OnePlus: ಲಾಂಚ್ ಆಗುವ ಮುನ್ನವೇ ಒನ್‌ಪ್ಲಸ್ ವಾಚ್ 2 ಬೆಲೆ ಮಾಹಿತಿ ಲೀಕ್: ಏನೆಲ್ಲಾ ಫೀಚರ್ಸ್ ಇರಲಿವೆ?
ಒನ್‌ಪ್ಲಸ್ (OnePlus) ಕೇವಲ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಇತರೆ ಸ್ಮಾರ್ಟ್ ಡಿವೈಸ್‌ಗಳ ಮೂಲಕವೂ ಸಹ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡುತ್ತಿದೆ. ಅದರಲ್ಲೂ ಭಾರತದಲ್ಲಿ ಒನ್‌ಪ್ಲಸ್‌ನ ಸ್ಮಾರ್ಟ್ ಡಿವೈಸ್‌ಗಳಿಗೆ ಬಹು ಬೇಡಿಕೆ ಇದ್ದು, ಈ ನಡುವೆ ಇಂದು ಲಾಂಚ್ ಆಗುವ ಒನ್‌ಪ್ಲಸ್ ವಾಚ್ 2 ಬೆಲೆ ಮಾಹಿತಿ ಲೀಕ್ ಆಗಿದೆ.
ಹೌದು, ಒನ್‌ಪ್ಲಸ್ ವಾಚ್ 2 ಸ್ಮಾರ್ಟ್‌ವಾಚ್‌ನ (OnePlus Watch 2 smartwatch) ಭಾರತದಲ್ಲಿನ ಬೆಲೆ ಬಹಿರಂಗವಾಗಿದೆ. ಈ ಸ್ಮಾರ್ಟ್‌ವಾಚ್ ಬ್ಲ್ಯಾಕ್ ಸ್ಟೀಲ್ ಮತ್ತು ರೇಡಿಯಂಟ್ ಸ್ಟೀಲ್ ಬಣ್ಣಗಳಲ್ಲಿ ಲಭ್ಯ ಇರಲಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ W5 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಲಿದೆ. ಹಾಗಿದ್ರೆ, ತಡಯಾಕೆ ಬನ್ನಿ ಈ ವಾಚ್‌ನ ನಿರೀಕ್ಷಿತ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿ ತಿಳಿಯೋಣ.

ಒನ್‌ಪ್ಲಸ್ ವಾಚ್ 2 ಸ್ಮಾರ್ಟ್‌ವಾಚ್: ಒನ್‌ಪ್ಲಸ್ ವಾಚ್ 2 ಅನ್ನು ಇಂದು ಬಾರ್ಸಿಲೋನಾದಲ್ಲಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ರಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅಧಿಕೃತ ಅನಾವರಣಕ್ಕೆ ಮುಂಚಿತವಾಗಿ, ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳ ವದಂತಿಯ ಬೆಲೆಗಳು ಮತ್ತು ಬಣ್ಣ ವೇರಿಯಂಟ್ ಮಾಹಿತಿ ಲೀಕ್ ಆಗಿವೆ. ಅದರಂತೆ X ನಲ್ಲಿ ಹಲವಾರು ಟಿಪ್‌ಸ್ಟರ್‌ಗಳು ಪೋಸ್ಟ್ ಈ ವಾಚ್ ಸಂಬಂಧ ಪೋಸ್ಟ್ ಮಾಡಿದ್ದು, ಭಾರತದಲ್ಲಿ 25,999ರೂ.ಗಳ ಬೆಲೆಯಲ್ಲಿ ಈ ವಾಚ್ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಒನ್‌ಪ್ಲಸ್ ಸ್ಮಾರ್ಟ್‌ವಾಚ್‌ನ ಬೆಲೆ ಯುಎಸ್ ನಲ್ಲಿ $299.99, ಇಯು ನಲ್ಲಿ €329 ಮತ್ತು ಯುಕೆ ನಲ್ಲಿ £299 ಇರಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ವೈರ್ ಆಗಿರುವ ಫೋಟೋದ ಪ್ರಕಾರ ಒನ್‌ಪ್ಲಸ್ ವಾಚ್ ಬ್ಲ್ಯಾಕ್ ಸ್ಟೀಲ್ ಮತ್ತು ರೇಡಿಯಂಟ್ ಸ್ಟೀಲ್ ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. ಆದಾಗ್ಯೂ, ವಾಚ್‌ನ ನಿಖರ ಫೀಚರ್ಸ್ ಮತ್ತು ನಿಜವಾದ ಬೆಲೆ ಇಂದು ಅಧಿಕೃತವಾದ ನಂತರವಷ್ಟೇ ತಿಳಿಯಲಿದೆ.

ಒನ್‌ಪ್ಲಸ್ ವಾಚ್ 2 ನಿರೀಕ್ಷಿತ ಫೀಚರ್ಸ್: ಹಲವು ಲೀಕ್ ಮಾಹಿತಿ ಮತ್ತು ಊಹಾಪೋಹಗಳ ಆಧಾರದ ಮೇಲೆ, ಒನ್‌ಪ್ಲಸ್ ವಾಚ್ 2 ಸ್ಮಾರ್ಟ್‌ವಾಚ್ 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದ್ದು, 600 ನಿಟ್ಸ್ ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆಯೊಂದಿಗೆ ಬರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ವಾಚ್ ಬಹುಶಃ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ W5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ಇನ್ನು ಈ ಸ್ಮಾರ್ಟ್ ವಾಚ್ ಮೂಲಕ ಬಳಕೆದಾರರು ಬ್ಲೂಟೂತ್ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದ್ದು, 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಆಯ್ಕೆ 100 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಸ್ಥಳ ಟ್ರ್ಯಾಕಿಂಗ್‌ಗಾಗಿ ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್ ಸೌಲಭ್ಯದೊಂದಿಗೆ ವಿಯರ್ ಓಎಸ್ 4 ನೊಂದಿಗೆ ಸ್ಮಾರ್ಟ್‌ವಾಚ್ ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ವಾಚ್ IP68 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರು ನಿರೋಧಕವಾಗಿದೆ ಎನ್ನಲಾಗಿದೆ.

ಒನ್‌ಪ್ಲಸ್ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಲಾಂಚ್ ಡೇಟ್ ಘೋಷಣೆ: ಈ ನಡುವೆ ಫೆಬ್ರವರಿ 28 ರಂದು ಭಾರತದಲ್ಲಿ ಒನ್‌ಪ್ಲಸ್ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಲಾಂಚ್ ಆಗಲಿದೆ ಎನ್ನಲಾಗಿದೆ. ಈ ವಿಶೇಷ ಆವೃತ್ತಿಯು ಒನ್‌ಪ್ಲಸ್ 12 ಸರಣಿಯ ಇತ್ತೀಚಿನ ಬಿಡುಗಡೆಯನ್ನು ಅನುಸರಿಸುತ್ತದೆ. ಇದು ಒನ್‌ಪ್ಲಸ್ 12 ಮತ್ತು ಒನ್‌ಪ್ಲಸ್ 12R ಎರಡನ್ನೂ ಒಳಗೊಂಡಿದ್ದು, ಈ ಫೋನ್ ಅನ್ನು ಈಗಾಗಲೇ ಚೀನಾದಲ್ಲಿ ಒನ್‌ಪ್ಲಸ್ ಏಸ್ 3 ಜೆನ್ಶಿನ್ ಇಂಪ್ಯಾಕ್ಟ್ (OnePlus Ace 3 Genshin Impact) ಎಂದು ಹೆಸರಿಟ್ಟು ಬಿಡುಗಡೆ ಮಾಡಲಾಗಿದೆ.


Click it and Unblock the Notifications








