Home
ಸುದ್ದಿಜಾಲ

OnePlus Watch 2: ಒನ್‌ಪ್ಲಸ್‌ ವಾಚ್ 2 ಶೀಘ್ರದಲ್ಲೇ ಲಾಂಚ್‌! ನಿರೀಕ್ಷಿತ ಫೀಚರ್ಸ್‌ ಏನು?

ಒನ್‌ಪ್ಲಸ್‌ನ (OnePlus) ಯಾವುದೇ ಡಿವೈಸ್‌ಗಳಿಗೂ ಸಹ ಭಾರೀ ಬೇಡಿಕೆ ಇದ್ದೇ ಇರುತ್ತದೆ. ಇತ್ತೀಚೆಗಷ್ಟೇ ಒನ್‌ಪ್ಲಸ್‌ ಓಪನ್‌ ಲಾಂಚ್‌ ಮಾಡುವ ಮೂಲಕ ಮಾರುಕಟ್ಟೆಯವಲಯದಲ್ಲಿ ಬಹಳ ಸದ್ದು ಮಾಡಿತ್ತು. ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ವಾಚ್‌ (OnePlus Smartwatch) ಲಾಂಚ್‌ ಮಾಡುವ ಮೂಲಕ ಸಂಚಲನ ಉಂಟು ಮಾಡಲು ಒನ್‌ಪ್ಲಸ್‌ ಮುಂದಾಗಿದೆ.

ಹೌದು, ಶೀಘ್ರದಲ್ಲೇ ಭಾರತದಲ್ಲಿ ಒನ್‌ಪ್ಲಸ್‌ ವಾಚ್ 2 ಸ್ಮಾರ್ಟ್‌ವಾಚ್‌ (OnePlus Watch 2 smartwatch) ಅನ್ನು ಲಾಂಚ್‌ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಸ್ಮಾರ್ಟ್‌ವಾಚ್‌ ಒನ್‌ಪ್ಲಸ್‌ನ ಎರಡನೇ ಸ್ಮಾರ್ಟ್‌ವಾಚ್ ಆಗಿದ್ದು, ಹೊಸ ಮಾದರಿಯು ಭಾರತೀಯ ಪ್ರಮಾಣೀಕರಣ ಸೈಟ್‌ನಲ್ಲಿ ಇದು ಕಾಣಿಸಿಕೊಂಡಿದೆ. ಹಾಗಿದ್ರೆ, ಈ ಪ್ರೀಮಿಯಂ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಯಾವಾಗ ಲಾಂಚ್‌ ಆಗಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್‌ ವಾಚ್ 2 ಶೀಘ್ರದಲ್ಲೇ ಲಾಂಚ್‌! ನಿರೀಕ್ಷಿತ ಫೀಚರ್ಸ್‌ ಏನು?

ಒನ್‌ಪ್ಲಸ್‌ ವಾಚ್ 2 ಸ್ಮಾರ್ಟ್‌ವಾಚ್‌: ಒನ್‌ಪ್ಲಸ್‌ ತನ್ನ ಎರಡನೇ ವಾಚ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ರೆಡಿಯಾಗಿದ್ದು, ಈ ಸ್ಮಾರ್ಟ್‌ವಾಚ್‌ ಮಾರ್ಚ್ 2021 ರಲ್ಲಿ ಮಾರುಕಟ್ಟೆಗೆ ಬಂದ ಒನ್‌ಪ್ಲಸ್‌ ವಾಚ್‌ನ ಉತ್ತರಾಧಿಕಾರಿಯಾಗಿದೆ. ಮೂಲ ಒನ್‌ಪ್ಲಸ್‌ ವಾಚ್ 1.39 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 2.5D ಕರ್ವ್ಡ್ ಗ್ಲಾಸ್ ರಕ್ಷಣೆಯೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ 14 ದಿನಗಳವರೆಗೆ ಗಮನಾರ್ಹವಾದ ಬ್ಯಾಟರಿ ಬ್ಯಾಕಪ್‌ ನೀಡಲಿದೆ. ಈ ನಡುವೆ ಎರಡನೇ ಸ್ಮಾರ್ಟ್‌ವಾಚ್‌ಗೆ ಎಲ್ಲಾ ತಯಾರಿ ನಡೆದಿದೆ.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಮಾದರಿ ಸಂಖ್ಯೆಯು OPWWE231 ಆಗಿದ್ದು, ಇದು ಉಡಾವಣಾ ದಿನಾಂಕವು ಸಮೀಪಿಸುತ್ತಿದೆ ಎಂಬ ವಿಷಯವನ್ನು ಸೂಚಿಸಿದೆ. ಅದರಲ್ಲೂ ಒನ್‌ಪ್ಲಸ್ 12 ಪ್ರಮುಖ ಸ್ಮಾರ್ಟ್‌ಫೋನ್ ಜೊತೆಗೆ 2024 ರಲ್ಲಿ ಇದನ್ನು ಲಾಂಚ್‌ ಮಾಡಬಹುದು ಎಂಬ ಮಾಹಿತಿ ಸಹ ತಿಳಿದುಬಂದಿದೆ. ಈ ಹೊಸ ಸ್ಮಾರ್ಟ್‌ವಾಚ್‌ ವೃತ್ತಾಕಾರದ ಡಿಸ್‌ಪ್ಲೇ ಹೊಂದಿರಲಿದ್ದು, ಕಸ್ಟಮ್ RTOS ಪ್ಲಾಟ್‌ಫಾರ್ಮ್ ಅನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಉಳಿದಂತೆ ಇತರೆ ಮಾಹಿತಿ ಬಹಿರಂಗವಾಗಿಲ್ಲ.

ಒನ್‌ಪ್ಲಸ್‌ ವಾಚ್ 2 ಶೀಘ್ರದಲ್ಲೇ ಲಾಂಚ್‌! ನಿರೀಕ್ಷಿತ ಫೀಚರ್ಸ್‌ ಏನು?

ಹಾಗೆಯೇ ಮೂಲ ಒನ್‌ಪ್ಲಸ್ ವಾಚ್ ಭಾರತದಲ್ಲಿ 16,999ರೂ.ಗಳಿಗೆ ಲಾಂಚ್‌ ಆಗಿತ್ತು. ಅದೇ ರೀತಿ ಈ ವಾಚ್‌ ಮಿಡ್‌ನೈಟ್ ಬ್ಲ್ಯಾಕ್, ಮೂನ್‌ಲೈಟ್ ಸಿಲ್ವರ್ ಅಥವಾ ಕೋಬಾಲ್ಟ್ ಲಿಮಿಟೆಡ್ ಆವೃತ್ತಿಯ ಆಯ್ಕೆಯನ್ನು ನೀಡಿತ್ತು. ಅಷ್ಟೇ ಅಲ್ಲದೆ ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದ್ದು, 5ATM ನೀರಿನ ಪ್ರತಿರೋಧವನ್ನೂ ಸಹ ಪಡೆಯುವ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ.

ಅಷ್ಟೇ ಅಲ್ಲದೆ ಈ ಸ್ಮಾರ್ಟ್‌ವಾಚ್‌ 405mAh ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಅದು ವಾರ್ಪ್ ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ 5.0, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಮತ್ತು ಬೀಡೌ ಸೇರಿವೆ. ಈ ಕಾರಣಕ್ಕೆ ಈ ವಾಚ್‌ಗಳಿಗೆ ಈ ಕ್ಷಣಕ್ಕೂ ಉತ್ತಮ ಬೇಡಿಕೆ ಇದೆ. ಇದರಿಂದ ಬಳಕೆದಾರರು ಹೊಸ ಹೊಸ ಅನುಭವ ಪಡೆದುಕೊಳ್ಳುತ್ತಿದ್ದಾರೆ.

ಅದರಲ್ಲೂ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ವೇರ್ 4100+ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಮೂಲ ವಾಚ್‌ 4GB ಸ್ಟೋರೇಜ್‌ ಮತ್ತು 1GB RAM ನಲ್ಲಿ ಬಳಕೆದಾರರಿಗೆ ಅತ್ಯುತ್ತಮ ಕಾರ್ಯಕ್ಷಮತೆ ನೀಡಲಿದೆ. ಇದರೊಂದಿಗೆ 100 ಕ್ಕೂ ಹೆಚ್ಚು ವರ್ಕ್‌ಔಟ್ ಮೋಡ್‌ಗಳು, ಹೃದಯ ಬಡಿತ ಮಾನಿಟರಿಂಗ್, ಬ್ಲಡ್ ಆಕ್ಸಿಜನ್ ಮಾನಿಟರಿಂಗ್, ಸ್ಲೀಪ್ ಟ್ರ್ಯಾಕಿಂಗ್ ಮತ್ತು ಸ್ಟ್ರೆಸ್ ಮಾನಿಟರಿಂಗ್ ಸೇರಿದಂತೆ ವಿವಿಧ ಫಿಟ್‌ನೆಸ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.

ಒನ್‌ಪ್ಲಸ್‌ ವಾಚ್ 2 ಶೀಘ್ರದಲ್ಲೇ ಲಾಂಚ್‌! ನಿರೀಕ್ಷಿತ ಫೀಚರ್ಸ್‌ ಏನು?

ಇನ್ನು ಹೊಸ ವಾಚ್ ವಿಚಾರಕ್ಕೆ ಬರುವುದಾದರೆ ಒನ್‌ಪ್ಲಸ್ ವಾಚ್ 2 ಸ್ಮಾರ್ಟ್‌ವಾಚ್‌ನಲ್ಲಿ‌ ಒನ್‌ಪ್ಲಸ್ ಉತ್ಸಾಹಿಗಳು ಮತ್ತು ಸ್ಮಾರ್ಟ್‌ವಾಚ್ ಅಭಿಮಾನಿಗಳು ಸಂಭಾವ್ಯ ಅಪ್‌ಗ್ರೇಡ್‌ಗಳು ಮತ್ತು ವರ್ಧನೆಗಳನ್ನು ಎದುರು ನೋಡಬಹುದು ಎಂದು ಲೀಕ್‌ ಮಾಹಿತಿಗಳ ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಈ ಮೂಲಕ ಯಾರೆಲ್ಲಾ ಪ್ರೀಮಿಯಂ ವಾಚ್‌ ಬೇಕು ಎನ್ನುತ್ತಾರೋ ಅವರು ಒನ್‌ಪ್ಲಸ್‌ ವಾಚ್‌ ಕಡೆ ಕಣ್ಣಾಯಿಸಬಹುದಾಗಿದೆ.

Best Mobiles in India

English summary
It is known that the OnePlus Watch 2 smartwatch will be launched in India soon. is the second smartwatch from OnePlus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+