OnePlus: ಶೀಘ್ರದಲ್ಲೇ ಸದ್ದು ಮಾಡಲಿದೆ ಒನ್‌ಪ್ಲಸ್‌ನ ಹೊಸ ಫೋನ್! ಫೀಚರ್ಸ್ ಏನಿರಬಹುದು?
ಒನ್‌ಪ್ಲಸ್ (OnePlus) ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ. ಅದರಲ್ಲೂ ಈ ಫೋನ್‌ಗಳು ಇತರೆ ದೈತ್ಯ ಬ್ರ್ಯಾಂಡ್‌ಗಳ ಜೊತೆ ನೇರವಾಗಿ ಸೆಣಸುತ್ತಿದ್ದು, ಈ ಮೂಲಕ ಗ್ರಾಹಕರಿಗೆ ಪ್ರೀಮಿಯಂ ಫೀಚರ್ಸ್ ಸೌಲಭ್ಯ ಕಲ್ಪಿಸಿಕೊಡುತ್ತಿವೆ. ಈ ಬೆಳವಣಿಗೆ ನಡುವೆ ಒನ್‌ಪ್ಲಸ್‌ನ ಮತ್ತೊಂದು ಹೊಸ ಫೋನ್ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದೆ.
ಹೌದು, ಒನ್‌ಪ್ಲಸ್ ಈಗಾಗಲೇ ಭಿನ್ನ ಫೀಚರ್ಸ್ ಆಯ್ಕೆಯ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಫೋನ್‌ಗಳು ವಿಶೇಷದಲ್ಲಿ ವಿಶೇಷ ಫೀಚರ್ಸ್ ಆಯ್ಕೆ ಪಡೆಯುತ್ತಿದ್ದು, ಸ್ಮಾರ್ಟ್‌ಫೋನ್ ವಲಯದಲ್ಲಿ ದೊಡ್ಡ ಅಲೆಯಲ್ಲೇ ಎಬ್ಬಿಸುತ್ತಿವೆ. ಅದರಂತೆ ಈಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಆಗಲು ಸಜ್ಜಾಗಿದ್ದು, ಇದು ಬಿಐಎಸ್ ಪ್ರಮಾಣೀಕರಣವನ್ನು (BIS certification) ಪಡೆದಿದೆ. ಹಾಗಿದ್ರೆ ಈ ಫೋನ್ ನಿರೀಕ್ಷಿತ ಫೀಚರ್ಸ್ ಏನು ಅನ್ನೋದನ್ನು ತಿಳಿಯಿರಿ.

ಒನ್‌ಪ್ಲಸ್ ಸ್ಮಾರ್ಟ್‌ಫೋನ್: ಹೊಸ ಒನ್‌ಪ್ಲಸ್ ಫೋನ್ ಬಿಐಎಸ್ ಪ್ರಮಾಣೀಕರಣವನ್ನು ಪಡೆದಿದ್ದು, ಭಾರತದ ಈ ಫೋನ್ ಶೀಘ್ರದಲ್ಲೇ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ನಾರ್ಡ್ ಸರಣಿಯ (Nord series) ಭಾಗವಾಗಿರಬಹುದು ಎಂದು ಸಹ ಹೇಳಲಾಗುತ್ತಿದ್ದು, ಬಿಐಎಸ್ ಸೈಟ್‌ನಲ್ಲಿ CPH2613 ಮಾಡೆಲ್ ನಂಬರ್ ಮೂಲಕ ಕಾಣಿಸಿಕೊಂಡಿದೆ. ಈ ಸಂಬಂಧ 91 ಮೊಬೈಲ್ಸ್ ವರದಿ ಮಾಡಿದೆ.
ಈ ಪಟ್ಟಿ ಮಾಡೆಲ್ ಸಂಖ್ಯೆಯನ್ನು ಮಾತ್ರ ಬಹಿರಂಗಪಡಿಸಿದ್ದು, ಇದರ ಹಾರ್ಡ್‌ವೇರ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಬಿಐಎಸ್ ಪ್ರಮಾಣೀಕರಣವು ಈ ಫೋನ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡುವ ಸುಳಿವನ್ನು ಮಾತ್ರ ಕೊಟ್ಟಿದೆ. ಅದಾಗ್ಯೂ ಕೆಲವು ಲೀಕ್ ಮಾಹಿತಿ ಪ್ರಕಾರ ಈ ಹೊಸ ಫೋನ್ ಸೆಲ್ಫಿ ಕ್ಯಾಮೆರಾ, ಫ್ಲಾಟ್ ಬೆಜೆಲ್ಸ್ ಮತ್ತು ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿರಲಿದೆ ಎನ್ನಲಾಗಿದ್ದು, ಪಂಚ್-ಹೋಲ್ ಕಟೌಟ್ನಲ್ಲಿ ಕಾಣಿಸಿಕೊಳ್ಳಬಹುದು ಎಂಬ ವದಂತಿಗಳಿವೆ.
ಇದರೊಂದಿಗೆ ಈ ಮುಂಬರುವ ಹೊಸ ಫೋನ್ ಅಮೋಲೆಡ್ ಡಿಸ್ಪ್ಲೇ ಹೊಂದಿರಬಹುದು ಎನ್ನಲಾಗಿದ್ದು, ಫೋನ್‌ನ ರಿಯರ್ ಪ್ಯಾನಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆನ್ಸರ್ ಮತ್ತು ಎಲ್ಇಡಿ ಫ್ಲ್ಯಾಶ್ ಆಯ್ಕೆ ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಲಂಬ ಕ್ಯಾಮೆರಾ ಮಾಡ್ಯೂಲ್ ಅನ್ನು ಇದು ಹೊಂದಿರಬಹುದು ಎನ್ನಲಾಗಿದ್ದು, ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್‌ಗಳು ಬಲಭಾಗದಲ್ಲಿ ಇರಲಿವೆ ಎಂದು ಹೇಳಲಾಗಿದೆ.

ಜೊತೆಗೆ ಒನ್‌ಪ್ಲಸ್ CPH2613 ಅನ್ನು ಕ್ಯಾಮೆರಾ FV-5 ನಲ್ಲಿ ಲಿಸ್ಟ್ ಮಾಡಲಾಗಿದ್ದು, ಇದು ಫೋನ್‌ನಲ್ಲಿ f/1.8 ಅಪರ್ಚರ್, 4096×3072 ರೆಸಲ್ಯೂಶನ್, 5.6 mm ಫೋಕಲ್ ಲೆಂತ್, ಮತ್ತು OIS+EIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇರಬಹುದು. ಹಾಗೆಯೇ ಈ ಸೆಲ್ಫಿ ಸ್ನ್ಯಾಪರ್ EIS ಬೆಂಬಲದೊಂದಿಗೆ ಕಾಣಿಸಿಕೊಳ್ಳಬಹುದು ಎಂದು ಈ ಮೂಲಕ ತಿಳಿದುಬಂದಿದೆ.
ಈ ಫೋನ್ ಖರೀದಿದಾರರಿಗೆ ಗುಡ್ ನ್ಯೂಸ್: ಈಗಾಗಲೇ ಯಾರೆಲ್ಲಾ 256GB ಸ್ಟೋರೇಜ್ ಆಯ್ಕೆಯ ಒನ್‌ಪ್ಲಸ್ 12R (OnePlus 12R) ಫೋನ್ ಖರೀದಿ ಮಾಡಿದ್ದಾರೋ ಅವರು ತಮ್ಮ ಫೋನ್ ಅನ್ನು ರಿಟರ್ನ್ ಮಾಡಲು ಮುಂದಾದರೆ ಅವರಿಗೆ ಒನ್‌ಪ್ಲಸ್ ಪೂರ್ಣ ಹಣವನ್ನು ನೀಡಲಿದೆ. ಯಾಕೆಂದರೆ ಒನ್‌ಪ್ಲಸ್ 12R ನ 256GB ವೇರಿಯಂಟ್ UFS 4.0 ಸ್ಟೋರೇಜ್ ಪ್ರಕಾರದಲ್ಲಲಿ ಲಭ್ಯವಿರುತ್ತದೆ ಎಂದು ಕಂಪನಿಯು ಹೇಳಿತ್ತು. ಆದರೆ UFS 4.0 ಬದಲಿಗೆ UFS 3.1 ಪ್ರಕಾರದಲ್ಲಿ ಈ ಸ್ಟೋರೇಜ್ ವೇರಿಯಂಟ್ ಕಾಣಿಸಿಕೊಂಡಿದೆ.
ತನ್ನ ತಪ್ಪಿನ ಅರಿವನ್ನು ಅರ್ಥ ಮಾಡಿಕೊಂಡಿರುವ ಒನ್‌ಪ್ಲಸ್ ಯಾರೆಲ್ಲಾ ಈ ಸ್ಟೋರೇಜ್ ಇಷ್ಟ ಇಲ್ಲ ಎಂದು ವಾಪಸ್ ಫೋನ್ ಅನ್ನು ನೀಡುತ್ತಾರೋ ಅವರಿಗೆ ಪೂರ್ಣ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದೆ. ಈ ಬಗ್ಗೆ ಒನ್‌ಪ್ಲಸ್ ಅಧ್ಯಕ್ಷ ಮತ್ತು ಸಿಒಒ ಕಿಂಡರ್ ಲಿಯು ಅವರು ಸಹ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.


Click it and Unblock the Notifications








