ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ ಒನ್‌ಪ್ಲಸ್ ಪ್ಯಾಡ್ ಗೋ?, ಅದೂ ಸಹ ಕೈಗೆಟಕುವ ದರದಲ್ಲಿ!
ಒನ್‌ಪ್ಲಸ್‌ನ (OnePlus) ಯಾವುದೇ ಡಿವೈಸ್‌ಗಳು ಸಹ ದೊಡ್ಡ ರೀತಿಯಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತವೆ. ಈಗಾಗಲೇ ಒನ್‌ಪ್ಲಸ್ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಪಡೆದಿತ್ತು. ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಒನ್‌ಪ್ಲಸ್ ಕೈಗೆಟಕುವ ಬೆಲೆಯಲ್ಲಿ ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಲು ಮುಂದಾಗಿದೆ.
ಹೌದು, ಒನ್‌ಪ್ಲಸ್ ಪ್ಯಾಡ್ ಗೊ (OnePlus Pad Go) ಅನ್ನು ಲಾಂಚ್ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಗೋ ಆವೃತ್ತಿಯು ಪ್ರೀಮಿಯಂ ಒನ್‌ಪ್ಲಸ್ ಪ್ಯಾಡ್‌ನ ಟೋನ್-ಡೌನ್ ರೂಪಾಂತರವಾಗಿರಬಹುದು ಎಂದೂ ಸಹ ಹೇಳಲಾಗುತ್ತಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟಿರಬಹುದು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ ಪ್ಯಾಡ್ ಗೋ: ಟಿಪ್‌ಸ್ಟರ್ ನಲ್ಲಿ OPD2304 ಎಂಬ ಮಾದರಿ ಸಂಖ್ಯೆಯನ್ನು ಗುರುತು ಮಾಡಲಾಗಿದ್ದು, ಇದೇ ಮಾದರಿ ಸಂಖ್ಯೆಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಸರ್ಕಾರಿ ಸಂಸ್ಥೆ ಆಗಿರುವ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಫೋರಂನಲ್ಲಿಯೂ ಕಾಣಿಸಿಕೊಂಡಿದೆ. ಈ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ಒನ್‌ಪ್ಲಸ್ ಈ ಡಿವೈಸ್ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.
BIS ಫೋರಮ್ ಈ ಮಾದರಿಯೊಂದಿಗೆ ಮತ್ತೊಂದು ಮಾದರಿಯನ್ನೂ ಉಲ್ಲೇಖಿಸಿದೆ. ಅದರಲ್ಲಿ OPD2305 ಎಂಬುದಾಗಿದೆ. ಈ ಮಾದರಿ ಸಂಖ್ಯೆಯಿಂದ ತಿಳಿದುಬರುವುದು ಏನೆಂದರೆ ಒನ್‌ಪ್ಲಸ್ ಪ್ಯಾಡ್ ಗೋ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಈ ನಡುವೆ ಈ ಡಿವೈಸ್ 37,999 ರೂ.ಗಳ ಆಸುಪಾಸಿನಲ್ಲಿ ಲಭ್ಯವಾಗಬಹುದು ಎಂದು ತಿಳಿದುಬಂದಿದೆ. ಈ ಮೂಲಕ ಒನ್‌ಪ್ಲಸ್ ಪ್ಯಾಡ್ ಟ್ಯಾಬ್ಲೆಟ್‌ಗಿಂತ ಹೆಚ್ಚು ಕೈಗೆಟುವ ದರದ ಹೊಂದಿರಲಿದೆ.
ಇನ್ನು ಈಗಾಗಲೇ ಲಾಂಚ್ ಆಗಿರುವ ಒನ್‌ಪ್ಲಸ್ ಪ್ಯಾಡ್ 144Hz ರಿಫ್ರೆಶ್ ರೆಟ್ ಆಯ್ಕೆಯೊಂದಿಗೆ ಫುಲ್ HD+ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇದ್ದು, ಇದರಲ್ಲಿನ 11.6 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ವಿಡಿಯೋ ವೀಕ್ಷಣೆಯಲ್ಲಿ ಹಾಗೂ ಮೀಟಿಂಗ್ ಸಂದರ್ಭದಲ್ಲಿ ಅತ್ಯುತ್ತಮ ಅನುಭವ ಪಡೆಯುವಂತೆ ಮಾಡುತ್ತದೆ
ಹಾಗೆಯೇ ಈ ಟ್ಯಾಬ್ಲೆಟ್ ಮೀಡಿಯಾಟೆಕ್ 9000 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, LPDDR5 RAM ಮತ್ತು UFS 3.1 ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ. ಉಳಿದಂತೆ 13-ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದ ಆಯ್ಕೆ ಇದ್ದು, 30fps ನಲ್ಲಿ ಫುಲ್ ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್ ಅನ್ನು ಇದು ಬೆಂಬಲಿಸುತ್ತದೆ. ಇನ್ನು 9510mAh ಸಾಮರ್ಥ್ಯ ಬ್ಯಾಟರಿ ಆಯ್ಕೆ ಇದರಲ್ಲಿದ್ದು, 65W ಸೂಪರ್‌ವೂಕ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಒನ್‌ಪ್ಲಸ್ ಪ್ಯಾಡ್ ಟ್ಯಾಬ್ಲೆಟ್ ಅನ್ನು ಫೆಬ್ರವರಿಯಲ್ಲಿ ಭಾರತದಲ್ಲಿ ಲಾಂಚ್ ಮಾಡಲಾಗಿತ್ತಾದರೂ ಇದು ಏಪ್ರಿಲ್‌ನಲ್ಲಿ ಮಾರಾಟಕ್ಕೆ ಮುಕ್ತವಾಗಿತ್ತು. ಈ ಡಿವೈಸ್ ಒನ್‌ಪ್ಲಸ್‌ನ ಮೊದಲ ಟ್ಯಾಬ್ಲೆಟ್ ಆಗಿ ಗುರುತಿಸಿಕೊಂಡಿದೆ. ಆದರೆ ಈಗ ಎರಡನೇ ಟ್ಯಾಬ್ ಅನ್ನು ಲಾಂಚ್ ಮಾಡಲು ಮುಂದಾಗಿರುವುದು ಹಲವು ಒನ್‌ಪ್ಲಸ್ ಪ್ರಿಯರಿಗೆ ಸಂತಸ ಹೆಚ್ಚು ಮಾಡಿದೆ. ಅದೂ ಸಹ ಕೈಗೆಟಕುವ ದರದಲ್ಲಿ.

ಕೆಲವು ವದಂತಿಗಳ ಪ್ರಕಾರ ಹೊಸ ಒನ್‌ಪ್ಲಸ್ ಪ್ಯಾಡ್ ಡಿವೈಸ್ ಇದೇ ರೀತಿಯ ಫೀಚರ್ಸ್ ಹೊಂದಿರಬಹುದು ಎಂದು ಉಲ್ಲೇಖಿಸುತ್ತವೆಯಾದರೂ ಕಡಿಮೆ ಶಕ್ತಿಯುತ ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಡಿಸ್ಪ್ಲೇ ಗಾತ್ರವು ಹೆಚ್ಚು ಸಾಂದ್ರವಾಗಿರುತ್ತದೆ ಎನ್ನಲಾಗಿದೆ. ಜೊತೆಗೆ ಚಾರ್ಜಿಂಗ್ ವೇಗದ ವಿಚಾರದಲ್ಲೂ ಸಹ 67W ಅಥವಾ 80W ನಲ್ಲಿ ಮಿತಿಗೊಳಿಸಬಹುದು ಎಂದು ನಂಬಲಾಗಿದೆ.


Click it and Unblock the Notifications








