Home
ಸುದ್ದಿಜಾಲ

ಇಂದು ಒನ್‌ಪ್ಲಸ್‌ ಪ್ಯಾಡ್‌ ಗೋ ಫಸ್ಟ್‌ ಸೇಲ್‌!..ಅಚ್ಚರಿಯ ಬೆಲೆ, ಫೀಚರ್ಸ್‌!

ಒನ್‌ಪ್ಲಸ್‌ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ನೂತನ ಒನ್‌ಪ್ಲಸ್‌ ಪ್ಯಾಡ್‌ ಗೋ ಸ್ಮಾರ್ಟ್‌ ಟ್ಯಾಬ್ಲೆಟ್‌ ಈಗಾಗಲೇ ಫೀಚರ್ಸ್‌ನಿಂದ ಗಮನ ಸೆಳೆದಿದೆ. ಈ ಹೊಸ ಟ್ಯಾಬ್‌ ಇಂದು (ಅಕ್ಟೋಬರ್ 20) ಇ ಕಾಮರ್ಸ್‌ ತಾಣ ಅಮೆಜಾನ್‌ ಹಾಗೂ ಅಧಿಕೃತ ಒನ್‌ಪ್ಲಸ್‌ ತಾಣದ ಮೂಲಕ ಮೊದಲ ಬಾರಿಗೆ ಮಾರಾಟ ಪ್ರಾರಂಭಿಸಲಿದೆ.

ಹೌದು, ಒನ್‌ಪ್ಲಸ್‌ ಪ್ಯಾಡ್‌ ಗೋ (OnePlus Pad Go) ಟ್ಯಾಬ್ಲೆಟ್‌ ಇಂದು ಫಸ್ಟ್‌ ಸೇಲ್‌ ಶುರು ಮಾಡಲಿದೆ. ಈ ಟ್ಯಾಬ್‌ ಮೀಡಿಯಾ ಟೆಕ್‌ನ ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ 33W ವೇಗದ ಚಾರ್ಜಿಂಗ್ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಜೊತೆಗೆ 8,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಇರುವುದು ಪ್ಲಸ್‌ ಪಾಯಿಂಟ್‌ ಆಗಿದೆ.

ಇಂದು ಒನ್‌ಪ್ಲಸ್‌ ಪ್ಯಾಡ್‌ ಗೋ ಫಸ್ಟ್‌ ಸೇಲ್‌!..ಅಚ್ಚರಿಯ ಬೆಲೆ, ಫೀಚರ್ಸ್‌!

ಈ ಹೊಸ ಟ್ಯಾಬ್‌ Wi-Fi ಮತ್ತು LTE ಆಯ್ಕೆ ಪಡೆದುಕೊಂಡಿದೆ. ಆ ಪೈಕಿ 8GB + 128GB ವೈ-ಫೈ ವೇರಿಯಂಟ್‌ ಬೆಲೆ 19,999ರೂ. ಆಗಿದೆ. 8GB + 128GB LTE ವೇರಿಯಂಟ್‌ ದರವು 21,999ರೂ. ಆಗಿದ್ದು, ಇನ್ನು 8GB + 256GB LTE ವೇರಿಯಂಟ್‌ ದರವು 23,999ರೂ. ಗಳು ಆಗಿದೆ. ಗ್ರಾಹಕರು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 2,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇನ್ನುಳಿದಂತೆ ಈ ಡಿವೈಸ್‌ ಫೀಚರ್ಸ್‌ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಫೀಚರ್ಸ್‌ ಹೀಗಿವೆ

ಒನ್‌ಪ್ಲಸ್‌ ಪ್ಯಾಡ್‌ ಗೋ ಸ್ಮಾರ್ಟ್‌ ಟ್ಯಾಬ್ಲೆಟ್‌ 11.35 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು ಈ ಡಿಸ್‌ಪ್ಲೇ ಪ್ಯಾನೆಲ್ ಅನ್ನು TÜV ರೈನ್‌ಲ್ಯಾಂಡ್ ಪ್ರಮಾಣೀಕರಿಸಿದೆ. ಅಲ್ಲದೇ 400 ನೀಟ್ಸ್‌ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದ್ದು, 90Hz ರಿಫ್ರೆಶ್ ರೇಟ್ ಸಪೋರ್ಟ್‌ ಪಡೆದಿದೆ. ಹಾಗೆಯೇ ಡಿಸ್‌ಪ್ಲೇ 7:5 ರಚನೆಯ ಅನುಪಾತವನ್ನು ಸಹ ಹೊಂದಿದ್ದು, ಡಿಸ್‌ಪ್ಲೇ ಪ್ರತಿ ಇಂಚಿನ ಪಿಕ್ಸೆಲ್ ಸಾಂದ್ರತೆ 260 PPI ಆಗಿದೆ.

ಪ್ರೊಸೆಸರ್‌ ಪವರ್ ಹೀಗಿದೆ

ಒನ್‌ಪ್ಲಸ್‌ ಪ್ಯಾಡ್‌ ಗೋ ಟ್ಯಾಬ್‌ ಆಕ್ಟಾ-ಕೋರ್ ಹಿಲಿಯೋ G99 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದು ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಜೊತೆಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ ಇದರ LTE ಮಾದರಿ 8GB RAM ಮತ್ತು 128GB ಸ್ಟೋರೇಜ್‌ ಸಾಮರ್ಥ್ಯದಲ್ಲಿ ಇದೆ. ಇದರ ವೈಫೈ ಮಾಡೆಲ್‌ 8GB RAM ಮತ್ತು 128/256GB ಸ್ಟೋರೇಜ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಕ್ಯಾಮೆರಾ ಸೆನ್ಸಾರ್ ಹಾಗೂ ಬ್ಯಾಟರಿ ಮಾಹಿತಿ ಹೀಗಿದೆ

ಈ ನೂತನ ಟ್ಯಾಬ್ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಪಡೆದಿದ್ದು, ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಅಲ್ಲದೇ ಈ ಸಾಧನವು 8,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 33W ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್‌ ಪಡೆದಿದೆ. ಇದಲ್ಲದೆ ಟ್ಯಾಬ್ಲೆಟ್ ಭದ್ರತಾ ಉದ್ದೇಶಕ್ಕಾಗಿ ಫೇಸ್ ಅನ್‌ಲಾಕ್ ಬೆಂಬಲವನ್ನು ಸಹ ಹೊಂದಿದೆ.

ಮೆಮೊರಿ ಹಾಗೂ ಲಭ್ಯತೆ

ಈ ಟ್ಯಾಬ್‌ ವೈ-ಫೈ ವೇರಿಯಂಟ್‌ 8GB RAM + 128GB ಸ್ಟೋರೇಜ್ ಆಯ್ಕೆ, LTE ವೇರಿಯಂಟ್‌ 8GB RAM ಮತ್ತು 128GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಈ ಡಿವೈಸ್‌ ಅನ್ನು ಗ್ರಾಹಕರು ಒನ್‌ಪ್ಲಸ್‌ ಇಂಡಿಯಾ ವೆಬ್‌ಸೈಟ್, ಒನ್‌ಪ್ಲಸ್‌ ಸ್ಟೋರ್ ಅಪ್ಲಿಕೇಶನ್, ಫ್ಲಿಪ್‌ಕಾರ್ಟ್‌, ಅಮೆಜಾನ್‌, ರಿಲಯನ್ಸ್‌, ಕ್ರೋಮಾದಂತಹ ಆಫ್‌ಲೈನ್ ಔಟ್‌ಲೆಟ್‌ಗಳ ಮೂಲಕ ಖರೀದಿ ಮಾಡಬಹುದು. ಇನ್ನು ಈ ಸ್ಮಾರ್ಟ್‌ ಟ್ಯಾಬ್ಲೆಟ್ ಟ್ವಿನ್ ಮಿಂಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ.

Best Mobiles in India

English summary
OnePlus Pad Go first sale today in India: check price, offers and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+