Subscribe to Gizbot

ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು

Written By:

ವಾಟ್ಸಾಪ್‌ ಪ್ರಪಂಚದ ಪ್ರಖ್ಯಾತ ಮೆಸೇಜಿಂಗ್‌ ಆಪ್‌. ಆಫ್‌ಲೈನ್ ಮೆಸೇಜ್‌ಗಿಂತ ಆನ್‌ಲೈನ್‌ ಮೆಸೇಜಿಂಗ್‌ ಹೆಚ್ಚು ಚಾಲ್ತಿಯಲ್ಲಿರಲು ಕಾರಣ ವಾಟ್ಸಾಪ್‌. ಇಂದು ಆಂಡ್ರಾಯ್ಡ್, ಐಓಎಸ್‌, ವಿಂಡೋಸ್‌ ಸೇರಿದಂತೆ ಡೆಸ್‌ಟಾಪ್‌ಗಳಲ್ಲೂ ಸಹ ಕ್ರೋಮ್‌ ಬ್ರೌಸರ್‌ನಿಂದ ಬಳಸಬಹುದಾಗಿದೆ. ಆದರೆ ಇಂದು ವಾಟ್ಸಾಪ್‌ನಲ್ಲೂ ಸಹ ಹಲವಾರು ವಂಚನೆಗಳು, ಚೇಷ್ಟೆಗಳು ಜರುಗುತ್ತಿರುವುದು ಸಹಿಸದ ಚಟುವಟಿಕೆಯಾಗಿವೆ. ಇತರ ಸಾಮಾಜಿಕ ಜಾಲತಾಣಗಳಿಗಿಂತ ವಾಟ್ಸಾಪ್‌ನಲ್ಲೇ ಹೆಚ್ಚು ಚೇಷ್ಟೆಯ ಹಾಗೂ ಮೋಸದ ಮೆಸೇಜ್‌ಗಳು ಹರಿದಾಡುತ್ತಿವೆ. ಅಂತಹ ಮೆಸೇಜ್‌ಗಳನ್ನು ಪ್ರತಿಯೊಬ್ಬರು ಸಹ ತಪ್ಪಿಸಬೇಕಾಗಿದೆ. ನಿಮಗೆ ಆಗುವಂತಹ ಮೋಸದ ಬಗ್ಗೆ ಎಚ್ಚರಗೊಳ್ಳಬೇಕಾಗಿದೆ. ಹಾಗಾದರೆ ಅಂತಹ ಮೆಸೇಜ್‌ಗಳು ಹೇಗಿರುತ್ತವೆ ಎಂಬುದನ್ನು ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಓದಿರಿ : ಫೇಸ್‌ಬುಕ್‌ನಲ್ಲಿ ಫೋಟೋ ಲೈಕ್‌ ಮಾಡುವ ಮುನ್ನ ಎಚ್ಚರ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ನಿಂದ ಯಾವುದೇ ಸಂದೇಶ ಬರುವುದಿಲ್ಲ

ವಾಟ್ಸಾಪ್‌ನಿಂದ ಯಾವುದೇ ಸಂದೇಶ ಬರುವುದಿಲ್ಲ

ವಾಟ್ಸಾಪ್‌ ತನ್ನ ಅಧಿಕೃತ ಬ್ಲಾಗ್‌ನಲ್ಲಿ ತನ್ನ ಯಾವುದೇ ಗ್ರಾಹಕರಿಗೂ ಸಹ ಮೆಸೇಜ್‌ ಕಳುಹಿಸುವುದಿಲ್ಲ ಹಾಗೂ ಯಾರನ್ನು ಸಂಪರ್ಕಿಸುವುದಿಲ್ಲ ಎಂದು ಹೇಳಿದೆ.

ಬ್ಯಾಂಕ್‌ ಖಾತೆ ನಂಬರ್‌

ಬ್ಯಾಂಕ್‌ ಖಾತೆ ನಂಬರ್‌

ವಾಟ್ಸಾಪ್ ಯಾರಲ್ಲಿಯೂ ಸಹ ಬ್ಯಾಂಕ್‌ ಖಾತೆ ನಂಬರ್‌ ಕೇಳುವುದಿಲ್ಲ. ಅಲ್ಲದೇ ಯಾವುದೇ ಇತರ ಮಾಹಿತಿಯನ್ನು ಸಹ ಕೇಳುವುದಿಲ್ಲಾ. ಯಾವುದೇ ವ್ಯಕ್ತಿ ವಾಟ್ಸಾಪ್‌ನಿಂದ ಸಂಪರ್ಕಿಸುತ್ತಿರುವುದಾಗಿ ಹೇಳಿ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಅವರು ನಿಮಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಥ. ಆದರಿಂದ ಯಾವುದೇ ಮಾಹಿತಿ ತಿಳಿಸಬೇಡಿ.

ವಾಟ್ಸಾಪ್ ನಿಂದ ಯಾವುದೇ ಉಚಿತ ಸೇವೆ ಇಲ್ಲ

ವಾಟ್ಸಾಪ್ ನಿಂದ ಯಾವುದೇ ಉಚಿತ ಸೇವೆ ಇಲ್ಲ

ಕೆಲದಿನಗಳ ಹಿಂದೆ ಹಲವು ಬಳಕೆದಾರರು ವಾಟ್ಸಾಪ್ ಉಚಿತ ಎಂಬ ಮೆಸೇಜ್‌ ಸ್ವೀಕರಿಸಿದ್ದರು. ಅದೇ ಮೆಸೇಜ್‌ ಅನ್ನು ಹಲವರು ತಮ್ಮ ಗೆಳೆಯರಿಗೆ ಹಂಚಿದ್ದರು. ಆದರೆ ವಾಟ್ಸಾಪ್‌ ವಾರ್ಷಿಕವಾಗಿ ಅಂತವರಿಗೆ ಶುಲ್ಕ ವಿಧಿಸುತ್ತದೆ. ಅದು ಕೇವಲ ಚೇಷ್ಟೆ ಮಾಡುವಂತ ಸಂದೇಶವಾಗಿದೆ.

ಆಕ್ಟಿವೇಟ್‌ ವಾಟ್ಸಾಪ್‌ ಕರೆ

ಆಕ್ಟಿವೇಟ್‌ ವಾಟ್ಸಾಪ್‌ ಕರೆ

ವಾಟ್ಸಾಪ್‌ ಕರೆಯ ಫೀಚರ್‌ ಅನ್ನು ಆಕ್ಟಿವೇಟ್‌ ಮಾಡಿ ಎಂದು ವಾಟ್ಸಾಪ್‌ ನಿಂದ ಮೆಸೇಜ್‌ ಬರುತ್ತವೆ. ಅದು ಮೋಸದ ಮೆಸೇಜ್‌ ಆಗಿದೆ. ವಾಟ್ಸಾಪ್‌ ಕಾಲಿಂಗ್‌ ಫೀಚರ್‌ ಆಪ್‌ನಲ್ಲಿಯೇ ಉಚಿತವಾಗಿರುತ್ತದೆ.

 ಚೇಷ್ಟೆಯ ಮೆಸೇಜ್‌ಗಳು

ಚೇಷ್ಟೆಯ ಮೆಸೇಜ್‌ಗಳು

ಚೇಷ್ಟೆಯ ಮೆಸೇಜ್‌ಗಳು ಉದಾಹರಣೆಗೆ ಚಿತ್ರದಂತೆ ಇರುತ್ತವೆ.
ಚಿತ್ರ ಕೃಪೆ : Quickheal

ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ

ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ

ವಾಟ್ಸಾಪ್‌ ಯಾವುದೇ ಕಾರಣವಿಲ್ಲದೇ ನಿಮ್ಮ ಖಾತೆಯನ್ನು ಅಮಾನತುಗೊಳಿಸುವುದಿಲ್ಲಾ. ಒಂದು ವೇಳೆ ಯಾರಾದರೂ ಚೇಷ್ಟೆಯ ಮೆಸೇಜ್‌ಗಳನ್ನು ಕಳುಹಿಸಿದಲ್ಲಿ ಮಾತ್ರ ಅಂತಹ ಖಾತೆಗಳನ್ನು ಪರಿಶೀಲಿಸಿ ಅಮಾನತು ಮಾಡುತ್ತದೆ.

ಲಾಟರಿ ವಿನ್‌

ಲಾಟರಿ ವಿನ್‌

ನಿಮಗೆ ಕೆಲವೊಮ್ಮೆ "ನೀವು ಲಾಟರಿಯಲ್ಲಿ ಬಹುಮಾನ ಗೆದ್ದಿದ್ದೀರಿ" ಎಂದು ಸಂದೇಶ ಬರಬಹುದು. ಅದು ಸಂಪೂರ್ಣ ಮೋಸದ ಸಂದೇಶವಾಗಿರುತ್ತದೆ.

ವಾಟ್ಸಾಪ್‌ ಸಂದೇಶಕ್ಕೆ ಶುಲ್ಕ

ವಾಟ್ಸಾಪ್‌ ಸಂದೇಶಕ್ಕೆ ಶುಲ್ಕ

ವಾಟ್ಸಾಪ್‌ ಎಂದಿಗೂ ನೀವು ಕಳುಹಿಸುವ ಸಂದೇಶಕ್ಕೆ ಶುಲ್ಕ ವಿಧಿಸುವುದಿಲ್ಲ. ಆದರೆ ಹಿಂದೆ ಇದು ಪ್ರತಿಯೊಬ್ಬ ಬಳಕೆದಾರನಿಗೆ $1 (ರೂ.67.93) ಶುಲ್ಕ ವಿಧಿಸಿತ್ತು. ಆದರೆ ಇಂದು ಸಂಪೂರ್ಣ ಉಚಿತವಾಗಿದೆ.

ವಾಟ್ಸಾಪ್‌ ನಿಷೇಧಿಸಲಾಗುತ್ತಿದೆ

ವಾಟ್ಸಾಪ್‌ ನಿಷೇಧಿಸಲಾಗುತ್ತಿದೆ

ವಾಟ್ಸಾಪ್‌ ನಿಜವಾಗಿಯೂ ನಿಷೇಧವಾಗಿಲ್ಲ. ಅಥವಾ ಮುಚ್ಚಲಾಗುತ್ತಿಲ್ಲ. ಆ ರೀತಿ ಸಂದೇಶ ಓದಿದಲ್ಲಿ ನಂಬದಿರಿ.

ವಾಟ್ಸಾಪ್‌ ಮೂಲ ಆವೃತ್ತಿ ಮಾತ್ರ ಇನ್ಸ್ಟಾಲ್‌ ಮಾಡಿ

ವಾಟ್ಸಾಪ್‌ ಮೂಲ ಆವೃತ್ತಿ ಮಾತ್ರ ಇನ್ಸ್ಟಾಲ್‌ ಮಾಡಿ

ವಾಟ್ಸಾಪ್‌ ಅನ್ನು ಕೇವಲ ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಇತರೆ ವೇದಿಕೆಗಳಲ್ಲಿ ಇನ್ಸ್ಟಾಲ್‌ ಮಾಡಿ. ಯಾವುದೇ ಮೂರನೇ ವ್ಯಕ್ತಿಯಿಂದ ಇನ್ಸ್ಟಾಲ್‌ ಮಾಡಿಕೊಳ್ಳಬೇಡಿ. ಕಾರಣ ಎಂದಿಗೂ ಅಸುರಕ್ಷಿತ ಚಟುವಟಿಕೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಶೀಘ್ರದಲ್ಲಿ ನಿಮ್ಮ ವಾಟ್ಸಾಪ್‌ ಡೇಟಾ ಫೇಸ್‌ಬುಕ್‌ನಲ್ಲಿ ಶೇರ್‌

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

ಹೊಸ ಸಂಖ್ಯೆಯಿಂದ ಹಳೆಯ ವಾಟ್ಸಾಪ್ ಬಳಸುವುದು ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 Whatsapp Hoax messages and Scams to avoid. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot