Home
ಸುದ್ದಿಜಾಲ

ಈ OnePlus ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಸಿಹಿಸುದ್ದಿ!

ಒನ್‌ಪ್ಲಸ್‌ ಸಂಸ್ಥೆಯ ಹಲವು ಫೋನ್‌ಗಳು ಈಗಾಗಲೇ ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಅವುಗಳ ಪೈಕಿ ಒನ್‌ಪ್ಲಸ್‌ ಓಪನ್ (OnePlus Open) ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಆಗಿದ್ದು, ಸಖತ್ ಟ್ರೆಂಡಿ ಲುಕ್‌ ಪಡೆದಿದೆ. ಈ ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಈಗ ಖುಷಿ ಸುದ್ದಿ ಇದೆ. ಅದೇನೆಂದರೇ ಈ ಫೋನ್‌ ಇದೀಗ ಆಂಡ್ರಾಯ್ಡ್ 15 ( Android 15 ) ಆಧಾರಿತ ಆಕ್ಸಿಜನ್ OS 15 ಸ್ಥಿರ ಅಪ್‌ಡೇಟ್‌ ಪಡೆದಿದೆ.

ಒನ್‌ಪ್ಲಸ್‌ ಓಪೆನ್‌ (OnePlus Open) ಒನ್‌ಪ್ಲಸ್‌ ಸಂಸ್ಥೆಯಿಂದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್ ಆಗಿದ್ದು, ಇದು 2023 ರಲ್ಲಿ ಮಾರುಕಟ್ಟೆಗೆ ಎಂಟ್ರಿ ಪಡೆದಿದೆ. ಈ ಮೊಬೈಲ್‌ ಆಂಡ್ರಾಯ್ಡ್ 15 ( Android 15 ) ಆಧಾರಿತ ಆಕ್ಸಿಜನ್ OS 15 ಅಪ್‌ಡೇಟ್‌ ಲಭ್ಯ ಮಾಡಿದೆ. ಈ ಓಎಸ್‌ ಹೊಸ ಅಲ್ಟ್ರಾ-ಅನಿಮೇಷನ್ ಎಫೆಕ್ಟ್ಸ್‌ ಅನ್ನು ಒಳಗೊಂಡಿದೆ. ಅಲ್ಲದೇ ಹಲವು ನೂತನ ಹೊಸ AI ಆಯ್ಕೆಗಳನ್ನು ಸಹ ಸಂಯೋಜಿಸುತ್ತದೆ.

ಈ OnePlus ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಸಿಹಿಸುದ್ದಿ!

ಅಲ್ಲದೇ ಒನ್‌ಪ್ಲಸ್‌ AI Retouch ಫೀಚರ್‌ ಅನ್ನು ಪಡೆದಿದ್ದು, ಇದು ಕಡಿಮೆ ಗುಣಮಟ್ಟದ ಫೋಟೋಗಳ ಸ್ಪಷ್ಟತೆಯನ್ನು ವೃದ್ಧಿಸಲು ಪೂರಕವಾಗಿ ಕೆಲಸ ಮಾಡುತ್ತದೆ .ಇನ್ನು ಬಳಕೆದಾರರು ಅಪ್‌ಡೇಟ್‌ಗಾಗಿ ಫೋನಿನ ಸೆಟ್ಟಿಂಗ್ಸ್‌ > About Phone > ಸಿಸ್ಟಮ್‌ ಅಪ್‌ಡೇಟ್ಸ್‌ ಪರಿಶೀಲಿಸಬಹುದು. ಅಂದಹಾಗೆ ಈ ಫೋನಿನ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಒನ್‌ಪ್ಲಸ್ ಓಪೆನ್‌ ಮೊಬೈಲ್‌ 1,080 x 2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 720Hz ಟಚ್ ರೆಸ್ಪಾನ್ಸ್ ರೇಟ್‌ ಅನ್ನು ಹೊಂದಿದೆ. ಜೊತೆಗೆ 2.5D ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಪಡೆದುಕೊಂಡಿದೆ.

ಪ್ರೊಸೆಸರ್‌ ಕೆಲಸ

ಒನ್‌ಪ್ಲಸ್ ಓಪೆನ್‌ ಮೊಬೈಲ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್‌ 2 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್ ಅನ್ನು ಹೊಂದಿದೆ. ಇದು ಹೊಸದಾಗಿ ಆಂಡ್ರಾಯ್ಡ್ 15 ಆಧಾರಿತ OxygenOS 15 ಓಎಸ್‌ ಅಪ್‌ಡೇಟ್‌ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ 12GB RAM + 512 GB ಹಾಗೂ 16GB RAM + 1 TB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

ಕ್ಯಾಮೆರಾ ಸೆನ್ಸಾರ್‌

ಒನ್‌ಪ್ಲಸ್ ಓಪೆನ್‌ ಮೊಬೈಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ IMX355 ಸೆನ್ಸಾರ್‌ ಮತ್ತು ತೃತೀಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ GC02M1 ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಇದಲ್ಲದೆ ಡ್ಯುಯಲ್‌ ಸೆಲ್ಫಿ ಕ್ಯಾಮೆರಾ ಇದ್ದು, ಅವುಗಳು ಕ್ರಮವಾಗಿ 32 ಮೆಗಾ ಪಿಕ್ಸೆಲ್ ಹಾಗೂ 20 ಮೆಗಾ ಪಿಕ್ಸಲ್‌ ಆಗಿವೆ.

ಬ್ಯಾಟರಿ ಬ್ಯಾಕ್‌ಅಪ್‌

ಒನ್‌ಪ್ಲಸ್ ಓಪೆನ್‌ ಮೊಬೈಲ್‌ 4,800 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಅನ್ನು ಹೊಂದಿದ್ದು, 67W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್ C ಪೋರ್ಟ್ ಸೇರಿವೆ.

Best Mobiles in India

English summary
OnePlus Open Starts Receiving Stable Oxygen OS 15. check full details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+