Home
ಸುದ್ದಿಜಾಲ

ನಾಳೆಯಿಂದ ಒನ್‌ಪ್ಲಸ್‌ ಓಪನ್‌ ಫೋನ್‌ ಸೇಲ್ ಆರಂಭ... ಬೆಲೆ, ಫೀಚರ್ಸ್‌ ತಿಳಿಯಿರಿ!

ಒನ್‌ಪ್ಲಸ್‌ (OnePlus) ಸ್ಮಾರ್ಟ್‌ಫೋನ್‌ಗಳೆಂದರೆ ಜನರಿಗೆ ವಿಶೇಷವಾದ ಆಕರ್ಷಣೆ. ಅದರಲ್ಲೂ ಒನ್‌ಪ್ಲಸ್ ಮೊದಲ ಬಾರಿಗೆ ಫೋಲ್ಡಬಲ್‌ ಫೋನ್‌ ಅನ್ನು ಲಾಂಚ್‌ ಮಾಡಿದ್ದು, ಇದರ ಖರೀದಿಯನ್ನು ಯಾವಾಗ ಮಾಡುವುದು ಎಂದು ಕಾತುರದಿಂದ ಕಾಯುತ್ತಿದ್ದ ಜನರಿಗೆ ಕೊನೆಗೂ ಗುಡ್‌ ನ್ಯೂಸ್ ನೀಡಲಾಗಿದೆ.

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಒನ್‌ಪ್ಲಸ್‌ ಇದೀಗ ತನ್ನ ಬಹುನಿರೀಕ್ಷಿತ ಹಾಗೂ ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿರುವ ಒನ್‌ಪ್ಲಸ್ ಓಪನ್‌ ಫೋನ್‌(OnePlus Open) ಮಾರಾಟಕ್ಕೆ ದಿನಾಂಕ ನಿಗದಿ ಮಾಡಿದೆ. ಈ ಫೋನ್ 4,800mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್‌ 2 ಚಿಪ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಸೇಲ್‌ ಯಾವಾಗ ಆರಂಭ?, ಬೆಲೆ ಎಷ್ಟು? ಫೀಚರ್ಸ್‌ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ನಾಳೆಯಿಂದ ಒನ್‌ಪ್ಲಸ್‌ ಓಪನ್‌ ಫೋನ್‌ ಸೇಲ್ ಆರಂಭ... ಬೆಲೆ, ಫೀಚರ್ಸ್‌ ತಿಳಿಯಿರಿ!

ಅಕ್ಟೋಬರ್ 27 ರಿಂದ ಸೇಲ್‌ ಆರಂಭ: ಒನ್‌ಪ್ಲಸ್ ಓಪನ್ ಫೋನ್‌ ಕಂಪನಿಯ ಮೊದಲ ಫೋಲ್ಡಬಲ್ ಫೋನ್ ಆಗಿದೆ. ಈ ಫೋನ್‌ ಅನ್ನು ಅಕ್ಟೋಬರ್ 27 ರಂದು ಭಾರತದಲ್ಲಿ ತನ್ನ ಮೊದಲ ಮಾರಾಟಕ್ಕೆ ಮುಕ್ತ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ ಗುರುವಾರ, ಅಂದರೆ ಅಕ್ಟೋಬರ್ 19 ರಂದು ಭಾರತ ಮತ್ತು ವಿಶ್ವಾದ್ಯಂತ ಮಾರುಕಟ್ಟೆಗಳಲ್ಲಿ ಲಾಂಚ್‌ ಆಗಿತ್ತು. ಈ ಮೂಲಕ ಫೋಲ್ಡಬಲ್‌ ಫೋನ್‌ಗಳ ಸಾಲಿನಲ್ಲಿ ವಿಶೇಷ ಎನಿಸಿಕೊಂಡಿತ್ತು.

ಒನ್‌ಪ್ಲಸ್ ಓಪನ್ ಫೋನ್‌ ಬೆಲೆ ಎಷ್ಟು?: ಭಾರತದಲ್ಲಿ ಈ ಫೋನ್‌ನ 16GB + 512GB ವೇರಿಯಂಟ್‌ಗೆ 1,39,999ರೂ.ಗಳನ್ನು ನಿಗದಿ ಮಾಡಲಾಗಿದೆ. ಇದು ಎಮರಾಲ್ಡ್ ಡಸ್ಕ್ ಮತ್ತು ವಾಯೇಜರ್ ಕಪ್ಪು ಬಣ್ಣಗಳಲ್ಲಿ ಕಾಣಿಸಿಕೊಂಡಿದೆ. ಈ ವಿಶೇಷ ಫೋನ್‌ ಅನ್ನು ನೀವು ಒನ್‌ಪ್ಲಸ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ. ಜೊತೆಗೆ ಅಮೆಜಾನ್‌ ಮತ್ತು ರಿಟೆಲರ್‌ ಸ್ಟೋರ್‌ ಮೂಲಕವೂ ಖರೀದಿ ಮಾಡಬಹುದು.

ನಾಳೆಯಿಂದ ಒನ್‌ಪ್ಲಸ್‌ ಓಪನ್‌ ಫೋನ್‌ ಸೇಲ್ ಆರಂಭ... ಬೆಲೆ, ಫೀಚರ್ಸ್‌ ತಿಳಿಯಿರಿ!

ಇದರೊಂದಿಗೆ ಮುಂಗಡ-ಆರ್ಡರ್‌ಗಳು ಇಂದಿನಿಂದ ಆರಂಭ ಆಗಿದ್ದು, ಗ್ರಾಹಕರು ಆಯ್ದ ಡಿವೈಸ್‌ಗಳಲ್ಲಿ 8,000ರೂ.ಗಳ ಟ್ರೇಡ್-ಇನ್ ಬೋನಸ್ ಮತ್ತು ಹೆಚ್ಚುವರಿಯಾಗಿ ಐಸಿಐಸಿಐ ಬ್ಯಾಂಕ್ ಮತ್ತು ಒನ್‌ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5,000ರೂ.ಗಳ ರಿಯಾಯಿತಿಯನ್ನೂ ಸಹ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಹೊಸ ಫೋನ್‌ ಖರೀದಿ ವೇಳೆ ಹಣವನ್ನೂ ಉಳಿತಾಯ ಮಾಡಬಹುದಾಗಿದೆ.

ಒನ್‌ಪ್ಲಸ್ ಓಪನ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 7.82 ಇಂಚಿನ ಫ್ಲೆಕ್ಸಿ ಫ್ಲೂಯಿಡ್ ಅಮೋಲೆಡ್ ಮುಖ್ಯ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 2800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ. ಇದರೊಂದಿಗೆ 6.31 ಇಂಚಿನ ಕವರ್‌ ಡಿಸ್‌ಪ್ಲೇ ಹೊಂದಿದ್ದು, ಇದರಲ್ಲಿ ಗ್ರಾಹಕರು 2K ರೆಸಲ್ಯೂಶನ್ ಮತ್ತು 431 ppi ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಸುಗಮ ಬಳಕೆದಾರ ಅನುಭವಕ್ಕಾಗಿ ಎರಡೂ ಡಿಸ್‌ಪ್ಲೇಗಳು 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿವೆ.

ಒನ್‌ಪ್ಲಸ್ ಓಪನ್ ಪ್ರೊಸೆಸರ್‌ ಮಾಹಿತಿ: ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ಎಲ್ಲಾ ಹೊಸ ಆಕ್ಸಿಜನ್‌ ಓಎಸ್‌ 13.2 ನಲ್ಲಿ ರನ್ ಆಗಲಿದ್ದು, ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ನಾಲ್ಕು ವರ್ಷಗಳ ಪ್ರಮುಖ ಆಂಡ್ರಾಯ್ಡ್ ಆವೃತ್ತಿ ನವೀಕರಣಗಳನ್ನು ಇದು ನೀಡಲಿದ್ದು, ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಸ್ವೀಕರಿಸಲು ಅನುವು ಮಾಡಿಕೊಡಲಾಗಿದೆ.

ನಾಳೆಯಿಂದ ಒನ್‌ಪ್ಲಸ್‌ ಓಪನ್‌ ಫೋನ್‌ ಸೇಲ್ ಆರಂಭ... ಬೆಲೆ, ಫೀಚರ್ಸ್‌ ತಿಳಿಯಿರಿ!

ಒನ್‌ಪ್ಲಸ್ ಓಪನ್ ಕ್ಯಾಮೆರಾ ರಚನೆ: ಈ ಫೋನ್ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು, 64 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾದಿಂದ ಕಾಣಿಸಿಕೊಂಡಿದ್ದು, 60 FPS ನಲ್ಲಿ 4K ಗುಣಮಟ್ಟದಲ್ಲಿ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಇದರೊಂದಿಗೆ 20 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಕೆಂಡರಿ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಒನ್‌ಪ್ಲಸ್ ಓಪನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 4,805 mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರೊಂದಿಗೆ 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಂದರೆ ಸರಿಸುಮಾರು 42 ನಿಮಿಷಗಳಲ್ಲಿ ಬ್ಯಾಟರಿಯು 1% ರಿಂದ 100% ವರೆಗೆ ಚಾರ್ಜಿಂಗ್‌ ಆಗಲಿದೆ. ಅಷ್ಟೇ ಅಲ್ಲದೆ ಒಂದೇ ಚಾರ್ಜ್‌ನಲ್ಲಿ ಒಂದು ದಿನದ ಬ್ಯಾಕಪ್‌ ನೀಡಲಿದೆ.

Best Mobiles in India

English summary
OnePlus Open Phone has set a date for sale. This phone is backed by a 4,800mAh battery and is powered by a Qualcomm Snapdragon 8 Gen 2 chip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+