Home
ಸುದ್ದಿಜಾಲ

OnePlus: ಶೀಘ್ರದಲ್ಲೇ ಒನ್‌ಪ್ಲಸ್‌ ಪ್ಯಾಡ್ 2 ಲಾಂಚ್: ಏನೆಲ್ಲಾ ಫೀಚರ್ಸ್‌ ಪಡೆದಿದೆ..?

ಒನ್‌ಪ್ಲಸ್‌ ಡಿವೈಸ್‌ಗಳಿಗೆ ಬಹು ಬೇಡಿಕೆ ಇದ್ದು, ಈ ನಡುವೆ ಒನ್‌ಪ್ಲಸ್‌ ಪ್ಯಾಡ್ 2 (OnePlus Pad 2) ಅನ್ನು ಶೀಘ್ರದಲ್ಲೇ ಅನಾವರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಡಿವೈಸ್‌ ಅನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ತಿಳಿದುಬಂದಿದೆ.

ಹೌದು, 2024 ರ ದ್ವಿತೀಯಾರ್ಧದಲ್ಲಿ ಒನ್‌ಪ್ಲಸ್‌ ಪ್ಯಾಡ್ 2 ಲಾಂಚ್‌ ಆಗಲಿದೆ ಎಂದು ತಿಳಿದುಬಂದಿದೆ. ಅದಾಗ್ಯೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಟ್ಯಾಬ್‌ ಬಗ್ಗೆ ಟಿಪ್‌ಸ್ಟರ್ ಮ್ಯಾಕ್ಸ್ ಜಂಬೋರ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಿದ್ರೆ ಇದು ಏನೆಲ್ಲಾ ಫೀಚರ್ಸ್ ಪಡೆದಿರಲಿದೆ?, ಬೆಲೆ ಎಷ್ಟಿರಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶೀಘ್ರದಲ್ಲೇ ಒನ್‌ಪ್ಲಸ್‌ ಪ್ಯಾಡ್ 2 ಲಾಂಚ್: ಏನೆಲ್ಲಾ ಫೀಚರ್ಸ್‌ ಪಡೆದಿದೆ..?

ಒನ್‌ಪ್ಲಸ್‌ ಪ್ಯಾಡ್ 2: ಮೊದಲ ಟ್ಯಾಬ್ಲೆಟ್ ಒನ್‌ಪ್ಲಸ್‌ ಪ್ಯಾಡ್‌ ಅನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಲಾಂಚ್‌ ಮಾಡಲಾಗಿತ್ತು. ಇದರ ಬೆಲೆ 37,999 ರೂ.ಗಳಾಗಿದ್ದು, ಈ ಕ್ಷಣಕ್ಕೂ ಇದ್ದು ಬಹಳ ಬೇಡಿಕೆ ಪಡೆದುಕೊಂಡಿದೆ. ಆದರೆ, ಒನ್‌ಪ್ಲಸ್‌ ದೊಡ್ಡ ಬದಲಾವಣೆಗಳನ್ನು ಹೊಸ ಡಿವೈಸ್‌ನಲ್ಲಿ ಮಾಡುತ್ತದೆ ಎಂದು ತಿಳಿದುಬಂದಿದೆ. ಅಂದರೆ ಪ್ರಕಾಶಮಾನವಾದ ಡಿಸ್ಪ್ಲೇ, ದೊಡ್ಡ ಬ್ಯಾಟರಿ, ಹೆಚ್ಚಿನ ಸ್ಟೋರೇಜ್‌ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ.

ಇಷ್ಟೇ ಅಲ್ಲದೆ ಈ ಡಿವೈಸ್‌ ಹೈ-ಎಂಡ್ ಫ್ಲ್ಯಾಗ್‌ಶಿಪ್ ಚಿಪ್‌ನೊಂದಿಗೆ ಅಪ್‌ಗ್ರೇಡ್ ಮಾಡುವ ಸಾಧ್ಯತೆಯಿದೆ. ಅದಾಗ್ಯೂ ಮುಂದಿನ ಪೀಳಿಗೆಯ ಒನ್‌ಪ್ಲಸ್ ಟ್ಯಾಬ್ಲೆಟ್‌ಗಾಗಿ ಕಾಯಲು ಸಾಧ್ಯವಾಗದ ಗ್ರಾಹಕರು ಒನ್‌ಪ್ಲಸ್‌ ಪ್ಯಾಡ್ ಅನ್ನು ಖರೀದಿ ಮಾಡಬಹುದಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಡಿವೈಸ್‌ ಅನ್ನು ನೀವು ಖರೀದಿ ಮಾಡಲು ಮುಂದಾದರೆ ಸಾಕಷ್ಟು ಆಫರ್ ಅನ್ನು ಪಡೆಯಬಹುದಾಗಿದೆ.

ಶೀಘ್ರದಲ್ಲೇ ಒನ್‌ಪ್ಲಸ್‌ ಪ್ಯಾಡ್ 2 ಲಾಂಚ್: ಏನೆಲ್ಲಾ ಫೀಚರ್ಸ್‌ ಪಡೆದಿದೆ..?

ಫ್ಲಿಪ್‌ಕಾರ್ಟ್ ಐಸಿಐಸಿಐ ಬ್ಯಾಂಕ್ ಮತ್ತು ಒನ್‌ಕಾರ್ಡ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 5,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಮೂಲಕ ಈ ಡಿವೈಸ್‌ನ ಬೆಲೆ 32,999 ರೂಪಾಯಿಗಳಿಗೆ ಇಳಿಯುತ್ತದೆ ಅಲ್ಲದೆ ಇಎಮ್‌ಐ ಆಯ್ಕೆಗಳಲ್ಲಿ ಕೆಲವು ಕೊಡುಗೆಗಳಿದ್ದು, ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ನೀವು ಅದನ್ನು ಪರಿಶೀಲನೆ ನಡೆಸಬಹುದಾಗಿದೆ.

ಇದರ ಜೊತೆಗೆ ಅಮೆಜಾನ್‌ನಲ್ಲಿ ಒನ್‌ಕಾರ್ಡ್‌ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ ಒನ್‌ಕಾರ್ಡ್‌ ಕ್ರೆಡಿಟ್ ಕಾರ್ಡ್‌ನಲ್ಲಿ 1,500 ರೂಪಾಯಿಗಳ ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇತರ ರಿಯಾಯಿತಿ ಕೊಡುಗೆಗಳೂ ಸಹ ಇದ್ದು, ಈ ಮೂಲಕ ಕಡಿಮೆ ದರದಲ್ಲಿ ಉತ್ತಮವಾದ ಟ್ಯಾಬ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಇನ್ನು ಈ ಡಿವೈಸ್‌ನ ಫೀಚರ್ಸ್ ಕಡೆ ಕಣ್ಣಾಯಿಸುವಾದರೆ ಈ ಪ್ಯಾಡ್‌ 11.6 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 144Hz ರಿಫ್ರೆಶ್ ರೇಟ್‌, ಫುಲ್‌ ಹೆಚ್‌ಡಿ+ ರೆಸಲ್ಯೂಶನ್ ಸಾಮರ್ಥ್ಯದ ಮತ್ತು 500 ನಿಟ್ಸ್‌ ಬ್ರೈಟ್‌ನೆಸ್‌ ಬೆಂಬಲಿಸಲಿದೆ. ಇದರೊಂದಿಗೆ ಮೀಡಿಯಾ ಟೆಕ್‌ನ ಪ್ರಮುಖ ಡೈಮೆನ್ಸಿಟಿ 9000 ಪ್ರೊಸೆಸರ್‌ನಲ್ಲಿ ಈ ಟ್ಯಾಬ್‌ ಕಾರ್ಯನಿರ್ವಹಿಸಲಿದೆ. ಹಾಗೆಯೇ 65W ಸೂಪರ್‌ವೂಕ್‌ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲದೊಂದಿಗೆ 9510mAh ಸಾಮರ್ಥ್ಯದ ಬ್ಯಾಟರಿಯನ್ನು ಕಾಣಬಹುದಾಗಿದೆ.

ಮುಂದಿನ ತಿಂಗಳಿನಿಂದ ಒನ್‌ಪ್ಲಸ್‌ ಫೋನ್‌ಗಳು ಲಭ್ಯವಿರುವುದಿಲ್ಲ: ಒನ್‌ಪ್ಲಸ್‌ ತನ್ನ ಫೋನ್‌ಗಳನ್ನು ಭಾರತದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಚಾನೆಲ್‌ಗಳೆರಡರಿಂದಲೂ ಮಾರಾಟ ಮಾಡುತ್ತದೆ ಆದರೆ ಇನ್ಮುಂದೆ ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಅಂದರೆ ಮೇ 1, 2024 ರಿಂದ ದೇಶದ ವಿವಿಧ ಭಾಗಗಳಲ್ಲಿ ಸುಮಾರು 4,500 ಸ್ಟೋರ್‌ಗಳಲ್ಲಿ ಫೋನ್‌ಗಳನ್ನು ಮಾರಾಟ ಮಾಡಲು ಆಗುವುದಿಲ್ಲ.

ಶೀಘ್ರದಲ್ಲೇ ಒನ್‌ಪ್ಲಸ್‌ ಪ್ಯಾಡ್ 2 ಲಾಂಚ್: ಏನೆಲ್ಲಾ ಫೀಚರ್ಸ್‌ ಪಡೆದಿದೆ..?

ಒಆರ್‌ಎ ಈ ವಾರದ ಆರಂಭದಲ್ಲಿ ಒನ್‌ಪ್ಲಸ್ ಕಾರ್ಯನಿರ್ವಾಹಕರಿಗೆ ಔಪಚಾರಿಕ ದೂರನ್ನು ಕಳುಹಿಸಿದೆ ಎಂದು ವರದಿ ಉಲ್ಲೇಖಿಸಿ ದೆ, ಒನ್‌ಪ್ಲಸ್ ವಾರಂಟಿ ಮತ್ತು ಮಾರ್ಜಿನ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸದವರೆಗೆ, ಚಿಲ್ಲರೆ ವ್ಯಾಪಾರಿಗಳು ಗುಜರಾತ್, ಮಹಾರಾಷ್ಟ್ರ, ಆಂಧ್ರದಂತಹ ರಾಜ್ಯಗಳಲ್ಲಿ ಒನ್‌ಪ್ಲಸ್ ಫೋನ್‌ಗಳನ್ನು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡದಂತೆ ನಿರ್ಧರಿಸಲಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

Best Mobiles in India

English summary
OnePlus Pad 2 will be launched in the second half of 2024. However, exact information is not available. This tab was mentioned by tipster Max Jambor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+