Home
ಸುದ್ದಿಜಾಲ

online scam: ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ತಿಳಿಯಲು ಹೋಗಿದ್ದೇ ತಪ್ಪಾಗೋಯ್ತು, 11 ಲಕ್ಷ ಕಳೆದುಕೊಂಡ ಮಹಿಳೆ

ಆನ್‌ಲೈನ್‌ ವಂಚನೆ ಪ್ರಕರಣ (online scam) ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಈ ಮೊದಲು ಹಣ ಕೈನಲ್ಲಿ ಇದ್ರೆ ಖರ್ಚಾಗುತ್ತದೆ ಅಂತಾ ಬ್ಯಾಂಕ್‌ನಲ್ಲಿ ಇಡುತ್ತಿದ್ದರು. ಆದರೆ ಈಗ ಬ್ಯಾಂಕ್‌ನಲ್ಲಿ ಇಡುವ ಹಣವೇ ಮಂಗಮಾಯವಾಗುತ್ತಿದ್ದು, ಇದರಿಂದಾಗಿ ಜನರು ಬ್ಯಾಂಕ್‌ ಖಾತೆಗಳಲ್ಲಿ ಹಣ ಇಡಬೇಕೋ ಅಥವಾ ಬೇಡವೋ ಎಂಬ ಆತಂಕದಲ್ಲಿ ಇರುವಂತೆ ಆಗಿದೆ.

ಹೌದು, ಆನ್‌ಲೈನ್‌ ವಂಚನೆ ಪ್ರಕರಣದಲ್ಲಿ ಪುಣೆ ಮೂಲದ ಮಹಿಳೆಯೊಬ್ಬರು ಬಲಿಪಶು ಆಗಿದ್ದಾರೆ. ಇವರು ತಮ್ಮ ಬ್ಯಾಂಕ್ ಖಾತೆಯ ಆನ್‌ಲೈನ್ ಸ್ಟೇಟ್‌ಮೆಂಟ್ ಪಡೆಯಲು ಹೋಗಿ 11 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಹಾಗಿದ್ರೆ, ಈ ಮಹಿಳೆಗೆ ಮೋಸ ಮಾಡಿದ್ದು ಹೇಗೆ? ಖಾತೆಯಲ್ಲಿ ದುಡ್ಡು ಎಷ್ಟಿದೆ ಎಂದು ತಿಳಿದುಕೊಳ್ಳಲು ಹೋದ್ರೆ ಈ ರೀತಿ ಮೋಸ ಆಗಲಿದೆಯಾ ಎಂಬ ಮಾಹಿತಿ ಇಲ್ಲಿದೆ ನೋಡಿ.

ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ತಿಳಿಯಲು ಹೋಗಿದ್ದೇ ತಪ್ಪಾಗೋಯ್ತು...

11 ಲಕ್ಷ ರೂ. ವಂಚನೆ: ಕೆಲವು ವರ್ಷಗಳಿಂದ ಆನ್‌ಲೈನ್‌ ವಂಚನೆ ಪ್ರಕರಣ ಮಿತಿ ಮೀರುತ್ತಿದೆ. ಪರಿಣಾಮ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಜನರಿಗೆ ಸಲಹೆ ನೀಡಿದರೂ ಸಹ ಜನರು ಮಾತ್ರ ಕುರುಡಾಗಿ ಸ್ಕ್ಯಾಮರ್‌ಗಳನ್ನು ನಂಬುತ್ತಿದ್ದಾರೆ. ಇದರಿಂದಾಗಿ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಂಚಕರಿಗೆ ನೀಡುತ್ತಿದ್ದಾರೆ. ಅದರಲ್ಲೂ ವಂಚಕರು ಉದ್ಯೋಗವನ್ನು ನೀಡುವ ನೆಪದಲ್ಲಿ ನಂಬಿಕೆ ಗಳಿಸುತ್ತಾರೆ ಅಥವಾ ಅವರಿಗೆ ಏನಾದರೂ ಸಹಾಯ ಮಾಡಿ ಈ ರೀತಿ ಮೋಸ ಮಾಡುತ್ತಾರೆ. ಇದೇ ರೀತಿಯ ಘಟನೆಯಲ್ಲಿ ಪುಣೆಯ ಮಹಿಳೆ ತಮ್ಮ ಬ್ಯಾಂಕ್ ಖಾತೆಯ ಆನ್‌ಲೈನ್ ಸ್ಟೇಟ್‌ಮೆಂಟ್ ಪಡೆಯಲು ಹೋಗಿ ಸುಮಾರು 11 ಲಕ್ಷ ರೂ.ಕಳೆದುಕೊಂಡಿದ್ದಾರೆ.

ಮೋಸ ಹೋದ ಮಹಿಳೆಯು ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು. ಈ ವರ್ಷದ ಜುಲೈನಲ್ಲಿ ತನ್ನ ಖಾತೆಯ ಆನ್‌ಲೈನ್ ಸ್ಟೇಟ್‌ಮೆಂಟ್‌ ಪಡೆದುಕೊಳ್ಳಲು ಆಕೆ ಮುಂದಾಗಿದ್ದಾರೆ. ಅದರಂತೆ ಜುಲೈ 28 ರಂದು ಅವರು ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಬ್ಯಾಂಕ್ ಖಾತೆಯ ಆನ್‌ಲೈನ್ ಸ್ಟೇಟ್‌ಮೆಂಟ್ ಪಡೆಯಲು ಮುಂದಾಗಿದ್ದಾರೆ. ಆದರೆ ಆ ವೇಳೆ ಮಾಹಿತಿ ಪಡೆದುಕೊಳ್ಳಲು ವಿಫಲರಾಗಿದ್ದಾರೆ.

ಇದಾದ ನಂತರದಲ್ಲಿ ಎಷ್ಟು ಮಾಡಿದರೂ ಸ್ಟೇಟ್‌ಮೆಂಟ್‌ ಬರುತ್ತಿಲ್ಲವಲ್ಲ ಎಂದು ಆನ್‌ಲೈನ್‌ನಲ್ಲೇ ಗ್ರಾಹಕ ಸಂಪರ್ಕ ನಂಬರ್‌ಗಳನ್ನು ಕಂಡುಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಸಹಾಯವಾಣಿ ಸಂಖ್ಯೆ ಪಡೆದು ಕರೆ ಮಾಡಿದಾಗ, ಮಹಿಳೆಯ ಫೋನ್‌ಗೆ ಉತ್ತರಿಸಿದ ವ್ಯಕ್ತಿ ರಿಮೋಟ್ ಆಕ್ಸೆಸ್ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿದರೆ ಸಹಾಯ ಮಾಡಬಹುದೆಂದು ಹೇಳಿದ್ದಾನೆ. ಆನ್‌ಲೈನ್ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯುವಲ್ಲಿ ಆ ವ್ಯಕ್ತಿ ತನಗೆ ಸಹಾಯ ಮಾಡಬಹುದೆಂದು ನಂಬಿದ ಮಹಿಳೆ ಆತ ಏನೆಲ್ಲಾ ಹೇಳಿದನೋ ಅದನ್ನು ಮಾಡಿದ್ದಾರೆ.

ಸೂಚನೆಯಂತೆ ರಿಮೋಟ್ ಆಕ್ಸೆಸ್ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿದ ಮಹಿಳೆ ಬ್ಯಾಂಕ್ ಖಾತೆಯ ವಿವರಗಳನ್ನು ಫೋನ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಾದ ನಂತರದಲ್ಲಿ ಆಕೆಯ ಬ್ಯಾಂಕ್ ಖಾತೆಯಿಂದ 11 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಈ ಸಂಬಂಧ ಟಿಒಐ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇಷ್ಟೆಲ್ಲಾ ಆದ ಮೇಲೆ ಮಹಿಳೆಗೆ ತಾನು ಮೋಸ ಹೋಗಿದ್ದೇನೆ ಎಂದು ಅರಿವಾಗಿದ್ದು, ದೂರು ನೀಡಿದ್ದಾರೆ. ಪೊಲೀಸರು ಮಹಿಳೆಯ ಖಾತೆಯ ವಿವರಗಳೊಂದಿಗೆ ಹಣ ವರ್ಗಾವಣೆಯಾದ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದಾರೆ.

ಈ ರೀತಿಯ ವಂಚನೆಯಿಂದ ಸುರಕ್ಷಿತವಾಗಿರಲು ಹೇಗೆ?: ವಿವಿಧ ರೀತಿಯಲ್ಲಿ ನಿಮ್ಮನ್ನು ವಂಚಿಸುವ ಆನ್‌ಲೈನ್‌ ಸ್ಕ್ಯಾಮರ್‌ಗಳು ನಿಮಗೆ ಅರಿವಿಲ್ಲದಂತೆ ನಿಮ್ಮ ಬ್ಯಾಂಕ್‌ಗೆ ಕನ್ನ ಹಾಕುತ್ತಾರೆ. ಪರಿಣಾಮ ನೀವು ಎಚ್ಚರಿಕೆಯಿಂದ ಇರುವುದು ಉತ್ತಮ. ಇದಕ್ಕಾಗಿ ನೀವು ಯಾವುದೇ ರೀತಿಯ ಸಹಾಯಕ್ಕಾಗಿ ಅಧಿಕೃತ ವೆಬ್‌ಸೈಟ್ ಮತ್ತು ನಿಮ್ಮ ಬ್ಯಾಂಕ್‌ನ ಸಂಬಂಧ ವ್ಯವಸ್ಥಾಪಕರನ್ನು ಮಾತ್ರ ನಂಬಿರಿ.

ಇದೆಲ್ಲಕ್ಕಿಂತ ಮಿಗಿಲಾಗಿ ಅಪರಿಚಿತರ ಸೂಚನೆಗಳ ಮೇಲೆ ಯಾವುದೇ ರಿಮೋಟ್ ಆಕ್ಸೆಸ್ ಸಾಫ್ಟ್‌ವೇರ್ ಅನ್ನು ಎಂದಿಗೂ ನಿಮ್ಮ ಡಿವೈಸ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಬೇಡಿ. ಯಾಕೆಂದರೆ ಈ ಸಾಫ್ಟ್‌ವೇರ್‌ಗಳು ನಿಮ್ಮ ಖಾಸಗಿ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು ಹಾಗೂ ಮುಂದಿನ ದಿನಗಳಲ್ಲಾದರೂ ನಿಮ್ಮ ಬ್ಯಾಂಕ್‌ನಿಂದ ಹಣ ಕದಿಯಲು ಸಹಾಯ ಮಾಡಬಹುದು. ಹಾಗೂ ವೈರಸ್‌ ಹಾಗೂ ಮಾಲ್‌ವೇರ್‌ ನಿಮ್ಮ ಫೋನ್‌ಗೆ ಬಂದು ಸೇರಬಹುದು.

ಇದರೊಂದಿಗೆ ನಿಮ್ಮ ಬ್ಯಾಂಕಿಂಗ್ ರುಜುವಾತುಗಳನ್ನು ಅಥವಾ ನಿಮ್ಮ ಫೋನ್‌ನಲ್ಲಿ ಸ್ವೀಕರಿಸಿದ ಯಾವುದೇ ರೀತಿಯ ಓಟಿಪಿ ಅನ್ನು ಅಪರಿಚಿತರೊಂದಿಗೆ ಶೇರ್‌ ಮಾಡಿಕೊಳ್ಳಬೇಡಿ. ನೀವು ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ವಿಶ್ವಾಸಾರ್ಹ ಸ್ನೇಹಿತ ಅಥವಾ ಸಂಬಂಧಿಕರ ಸಲಹೆಯನ್ನು ಪಡೆದುಕೊಳ್ಳಿ. ಅದೂ ಸಾಲದು ಎಂದರೆ ಸಮೀಪದ ಬ್ಯಾಂಕ್‌ಗೆ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿ.

ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ತಿಳಿಯಲು ಹೋಗಿದ್ದೇ ತಪ್ಪಾಗೋಯ್ತು...

ಆನ್‌ಲೈನ್‌ನಲ್ಲಿ ಯಾದೃಚ್ಛಿಕ ಸಹಾಯವಾಣಿ ಸಂಖ್ಯೆಗಳನ್ನು ಎಂದಿಗೂ ಹುಡುಕಬೇಡಿ ಮತ್ತು ನಿಮ್ಮ ಕರೆಗೆ ಉತ್ತರಿಸುವ ಅಪರಿಚಿತರನ್ನು ನಂಬದಿರಿ. ಫೋನ್‌ನ ಇನ್ನೊಂದು ಬದಿಯಲ್ಲಿ ಯಾರು ಇರಬಹುದೆಂದು ನಿಮಗೆ ತಿಳಿದಿರುವುದಿಲ್ಲ. ಪರಿಣಾಮ ಅವರೊಂದಿಗೆ ಎಂದಿಗೂ ನಿಮ್ಮ ವೈಯುಕ್ತಿಕ ಮಾಹಿತಿ ಹಾಗೂ ಅಗತ್ಯ ಬ್ಯಾಂಕ್‌ ವಿವರವನ್ನು ಹಂಚಿಕೊಳ್ಳಬೇಡಿ. ಈ ವೇಳೆ ಮಾಹಿತಿ ಹಂಚಿಕೊಂಡಿದ್ದೇ ಆದರೆ ಬ್ಯಾಂಕ್‌ನಲ್ಲಿನ ಹಣ ಮಂಗಮಾಯವಾಗುತ್ತದೆ.

Best Mobiles in India

English summary
A Pune based woman has become a victim in an online scam case. she went to get the online statement of her bank account and lost 11 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+