ್ ಚಾರ್ಜಿಂಗ್‌ನೊಂದಿಗೆ 4800mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿರುವ ಈ ಫೋನ್‌ ವಾಯರ್‌ಲೆಸ್‌ ಚಾರ್ಜಿಂಗ್‌ಗೂ ಬೆಂಬಲ ನೀಡಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಹ್ಯಾಸೆಲ್‌ಬ್ಲಾಡ್‌ನಿಂದ ಟ್ಯೂನ್ ಮಾಡಲಾದ ಮೂರು ಕ್ಯಾಮೆರಾ ಸೆನ್ಸರ್‌ ಆಯ್ಕೆ ಹೊಂದಿರಬಹುದು ಎಂದು ತಿಳಿದುಬಂದಿದೆ.

ಪ್ರಮುಖ ಕ್ಯಾಮೆರಾವು 50 ಮೆಗಾಪಿಕ್ಸೆಲ್ (IMX 890) ಸೆನ್ಸರ್‌ ಆಯ್ಕೆ ಪಡೆಯಲಿದ್ದು, ಅಲ್ಟ್ರಾ-ವೈಡ್ ಕ್ಯಾಮರಾ ಮತ್ತು ಪೆರಿಸ್ಕೋಪ್ ಲೆನ್ಸ್ ಅನ್ನು ಸಹ ಹೊಂದಿರಬಹುದು ಎಂದು ನಂಬಲಾಗಿದೆ. ಜೊತೆಗೆ ಕವರ್ ಡಿಸ್‌ಪ್ಲೇ ಹೋಲ್-ಪಂಚ್ ಕಟೌಟ್ ಒಳಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಸೆನ್ಸರ್‌ ಆಯ್ಕೆ ನೀಡಲಾಗುತ್ತದೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಅಷ್ಟು ಮಾತ್ರವಲ್ಲದೆ ಮುಖ್ಯ ಡಿಸ್‌ಪ್ಲೇನಲ್ಲೂ ಸಹ ಒಂದು ಸೆಲ್ಫಿ ಕ್ಯಾಮೆರಾ ಇರಬಹುದು ಎನ್ನಲಾಗಿದೆ.

Best Mobiles in India

English summary
OnePlus open foldable smartphone is expected to be launched in India soon and before this information about the price of this phone has been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+