ಒಪೇರಾ ಬ್ರೌಸರ್ ವಿಜಯದ ಹಾದಿಯತ್ತ

Written By:

ನಾರ್ವೆಯ ಒಪೇರಾ ಸಾಫ್ಟ್‌ವೇರ್ ಇದೀಗ ತನ್ನ ಮೊಬೈಲ್ ಫೋನ್ ಇಂಟರ್ನೆಟ್ ಬಳಕೆದಾರರ ಸಂಖ್ಯೆಯನ್ನು 100 ಮಿಲಿಯನ್‌ನತ್ತ ಗುರಿ ಇಟ್ಟಿದೆ. ಈಗಾಗಲೇ ಇದು 50 ಮಿಲಿಯನ್ ಬಳಕೆದಾರರ ಗುರಿಯನ್ನು ದಾಟಿದ್ದು ಈ ಸಂಖ್ಯೆಯನ್ನು ಕಂಪೆನಿಯು ತಲುಪುವ ದಿನಗಳು ದೂರವಿಲ್ಲ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಲಾರ್ಸ್ ಬೋಯ್ಲಿಸನ್ ಹೇಳಿದ್ದಾರೆ.

ಇದನ್ನೂ ಓದಿ: ಫೋನ್‌ನ ವೇಗವನ್ನು ವರ್ಧಿಸುವ ಸರಳ ಸಲಹೆಗಳು

ಭಾರತದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ಗಳು ಉತ್ತಮ ಆಯ್ಕೆಯಾಗಿದ್ದು ನಿಜಕ್ಕೂ ಇದು ಲಾಭಕರವಾಗಿರುವ ಮಾರುಕಟ್ಟೆ ಉದ್ಯಮವಾಗಿದೆ. ಭಾರತದಲ್ಲಿ ನಮ್ಮನ್ನು ಹೆಚ್ಚು ಡೌನ್‌ಲೋಡ್ ಮಾಡುತ್ತಿದ್ದು ಜಿಮೇಲ್‌ನಂತಹ ಜಾಗತಿಕ ದೈತ್ಯನಿಗಿಂತಲೂ ನಾವು ಉದ್ಯಮದಲ್ಲಿ ಬೆಳೆಯುತ್ತಿದ್ದೇವೆ ಎಂದು ಕಂಪೆನಿ ತಿಳಿಸಿದೆ.

100 ಮಿಲಿಯನ್‌ಗೆ ಗುರಿ ಇರಿಸಿರುವ ಒಪೇರಾ

"ಆಂಡ್ರಾಯ್ಡ್ ಫೋನ್ ಜಗತ್ತಿನಲ್ಲಿ ಒಪೇರಾ ಟಾಪ್ ಐದು ಪ್ಲೇಯರ್‌ಗಳಲ್ಲಿ ಮೇಲಿನ ಸ್ಥಾನದಲ್ಲಿದೆ. ಏರುತ್ತಿರುವ ಮಾರುಕಟ್ಟೆಯಲ್ಲಿ ನಾವು ಎಷ್ಟು ಸ್ಥಿತಿವಂತರು ಎಂಬುದನ್ನು ಇದು ತೋರಿಸುತ್ತದೆ" ಬಾಯ್ಲಿಸನ್ ತಿಳಿಸಿದೆ.

English summary
This article tells about Norway's Opera Software now targets 100 million Indian users for its mobile phone Internet browser, after hitting the 50 million mark last month, Chief Executive Lars Boilesen told Reuters on Friday.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot