Home
ಸುದ್ದಿಜಾಲ

ನೀವು ಸಾಯುವ ದಿನ ತಿಳಿಸುವ 'ಆನ್‌ಲೈನ್‌ ಕ್ಯಾಲ್ಕುಲೇಟರ್ '

By Suneel

ಸಾಮಾನ್ಯವಾಗಿ ಕೆಲವರು ವಯಸ್ಸಾದವರನ್ನು ನೋಡಿ , 'ಅಯ್ಯೋ ಅವರ ಇವತ್ತೋ ನಾಳೇನೋ ಸಾಯುವ ಹಾಗೆ ಇದ್ದಾರೆ' ಅಂತ ಹೇಳೋದು ಉಂಟು. ಯಾರಿಗೆ ಗೊತ್ತು, ಕುಂಟುತ್ತಾ ತೆವಳುತ್ತಾ ಇದ್ದರೂ ಸಹ ಗಟ್ಟಿಯಾದವರಿಗಿಂತ ಬಹುಕಾಲ ಬದುಕುತ್ತಾರೆ. ಆದರೆ ನಿಖರವಾಗಿ ಇಂತಿಷ್ಟೇ ಕಾಲ ವ್ಯಕ್ತಿಯೂ ಬದುಕುತ್ತಾನೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಅಲ್ಲವೇ ? ಈ ಮಾಹಿತಿ ಸುಳ್ಳಾಗಬಹುದು.

ಓದರಿ : ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು

ವಿಜ್ಞಾನಿಗಳು, ಒಬ್ಬ ಮನುಷ್ಯ ಎಷ್ಟು ವರ್ಷಗಳ ಕಾಲ ಬದುಕುತ್ತಾನೆ ಎಂಬುದನ್ನು ತಿಳಿಯಲು ಟೆಕ್ನಾಲಜಿಯನ್ನು ಕಂಡುಹಿಡಿದಿದ್ದಾರೆ. ಹಾಗೂ ದೀರ್ಘ ಸಮಯ ಬದುಕಬೇಕಾದರೆ ಏನು ಮಾಡಬೇಕು ಎಂಬುದನ್ನು ಟೆಕ್ನಾಲಜಿಯೇ ತಿಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಿಮಗಾಗಿ ತಿಳಿಸುತ್ತಿದ್ದೇವೆ.

ಆನ್‌ಲೈನ್‌  ಕ್ಯಾಲ್ಕುಲೇಟರ್‌

ಆನ್‌ಲೈನ್‌ ಕ್ಯಾಲ್ಕುಲೇಟರ್‌

ಬಾಸ್ಟನ್‌ ಸ್ಕೂಲ್‌ ಆಫ್‌ ಮೆಡಿಷನ್‌ ವಿಶ್ವವಿದ್ಯಾಲಯದ, ಬಾಸ್ಟನ್‌ ಮೆಡಿಕಲ್‌ ಸೆಂಟರ್‌ನ ಮುಪ್ಪುಶಾಸ್ತ್ರಜ್ಞ (Geriatrician) "ಥಾಮಸ್‌ ಪರ್ಲ್ಸ್‌" ರವರು ಆನ್‌ಲೈನ್‌ ಕ್ಯಾಲ್ಕುಲೇಟರ್‌ ಒಂದನ್ನು ಅಭಿವೃದ್ದಿಪಡಿಸಿದ್ದು, ಅದು ವಿಜ್ಞಾನಿಗಳು ಹೇಗೆ ಬದುಕುವ ಜೀವಿತಾವಧಿಯನ್ನು ಅಂದಾಜಿಸಿ ಹೇಳುತ್ತಾರೆಯೋ ಹಾಗೆಯೇ ಈ ಆನ್‌ಲೈನ್‌ ಟೂಲ್‌ ವ್ಯಕ್ತಿಯೂ ಬದುಕುವ ಜೀವಿತಾವಧಿಯನ್ನು ಹೇಳುತ್ತದೆ.

ಆನ್‌ಲೈನ್‌  ಕ್ಯಾಲ್ಕುಲೇಟರ್‌

ಆನ್‌ಲೈನ್‌ ಕ್ಯಾಲ್ಕುಲೇಟರ್‌

ಆನ್‌ಲೈನ್‌ ಕ್ಯಾಲ್ಕುಲೇಟರ್‌ ನಿಮ್ಮ ಜೀವಿತಾವಧಿಯನ್ನು ಹೇಳಲು ನಿಮ್ಮ ಸೀಟ್‌ ಬೆಲ್ಟ್‌ ಬಳಕೆ ಬಗ್ಗೆ, ವ್ಯಕ್ತಿಯ ಕುಟುಂಬದ ವೈದ್ಯಕೀಯ ಇತಿಹಾಸ, ಆಹಾರ ಪದ್ಧತಿ, ಕೆಲಸದ ವೇಳೆ ಮತ್ತು ಇತರೆ ಕೆಲವು ಮಾಹಿತಿ ಕೇಳುತ್ತದಂತೆ

ಸಲಹೆಗಳು

ಸಲಹೆಗಳು

ಆನ್‌ಲೈನ್‌ ಟೂಲ್‌ ಎಲ್ಲಾ ಮಾಹಿತಿ ಪಡೆದು ವ್ಯಕ್ತಿಗೆ ಬದುಕುವ ವರ್ಷಗಳ ಮಾಹಿತಿ ನೀಡುತ್ತದೆ. ನಂತರದಲ್ಲಿ ವ್ಯಕ್ತಿಯೂ ತಾನು ಬದುಕುವ ದಿನಗಳನ್ನು ಹೆಚ್ಚು ಮಾಡಿಕೊಳ್ಳಲು ಸಲಹೆಗಳನ್ನು ಬೇಕಾದರೆ ಕೇಳಬಹುದಂತೆ.

40 ಪ್ರಶ್ನೆಗಳು

40 ಪ್ರಶ್ನೆಗಳು

ಆನ್‌ಲೈನ್‌ ಕ್ಯಾಲ್ಕುಲೇಟರ್‌ನಲ್ಲಿ ನೀವು 40 ಪ್ರಶ್ನೆಗಳಿಗೆ ಕೇವಲ 10 ನಿಮಿಷಗಳಲ್ಲಿ ಉತ್ತರ ನೀಡಬೇಕಾಗಿದೆ. ಅಲ್ಲದೇ ನೀವು ಉತ್ತರ ಪಡೆಯುವ ಮುನ್ನ ನಿಮ್ಮ ಇಮೇಲ್‌ ವಿಳಾಸ ನೀಡಿ ಪಾಸ್‌ವರ್ಡ್‌ ಕ್ರಿಯೇಟ್‌ ಮಾಡಿಕೊಳ್ಳಬೇಕಿದೆ.

ಮಾಹಿತಿ 3ನೇ ವ್ಯಕ್ತಿಗೆ ಹಂಚಿಕೆ

ಮಾಹಿತಿ 3ನೇ ವ್ಯಕ್ತಿಗೆ ಹಂಚಿಕೆ

ಆನ್‌ಲೈನ್‌ ಕ್ಯಾಲ್ಕುಲೇಟರ್‌ನಲ್ಲಿ ವ್ಯಕ್ತಿ ತಾನು ಜೀವಿತಾವಧಿ ಬಗ್ಗೆ ಮಾಹಿತಿ ತಿಳಿಯುವ ಮೊದಲು ವೆಬ್‌ಸೈಟ್‌ ಕೆಲವು ವಯಕ್ತಿಕ ನಿಯಮಗಳನ್ನು ನೀಡುತ್ತದೆ. ಅದನ್ನು ಓದಿ ತಿಳಿದ ನಂತರ ಆನ್‌ಲೈನ್‌ ಟೂಲ್‌ ಅನ್ನು ಬಳಸಬೇಕೋ ಬೇಡವೋ ಎಂದು ನಿರ್ಧರಿಸಬಹುದಾಗಿದೆ. ಕಾರಣ ವ್ಯಕ್ತಿ ತಾನು ನೀಡುವ ಮಾಹಿತಿ ಮೂರನೇ ವ್ಯಕ್ತಿಗೆ ಹಂಚುವುದಾಗಿದೆ. .

ವೆಬ್‌ಸೈಟ್‌

ವೆಬ್‌ಸೈಟ್‌

ವೆಬ್‌ಸೈಟ್‌ ಪಾಲಿಸಿಗಾಗಿ ಇಲ್ಲಿ ಕ್ಲಿಕ್‌ ಮಾಡಿ
ಜೀವಿತಾವಧಿ ತಿಳಿಸುವ ಕ್ಯಾಲ್ಕುಲೇಟರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಜೆನೆಟಿಕ್‌ ಟೆಸ್ಟ್‌

ಜೆನೆಟಿಕ್‌ ಟೆಸ್ಟ್‌

"ನೀವು ಆರೋಗ್ಯವಾಗಿರಲು ಏನು ಮಾಡಬೇಕು ಎಂದು ತಿಳಿಯಲು ಯಾವುದೇ ಜೆನೆಟಿಕ್‌ ಟೆಸ್ಟ್‌ ಮಾಡಬೇಕಿಲ್ಲ. ಹಾಗೂ ಹೇಗಿರಬೇಕು ಎಂದು ತಿಳಿಯಲು ಸಹ ಅದು ಅಗತ್ಯವಿಲ್ಲ. ನಾವು ಈಗಾಗಲೇ ತಿಳಿದಿದ್ದೇವೆ", ಎಂದು ಬಾಸ್ಟನ್‌ ಸ್ಕೂಲ್‌ ಆಫ್‌ ಮೆಡಿಷನ್‌ ವಿಶ್ವವಿದ್ಯಾಲಯದ, ಬಾಸ್ಟನ್‌ ಮೆಡಿಕಲ್‌ ಸೆಂಟರ್‌ನ ಮುಪ್ಪುಶಾಸ್ತ್ರಜ್ಞ (Geriatrician) "ಥಾಮಸ್‌ ಪರ್ಲ್ಸ್‌" ಹೇಳಿದ್ದಾರೆ.

ಥಾಮಸ್‌ ಪರ್ಲ್ಸ್‌

ಥಾಮಸ್‌ ಪರ್ಲ್ಸ್‌

ಥಾಮಸ್‌ ಪರ್ಲ್ಸ್‌ ರವರು ಹೆಚ್ಚು ಕಾಲ ಬದುಕಿದವರನ್ನು ಉದಾಹರಣೆ ನೀಡುತ್ತಾ "ಆರೋಗ್ಯವಾಗಿರಲು, ಧೂಮಪಾನ ಮಾಡಬೇಡಿ, ದಿನನಿತ್ಯ ವ್ಯಾಯಾಮ ಮಾಡುವುದು, ಧ್ಯಾನ ಮಾಡುವುದು, ಯೋಗ ಮಾಡುವುದು, ಅಲ್ಲದೇ ಒತ್ತಡವನ್ನು ನಿಯಂತ್ರಿಸಲು ಸಾಮಾಜಿಕ ಸಂಪರ್ಕ ಹೊಂದುವುದು ಸರಳ ವಿಧಾನಗಳು ಎಂದಿದ್ದಾರೆ.

ಪರ್ಲ್ಸ್‌ ಅಧ್ಯಯನ

ಪರ್ಲ್ಸ್‌ ಅಧ್ಯಯನ

ಪರ್ಲ್ಸ್‌ ರವರು ಪ್ರಪಂಚದಾದ್ಯಂತ 100 ವರ್ಷಗಳ ಕಾಲ ಬದುಕಿದವರ ಬಗ್ಗೆ ಅಧ್ಯಯನ ಮಾಡಿದ್ದಾರೆ.

Best Mobiles in India

English summary
Online calculator that can estimate when you will die. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+