ನಗ್ನ ಯುವತಿ ವಿಡಿಯೋ ಕರೆ ಬಂದರೇ, ಸ್ವೀಕರಿಸುವ ಮುನ್ನ ಎಚ್ಚರ ಯುವಕರೇ ಎಚ್ಚರ!
ಸಾಮಾಜಿಕ ಜಾಲತಾಣಗಳು, ಡೇಟಿಂಗ್ ಆಪ್‌ಗಳು ಬಳಕೆದಾರರನ್ನು ಆಕರ್ಷಿಸುತ್ತಿವೆ. ಅದರಲ್ಲಿಯೂ ಯುವ ಜನರು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಆನ್‌ಲೈನ್ ವಂಚಕರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮೋಸ ಮಾಡುವ ತಂತ್ರಗಳನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅನಾಮಿಕ ಫ್ರೆಂಡ್ ರಿಕ್ವೆಸ್ಟ್ ಗಳ ಬಗ್ಗೆ ಎಚ್ಚರಿಕೆಯಿಂದಿರಿ. ಚೆಂದದ ಯುವತಿ ಫೋಟೊ ಇರುವ ಫ್ರೆಂಡ್ ರಿಕ್ವೆಸ್ಟ್ ಬಂತು ಅಂತಾ ಆತುರದಲ್ಲಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದರೇ, ನೀವು ಹಳ್ಳಕ್ಕೆ ಬಿದ್ದಂತೆ.

ನಿಧಾನವಾಗಿ ಒಂದೊಂದೇ ಬಟ್ಟೆ ಸರಿಸಿ ಮೈಯ ಸೌಂದರ್ಯವನ್ನು ಸ್ವಲ್ಪ ಸ್ವಲ್ಪವೇ ತೋರಿಸುತ್ತಿದ್ದಾಳೆ. ಈ ಮಧ್ಯೆ ಅವಳೂ ಒಂದು ಶರತ್ತು ಹಾಕಿದಳು ನಾನು ಪೂರ್ತಿ ನಗ್ನ ಆಗಬೇಕಿದ್ದರೆ ನೀನೂ ನಗ್ನವಾಗಬೇಕು ಅಂತ ಸರಿ, ಅದರಲ್ಲೇನು ಆಗೋದಿದೆ ಅಂತ ಇವನೂ ಬಟ್ಟೆ ಕಳಚಿ ನಿಂತುಬಿಟ್ಟ. ಕೂಡಲೇ ಅತ್ತಲಿಂದ ಕಾಲ್ ಕಟ್ ಆಯ್ತು. ಒಂದೇ ನಿಮಿಷದಲ್ಲಿ ಅತ್ತಲಿಂದ ಇನ್ನೊಂದು ಕರೆ. ಈ ಬಾರಿ ಗಂಡು ಸ್ವರ. ನೀನು ಬೆತ್ತಲೆಯಾಗಿರೋ ವಿಡಿಯೋವನ್ನು ನಾವು ರೆಕಾರ್ಡ್ ಮಾಡಿಕೊಂಡಿದ್ದೇವೆ. ನಮಗೆ ಐವತ್ತು ಸಾವಿರ ರೂಪಾಯಿ ಕಳಿಸಿಕೊಡು. ಇಲ್ಲ ಅಂದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನಿನ್ನ ಮರ್ಯಾದೆ ಹರಾಜು ಹಾಕುತ್ತೀವಿ ಎಂದು ಅವಾಜ್. ಇದಕ್ಕೆ ಹೆದರಿದ ಯುವಕ ಅವರು ಕೇಳಿದಷ್ಟು ಹಣ ಕಳಿಸಿಕೊಟ್ಟ.

ಯುವಕರು ಇಂಥ ವಂಚನೆಗೆ ಬಲು ಬೇಗ ಬಲಿಯಾಗುತ್ತಾರೆ ಎಂಬುದನ್ನು ವಂಚಕರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ಬಗೆಯ ವಂಚನೆಯ ಜಾಲಗಳು ದಿಲ್ಲಿ. ಗುರುಗಾಂವ್, ಲಖನೌ ಮುಂತಾದ ಪ್ರದೇಶಗಳಿಂದ ಕಾರ್ಯಾಚರಿಸುತ್ತಿವೆ. ಪ್ರಾಕ್ಸಿ ಸರ್ವರ್‌ನಿಂದ ಇವರು ಕಾರ್ಯಾಚರಿಸುವುದರಿಂದ ಇವುಗಳನ್ನು ಸುಲಭವಾಗಿ ಪತ್ತೆ ಹಚ್ಚಲೂ ಸಾಧ್ಯವಿಲ್ಲ.

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರವಿರಲಿ
ಆನ್‌ಲೈನ್‌ನಲ್ಲಿ ಅಥವಾ ಸಾಮಾಜಿಕ ಜಾಲತಾಣ ಯಾರೇ ಅಪರಿಚಿತರನ್ನೂ ನಂಬದೆ ಇರುವುದು ಮುಖ್ಯ. ಯಾವುದೇ ಅಪರಿಚಿತ ನಂಬರ್‌ನಿಂದ ವಿಡಿಯೋ ಕರೆ ಬಂದರೂ ಸ್ವೀಕರಿಸದೆ ಇರುವುದು. ಸಾಮಾನ್ಯ ಕರೆಗಳನ್ನು ಸ್ವೀಕರಿಸುವಾಗಲೂ ಎಚ್ಚರ ಬೇಕು. ವಾಟ್ಸ್ಯಾಪ್ ಅಥವಾ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಸ್ವೀಕರಿಸುವಾಗ ಎಚ್ಚರ. ಯುವತಿಯರು ಸುಮ್ಮಸುಮ್ಮನೇ ಯಾರಿಗೂ ಫ್ರೆಂಡ್ ರಿಕ್ವೆಸ್ಟ್ ಕಳಿಸುವುದೇ ಇಲ್ಲ ಎಂಬುದನ್ನು ಯುವಕರು ತಿಳಿಯುವುದು ಉತ್ತಮ. ಹಾಗೆಯೇ ಪರಿಚಯವಿರದ ಯುವತಿಯರಿಗೆ ಫ್ರೆಂಡ್ ರೀಕ್ವೆಸ್ಟ್ ಕಳುಹಿಸುವುದನ್ನು ಮಾಡಬಾರದು. ಕೆಲವೊಮ್ಮೆ ನೀವೆ ಖೆಡ್ಡಾಗೆ ಬೀಳುವ ಸಾಧ್ಯತೆಗಳಿರುತ್ತವೆ.


Click it and Unblock the Notifications








