Home
ಸುದ್ದಿಜಾಲ

ಒನ್‌ಪ್ಲಸ್‌ ಸಂಸ್ಥೆಯಿಂದ ದೈತ್ಯ ಸ್ಮಾರ್ಟ್‌ಟಿವಿ ಬಿಡುಗಡೆ; ಬೆಲೆ, ಫೀಚರ್ಸ್‌ ತಿಳಿಯಿರಿ!

ಜನಪ್ರಿಯ ಒನ್‌ಪ್ಲಸ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಜೊತೆಗೆ ಒನ್‌ಪ್ಲಸ್‌ ಪ್ಯಾಡ್‌, ಒನ್‌ಪ್ಲಸ್‌ ಬಡ್ಸ್‌ ಪ್ರೊ 2 ಡಿವೈಸ್‌ಗಳನ್ನು ಅನಾವರಣ ಮಾಡಿದ್ದು, ಇದರೊಂದಿಗೆ ಹೊಸ ಸ್ಮಾರ್ಟ್‌ಟಿವಿಯನ್ನು ಸಹ ಲಾಂಚ್ ಮಾಡಿದೆ. ಹೊಸ ಟಿವಿಯು ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ.

ಒನ್‌ಪ್ಲಸ್‌ ಸಂಸ್ಥೆಯಿಂದ ದೈತ್ಯ ಸ್ಮಾರ್ಟ್‌ಟಿವಿ ಬಿಡುಗಡೆ; ಬೆಲೆ ಎಷ್ಟು?

ಹೌದು, ಒನ್‌ಪ್ಲಸ್‌ ಸಂಸ್ಥೆಯು ಒನ್‌ಪ್ಲಸ್‌ ಟಿವಿ Q2 ಪ್ರೊ 65 ಇಂಚಿನ (OnePlus TV Q2 Pro 65) ಸ್ಮಾರ್ಟ್‌ ಟಿವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಟಿವಿಯು 4K ಪಿಕ್ಸಲ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದ್ದು, 70W ಸ್ಪೀಕರ್‌ ಸೌಲಭ್ಯ ಪಡೆದಿದೆ. ಮುಂಭಾಗದಲ್ಲಿ ನಾಲ್ಕು ಸ್ಪೀಕರ್‌ಗಳು ಹಾಗೂ ಟಿವಿಯ ಸೈಡ್‌ನಲ್ಲಿ ಎರಡು ಸ್ಪೀಕರ್‌ಗಳ ರಚನೆಯನ್ನು ಈ ಟಿವಿ ಪಡೆದಿದೆ.

ಒನ್‌ಪ್ಲಸ್‌ ಸಂಸ್ಥೆಯಿಂದ ದೈತ್ಯ ಸ್ಮಾರ್ಟ್‌ಟಿವಿ ಬಿಡುಗಡೆ; ಬೆಲೆ ಎಷ್ಟು?

ಒನ್‌ಪ್ಲಸ್‌ ಟಿವಿ Q2 ಪ್ರೊ : ಡಿಸ್‌ಪ್ಲೇ ಫೀಚರ್ಸ್‌

ಒನ್‌ಪ್ಲಸ್‌ ಸಂಸ್ಥೆಯ ಹೊಸ ಸ್ಮಾರ್ಟ್ ಟಿವಿಯು 4K ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1200 nits ಬ್ರೈಟ್ನೆಸ್‌ ಅನ್ನು ಹೊಂದಿದೆ. ಇದು 65 ಇಂಚಿನ QLED ಡಿಸ್‌ಪ್ಲೇ ಪ್ಯಾನೆಲ್ ಅನ್ನು ಒಳಗೊಂಡಿದ್ದು, ಡಿಸ್‌ಪ್ಲೇ ಫಲಕವು 97% DCI-P3 ಬಣ್ಣದ ಹರವುಗಳನ್ನು ಪಡೆದಿದೆ. ನಿಖರವಾದ ಬೆಳಕು ಮತ್ತು ನೆರಳುಗಳಿಗಾಗಿ 120 ಸ್ಥಳೀಯ ಮಬ್ಬಾಗಿಸುವಿಕೆ ಸೌಲಭ್ಯವನ್ನು ಈ ಟಿವಿಯು ಹೊಂದಿದೆ. ಇದು ಒಟ್ಟಾರೆ ದೃಶ್ಯದ ಗುಣಮಟ್ಟವನ್ನು ಹೆಚ್ಚಿಸುವ ಗಾಮಾ ಎಂಜಿನ್ ಅಲ್ಟ್ರಾವನ್ನು ಸಹ ಪಡೆದಿದ್ದು, ಜೊತೆಗೆ ಇದು ಡಾಲ್ಬಿ ವಿಷನ್ ಮತ್ತು HDR 10+ ಪ್ರಮಾಣೀಕೃತವಾಗಿದೆ.

ಒನ್‌ಪ್ಲಸ್‌ ಟಿವಿ Q2 ಪ್ರೊ : ಸೌಂಡ್‌ ಮತ್ತು ಸ್ಪೀಕರ್‌

65 ಇಂಚಿನ ಒನ್‌ಪ್ಲಸ್‌ ಟಿವಿ Q2 ಪ್ರೊ ಟಿವಿಯು 70W ಸ್ಪೀಕರ್ ರಚನೆಯನ್ನು ಒಳಗೊಂಡಿದ್ದು, ಇದು 40W ಸೌಂಡ್‌ಬಾರ್ ಅನ್ನು ಪಡೆದಿದೆ. ಇವುಗಳಲ್ಲಿ ನಾಲ್ಕು ಮುಂಭಾಗದ ಸ್ಪೀಕರ್‌ಗಳು ಇದ್ದು, ಹಾಗೆಯೇ ಒಂದು ಜೋಡಿ ಸೈಡ್-ಫೇಸಿಂಗ್ ಸ್ಪೀಕರ್‌ಗಳ ರಚನೆ ಸಹ ಇದೆ. ಅಧಿಕ ಬಾಸ್ ಅನ್ನು ಉತ್ಪಾದಿಸಲು ಸಹಾಯ ಮಾಡುವ 30W ಸಬ್ ವೂಫರ್ ಅನ್ನು ಸಹ ಪಡೆದುಕೊಂಡಿದೆ. ಒನ್‌ಪ್ಲಸ್‌ ಸಂಸ್ಥೆಯು ತನ್ನ ಇತ್ತೀಚಿನ ಟಿವಿಗಾಗಿ DYN ಆಡಿಯೊ ಜೊತೆ ಪಾಲುದಾರಿಕೆ ಹೊಂದಿದೆ.

ಒನ್‌ಪ್ಲಸ್‌ ಟಿವಿ Q2 ಪ್ರೊ : ಸೌಂಡ್‌ ಮತ್ತು ಸ್ಪೀಕರ್‌

ಒನ್‌ಪ್ಲಸ್‌ ಈ ನೂತನ ಸ್ಮಾರ್ಟ್‌ ಟಿವಿಯು MT9617 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಅಲ್ಟ್ರಾ-ರೆಸ್ಪಾನ್ಸಿವ್ ಆಗಿದೆ ಎಂದಿದೆ. ಇನ್ನು ಈ ಸ್ಮಾರ್ಟ್‌ ಟಿವಿಯು ಗೂಗಲ್‌ ಟಿವಿ ಸಪೋರ್ಟ್ ಮಾಡುತ್ತೆ, ಅಲ್ಲದೇ ಆಂಡ್ರಾಯ್ಡ್ ಟಿವಿ 11 ಓಎಸ್‌ ಅನ್ನು ಪಡೆದಿದೆ. ಹಾಗೆಯೇ ಈ ಟಿವಿಯು ಇತ್ತೀಚಿನ ಟಿವಿಯಲ್ಲಿ ಬೆಂಬಲಿಸುವ OxygenPlay 2.0 ಅನ್ನು ಸಹ ಒಳಗೊಂಡಿದೆ.

ಒನ್‌ಪ್ಲಸ್‌ ಸಂಸ್ಥೆಯಿಂದ ದೈತ್ಯ ಸ್ಮಾರ್ಟ್‌ಟಿವಿ ಬಿಡುಗಡೆ; ಬೆಲೆ ಎಷ್ಟು?

ಒನ್‌ಪ್ಲಸ್‌ ಟಿವಿ Q2 ಪ್ರೊ : ಬೆಲೆ ಎಷ್ಟು ಮತ್ತು ಲಭ್ಯತೆ

ಭಾರತದಲ್ಲಿ ಬೆಲೆಯು 99,999ರೂ. ಆಗಿದೆ. ಇದೇ ಮಾರ್ಚ್ 6 ರಿಂದ ಈ ಸ್ಮಾರ್ಟ್‌ಟಿವಿಯು ಪ್ರಿ-ಆರ್ಡರ್ ಲಭ್ಯವಾಗಲಿದ್ದು, ಮಾರ್ಚ್‌ 10 ರಿಂದ ಅಧಿಕೃತ ಒನ್‌ಪ್ಲಸ್‌ ವೆಬ್‌ಸೈಟ್‌ನಲ್ಲಿ ಖರೀದಿಗೆ ದೊರೆಯುತ್ತದೆ.

ಭಾರತದಲ್ಲಿ ಒನ್‌ಪ್ಲಸ್‌ 11R ಲಾಂಚ್

ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್‌ 6.74 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಟಿವಿಯು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8+ Gen 1 5G SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಇದು ಆಂಡ್ರಾಯ್ಡ್ 13 ಬೆಂಬಲ ಪಡೆದಿದೆ. ಹಾಗೆಯೇ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W SUPERVOOC S ಫ್ಲಾಶ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
OnePlus TV Q2 Pro 65 will be available for purchase starting March 10 in India. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+