Home
ಸುದ್ದಿಜಾಲ

ಒನ್ ಪ್ಲಸ್ ಒನ್‌ಗೆ ಭಾರತದಲ್ಲಿ ಕೊಡಲಿ ಪೆಟ್ಟು

By Shwetha

ಭಾರತದಲ್ಲಿ ಒನ್ ಪ್ಲಸ್ ಒನ್ ಫೋನ್‌ನ ಮಾರಾಟ, ಆಮದು ಮತ್ತು ಮಾರುಕಟ್ಟೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಸಿನೋಜಿನ್ ಬ್ರ್ಯಾಂಡ್ ಅನ್ನು ಹೊಂದಿರುವ ಈ ಡಿವೈಸ್‌ನ ಜಾಹೀರಾತು ಮತ್ತು ಫೋನ್‌ಗೆ ಸಂಬಂಧಿಸಿದ ಯಾವುದೇ ಪ್ರಚಾರವನ್ನು ದೇಶದಲ್ಲಿ ಮಾಡಬಾರದೆಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.

ತಾತ್ಕಾಲಿಕ ನಿರ್ಬಂಧನೆಗೆ ಒಳಪಟ್ಟ ಒನ್ ಪ್ಲಸ್ ಒನ್

ಒನ್ ಪ್ಲಸ್ ಸಿನೋಜಿನ್ ಜೊತೆಗೆ ಮಾಡಿರುವ "ವಿಸ್ತೃತ ಸೇವೆಗಳು ಹಾಗೂ ಅಪ್ಲಿಕೇಶನ್ ವಿತರಣೆ ಒಪ್ಪಂದ" ವನ್ನು ಕಂಪೆನಿ ಉಲ್ಲಂಘಿಸುತ್ತಿದೆ ಎಂದು ತಡೆಯಾಜ್ಞೆ (ಮೈಕ್ರೋಮ್ಯಾಕ್ಸ್ ನ್ಯಾಯಾಲಯಕ್ಕೆ ಈ ವಿಷಯವನ್ನು ತಂದಿದೆ) ಯನ್ನು ಒನ್ ಪ್ಲಸ್ ಒನ್ ಮೇಲೆ ವಿಧಿಸಲಾಗಿದೆ. ಇದರ ಫಲಿತಾಂಶವಾಗಿ, ಎಲ್ಲಿಂದಲಾದರೂ ಒನ್ ಪ್ಲಸ್ ಒನ್ ಅನ್ನು ಆಮದು ಮಾಡುವುದು ಇಲ್ಲವೇ ಭಾರತದಲ್ಲಿ ಮಾರಾಟ ಮಾಡುವುದನ್ನು ತಡೆಯಾಜ್ಞೆಯು ನಿರ್ಭಂಧಿಸಿದೆ. ಬಾಕಿ ಉಳಿದಿರುವ ಒನ್ ಪ್ಲಸ್ ಒನ್ ಫೋನ್‌ಗಳನ್ನು ಮಾರಾಟ ಮಾಡಲು ನ್ಯಾಯಾಲಯ ಆದೇಶಿಸಿರುವುದು ಈ ಚೈನಾದ ಕಂಪೆನಿಗೆ ಧನಾತ್ಮಕ ಅಂಶವಾಗಿದೆ.

ಇದನ್ನೂ ಓದಿ: 2014 ರ ಅತ್ಯುತ್ತಮ ಗ್ಯಾಜೆಟ್ ಸಂಗ್ರಹ

ಈ ತಡೆಯಾಜ್ಞೆಯನ್ನು ಫೋನ್ ಮೇಲೆ ಎಲ್ಲಿಯವರೆಗೆ ವಿಧಿಸಲಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಇನ್ನೊಂದು ವರದಿಯ ಪ್ರಕಾರ ಮೈಕ್ರೋಮ್ಯಾಕ್ಸ್ ಕೂಡ ತನ್ನ ವೈಯು ಬ್ರ್ಯಾಂಡ್ ಫೋನ್ ಅನ್ನು ಡಿಸೆಂಬರ್ 18 ಕ್ಕೆ ಬಿಡುಗಡೆ ಮಾಡುವ ನಿಟ್ಟಿನಲ್ಲಿದ್ದು ಈ ಸಂಬಂಧವಾಗಿ ಒನ್ ಪ್ಲಸ್ ಒನ್ ಅನ್ನು ಸ್ವಲ್ಪ ದಿನಗಳವರೆಗೆ ನಿಷೇಧಿಸಲಾಗಿದೆಯೇ ಎಂಬುದು ತಿಳಿದು ಬರಬೇಕಾಗಿದೆ.

Best Mobiles in India

English summary
This article tells about OnePlus is premium news at the moment. It almost seems that no more than a few hours can pass before another OnePlus or OnePlus One story hits the headlines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+