Home
ಸುದ್ದಿಜಾಲ

online scam: ಹಾಳಾದ ಹಾಲಿನಿಂದಾಗಿ ಆನ್‌ಲೈನ್‌ ಮೂಲಕ 77,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ! ಹೇಗೆ ಗೊತ್ತಾ?

ಇತ್ತೀಚೆಗೆ ಸಾಕಷ್ಟು ಆನ್‌ಲೈನ್‌ ವಂಚನೆಗಳು (online scam) ವರದಿಯಾಗುತ್ತಲೇ ಇವೆ. ಇವುಗಳನ್ನು ತಡೆಯಲು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಸತತ ಪ್ರಯತ್ನಪಟ್ಟರೂ ಸಹ ಸಾಧ್ಯವಾಗುತ್ತಿಲ್ಲ. ಅಂತೆಯೇ ಇದೀಗ ಬೆಂಗಳೂರಿನ ಮಹಿಳೆಯೋರ್ವರು ಕೇವಲ ಒಂದು ಪಾಕೆಟ್‌ ಹಾಲಿನಿಂದಾಗಿ 77,000 ರೂ.ಹಣ ಕಳೆದುಕೊಂಡಿದ್ದಾರೆ.

ಹೌದು, ಆನ್‌ಲೈನ್ ಶಾಪಿಂಗ್ ಇದೀಗ ಎಲ್ಲರಿಗೂ ಮೆಚ್ಚಿನ ಆಯ್ಕೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಏನನ್ನು ಬೇಕಾದರೂ ಇಲ್ಲಿ ಖರೀದಿಸಬಹುದು. ಅಂದರೆ ದಿನಸಿ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳು ಇಲ್ಲಿ ಸಿಗಲಿವೆ. ಆದರೆ ಸ್ಕ್ಯಾಮರ್‌ಗಳು ಇದರಲ್ಲೂ ತನ್ನ ದುಷ್ಟತನವನ್ನು ತೋರಿಸುತ್ತಿದ್ದಾರೆ. ಈ ಕಾರಣಕ್ಕೆ ಈಗ ಈ ಮಹಿಳೆ ಇಷ್ಟು ಹಣ ಕಳೆದುಕೊಂಡಿರುವುದು. ಹಾಗಿದ್ರೆ, ಈ ಮೋಸವನ್ನು ಹೇಗೆ ಮಾಡಲಾಗಿದೆ?, ಈ ರೀತಿಯ ವಂಚನೆಗಳಿಂದ ಪಾರಾಗುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹಾಳಾದ ಹಾಲಿನಿಂದಾಗಿ ಆನ್‌ಲೈನ್‌ ಮೂಲಕ 77,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ!..

ಹಾಳಾದ ಹಾಲಿನಿಂದ ಭಾರೀ ಹಣ ಕಳೆದುಕೊಂಡ ಮಹಿಳೆ: ಕಸ್ತೂರಬಾ ನಗರದ ನಿವಾಸಿಯೋರ್ವರು ಮಾರ್ಚ್ 18 ರಂದು ಆನ್‌ಲೈನ್ ಮೂಲಕ ಹಾಲನ್ನು ಆರ್ಡರ್ ಮಾಡಿದ್ದರು. ಆದರೆ ಹಾಳಾಗಿದ್ದ ಹಾಲನ್ನು ಅವರಿಗೆ ನೀಡಲಾಗಿದೆ. ಇದರಿಂದಾಗಿ ಮರುಪಾವತಿ ಮಾಡಿ ಎಂದು ಆನ್‌ಲೈನ್ ಮೂಲಕ ಕಸ್ಟಮರ್ ಕೇರ್ ಸಂಖ್ಯೆ ಪಡೆದು ಕೇಳಿಕೊಂಡಿದ್ದಾರೆ. ದುರಂತ ಎಂದರೆ ಆನ್‌ಲೈನ್‌ನಲ್ಲಿ ಇದ್ದದ್ದು ವಂಚನೆಯ ಸಂಖ್ಯೆ.

ಗ್ರಾಹಕ ಸೇವಾ ಕಾರ್ಯನಿರ್ವಾಹಕನಂತೆ ನಟಿಸಿದ ವಂಚಕ, ಹಾಳಾದ ಹಾಲನ್ನು ಹಿಂದಿರುಗಿಸುವ ಅಗತ್ಯವಿಲ್ಲ. ಆದರೆ, ನಾವು ಹೇಳಿದ ರೀತಿ ಕೆಲವು ಸೂಚನೆಗಳನ್ನು ಅನುಸರಿಸಿದರೆ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದಾನೆ. ಈ ವೇಳೆ ಮಹಿಳೆಯು UPI ಐಡಿ ಸಂಖ್ಯೆ ಇರುವ ಮೆಸೆಜ್ ಅನ್ನು ವಾಟ್ಸಾಪ್‌ ಮೂಲಕ ಸ್ವೀಕರಿಸಿದ್ದಾರೆ. ಅಲ್ಲದೆ ಮರುಪಾವತಿ ಮಾಡಲು ಫೋನ್‌ ಪೇ ಬಳಕೆ ಮಾಡಿ ಎಂದೂ ಸಹ ವಂಚಕರು ಮಹಿಳೆಗೆ ತಿಳಿಸಿದ್ದಾರೆ.

ಹಾಳಾದ ಹಾಲಿನಿಂದಾಗಿ ಆನ್‌ಲೈನ್‌ ಮೂಲಕ 77,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ!..

ಅದರಂತೆ ಮಹಿಳೆಗೆ ಹಣವನ್ನು ವರ್ಗಾಯಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಎಂದು ಹೇಳಿದ್ದಾರೆ. ಅಲ್ಲಿ ವಂಚಕರು ನೀಡಲಾದ UPI ಐಡಿಯನ್ನು ನಮೂದಿಸಿದ್ದಾರೆ. ಇದೆಲ್ಲಾ ಆದ ಮೇಲೆ ಆಕೆಯ UPI ಪಿನ್ ನಮೂದಿಸಲು ತಿಳಿಸಲಾಗಿದೆ. ಇದ್ಯಾವುದೂ ಮೋಸ ಎಂದು ಅರಿಯದ ಮಹಿಳೆ ವಂಚಕರು ಏನೆಲ್ಲಾ ಹೇಳಿದರೋ ಅದನ್ನು ಅನುಸರಿಸಿದ್ದಾರೆ. ಪರಿಣಾಮ ಇವರ ಖಾತೆಗೆ ಹಣ ಬರುವ ಬದಲಾಗಿ ಖಾತೆಯಿಂದ 77,000 ರೂ.ಗಳ ಹಣ ಬೇರೆ ಖಾತೆಗೆ ಹೋಗಿದೆ.

ಇಷ್ಟೆಲ್ಲಾ ಆದ ಮೇಲೆ ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡು ಪೊಲೀಸರಿಗೆ ತಿಳಿಸಿದ್ದಾರೆ. ವರದಿಯ ಪ್ರಕಾರ, ಅಧಿಕಾರಿಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಸ್ಕ್ಯಾಮರ್ ಖಾತೆಯನ್ನು ಸ್ಥಗಿತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಗಮನಿಸಬೇಕಾದ ವಿಷಯ ಏನೆಂದರೆ ಇದು ಒಂದು ಚಿಕ್ಕ ಪ್ರಕರಣ ಅಷ್ಟೇ. ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಇದೇ ರೀತಿಯ ಫೋನ್ ವಂಚನೆಗಳಿಗೆ ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ. ಹಾಗಿದ್ರೆ ನೀವು ಈ ರೀತಿಯ ವಂಚನೆಗಳಿಗೆ ಬಲಿಯಾಗುವುದು ಬೇಡ ಎಂದರೆ ಈ ಸಲಹೆಗಳನ್ನು ಗಮನಿಸಿ.

ಹಾಳಾದ ಹಾಲಿನಿಂದಾಗಿ ಆನ್‌ಲೈನ್‌ ಮೂಲಕ 77,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ!..

- ಯಾವುದೇ ವಿಷಯಕ್ಕೆ ಸಂಬಂದಿಸಿದಂತೆ ಗ್ರಾಹಕ ಸೇವಾ ನಂಬರ್‌ ಅನ್ನು ಗೂಗಲ್‌ನಿಂದ ಪಡೆದುಕೊಳ್ಳಬೇಡಿ. ಬದಲಾಗಿ ಅಧಿಕೃತ ವೆಬ್‌ಸೈಟ್ ಅಥವಾ ಆಪ್‌ ಮೂಲಕ ನೇರವಾಗಿ ಗ್ರಾಹಕ ಬೆಂಬಲ ಸಂಖ್ಯೆಗಳು ಮತ್ತು ಇಮೇಲ್‌ಗಳನ್ನು ಬಳಕೆ ಮಾಡಿಕೊಳ್ಳಿ. ಜೊತೆಗೆ ಈ ಸಂಖ್ಯೆಗಳನ್ನು ಎರಡೆರಡು ಬಾರಿ ಪರಿಶೀಲಿಸಿ.

- ಹಣಕಾಸಿಗೆ ಸಂಬಂಧಿಸಿದಂತೆ ಅದರಲ್ಲೂ ಮರುಪಾವತಿ ಅಥವಾ ಇತರೆ ಸಹಾಯದ ವಿಷಯಕ್ಕೆ ಸಂಬಂಧಿಸಿದಂತೆ ಅಪೇಕ್ಷಿಸದ ಕರೆಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ. ಈ ವೇಳೆ ಅವರು ಯಾವುದೇ ಬ್ಯಾಂಕಿನ ಮಾಹಿತಿಯನ್ನು ಓಟಿಪಿಯನ್ನು ಕೇಳಬಹುದು. ಆದ ಕಾರಣ ನೀವು ಯಾವ ಮಾಹಿತಿಯನ್ನು ಅವರ ಜೊತೆಗೆ ಶೇರ್‌ ಮಾಡಿಕೊಳ್ಳಬೇಡಿ.

- ನೀವು ಮೋಸದ ವ್ಯಕ್ತಿಗಳ ಜೊತೆಗೆ ಆನ್‌ಲೈನ್‌ನಲ್ಲಿ ಸಂವಹನ ನಡೆಸುತ್ತಿರುವುದು ನಿಮಗೆ ಅರಿವಾದ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಮಾಡಿ ಅಥವಾ ಸಹಾಯಕ್ಕಾಗಿ ಪ್ಲಾಟ್‌ಫಾರ್ಮ್‌ನ ಅಧಿಕೃತ ಬೆಂಬಲ ಚಾನಲ್‌ಗಳನ್ನು ಸಂಪರ್ಕಿಸಿ. ಈ ಮೂಲಕ ನೀವು ನಿಮ್ಮ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ಭದ್ರವಾಗಿ ಇಟ್ಟುಕೊಳ್ಳಬಹುದು.

Best Mobiles in India

English summary
a bangalore woman has lost a lot of money due to online fraud. she has lost Rs 77,000 while going to report about spoiled milk.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+