ಒನ್‌ಪ್ಲಸ್ ನಾರ್ಡ್ CE 3 ಫೀಚರ್ಸ್ ಬಹಿರಂಗ; ಬೆಲೆ ನಿರೀಕ್ಷೆ ಏನು?
ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಹಾಗೂ ಹಲವು ಗ್ರಾಹಕರ ನೆಚ್ಚಿನ ಬ್ರ್ಯಾಂಡ್ ಆಗಿರುವ ಒನ್‌ಪ್ಲಸ್ ಕೆಲವು ದಿನಗಳಿಂದ ಒನ್‌ಪ್ಲಸ್ 11R ಮೂಲಕ ಮಾರುಕ್ಟಟೆಯಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಮತ್ತೊಂದು ಮೊಬೈಲ್ ಲಾಂಚ್ ಆಗಲಿದ್ದು, ಇದರ ಫೀಚರ್ಸ್ ಲೀಕ್ ಆಗಿವೆ.
ಹೌದು, ಸ್ಮಾರ್ಟ್‌ಫೋನ್ ವಲಯದಲ್ಲಿ ಒನ್‌ಪ್ಲಸ್ ಫೋನ್‌ಗಳಿಗೆ ದೊಡ್ಡ ಬೇಡಿಕೆ ಇದೆ. ಇದರ ನಡುವೆ ಹಲವಾರು ಒನ್‌ಪ್ಲಸ್ ಫೋನ್‌ಗಳು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಲಭ್ಯವಾಗುತ್ತಿದ್ದು, ಇವುಗಳ ಸಾಲಿಗೆ ವಿಶೇಷವಾಗಿ ಈಗ ಹೊಸ ಒನ್‌ಪ್ಲಸ್ ನಾರ್ಡ್CE 3 (Nord CE 3 ) ಸ್ಮಾರ್ಟ್‌ಫೋನ್ ಸೇರಿಕೊಳ್ಳಲಿ. ಈ ಫೋನ್ ಲಾಂಚ್ ಆಗುವ ಮುನ್ನವೇ ಭಾರೀ ಸದ್ದು ಮಾಡುತ್ತಿದ್ದು ಲೀಕ್ ಆದ ಮಾಹಿತಿ ಪ್ರಕಾರ ಏನೆಲ್ಲಾ ಫೀಚರ್ಸ್ ಹೊಂದಿದೆ ಎನ್ನುವುದನ್ನು ನೋಡೋಣ ಬನ್ನಿ.

ಒನ್‌ಪ್ಲಸ್ ನಾರ್ಡ್ CE 3 ನ ಡಿಸ್‌ಪ್ಲೇ ಹೇಗಿರಲಿದೆ?
ಲೀಕ್ ಆದ ಮಾಹಿತಿಯಂತೆ ನಾರ್ಡ್ CE 3 ಫೋನ್ 6.72 ಇಂಚಿನ ಅಮೋಲೆಡ್ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ ಬಯೋಮೆಟ್ರಿಕ್ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಇನ್‌ಡಿಸ್‌ಪ್ಲೇ ನಲ್ಲಿ ನೀಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಒನ್‌ಪ್ಲಸ್ ನಾರ್ಡ್ CE 3 ಪ್ರೊಸೆಸರ್ ಯಾವುದು?
ಒನ್‌ಪ್ಲಸ್ ನಾರ್ಡ್ CE 3 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 782G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದ್ದು, ಈ ಸ್ಮಾರ್ಟ್‌ಫೋನ್ 12GB RAM ಹಾಗೂ 256GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಒನ್‌ಪ್ಲಸ್ ನಾರ್ಡ್ CE 3 ಕ್ಯಾಮೆರಾ ರಚನೆ
ಇನ್ನು ಒನ್‌ಪ್ಲಸ್ ನಾರ್ಡ್ CE 3 ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ (IMX890) ಪ್ರಮುಖ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ರಚನೆ ಪಡೆದುಕೊಂಡಿರಲಿದೆ. ಹಾಗೆಯೇ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.
ಒನ್‌ಪ್ಲಸ್ ನಾರ್ಡ್ CE 3 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ
ಒನ್‌ಪ್ಲಸ್ ನಾರ್ಡ್ CE 3 ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರಲಿದ್ದು, ಇನ್ನುಳಿದಂತೆ 5G ಮತ್ತು NFC ಫೀಚರ್ಸ್‌ಗಳನ್ನು ಈ ಫೋನ್ ಹೊಂದಿರಲಿದೆ ಎನ್ನುವ ವರದಿಗಳು ದೃಢವಾಗಿವೆ.
ಒನ್‌ಪ್ಲಸ್ ನಾರ್ಡ್ CE 3 ಬೆಲೆ ಹಾಗೂ ಲಭ್ಯತೆ
ಒನ್‌ಪ್ಲಸ್ ನಾರ್ಡ್ CE 3 ಬೆಲೆ ಹಾಗೂ ಯಾವಾಗ ಲಾಂಚ್ ಆಗುತ್ತದೆ ಎನ್ನುವ ಬಗ್ಗೆ ನಿಖರ ಹಾಗೂ ಯಾವುದೇ ಲೀಕ್ ಮಾಹಿತಿಗಳು ಲಭ್ಯವಿಲ್ಲವಾದರೂ ಸಹ ಈ ಫೋನ್ 20,000 ರಿಂದ 25,000 ರೂ.ಗಳ ಬೆಲೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ ಈ ಹಿಂದೆ ಲಾಂಚ್ ಆದ ಒನ್‌ಪ್ಲಸ್ ನಾರ್ಡ್CE 2 ಟಾಪ್ ವೇರಿಯಂಟ್ 23,999 ರೂ. ಗಳಿಗೆ ಲಾಂಚ್ ಆಗಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.

ಇದರೊಂದಿಗೆ ಒನ್‌ಪ್ಲಸ್ ನಾರ್ಡ್ 3 ನ ಫೀಚರ್ಸ್ ಸಹ ಸೋರಿಕೆಯಾಗಿದ್ದು, ಈ ಫೋನ್ ಜೂನ್ ಅಥವಾ ಜುಲೈನಲ್ಲಿ ಭಾರತದಲ್ಲಿ ಲಾಂಚ್ ಆಗಬಹುದು ಎನ್ನಲಾಗಿದೆ. ಅದರಂತೆ ಈ ಫೋನ್ 6.72 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ನೀಡಲಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 5,000 mAhಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ.ಜೊತೆಗೆ ಇದಕ್ಕೆ 35,000 ರೂ. ಗಳ ಬೆಲೆ ಇರಬಹುದು.


Click it and Unblock the Notifications