Home
ಸುದ್ದಿಜಾಲ

ಇಂದು ಒನ್‌ಪ್ಲಸ್‌ ಟಿವಿ 50 Y1S ಪ್ರೊ ಫಸ್ಟ್‌ ಸೇಲ್‌; ಇದೆ ಭರ್ಜರಿ ಆಫರ್!

ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ ಟಿವಿ ಕೆಲವೊಂದು ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಟಿವಿಯು ಇಂದು (ಜುಲೈ 7) ಇ ಕಾಮರ್ಸ್‌ ತಾಣ ಅಮೆಜಾನ್‌ ಹಾಗೂ ಒನ್‌ಪ್ಲಸ್‌.ಇನ್‌ ತಾಣಗಳಲ್ಲಿ ಮಾರಾಟ ಪ್ರಾರಂಭಿಸಲಿದೆ. ಈ ಸ್ಮಾರ್ಟ್‌ಟಿವಿಯ 50 ಇಂಚಿನ 4K ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಒಳಗೊಂಡಿದೆ.

ಕ್ರೋಮ್‌ಕಾಸ್ಟ್‌

ಹೌದು, ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿಯು ಇಂದು ಮಾರಾಟ ಶುರು ಮಾಡಲಿದೆ. ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್‌ ಓಎಸ್‌ ಸಪೋರ್ಟ್‌ ಪಡೆದಿದ್ದು, ಕ್ರೋಮ್‌ಕಾಸ್ಟ್‌, ಗೂಗಲ್‌ ಅಸಿಸ್ಟಂಟ್‌ ಬೆಂಬಲ ಹೊಂದಿದೆ. ಹಾಗೆಯೇ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌ ವಿಡಿಯೋ ಹಾಗೂ ಯೂಟ್ಯೂಬ್‌ ತಾಣಗಳನ್ನು ಸಹ ಒಳಗೊಂಡಿದೆ. ಹಾಗೆಯೇ ಗ್ರಾಹಕರು ಇದರಲ್ಲಿ 230+ ಲೈವ್ ಚಾನಲ್‌ಗಳನ್ನು ಸಹ ಪಡೆಯುತ್ತಾರೆ.

ಆಧರಿಸಿದೆ

ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ HDR10+, HDR10, ಮತ್ತು HLG ಫಾರ್ಮ್ಯಾಟ್‌ಗೆ ಬೆಂಬಲವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿಯು ಸಹ ಆಂಡ್ರಾಯ್ಡ್ ಟಿವಿಯನ್ನು ಆಧರಿಸಿದೆ. ಇದು ಆಟೋ ಕಡಿಮೆ ಲೇಟೆನ್ಸಿ ಮೋಡ್ ಮತ್ತು ಸ್ಮಾರ್ಟ್ ಮ್ಯಾನೇಜರ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ಮಲ್ಟಿಕಾಸ್ಟ್‌ ಮತ್ತು ಗೂಗಲ್‌ ಡ್ಯೂ ಬೆಂಬಲವನ್ನು ಕೂಡ ಹೊಂದಿದೆ.

ಬ್ಯಾಂಕ್‌ಗಳ

ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿಯು 32,999 ರೂ.ಆಗಿದೆ. ಇನ್ನು ಕೆಲವು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಫೋನ್ ಖರೀದಿಸಿದರೇ, 3,000ರೂ. ಗಳ ರಿಯಾಯಿತಿ ಸಿಗಲಿದೆ. ಪ್ರಮುಖ ಬ್ಯಾಂಕ್‌ಗಳಿಂದ ನೋ ಕಾಸ್ಟ್ ಇಎಮ್‌ಐ ಸೌಲಭ್ಯ ಸಹ ದೊರೆಯಲಿದೆ. ಹಾಗಾದರೇ ಇನ್ನುಳಿದಂತೆ ಈ ಸ್ಮಾರ್ಟ್‌ ಟಿವಿಯು ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸ್ಮಾರ್ಟ್‌ಟಿವಿಯಲ್ಲಿ

ಒನ್‌ಪ್ಲಸ್‌ ಟಿವಿ 50 Y1S ಪ್ರೊ 50 ಇಂಚಿನ 4K UHD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಗಾಮಾ ಎಂಜಿನ್‌ ಅನ್ನು ಪ್ರೀ ಲೋಡ್‌ ಮಾಡಲಾಗಿದೆ. ಇದು ಮೋಷನ್ ಎಸ್ಟಿಮೇಶನ್, ಮೋಷನ್ ಕಾಂಪೆನ್ಸೇಶನ್ (MEMC) ತಂತ್ರಜ್ಞಾನವನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಮಲ್ಟಿಕಾಸ್ಟ್‌ ಮತ್ತು ಗೂಗಲ್‌ ಡ್ಯೂ ಬೆಂಬಲವನ್ನು ಕೂಡ ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ಎರಡು ಫುಲ್‌ ರೇಂಜ್‌ ಸ್ಪೀಕರ್‌ಗಳನ್ನು ನೀಡಲಾಗಿದ್ದು, ಒಟ್ಟು 24W ಔಟ್‌ಪುಟ್ ಅನ್ನು ನೀಡುತ್ತದೆ. ಇದಲ್ಲದೆ, ಒನ್‌ಪ್ಲಸ್‌ ಟಿವಿ 50 Y1S ಪ್ರೊ ಡಾಲ್ಬಿ ಆಡಿಯೊ ಬೆಂಬಲವನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌

ಇನ್ನು ಒನ್‌ಪ್ಲಸ್‌ ಟಿವಿ 50 Y1S ಪ್ರೊ ಆಕ್ಸಿಜನ್‌ಪ್ಲೇ 2.0 ಹೊಂದಿದೆ. ಇದು 230 ಲೈವ್ ಚಾನಲ್‌ಗಳಿಗೆ ಪ್ರವೇಶವನ್ನು ನೀಡಲಿದೆ ಎಂದು ಹೇಳಲಾಗಿದೆ. ಅಲ್ಲದೆ ಸ್ಮಾರ್ಟ್‌ಟಿವಿಗೆ ಸ್ಮಾರ್ಟ್‌ಫೋನ್‌ ಅನ್ನು ಕನೆಕ್ಟ್‌ ಮಾಡುವುದಕ್ಕೆ ಮತ್ತು ರಿಮೋಟ್‌ ಕಂಟ್ರೋಲ್‌ ಆಗಿ ಫೋನ್‌ ಅನ್ನು ಬಳಸುವುದಕ್ಕೆ ಅವಕಾಶವಿದೆ. ಇದಕ್ಕಾಗಿ ಒನ್‌ಪ್ಲಸ್‌ ಕನೆಕ್ಟ್‌ 2.0ಯಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿರುವ ಕಂಟೆಂಟ್‌ ಅನ್ನು ಟಿವಿಯಲ್ಲಿ ವಾಚ್‌ ಮಾಡುವುದಕ್ಕೆ ಕ್ರೊಮ್‌ಕಾಸ್ಟ್‌ ಬೆಂಬಲ ಮತ್ತು DLNA ಮತ್ತು Miracast ಅನ್ನು ಹೊಂದಿದೆ.

ಅಲೆಕ್ಸಾವನ್ನು

ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ಗೂಗಲ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದ್ದು, ಧ್ವನಿ ಆಜ್ಞೆಗಳನ್ನು ಕೂಡ ಬೆಂಬಲಿಸಲಿದೆ. ಇದಲ್ಲದೆ, ಬಳಕೆದಾರರು ಈ ಸ್ಮಾರ್ಟ್ ಟಿವಿಯಲ್ಲಿ ಅಲೆಕ್ಸಾವನ್ನು ಸಹ ಪ್ರವೇಶಿಸಬಹುದು. ಈ ಸ್ಮಾರ್ಟ್‌ಟಿವಿ 2GB RAM ಮತ್ತು 8GB ಆನ್‌ಬೋರ್ಡ್ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನು HDMI ಮೂಲಕ ತಮ್ಮ ಗೇಮಿಂಗ್ ಕನ್ಸೋಲ್ ಅನ್ನು ಸ್ಮಾರ್ಟ್‌ಟಿವಿಗೆ ಕನೆಕ್ಟ್‌ ಮಾಡಬಹುದಾಗಿದೆ. ಇದಕ್ಕಾಗಿ ಬಳಕೆದಾರರು ALLM ಫೀಚರ್ಸ್‌ ಪ್ರವೇಶಿಸಲು ಅನುಮತಿಸುವ ಗೇಮ್ ಮೋಡ್‌ ಅನ್ನು ಪ್ರೀ ಲೋಡ್‌ ಮಾಡಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ಪೋಷಕರು ತಮ್ಮ ಮಕ್ಕಳ ವೀಕ್ಷಣೆಯನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಕಿಡ್ಸ್ ಮೋಡ್ ಅನ್ನು ಸಹ ಒಳಗೊಂಡಿದೆ.

ಔಟ್‌ಪುಟ್

ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 802.11 a/b/g/n, ಬ್ಲೂಟೂತ್ v5.0, ಮೂರು HDMI 2.1, ಎರಡು USB 2.0, RJ45 ಈಥರ್ನೆಟ್, ಆಪ್ಟಿಕಲ್ ಆಡಿಯೊ ಔಟ್‌ಪುಟ್ ಮತ್ತು AV (ಸಂಯೋಜಿತ) ಇನ್‌ಪುಟ್ ಸೇರಿವೆ. ಇನ್ನು ಹೆಚ್ಚುವರಿಯಾಗಿ, ಒನ್‌ಪ್ಲಸ್‌ ಟಿವಿ ಒನ್‌ಪ್ಲಸ್‌ ಬಡ್ಸ್ ಮತ್ತು ಒನ್‌ಪ್ಲಸ್‌ ಬಡ್ಸ್ ಪ್ರೊ ಜೊತೆಗೆ ವರ್ಧಿತ ಸಂಪರ್ಕವನ್ನು ಒದಗಿಸುತ್ತದೆ. ಇದರಿಂದ ನೀವು ಇಯರ್‌ಬಡ್ಸ್‌ ರಿಮೂವ್‌ ಮಾಡಿದಾಗ ಆನ್-ಸ್ಕ್ರೀನ್ ವಿಷಯವನ್ನು ಆಟೋಮ್ಯಾಟಿಕ್‌ ವಿರಾಮಗೊಳಿಸುತ್ತದೆ. ಅಲ್ಲದೆ ಟಿವಿಯಲ್ಲಿ 'ಕನೆಕ್ಟ್' ಬಟನ್ ಒತ್ತಿದರೆ ಇಯರ್‌ಬಡ್‌ಗಳನ್ನು ಸ್ವಯಂಚಾಲಿತವಾಗಿ ಸಂಪರ್ಕಿಸಬಹುದಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ಬೆಲೆ 32,999ರೂ.ಆಗಿದೆ. ಈ ಸ್ಮಾರ್ಟ್ ಟಿವಿಯು ಅಮೆಜಾನ್‌, ಒನ್‌ಪ್ಲಸ್‌.ಇನ್‌, ಒನ್‌ಪ್ಲಸ್‌ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ದೇಶದ ಪ್ರಮುಖ ಆಫ್‌ಲೈನ್ ಪಾಲುದಾರ ಅಂಗಡಿಗಳಲ್ಲಿ ಜುಲೈ 7 ರಿಂದ ಮಾರಾಟವಾಗಲಿದೆ.

ಲಾಂಚ್ ಕೊಡುಗೆ ಏನಿದೆ?

ಲಾಂಚ್ ಕೊಡುಗೆ ಏನಿದೆ?

ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ಲಾಂಚ್‌ ಆಫರ್‌ನಲ್ಲಿ 3,000ರೂ.ವರೆಗೆ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಒಳಗೊಂಡಿದೆ. ಇದು ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಬಳಸಿ ಖರೀದಿ ಮಾಡುವವರಿಗೆ ದೊರೆಯಲಿದೆ. ಇನ್ನು ಅಮೆಜಾನ್‌ ಮತ್ತು ಒನ್‌ಪ್ಲಸ್‌.ಇನ್‌ನಲ್ಲಿ ಒಂಬತ್ತು ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಆಫ್‌ಲೈನ್ ರಿಟೇಲ್‌ ವ್ಯಾಪಾರಿಗಳ ಮೂಲಕ ಟಿವಿಯನ್ನು ಖರೀದಿಸುವ ಗ್ರಾಹಕರು ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಮೂಲಕ ನೋ ಕಾಸ್ಟ್‌ EMI ಆಯ್ಕೆಗಳನ್ನು ಪಡೆಯಬಹುದು. ಜೊತೆಗೆ ಅಮೆಜಾನ್ ಗ್ರಾಹಕರು ಇ-ಕಾಮರ್ಸ್ ವೆಬ್‌ಸೈಟ್ ಮೂಲಕ ಟಿವಿ ಖರೀದಿಸಿದ ನಂತರ 12 ತಿಂಗಳವರೆಗೆ ಕಾಂಪ್ಲಿಮೆಂಟರಿ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

Best Mobiles in India

English summary
The OnePlus TV 50 Y1S Pro TV is priced at Rs 32,999. You can purchase the TV on Amazon starting at 12 noon today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+