Home
ಸುದ್ದಿಜಾಲ

ಒನ್‌ಪ್ಲಸ್ ಪ್ಯಾಡ್ ಈಗ ಪ್ರೀ ಬುಕಿಂಗ್‌ಗೆ ಲಭ್ಯ: ಆಫರ್ ಏನೇನಿದೆ?

ಸ್ಮಾರ್ಟ್‌ ಗ್ಯಾಜೆಟ್‌ ವಿಭಾಗದಲ್ಲಿ ಭಾರೀ ಕಾತುರ ಕೆರಳಿಸಿದ್ದ ಒನ್‌ಪ್ಲಸ್ ಪ್ಯಾಡ್‌ ಈಗಾಗಲೇ ಲಾಂಚ್‌ ಆಗಿದ್ದು, ಇಂದಿನಿಂದ ಪ್ರೀ ಬುಕಿಂಗ್‌ ಲೈವ್‌ ಆಗಿದೆ. ಈ ವೇಳೆ ಖರೀದಿದಾರರು ವಿವಿಧ ರೀತಿಯಲ್ಲಿ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದ್ದು, ಕೈಗೆಟಕುವ ಬೆಲೆಯಲ್ಲಿ ಈ ಅತ್ಯುತ್ತಮ ಹಾಗೂ ವಿಶೇಷ ಒನ್‌ಪ್ಲಸ್ ಪ್ಯಾಡ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಹೌದು, ಒನ್‌ಪ್ಲಸ್‌ ತನ್ನ ಮೊದಲ ಟ್ಯಾಬ್ಲೆಟ್ ಅನ್ನು ಫೆಬ್ರವರಿಯಲ್ಲಿ ಒನ್‌ಪ್ಲಸ್‌ 11 ಸರಣಿ ಫೋನ್‌ಗಳು ಮತ್ತು ಬಡ್ಸ್ ಪ್ರೊ 2 ಸರಣಿಯ ಇಯರ್‌ಬಡ್‌ಗಳೊಂದಿಗೆ ಘೋಷಣೆ ಮಾಡಲಾಗಿದ್ದು, ಈ ಮೂಲಕ ಒನ್‌ಪ್ಲಸ್ ಪ್ರಿಯರಲ್ಲಿ ಭಾರೀ ಕುತೂಹಲ ನಿರ್ಮಾಣ ಮಾಡಿತ್ತು. ಈಗ ಈ ಕುತೂಹಲ ತಣಿಸಿಕೊಳ್ಳುವ ಸಮಯ ಬಂದಿದೆ. ಹಾಗಿದ್ರೆ, ಪ್ರೀ ಬುಕಿಂಗ್‌ನಲ್ಲಿ ಏನೆಲ್ಲಾ ಆಫರ್‌ ಇದೆ?, ಇದರ ಪ್ರಮುಖ ಫೀಚರ್ಸ್‌ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಒನ್‌ಪ್ಲಸ್ ಪ್ಯಾಡ್ ಈಗ ಪ್ರೀ ಬುಕಿಂಗ್‌ಗೆ ಲಭ್ಯ: ಆಫರ್ ಏನೇನಿದೆ?

ಎಂದಿನಿಂದ ಮಾರಾಟ ಆರಂಭ?: ಈ ಒನ್‌ಪ್ಲಸ್ ಪ್ಯಾಡ್‌ ಅನ್ನು ಮುಂದಿನ ತಿಂಗಳ ಆರಂಭದಿಂದ ಅಂದರೆ ಮೇ 1 ರಿಂದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ರಿಟೇಲರ್‌ ಸ್ಟೋರ್‌ಗಳಲ್ಲಿಯೂ ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಮೇ ನಲ್ಲಿ ನಿಮ್ಮ ಕೈಗೆ ಈ ಡಿವೈಸ್‌ ಬರಬೇಕು ಎಂದರೆ ಈಗಲೇ ಈ ಕಾಮರ್ಸ್‌ ಸೈಟ್‌ ಹಾಗೂ ಒನ್‌ಪ್ಲಸ್‌ ಪೋರ್ಟಲ್‌ ಮೂಲಕ ಪ್ರೀ ಬುಕಿಂಗ್‌ ಮಾಡಿ.

ಒನ್‌ಪ್ಲಸ್‌ ಪ್ಯಾಡ್‌ ಬೆಲೆ ಎಷ್ಟು?: ಈ ಪ್ಯಾಡ್‌ ಎರಡು ವೇರಿಯಂಟ್ ನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ 8 GB+128 GB ಹಾಗೂ 12 GB+256 GB ಆಯ್ಕೆ ಹೊಂದಿದೆ. ಇನ್ನು 8 GB ಯ ಮೂಲ ವೇರಿಯಂಟ್‌ಗೆ 37,999 ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, 12 GB ವೇರಿಯಂಟ್‌ನ ಪ್ಯಾಡ್‌ಗೆ 39,999ರೂ. ಗಳನ್ನು ನಿಗದಿ ಮಾಡಲಾಗಿದೆ.

ಒನ್‌ಪ್ಲಸ್‌ ಪ್ಯಾಡ್‌ ಖರೀದಿ ಮೇಲೆ ಇರುವ ಆಫರ್‌ ಏನು?: ಈ ಡಿವೈಸ್‌ ಖರೀದಿಗೆ ಹಲವು ರೀತಿಯಲ್ಲಿ ಪರಿಚಯಾತ್ಮಕ ಆಫರ್‌ ಸಹ ನೀಡಲಾಗುತ್ತಿದೆ. ಅಂದರೆ ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿ ಮಾಡಿದರೆ 2,000ರೂ. ಗಳ ತ್ವರಿತ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಖರೀದಿದಾರರು 12 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದು.

ಒನ್‌ಪ್ಲಸ್ ಪ್ಯಾಡ್ ಈಗ ಪ್ರೀ ಬುಕಿಂಗ್‌ಗೆ ಲಭ್ಯ: ಆಫರ್ ಏನೇನಿದೆ?

ವಿನಿಮಯ ಆಫರ್‌ ಸಹ ಲಭ್ಯವಿದ್ದು, ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ವಿನಿಮಯದಲ್ಲಿ ಹೆಚ್ಚುವರಿ 5,000 ರೂ.ಗಳನ್ನು ಅಥವಾ ಆಯ್ದ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ವಿನಿಮಯದಲ್ಲಿ 3,000 ರೂ. ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದು. ಇದರೊಂದಿಗೆ ಪ್ರೀ ಬುಕಿಂಗ್ ಮಾಡುವ ಗ್ರಾಹಕರು 1,499 ರೂ.ಮೌಲ್ಯದ ಉಚಿತ ಫೋಲಿಯೊ ಕೇಸ್ ಅನ್ನು ಪಡೆದುಕೊಳ್ಳಬಹುದು.

ಇದರ ಫೀಚರ್ಸ್‌ ಕಡೆ ಕಣ್ಣಾಯಿಸುವುದಾದರೆ ಈ ಪ್ಯಾಡ್‌, 11.61 ಇಂಚಿನ LCD ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು, 2800 x 2000 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಜೊತೆಗೆ 144Hz ರಿಫ್ರೆಶ್ ರೇಟ್ ಹಾಗೂ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆಯುವ ಮೂಲಕ ವಿಶೇಷ ಪ್ಯಾಡ್‌ ಎನಿಸಿಕೊಂಡಿದೆ. ಇದರೊಂದಿಗೆ HDR 10+ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಹೊಂದಿದೆ.

ಇನ್ನುಳಿದಂತೆ ಮೀಡಿಯಾಟೆಕ್‌ ಆಕ್ಟಾ ಕೋರ್ ಡೈಮೆನ್ಸಿಟಿ 9000 ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಇದನ್ನು ರನ್ ಮಾಡುತ್ತದೆ. ಇನ್ನು ಈ ಮೊದಲೇ ಉಲ್ಲೇಖಿಸಿದಂತೆ 8 GB+128 GB ಇಂಟರ್‌ ಸ್ಟೋರೇಜ್‌ ಹಾಗೂ 12 GB+256 GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಎರಡು ವೇರಿಯಂಟ್‌ನಲ್ಲಿ ಲಭ್ಯ.

ಒನ್‌ಪ್ಲಸ್ ಪ್ಯಾಡ್ ಈಗ ಪ್ರೀ ಬುಕಿಂಗ್‌ಗೆ ಲಭ್ಯ: ಆಫರ್ ಏನೇನಿದೆ?

ಇದರ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಡಿವೈಸ್‌ ಸಿಂಗಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ. ಈ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸರ್‌ ಹೊಂದಿದ್ದು, ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್‌ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ರಿಯರ್‌ ಕ್ಯಾಮರಾ ಮೂಲಕ 30 fps ನಲ್ಲಿ 4K ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದಾಗಿದೆ.ಇದರಲ್ಲಿ EIS ಸ್ಥಿರೀಕರಣ ಬೆಂಬಲ ಸಹ ಇದೆ.

ಒನ್‌ಪ್ಲಸ್‌ ಪ್ಯಾಡ್ 9,510mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 67W ಸೂಪರ್‌ವೂಕ್‌ ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಅಂದರೆ ನೀವು 60 ನಿಮಿಷಗಳ ವರೆಗೆ ಚಾರ್ಜಿಂಗ್‌ಗಾಗಿ ಇಟ್ಟರೆ ಬ್ಯಾಟರಿ ಸುಮಾರು 90% ಭರ್ತಿಯಾಗುತ್ತದೆ. ಇದರೊಂದಿಗೆ ವೈ-ಫೈ 6, ಬ್ಲೂಟೂತ್‌ ಆವೃತ್ತಿ v5.3, ಯುಎಸ್‌ಬಿ ಟೈಪ್-ಸಿ ಪೋರ್ಟ್‌ನಂತಹ ಹಲವಾರು ಕನೆಕ್ಟಿವಿಟಿ ಆಯ್ಕೆಯನ್ನು ಇದರಲ್ಲಿ ಕಾಣಬಹುದು.

Best Mobiles in India

English summary
OnePlus announced its first tablet OnePlus Pad in February along with the OnePlus 11 series of phones and the Buds Pro 2 series of earbuds, which are now open for pre-booking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+