ONIDA ಸ್ಮಾರ್ಟ್‌ಟಿವಿಗೆ 48% ರಿಯಾಯಿತಿ: ಬೊಂಬಾಟ್ ಫೀಚರ್ಸ್ ಆಯ್ಕೆ!
ಸ್ಮಾರ್ಟ್‌ಟಿವಿಗಳು ಇಂದು ಗ್ರಾಹಕರ ಬಹು ಬೇಡಿಕೆಯ ಡಿವೈಸ್‌ಗಳಾಗಿದ್ದು, ಹಲವಾರು ಬ್ರ್ಯಾಂಡ್ ಗಳು ವಿವಿಧ ಫೀಚರ್ಸ್ ಇರುವ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿವೆ. ಆದರೆ, ಕೆಲವು ಬ್ರ್ಯಾಂಡ್‌ನ ಟಿವಿಗಳು ಹೆಚ್ಚಿನ ಬೆಲೆ ಹೊಂದಿವೆಯಾದರೂ ನೀವು ಈ ಆಫರ್ ಮೂಲಕ ಅರ್ಧ ಬೆಲೆಗೆ ಈ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದು.
ಹೌದು, ಸ್ಮಾರ್ಟ್‌ಟಿವಿ ಇಂದು ಹಲವಾರು ರೀತಿಯಲ್ಲಿ ಬಳಕೆಗೆ ಬರುತ್ತಿದ್ದು, ಈ ನಡುವೆ ಐಪಿಎಲ್ ಸಹ ಆರಂಭವಾಗಿರುವುದರಿಂದ ಇವುಗಳಿಗೆ ಇನ್ನಿಲ್ಲದ ಬೇಡಿಕೆ ನಿರ್ಮಾಣ ಆಗಿದೆ. ಇದರೊಂದಿಗೆ ನೀವು ಒನಿಡಾ ಸ್ಮಾರ್ಟ್‌ಟಿವಿಯನ್ನು ಅರ್ಧ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಟಿವಿ 32 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಬರೋಬ್ಬರಿ 48% ಡಿಸ್ಕೌಂಟ್ ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ತಿಳಿಯೋಣ.

ಒನಿಡಾ ಸ್ಮಾರ್ಟ್ ವಿಡಾ ಟಿವಿ ಫೀಚರ್ಸ್: ಈ ಒನಿಡಾ ಸ್ಮಾರ್ಟ್ ವಿಡಾ ಟಿವಿ (ONIDA HD Ready LED Smart VIDAA TV) 32 ಇಂಚುಗಳ ಹೆಚ್‌ಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 1366x768p ಪಿಕ್ಸೆಲ್ ರೆಸಲ್ಯೂಶನ್ ಪಡೆದುಕೊಂಡಿದೆ. ಹಾಗೆಯೇ 60 Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ ಅತ್ಯುತ್ತಮವಾದ ಟಿವಿ ಎನಿಸಿಕೊಂಡಿದೆ.
ಇನ್ನುಳಿದಂತೆ A+ ದರ್ಜೆಯ ಪ್ಯಾನೆಲ್ ಇದಾಗಿದ್ದು, ಗರಿಗರಿಯಾದ ಮತ್ತು ಸ್ಫಟಿಕ-ಸ್ಪಷ್ಟ ಚಿತ್ರಗಳನ್ನು ಇದು ನೀಡಲಿದೆ. ಜೊತೆಗೆ ವ್ಯಾಪಕ ಶ್ರೇಣಿಯ ಬಣ್ಣಗಳನ್ನು ಇದು ಬೆಂಬಲಿಸಲಿದ್ದು, ಈ ಮೂಲಕ ಹೆಚ್ಚಿನ ಅನುಭವ ಪಡೆದುಕೊಳ್ಳಬಹುದು. ಇದಿಷ್ಟೇ ಅಲ್ಲದೆ ಇಷ್ಟೇ ಪ್ರಮಾಣದ ಆಫರ್‌ನೊಂದಿಗೆ ನೀವು 43 ಹಾಗೂ 55 ಇಂಚಿನ ಸ್ಮಾರ್ಟ್‌ಟಿವಿ ಸಹ ಖರೀದಿ ಮಾಡಬಹುದು.
ಈ ಸ್ಮಾರ್ಟ್‌ಟಿವಿ ಮಲ್ಟಿ-ಕೋರ್ ಪ್ರೊಸೆಸರ್‌ನೊಂದಿಗೆ ಪ್ಯಾಕ್ ಆಗಿದ್ದು, ಈ ಮೂಲಕ ವೇಗದ ವೆಬ್ ಬ್ರೌಸಿಂಗ್, ಅತ್ಯುತ್ತಮ ಸಂವಹನ ಮತ್ತು ಸರಳವಾದ ಬಹುಕಾರ್ಯಕವನ್ನು ಮಾಡಬಹುದಾಗಿದೆ. ಇನ್ನುಳಿದಂತೆ ಡಾಲ್ಬಿ ಆಡಿಯೋನೊಂದಿಗೆ, ಸ್ಪಷ್ಟವಾದ ಮತ್ತು ಉತ್ತಮ ಗುಣಮಟ್ಟದ ಸೌಂಡ್ ಅನ್ನು ಆಲಿಸಬಹುದು. ಹಾಗೆಯೇ ಸರೌಂಡ್ ಸೌಂಡ್ ಅನುಭವ ಸಹ ಈ ಟಿವಿಯಿಂದ ಲಭ್ಯ. ಇದೆಲ್ಲವನ್ನೂ ಒಳಗೊಂಡಂತೆ 20 W ಸೌಂಡ್ ಔಟ್‌ಪುಟ್ ಇದರಿಂದ ಲಭ್ಯ.

ಕನೆಕ್ಟಿವಿಟಿ ವಿಚಾರಕ್ಕೆ ಬರುವುದಾದರೆ ವೈ-ಫೈ ಹಾಗೂ ಬ್ಲೂಟೂತ್ ಆಯ್ಕೆಯೊಂದಿಗೆ ಎರಡು ಹೆಚ್‌ಡಿಎಮ್ಐ ಪೋರ್ಟ್ ಹಾಗೂ ಎರಡು ಯುಎಸ್‌ಬಿ ಪೋರ್ಟ್ ಆಯ್ಕೆಯನ್ನು ಪಡೆದುಕೊಂಡಿದೆ. ಈ ಪೋರ್ಟ್ ಆಯ್ಕೆಗಳು ಸ್ಮಾರ್ಟ್‌ಟಿವಿಯ ಬದಿಯಲ್ಲಿ ಕಾಣಿಸಿಕೊಂಡಿವೆ. ಇದರೊಂದಿಗೆ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಪ್ರೈಮ್ ವಿಡಿಯೋ ಸೇರಿದಂತೆ ಇನ್ನಿತರೆ ಆಪ್‌ಗಳಿಗೆ ಬೆಂಬಲ ಪಡೆದಿದೆ.
ಒನಿಡಾ ಸ್ಮಾರ್ಟ್ ವಿಡಾ ಟಿವಿಯ ಬೆಲೆ ಹಾಗೂ ಲಭ್ಯತೆ: ಪ್ರಮುಖವಾದ ವಿಷಯಕ್ಕೆ ಬರುವುದಾದರೆ ಈ ಸ್ಮಾರ್ಟ್‌ಟಿವಿ 23,490 ರೂ. ಗಳ ಮೂಲ ದರ ಹೊಂದಿದ್ದು, ನೀವು ಇದನ್ನು 11,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ 48% ರಿಯಾಯಿತಿಯ ಸೌಲಭ್ಯ ಪಡೆದುಕೊಳ್ಳಬಹುದು. ಇದರೊಂದಿಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 5% ಕ್ಯಾಶ್‌ಬ್ಯಾಕ್ ಲಭ್ಯ.

ಹಾಗೆಯೇ ಡೆಬಿಟ್ ಕಾರ್ಡ್ ಇಎಮ್‌ಐ ನಲ್ಲಿ ತಿಂಗಳಿಗೆ 743 ರೂ. ಗಳನ್ನು ಪಾವತಿ ಮಾಡುವ ಮೂಲಕವೂ ಈ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದು ಜೊತೆಗೆ ವಿನಿಮಯ ಆಫರ್ ಸಹ ಲಭ್ಯವಿದ್ದು, ಇದರಲ್ಲಿ ನೀವು 11,999 ರೂ. ಗಳ ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇಷ್ಟೆಲ್ಲಾ ಹೇಳಿದ ಮೇಲೆ ಈ ಸ್ಮಾರ್ಟ್‌ಟಿವಿ ಇಷ್ಟೊಂದು ಆಫರ್ ಬೆಲೆಯಲ್ಲಿ ಎಲ್ಲಿ ಲಭ್ಯ ಎಂದು ತಿಳಿದುಕೊಳ್ಳಲೇಬೇಕಲ್ಲವೇ. ಹೌದು, ನೀವು ಇದನ್ನು ಫ್ಲಿಪ್‌ಕಾರ್ಟ್ ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications