Online scam: ಆನ್‌ಲೈನ್‌ನಲ್ಲಿ ಅಫರ್ ಬೆಲೆಗೆ ಹಸುಗಳ ಮಾರಾಟ! ಅನ್ನದಾತನಿಗೆ ಮಹಾ ಮೋಸ
ಆನ್‌ಲೈನ್‌ನಲ್ಲಿ (Online) ಇಂದು ಎಲ್ಲವನ್ನೂ ಸೇಲ್ ಮಾಡಲಾಗುತ್ತಿದೆ. ಅದರಲ್ಲೂ ಈ ಹಿಂದೆ ಸೀಮಿತ ನಗರ ಅಥವಾ ಪಟ್ಟಣಗಳಲ್ಲಿ ಮಾತ್ರ ಲಭ್ಯ ಇದ್ದ ಈ ಸೇವೆ ಇಂದು ಹಳ್ಳಿ ಹಳ್ಳಿಗೂ ವ್ಯಾಪಿಸಿದ್ದು, ಇರುವ ಸ್ಥಳಕ್ಕೆ ಬೇಕಾದುದ್ದನ್ನು ತರಿಸಿಕೊಳ್ಳುತ್ತಿದ್ದಾರೆ.
ಹೌದು, ಆನ್‌ಲೈನ್ ಶಾಪಿಂಗ್‌ನಲ್ಲಿ ಏನು ತಾನೆ ಸಿಗುವುದಿಲ್ಲ ಹೇಳಿ. ಸೂಜಿಯಿಂದ ಹಿಡಿದು ದೊಡ್ಡ ದೊಡ್ಡ ವಾಹನದವರೆಗೂ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಈಗ ಹಸುಗಳನ್ನೂ (Cows) ಸಹ ಖರೀದಿ ಮಾಡಬಹುದು ಎಂದರೆ ನೀವು ನಂಬುತ್ತೀರಾ?. ದುರಂತ ಏನೆಂದರೆ ಇಲ್ಲೋರ್ವರು ರಿಯಾಯಿತಿ ದರದಲ್ಲಿ ಹಸುಗಳನ್ನು ಖರೀದಿ ಮಾಡಲು ಹೋಗಿ ಹಣ ಕಳೆದುಕೊಂಡಿದ್ದಾರೆ. ಈ ಘಟನೆ ರೈತರಿಗೆ ಎಚ್ಚರಿಕೆ ನೀಡುವಂತೆ ಇದೆ. ಹಾಗಿದ್ರೆ, ಏನಿದು ಮೋಸ, ರೈತನನ್ನು ಬಲಿಪಶು ಮಾಡಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆನ್‌ಲೈನ್‌ನಲ್ಲಿ ಹಸು ಮಾರಾಟ: ಗುರುಗ್ರಾಮ್‌ನಲ್ಲಿ ಈ ಘಟನೆ ನಡೆದಿದೆ. ರೈತನೋರ್ವ ರಿಯಾಯಿತಿ ದರದಲ್ಲಿ ಹಸುಗಳನ್ನು ಖರೀದಿಸಲು ಮುಂದಾಗಿ ಆನ್‌ಲೈನ್ ಹಗರಣದಲ್ಲಿ 22,000 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಪ್ರಕರಣವನ್ನು ಇತ್ತೀಚೆಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಮೂಲಕ ಈ ರೀತಿಯೂ ಮೋಸ ಮಾಡಲಾಗುತ್ತಿದೆ ಎಂದು ಜನರು ಎಚ್ಚೆತ್ತುಕೊಳ್ಳುವಂತೆ ಆಗಿದೆ.
ಗುರ್‌ಗಾಂವ್‌ನ ಪಂದಳದಲ್ಲಿ ವಾಸಿಸುವ 50 ವರ್ಷದ ಸುಖಬೀರ್ ಎಂಬ ರೈತ ಈ ಮೋಸದ ಹಗರಣಕ್ಕೆ ಬಿದ್ದವರು. ಇನ್ನು ಅವರ ಮಗ ಪರ್ವೀನ್ (30) ಈ ಸಂಬಂಧ ಮಾಹಿತಿ ನೀಡಿದ್ದು, ಅವರು ಆನ್‌ಲೈನ್‌ನಲ್ಲಿ ಹಸುಗಳನ್ನು ಖರೀದಿ ಮಾಡಿದ್ರೆ ಹೆಚ್ಚಿನ ಆಫರ್ ಪಡೆಯಬಹುದು ಎಂದುಕೊಂಡು ಮೋಸ ಹೋಗಿದ್ದಾರೆ ಎಂದು ವಿವರಿಸಿದ್ದಾರೆ. ನನ್ನ ತಂದೆ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾರೆ. ಅದರಲ್ಲಿ ಯೂಟ್ಯೂಬ್ ಹಾಗೂ ಗೂಗಲ್ ಮೂಲಕ ಮಾಹಿತಿ ಮನರಂಜನೆ ಪಡೆಯುತ್ತಿರುತ್ತಾರೆ.
ಇದೇ ವೇಳೆ ಅವರಿಗೆ ಒಂದು ವೆಬ್‌ಸೈಟ್ ಕಾಣಿಸಿದ್ದು, ಅದರಲ್ಲಿ ಕಡಿಮೆ ಬೆಲೆಗೆ ಹಸುಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದ ಮಾಹಿತಿ ಗಮನಿಸಿದ್ದಾರೆ. ಇದಾದ ನಂತರದಲ್ಲಿ ಹಸುಗಳ ಬಗ್ಗೆ ವಿಚಾರಿಸಲು ಪ್ರಯತ್ನಿಸಿದಾಗ, ವಂಚಕರು ವಾಟ್ಸಾಪ್‌ನಲ್ಲಿ ಹಸುಗಳ ಫೋಟೋಗಳನ್ನು ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಆರಂಭದಲ್ಲಿ ಪ್ರತಿ ಹಸುವಿಗೆ 35,000 ರೂ.ಗಳ ಬೆಲೆ ಹೇಳಿದ್ದಾರೆ. ಆದರೆ ನಾಲ್ಕು ಹಸುಗಳನ್ನು ಖರೀದಿ ಮಾಡುತ್ತೇನೆ ಒಂದು ಅಂತಿಮ ರೇಟ್ ಹೇಳಿ ಎಂದಾಗ ಒಟ್ಟಾರೆ 95,000 ರೂ.ಗಳಿಗೆ ತಿಳಿಸಿದ್ದಾರೆ. ಇದರಿಂದ ಖುಷಿಯಾದ ರೈತ ಮುಂದಿನ ಹಣಕಾಸಿನ ವ್ಯವಹಾರ ಮಾಡಲು ಸಜ್ಜಾಗಿದ್ದಾರೆ. ಅಲ್ಲದೆ ಅವರು ಗೋಶಾಲೆ ಅಡಿಯಲ್ಲಿ ಹಸುಗಳನ್ನು ನೋಂದಾಯಿಸುವುದಾಗಿ ಸುಳ್ಳು ಭರವಸೆ ಸಹ ನೀಡಿದ್ದಾರೆ ಎಂದು ವಿವರಿಸಿದ್ದಾರೆ.
ಇದು ಕಾನೂನುಬದ್ದವಾಗಿದೆ ಎಂದು ರೈತ ಜನವರಿ 19 ಮತ್ತು 20 ರ ನಡುವೆ ಒಟ್ಟು 22,999 ರೂ.ಗಳ ವಹಿವಾಟು ನಡೆಸಿದ್ದಾರೆ. ಆದರೆ ಅವರು ಹೆಚ್ಚುವರಿ ಹಣವನ್ನು ಒತ್ತಾಯಿಸಿದಾಗ. ಸುಖ್ಬೀರ್ ಇದು ಮೋಸ ಎಂದು ಅರಿತುಕೊಂಡಿದ್ದಾರೆ. ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಇಂತಹ ವಂಚನೆಗಳಿಂದ ಸುರಕ್ಷಿತವಾಗಿರಲು ಕೆಲವು ಅಗತ್ಯ ಸಲಹೆಗಳು:
ಮಾರಾಟಗಾರರನ್ನು ಪರಿಶೀಲಿಸಿ: ಯಾವಾಗಲೂ ಮಾರಾಟಗಾರರ ರುಜುವಾತುಗಳು ಮತ್ತು ದೃಢೀಕರಣವನ್ನು ಪರಿಶೀಲಿಸಿ, ವಿಶೇಷವಾಗಿ ಆನ್‌ಲೈನ್ ವಹಿವಾಟುಗಳೊಂದಿಗೆ ವ್ಯವಹರಿಸುವಾಗ. ಹಿಂದಿನ ಗ್ರಾಹಕರಿಂದ ವಿಮರ್ಶೆಗಳು, ರೇಟಿಂಗ್‌ಗಳು ಮತ್ತು ಪ್ರಶಂಸಾಪತ್ರಗಳಿಗಾಗಿ ನೋಡಿ.
ಅವಾಸ್ತವಿಕ ಕೊಡುಗೆಗಳನ್ನು ತಪ್ಪಿಸಿ: ನಿಜವಾಗಲು ತುಂಬಾ ಒಳ್ಳೆಯದು ಎಂದು ತೋರುವ ಡೀಲ್‌ಗಳ ಬಗ್ಗೆ ಜಾಗರೂಕರಾಗಿರಿ. ಅವಾಸ್ತವಿಕವಾಗಿ ಕಡಿಮೆ ಬೆಲೆಗಳು ಹಗರಣವನ್ನು ಸೂಚಿಸಬಹುದು. ಇದರೊಂದಿಗೆ ಕ್ರೆಡಿಟ್ ಕಾರ್ಡ್‌ಗಳು ಅಥವಾ ವಿಶ್ವಾಸಾರ್ಹ ಆನ್‌ಲೈನ್ ಪಾವತಿ ಪ್ಲಾಟ್‌ಫಾರ್ಮ್‌ಗಳಂತಹ ಖರೀದಿದಾರರ ರಕ್ಷಣೆಯನ್ನು ನೀಡುವ ಸುರಕ್ಷಿತ ಪಾವತಿ ವಿಧಾನಗಳನ್ನು ಆಯ್ಕೆಮಾಡಿ.

ವಿವರಗಳು ಮತ್ತು ಸ್ಥಳ ದೃಢೀಕರಿಸಿ: ಯಾವುದೇ ಪಾವತಿಗಳು ಅಥವಾ ವ್ಯವಹಾರ ಮಾಡುವ ಮೊದಲು, ಮಾರಾಟಗಾರರ ಗುರುತು, ಸರಕುಗಳ ಸ್ಥಳ ಮತ್ತು ವಹಿವಾಟಿನ ನಿಯಮಗಳಂತಹ ವಿವರಗಳನ್ನು ಪರಿಶೀಲಿಸಿ. ಸ್ಪಷ್ಟ ಮಾಹಿತಿ ನೀಡಲು ಹಿಂಜರಿಯುವ ಮಾರಾಟಗಾರರ ಬಗ್ಗೆ ಎಚ್ಚರದಿಂದಿರಿ.


Click it and Unblock the Notifications








