ಜಿಯೋಗಾಗಿಯೇ ಟ್ರಾಯ್ ನಿಯಮ ಬದಲು!?.ಟ್ರಾಯ್ ಅಧ್ಯಕ್ಷ ಹೇಳಿದ್ದು ಹೀಗೆ!!
ರಚಾನಾತ್ಮಕ ಟೀಕೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ನಮ್ಮನ್ನು ಅಪ್ರಮಾಣಿಕರು ಎಂದು ನಿರ್ಧರಿಸುವುದು ತಪ್ಪು ಎಂದು ಹೇಳಿದ್ದಾರೆ.!!
ಮೊಬೈಲ್ ಅಂತರ್‌ಬಳಕೆ ಶುಲ್ಕವನ್ನು (ಇಂಟರ್‌ಕನೆಕ್ಟ್ ಚಾರ್ಜ್) ಕಡಿಮೆಗೊಳಿಸಿ ಬದಲಾವಣೆ ಮಾಡಿದ್ದ ಟ್ರಾಯ್ ಬಗ್ಗೆ ಅಸಂಭದ್ದವಾಗಿ ಟೀಕಿಸುತ್ತಿರುವುದು ಸರಿಯಲ್ಲ. ಯಾವುದೇ ಸಾಕ್ಷಾಧಾರ ಇಲ್ಲದೆ ಟ್ರಾಯ್ ಮತ್ತು ಅದರ ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳಿಂದ ತಮಗೆ ನೋವಾಗಿದೆ ಎಂದು ಟ್ರಾಯ್ ಅಧ್ಯಕ್ಷ ಆರ್ ಎಸ್ ಶರ್ಮಾ ಹೇಳಿದ್ದಾರೆ.!!
ಮೊಬೈಲ್ ಅಂತರ್‌ಬಳಕೆ ಕರೆಗಳನ್ನು ನಿರ್ವಹಿಸುತ್ತಿರುವಗ ವೆಚ್ಚವನ್ನು ಪಾರದರ್ಶಕ ರೀತಿಯಲ್ಲಿ ಲೆಕ್ಕಹಾಕಲಾಗಿದ್ದು, ಇದನ್ನು ಯಾರು ಬೇಕಾದರೂ ಪರಿಶೀಲನೆ ನಡೆಸಬಹುದು. ರಚಾನಾತ್ಮಕ ಟೀಕೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ನಮ್ಮನ್ನು ಅಪ್ರಮಾಣಿಕರು ಎಂದು ನಿರ್ಧರಿಸುವುದು ತಪ್ಪು ಎಂದು ಹೇಳಿದ್ದಾರೆ.!!

ಇತ್ತೀಚಿಗಷ್ಟೆ ಟ್ರಾಯ್ ಮೊಬೈಲ್ ಅಂತರ್‌ಬಳಕೆ ಶುಲ್ಕವನ್ನು ಶೇಕಡ 58%ನಷ್ಟು ಕಡಿತಗೊಳಿಸಿತ್ತು. ಇದರಿಂದಾಗಿ ಒಂದು ಕಂಪೆನಿ ಮತ್ತೊಂದು ಕಂಪೆನಿಗೆ ನೀಡಬೇಕಾಗಿದ್ದ 14 ಪೈಸೆಯ ಬದಲಾಗಿ ಕೇವಲ 6 ಪೈಸೆಗೆ ಇಳಿದಿತ್ತು. ಇದರಿಂದ ಕೆಲವು ಟೆಲಿಕಾಂ ಕಂಪೆನಿಗಳಿಗೆ ಭಾರಿ ಸಹಾಯವಾಗುತ್ತದೆ ಎಂದು ಆರೋಪಗಳು ಎದುರಾಗಿದ್ದವು.!!

ಟೆಲಿಕಾಂ ವಲಯದಲ್ಲಿ ಹರಿದಾಡುತ್ತಿರುವ ಮಾತಿನಂತೆ ಟ್ರಾಯ್ ಜಿಯೋಗೆ ಸಹಕಾರಿಯಾಗುವಂತೆ ಮೊಬೈಲ್ ಅಂತರ್‌ಬಳಕೆ ಶುಲ್ಕವನ್ನು ಕಡಿಮೆ ಮಾಡಿದೆ. ಇದರಿಂದ ಜಿಯೋಗೆ ಸಾವಿರಾರು ಕೋಟಿ ಹಣ ಉಳಿತಾಯವಾಗಲಿದ್ದು, ಏರ್‌ಟೆಲ್ ಹೆಡೆ ಮುರಿಯುವ ಪ್ರಯತ್ನ ಎಂದು ಹೇಳಲಾಗಿದೆ.! ಜಿಯೋಗೆ ಟ್ರಾಯ್ ಸಹಾಯ ಮಾಡುತ್ತಿದೆ ಎಂಬ ಅನುಮಾನ ಕೂಡ ಸ್ಪಷ್ಟವಾಗಿದೆ.!!
ಓದಿರಿ: ವೈರಲ್ ಆಗುತ್ತಿದೆ ವಿಚಿತ್ರವಾದ 'ಸುಳ್ಳು ವಾಟ್ಸ್ಆಪ್' ಆಪ್!!


Click it and Unblock the Notifications








