ಒನ್‌ಪ್ಲಸ್, ಒಪ್ಪೋ ಮತ್ತು ರಿಯಲ್‌ಮಿ ಫೋನ್‌ಗಳಲ್ಲಿ ದೊಡ್ಡ ಬದಲಾವಣೆ! ಏನದು?
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಒನ್‌ಪ್ಲಸ್, ರಿಯಲ್‌ಮಿ ಹಾಗೂ ಒಪ್ಪೋ ಫೋನ್‌ಗಳು (OnePlus, Realme and Oppo phones) ಭಾರೀ ಜನಪ್ರಿಯತೆ ಪಡೆದಿಕೊಂಡಿವೆ. ಅಲ್ಲದೆ ಬೆಲೆಗೆ ತಕ್ಕ ಫೀಚರ್ಸ್ ಅನ್ನು ಈ ಫೋನ್‌ಗಳಲ್ಲಿ ಕಾಣಬಹುದಾಗಿದ್ದು, ಈ ನಡುವೆ ಈ ಬ್ರ್ಯಾಂಡ್‌ಗಳು ಬಳಕೆದಾರರಿಗೆ ವಿಶೇಷ ಪ್ರಯೋಜನ ನೀಡಲು ಮುಂದಾಗಿವೆ.
ಹೌದು, ಈಗಾಗಲೇ ಸ್ಮಾರ್ಟ್‌ಫೋನ್‌ಗಳು ಭಿನ್ನ ಹಾಗೂ ಸುಧಾರಿತ ಫೀಚರ್ಸ್ ಆಯ್ಕೆ ಮೂಲಕ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತಿವೆ. ಈ ನಡುವೆ ಹೊಸ ಬಯೋಮೆಟ್ರಿಕ್ ದೃಢೀಕರಣ ತಂತ್ರಜ್ಞಾನದೊಂದಿಗೆ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳನ್ನು (Ultrasonic fingerprint sensor) ಪರಿಚಯಿಸಲು ಬಿಬಿಕೆ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳು ಸಜ್ಜಾಗಿವೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳಲ್ಲಿ ಇದು ಕಾಣಿಸಿಕೊಳ್ಳಲಿದೆ?, ಇದರಿಂದ ಆಗುವ ಪ್ರಯೋಜನ ಏನು ಅನ್ನೋದನ್ನು ಗಮನಿಸೋಣ.

ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್: ಒನ್‌ಪ್ಲಸ್, ಒಪ್ಪೋ, ರಿಯಲ್‌ಮಿ ಹಾಗೂ ಬಿಬಿಕೆ ಎಲೆಕ್ಟ್ರಾನಿಕ್ಸ್ ಅಡಿಯಲ್ಲಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ತಮ್ಮ ಪ್ರಮುಖ ಮಾದರಿಗಳಿಗಾಗಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಪರಿಚಯಿಸಲು ಯೋಜಿಸುತ್ತಿವೆ. ಚೀನೀ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಬೊದಲ್ಲಿನ ಈ ಸಂಬಂಧ ಪೋಸ್ಟ್ ಮಾಡಲಾಗಿದೆ.
ಡಿಜಿಟಲ್ ಚಾಟ್ ಸ್ಟೇಷನ್ ಎಂಬ ಟಿಪ್‌ಸ್ಟರ್ ಈ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಪ್ರಮುಖ ಬದಲಾವಣೆ ಆಗಿ ಬಯೋಮೆಟ್ರಿಕ್ ದೃಢೀಕರಣದ ಹೊಸ ತಂತ್ರಜ್ಞಾನವನ್ನು ಬಳಸುವ ನಿರೀಕ್ಷೆಯಿದೆ ಎಂದು ಉಲ್ಲೇಖಿಸಲಾಗಿದೆ. ಹಾಗಿದ್ರೆ, ಈ ಅಲ್ಟ್ರಾಸಾನಿಕ್ ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಎಂದರೇನು?, ಇದು ಹೇಗೆ ಸಾಮಾನ್ಯ ಸೆನ್ಸರ್‌ಗಿಂತ ವಿಶೇಷವಾಗಿ ಕೆಲಸ ಮಾಡಲಿದೆ ಅನ್ನೋದನ್ನು ಗಮನಿಸೋಣ ಬನ್ನಿ.

ಸ್ಮಾರ್ಟ್‌ಫೋನ್ ತಯಾರಕರು ಕೆಲವು ವರ್ಷಗಳಿಂದ ತಮ್ಮ ಕೆಲವು ಫೋನ್‌ಗಳಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ದೃಢೀಕರಣವನ್ನು ನೀಡಲು ಆರಂಭ ಮಾಡಿದ್ದಾರೆ. ಈ ವ್ಯವಸ್ಥೆಗಾಗಿ, ಫೋನ್ ಬ್ರ್ಯಾಂಡ್‌ಗಳು ಎರಡು ರೀತಿಯ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಬಳಕೆ ಮಾಡುತ್ತವೆ. ಇದರಲ್ಲಿ ಒಂದು ಅಲ್ಟ್ರಾಸಾನಿಕ್ ಮತ್ತೊಂದು ಆಪ್ಟಿಕಲ್ ಸೆನ್ಸರ್. ಅಲ್ಟ್ರಾಸಾನಿಕ್ ಸೆನ್ಸರ್‌ಗಳು ಸಾಮಾನ್ಯವಾಗಿ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುತ್ತವೆ.
ಇನ್ನು ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನ ವಿರುದ್ಧ ಬೆರಳನ್ನು ಒತ್ತಿದಾಗ ಅದು ಡಿಸ್‌ಪ್ಲೇನ ಕೆಳಗೆ ಅಲ್ಟ್ರಾಸಾನಿಕ್ ಸೌಂಡ್ ತರಂಗಗಳನ್ನು ಬಳಸಿಕೊಂಡು ಫಿಂಗರ್‌ಪ್ರಿಂಟ್‌ನ 3D ನಕ್ಷೆಯನ್ನು ರಚಿಸುತ್ತದೆ. ಈ ತಂತ್ರಜ್ಞಾನವು ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ ಮತ್ತು ವಂಚನೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ನೀರಿನ ನಿರೋಧಕ ಮತ್ತು ಹೆಚ್ಚಿನ ಪತ್ತೆ ನಿಖರತೆಯನ್ನು ನೀಡಲಿದೆ.
ವಿಷಯ ಏನೆಂದರೆ ಈ ಸ್ಕ್ಯಾನರ್‌ಗಳನ್ನು ತಯಾರಿಸಲು ದುಬಾರಿ ಹಣ ಖರ್ಚು ಮಾಡಬೇಕಾಗುತ್ತದೆ. ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳಿಗೆ ಹೋಲಿಸಿದರೆ ಪ್ರಕ್ರಿಯೆಯು ಸಂಕೀರ್ಣವಾಗಿದೆ. ಈ ನಡುವೆ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳು ಕಡಿಮೆ ಬೆಲೆ ಮತ್ತು ಸುರಕ್ಷಿತವಾಗಿರುತ್ತವೆ ಹಾಗೆಯೇ ಫಿಂಗರ್‌ಪ್ರಿಂಟ್‌ನ 2D ಚಿತ್ರಗಳನ್ನು ಸೆರೆಹಿಡಿಯಲು ಬೆಳಕನ್ನು ಬಳಕೆ ಮಾಡುತ್ತವೆ.

ಒನ್‌ಪ್ಲಸ್, ಒಪ್ಪೋ ಮತ್ತು ರಿಯಲ್‌ಮಿ ಫೋನ್‌ಗಳಲ್ಲಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್:
ಒನ್‌ಪ್ಲಸ್, ಒಪ್ಪೋ ಮತ್ತು ರಿಯಲ್‌ಮಿ ಕಂಪೆನಿಗಳು ತಮ್ಮ ಡಿವೈಸ್‌ಗಳಿಗಾಗಿ ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. ಅದರಂತೆ ಮುಂಬರುವ ದಿನಗಳಲ್ಲಿ ತಂತ್ರಜ್ಞಾನವು ತಮ್ಮ ಪ್ರಮುಖ ಡಿವೈಸ್‌ಗಳಲ್ಲಿ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಬದಲಾಯಿಸುವ ನಿರೀಕ್ಷೆಯಿದೆ.
ಈಗಾಗಲೇ ಈ ಫೀಚರ್ಸ್ ಅನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ, ಐಕ್ಯೂ 12 ಪ್ರೊ, ಮೈಜು 21/21 ಪ್ರೊ ಮತ್ತು ಇತರ ಫೋನ್‌ಗಳಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್ 8 ಜನ್ 4 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಶಿಯೋಮಿ 15 ಸರಣಿಯು ಗುಡ್‌ಐಎಕ್ಸ್‌ನ ಸಿಂಗಲ್ ಪಾಯಿಂಟ್ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ತಂತ್ರಜ್ಞಾನದೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ. ಈ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರು ಇನ್ಮುಂದೆ ಇನ್ನಷ್ಟು ಭದ್ರತಾ ಫೀಚರ್ಸ್ ಅನ್ನು ಸೌಲಭ್ಯ ಪಡೆಯಬಹುದಾಗಿದೆ.


Click it and Unblock the Notifications








