OnePlus: ಶೀಘ್ರದಲ್ಲೇ ಲಾಂಚ್ ಆಗಲಿದೆ ಒನ್‌ಪ್ಲಸ್ ವಾಚ್ 2! ಫೀಚರ್ಸ್ ಲೀಕ್
ಸ್ಮಾರ್ಟ್‌ವಾಚ್‌ಗಳ (Smartwatch) ವಿಭಾಗದಲ್ಲಿ ಅತ್ಯಂತ ಪ್ರೀಮಿಯಂ ಆಯ್ಕೆಯನ್ನು ಹೊಂದಿರುವ ಒನ್‌ಪ್ಲಸ್‌ನ ಸ್ಮಾರ್ಟ್‌ವಾಚ್ (OnePlus smartwatch) ಕೆಲವೇ ವಾರಗಳಲ್ಲಿ ಲಾಂಚ್ ಆಗಲಿದೆ. ಈ ಸ್ಮಾರ್ಟ್‌ವಾಚ್ ಲಾಂಚ್ ಆಗುವ ಮುನ್ನವೇ ಇದರ ಪ್ರಮುಖ ಫೀಚರ್ಸ್ ಲೀಕ್ ಆಗಿವೆ.
ಹೌದು, ಒನ್‌ಪ್ಲಸ್ ವಾಚ್ 2 ಸ್ಮಾರ್ಟ್‌ವಾಚ್ ವೃತ್ತಾಕಾರದ ಡಿಸ್‌ಪ್ಲೇ ಆಯ್ಕೆಯೊಂದಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ. ಅಂದರೆ 2024 ರಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ವಿಷಯ ಏನೆಂದರೆ ಅಧಿಕೃತವಾಗಿ ಒನ್‌ಪ್ಲಸ್ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ ಅತ್ಯದ್ಭುತ ಫೀಚರ್ಸ್ ಆಯ್ಕೆ ಹೊಂದಿರಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್ ಏನೆಲ್ಲಾ ಫೀಚರ್ಸ್ ಹೊಂದಿರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್ ವಾಚ್ 2: ವರದಿಯ ಪ್ರಕಾರ ಈ ಸ್ಮಾರ್ಟ್‌ವಾಚ್ ವೃತ್ತಾಕಾರದ ಸಿಗ್ನೇಚರ್ ಶೈಲಿಯೊಂದಿಗೆ ಬರಲಿದೆ ಎನ್ನಲಾಗಿದೆ. ಕಂಪನಿಯು ತನ್ನ ಮೊದಲ ಒನ್‌ಪ್ಲಸ್ ವಾಚ್ ಅನ್ನು ಮೂರು ವರ್ಷಗಳ ಹಿಂದೆ ಅಂದರೆ 2021 ರಲ್ಲಿ ಲಾಂಚ್ ಮಾಡಿ ಗಮನಸೆಳೆದಿತ್ತು. ಈ ಹಿಂದಿನ ಮಾದರಿಗೆ ಹೋಲಿಸಿದರೆ ಒನ್‌ಪ್ಲಸ್ ವಾಚ್ 2 (OnePlus Watch 2) ಹಲವಾರು ನವೀಕರಣಗಳೊಂದಿಗೆ ಬರುತ್ತದೆ ಎನ್ನಲಾಗಿದೆ.
ಒನ್‌ಪ್ಲಸ್ ತನ್ನ ವಿನ್ಯಾಸದ ತತ್ತ್ವಶಾಸ್ತ್ರಕ್ಕೆ ಬದ್ಧವಾಗಿದೆ ಎಂದು ರೆಂಡರ್‌ಗಳು ಬಹಿರಂಗಪಡಿಸುತ್ತವೆ. ಅಂದರೆ ಲೋಹದ ಚಾಸಿಸ್‌ಆಯ್ಕೆ ಇದರಲ್ಲಿರಲಿದೆ. ಜೊತೆಗೆ ಯುಐ ಅನ್ನು ನ್ಯಾವಿಗೇಟ್ ಮಾಡಲು ಬಲಭಾಗದಲ್ಲಿ ಬಟನ್ ಆಯ್ಕೆ ನೀಡಲಾಗಿದೆ. ಇದು ಸರಳವಾದ ರಬ್ಬರ್ ಪಟ್ಟಿಗಳನ್ನು ಹೊಂದಿರಲಿದ್ದು, ಕ್ಲಾಸಿಕ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿರಲಿದೆ ಎಂದು ತಿಳಿದುಬಂದಿದೆ.

ಹಾಗೆಯೇ ಈ ವಾಚ್ 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ W5 ಜನ್ 1 ಚಿಪ್‌ಸೆಟ್‌ನಲ್ಲಿ ರನ್ ಆಗಲಿದೆ ಎಂದು ಹೇಳಲಾಗಿದೆ. ಈ ಮೂಲಕ ಮೃದುವಾದ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ. ಹಾಗೆಯೇ ಹ್ಯಾಂಡಿ ಚಾರ್ಜಿಂಗ್ ಕನೆಕ್ಟರ್ ಜೊತೆಗೆ ಡಿಸ್‌ಪ್ಲೇ ಅಡಿಯಲ್ಲಿ ಅಗತ್ಯ ಸೆನ್ಸರ್ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ವಿವಿಧ ಆರೋಗ್ಯ ಫೀಚರ್ಸ್ ಆಯ್ಕೆಯನ್ನು ಇದು ಹೊಂದಿರಲಿದೆ.
ಒನ್‌ಪ್ಲಸ್ ವಾಚ್ 2 ನ ಅತ್ಯಾಕರ್ಷಕ ಫೀಚರ್ಸ್ ಹೊರತಾಗಿ RTOS ಆಧಾರಿತ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಕೆಲವರಿಗೆ ಇದು ಇಷ್ಟವಾಗದೆ ಇರಬಹುದು. ಯಾಕೆಂದರೆ ಅನೇಕ ಸ್ಮಾರ್ಟ್‌ವಾಚ್‌ಗಳು ಗೂಗಲ್ ನ WearOS ಆಧಾರಿತ ಸಿಸ್ಟಮ್ ನಲ್ಲಿ ಕೆಲಸ ಮಾಡಲಿವೆ. ಪರಿಣಾಮ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ.
ಇನ್ನು WearOS ಪೂರ್ಣ ಪ್ರಮಾಣದ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಅದು ಗೂಗಲ್ ಅಸಿಸ್ಟೆಂಟ್, ಗೂಗಲ್ ಮ್ಯಾಪ್ಸ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಂತಹ ವ್ಯಾಪಕ ಶ್ರೇಣಿಯ ಫೀಚರ್ಸ್ ಆಯ್ಕೆ ನೀಡುತ್ತದೆ. ಇದು ಆಂಡ್ರಾಯ್ಡ್ ಮತ್ತು ಐಓಎಸ್ ಡಿವೈಸ್‌ಗಳೆರಡಕ್ಕೂ ಹೊಂದಿಕೆಯಾಗುತ್ತದೆ. ಹಾಗೆಯೇ ವ್ಯಾಪಕ ಶ್ರೇಣಿಯ ಥರ್ಡ್ ಪಾರ್ಟಿ ಆಪ್‌ಗಳನ್ನು ಬೆಂಬಲಿಸುತ್ತದೆ. ಆದರೆ RTOSಗಳು ಹಗುರವಾದ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಬೆಲೆಯ ಆಧಾರದ ಮೇಲೆ ವಿಶೇಷ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ಈ ನಡುವೆ ಕಳೆದ ತಿಂಗಳು ಬಿಡುಗಡೆಯಾದ ಒನ್‌ಪ್ಲಸ್ ಓಪನ್ ನಂತರ, ಮತ್ತೊಂದು ಪ್ರಮುಖ ಡಿವೈಸ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅದುವೇ ಒನ್‌ಪ್ಲಸ್ 12 (OnePlus 12). ಈ ಲಾಂಚ್ ಸಮಾರಂಭ ಮುಂದಿನ ತಿಂಗಳು ಚೀನಾದಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಜಾಗತಿಕವಾಗಿ ಮುಂದಿನ ವರ್ಷದ ಜನವರಿಯಲ್ಲಿ ಫೋನ್ ಲಭ್ಯವಿರಬಹುದು ಎಂದು ತಿಳಿದುಬಂದಿದೆ.
ಒನ್‌ಪ್ಲಸ್ ಮೈಕ್ರೋಬ್ಲಾಗಿಂಗ್ ಸೈಟ್ Weibo ನಲ್ಲಿ ಪೋಸ್ಟ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದ್ದು, ಈ ಫೋನ್ ಸೋನಿಯ LYT-808 ಪ್ರಾಥಮಿಕ ಸೆನ್ಸರ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದೆ. ಒನ್‌ಪ್ಲಸ್ ಮತ್ತು ಸೋನಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಹೊಸ ಸೆನ್ಸರ್ ಇದಾಗಿದೆ. ಇದು ಅದರ ವರ್ಗದಲ್ಲಿ ಅತ್ಯಂತ ಶಕ್ತಿಶಾಲಿ ಸೆನ್ಸರ್ ಎಂದು ಹೇಳಲಾಗುತ್ತದೆ ಮತ್ತು ಹಿಂದಿನ ತಲೆಮಾರಿನ ಒನ್‌ಪ್ಲಸ್ ಫ್ಲ್ಯಾಗ್‌ಶಿಪ್ ಫೋನ್‌ಗಳಿಗಿಂತ ಗಮನಾರ್ಹ ಬದಲಾವಣೆಯನ್ನು ಇದರಲ್ಲಿ ಕಾಣಬಹುದಾಗಿದೆ.


Click it and Unblock the Notifications