ಒನ್‌ಪ್ಲಸ್ ಗ್ರಾಹಕರೇ ಗಮನಿಸಿ... ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ 'ಲೈಫ್‌ಟೈಮ್ ವಾರಂಟಿ'!
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ವಿಶೇಷ ಬೇಡಿಕೆ ಇದೆ. ಈ ನಡುವೆ ಒನ್‌ಪ್ಲಸ್ ಹಲವಾರು ಹೊಸ ಸ್ಮಾರ್ಟ್‌ಫೋನ್‌ಗಳನ್ನೂ ಸಹ ಅನಾವರಣ ಮಾಡಿದ್ದು, ಈ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಈ ನಡುವೆ ಒನ್‌ಪ್ಲಸ್ ಫೋನ್ ಖರೀದಿದಾರರು ಮತ್ತಷ್ಟು ಸಂತಸಪಡುವ ಸುದ್ದಿಯೊಂದನ್ನು ನೀಡಲಾಗಿದೆ.
ಹೌದು, ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus smartphone) ಆರಂಭದಲ್ಲಿ ಯಾವುದೇ ಸಮಸ್ಯೆಗಳನ್ನು ನೀಡುವುದಿಲ್ಲ. ಆದರೆ, ದಿನಕಳೆದಂತೆ ಇದ್ದಕ್ಕಿದ್ದ ಹಾಗೆ ಫೋನ್‌ನ ಡಿಸ್‌ಪ್ಲೇ ಬಳಕೆದಾರರಿಗೆ ಹಲವು ರೀತಿಯಲ್ಲಿ ಸಮಸ್ಯೆ ನಿರ್ಮಾಣ ಮಾಡುತ್ತದೆ. ಅಂದರೆ ಗ್ರೀನ್ ಲೈನ್ ಸಮಸ್ಯೆ. ಪರಿಣಾಮ ಒನ್‌ಪ್ಲಸ್ ತನ್ನ ಈ ಸ್ಮಾರ್ಟ್‌ಫೋನ್‌ಗಳಿಗೆ ಲೈಪ್‌ಟೈಮ್ ವಾರಂಟಿಯನ್ನು ನೀಡಲು ಮುಂದಾಗಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳಿಗೆ ಈ ವಾರಂಟಿ ಸಿಗಲಿದೆ ಎಂದು ತಿಳಿಯೋಣ ಬನ್ನಿ.

ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಒನ್‌ಪ್ಲಸ್: ಒನ್‌ಪ್ಲಸ್ ಎಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಈ ವಿಶೇಷ ಸೌಲಭ್ಯ ನೀಡಿದ್ದು, ಈ ಮೂಲಕ ಯಾವುದೇ ಅಳುಕಿಲ್ಲದೆ ಗ್ರಾಹಕರು ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ. ಆದರೆ, ಒನ್‌ಪ್ಲಸ್ 8 ಪ್ರೊ, ಒನ್‌ಪ್ಲಸ್ 8T, ಒನ್‌ಪ್ಲಸ್ 9, ಮತ್ತು ಒನ್‌ಪ್ಲಸ್ 9R ಸೇರಿದಂತೆ ಎಲ್ಲಾ ಹಳೆಯ ಸ್ಮಾರ್ಟ್‌ಡಿವೈಸ್‌ಗಳಿಗೆ ಈ ಪ್ರಯೋಜನ ಇಲ್ಲ ಎನ್ನಲಾಗಿದೆ.
ಇದಕ್ಕೆ ಕಾರಣ ನೀಡಿರುವ ಒನ್‌ಪ್ಲಸ್ ಈ ಫೋನ್‌ಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಬಿಡಿ ಭಾಗಗಳು ಇಲ್ಲ ಎಂದು ತಿಳಿಸಿದೆ. ಆದರೂ ಸಹ ಈ ವಿಭಾಗದಲ್ಲಿ ಖುಷಿ ಸುದ್ದಿಯೊಂದನ್ನು ನೀಡಿದೆ. ಅದೇನೆಂದರೆ ಒನ್‌ಪ್ಲಸ್‌ನ ಹಳೆಯ ಸ್ಮಾರ್ಟ್‌ಫೋನ್ ಹೊಂದಿರುವ ಗ್ರಾಹಕರು ಒನ್‌ಪ್ಲಸ್ 10R ಗೆ ಅಪ್‌ಗ್ರೇಡ್ ಮಾಡಲು ಮುಂದಾದರೆ 30,000ರೂ. ವರೆಗೆ ರಿಯಾಯಿತಿ ವೋಚರ್ ಸಿಗಲಿದೆ ಎಂದು ತಿಳಿಸಿದೆ.
ಅಂದರೆ ಗ್ರಾಹಕರು ಹೊಸ ಒನ್‌ಪ್ಲಸ್ ಫೋನ್‌ಗೆ ಅಪ್‌ಗ್ರೇಡ್ ಆಗುವಾಗ ಕೇವಲ 5,000ರೂ.ಗಳಿಂದ ರಿಂದ 10,000ರೂ.ಗಳ ವರೆಗೆ ಹಣ ಪಾವತಿ ಮಾಡಿದರೆ ಹೊಸ ಒನ್‌ಪ್ಲಸ್ 10R ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಇನ್ನು ಆಂಡ್ರಾಯ್ಡ್ ಅಥಾರಿಟಿ ವರದಿ ಮಾಡಿದಂತೆ ಲೈಫ್‌ಟೈಮ್ ವಾರಂಟಿಯನ್ನು ಭಾರತದಲ್ಲಿನ ಬಳಕೆದಾರರಿಗೆ ಮಾತ್ರ ವಿಸ್ತರಿಸಲಾಗಿದೆ.
ಈ ಸಮಸ್ಯೆಯು ಬಳಕೆದಾರರಿಗೆ ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡಿದೆ ಎಂದು ನಾವು ಅರಿತುಕೊಂಡಿದ್ದೇವೆ, ಇದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ನಮ್ಮ ಅಚಲವಾದ ಬದ್ಧತೆಗೆ ಅನುಗುಣವಾಗಿ ಹತ್ತಿರದ ಒನ್‌ಪ್ಲಸ್ ಸೇವೆಯನ್ನು ಭೇಟಿ ಮಾಡಲು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. ಸಮಸ್ಯೆಗಳಿಂದ ಪ್ರಭಾವಿತವಾಗಿರುವ ಎಲ್ಲಾ ಡಿವೈಸ್‌ಗಳಿಗೆ ನಾವು ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಅನ್ನು ಒದಗಿಸುತ್ತೇವೆ. ಜೊತೆಗೆ ಆಯ್ದ ಒನ್‌ಪ್ಲಸ್ 8 ಮತ್ತು 9 ಸರಣಿಯ ಡಿವೈಸ್‌ಗಳ ಬಳಕೆದಾರರಿಗೆ ಅಪ್‌ಗ್ರೇಡ್ ಆಫರ್ ನೀಡಲಾಗುತ್ತಿದೆ ಎಂದು ಒನ್‌ಪ್ಲಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಇನ್ನು ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ ಬಳಕೆದಾರರು ಈ ಸೌಲಭ್ಯದಲ್ಲಿ 25,500ರೂ.ಗಳ ವೋಚರ್ ಅನ್ನು ಸ್ವೀಕರಿಸುತ್ತಾರೆ ಎಂದು ತಿಳಿದುಬಂದಿದ್ದು, ಒನ್‌ಪ್ಲಸ್ 8T ಬಳಕೆದಾರರಿಗೆ 20,000 ರೂ. ಮೌಲ್ಯದ ವೋಚರ್ ನೀಡಲಾಗುತ್ತದಂತೆ. ಇದರೊಂದಿಗೆ ಒನ್‌ಪ್ಲಸ್ 9 ಮತ್ತು ಒನ್‌ಪ್ಲಸ್ 9T ಬಳಕೆದಾರರಿಗೆ ಕ್ರಮವಾಗಿ 23,500 ರೂ.ಗಳು ಮತ್ತು 19,000 ರೂ.ಗಳ ಆಫರ್ ಸಿಗಲಿದೆ.
ಹಳೆಯ ಒನ್‌ಪ್ಲಸ್ ಫೋನ್‌ಗಳನ್ನು ಹೊಂದಿರುವ ಬಾಧಿತ ಬಳಕೆದಾರರು ಒನ್‌ಪ್ಲಸ್ 10R ಗೆ ಅಪ್‌ಗ್ರೇಡ್ ಮಾಡಿದರೆ, ಒನ್‌ಪ್ಲಸ್ ಹೆಚ್ಚುವರಿ 4,500ರೂ.ಗಳ ಕೊಡುಗೆಯನ್ನು ನೀಡುತ್ತದೆ ಎಂದು ತಿಳಿಸಲಾಗಿದ್ದು, ಭಾರತದಲ್ಲಿ ಸದ್ಯಕ್ಕೆ ಒನ್‌ಪ್ಲಸ್ 10R ಸ್ಮಾರ್ಟ್‌ಫೋನ್ ಬೆಲೆಯು 34,999ರೂ.ಗಳಿಂದ ರಿಂದ ಪ್ರಾರಂಭವಾಗಿದ್ದು, 39,999ರೂ.ಗಳ ವರೆಗೆ ಬೆಲೆ ಹೊಂದಿದೆ. ಆದರೆ ಈ ಡಿಸ್ಕೌಂಟ್ ವೋಚರ್‌ಗೆ ಅರ್ಹರಾಗಲು ಸ್ಮಾರ್ಟ್‌ಫೋನ್‌ನ ಸ್ಥಿತಿ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಭಾರತದಲ್ಲಿ ಮಾತ್ರ ಯಾಕೆ ಲೈಫ್‌ಟೈಮ್ ವಾರಂಟಿ? : ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಮತ್ತು ಜಾಗತಿಕವಾಗಿ ಕೆಲವು ಒನ್‌ಪ್ಲಸ್ ಬಳಕೆದಾರರು ವಿಚಿತ್ರವಾದ ಹಸಿರು ಲೈನ್ ಸಮಸ್ಯೆಯನ್ನು ವರದಿ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಕೆ ಮಾಡುತ್ತಿದ್ದಾರೆ. ಫೋನ್‌ಗಳು ಇನ್ನೂ ಕಾರ್ಯನಿರ್ವಹಿಸುತ್ತಿರುವಾಗಲೇ ಹಸಿರು ರೇಖೆಯು ಕಾಣಿಸಿಕೊಳ್ಳುತ್ತಿದೆ. ಇದು ಸ್ಕ್ರೋಲಿಂಗ್ ಅನುಭವವನ್ನು ಅಡ್ಡಿಪಡಿಸಲಿದ್ದು, ಅದರಲ್ಲೂ ಅಮೋಲೆಡ್ ಡಿಸ್‌ಪ್ಲೇ ಹೊಂದಿರುವ ಒನ್‌ಪ್ಲಸ್ ಫೋನ್‌ಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.


Click it and Unblock the Notifications








