ಫೋನ್‌ನ ವೇಗವನ್ನು ವರ್ಧಿಸುವ ಸರಳ ಸಲಹೆಗಳು

By Shwetha
|

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಫೋನ್‌ನ ಬ್ರ್ಯಾಂಡ್ ನೋಡಿ ಖರೀದಿಸುವ ಹಂಬಲ ಹೆಚ್ಚಿನ ಗ್ರಾಹಕರದ್ದಾಗಿರುತ್ತದೆ. ಫೋನ್‌ನ ಗುಣಮಟ್ಟ ತಂತ್ರಜ್ಞಾನ ಇರುವುದೇ ಅವುಗಳು ಮಾರುಕಟ್ಟೆಗೆ ಬರುವ ಬ್ರ್ಯಾಂಡ್ ಆಧಾರದ ಮೇಲೆ ಎಂಬುದು ಖರೀದಿಸುವ ಗ್ರಾಹಕರ ಲೆಕ್ಕಾಚಾರವಾಗಿದೆ. ಐಫೋನ್ ಅನ್ನು ಮೆಚ್ಚಿ ಕೊಂಡುಕೊಳ್ಳುವ ಗ್ರಾಹಕರು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ. ಅಂತಹ ಹೆಸರನ್ನು ಅದು ಮಾರುಕಟ್ಟೆಯಲ್ಲಿ ಉಳಿಸಿಕೊಂಡಿದೆ ಎಂಬುದನ್ನು ನೀವು ಗಮನಿಸಬೇಕು.

(ಇದನ್ನೂ ಓದಿ: ಶ್ಯೋಮಿ ರೆಡ್ಮೀ ನೋಟ್ ಮತ್ತು ನೆಕ್ಸಸ್ 6 ಭಿನ್ನತೆ ಏನು?)

ಇನ್ನು ಬಜೆಟ್ ಫೋನ್ ಕಡೆಗೆ ಗಮನಹರಿಸುವಾಗ ಆಂಡ್ರಾಯ್ಡ್ ಹೆಚ್ಚಿನವರ ಆಯ್ಕೆಯಾಗಿರುತ್ತದೆ. ಆಂಡ್ರಾಯ್ಡ್ ಬಳಸಲು ಸುಲಭ ಮತ್ತು ಅವುಗಳು ಸ್ನೇಹಿ ಫೋನ್‌ಗಳಾಗಿ ಇರುವುದರಿಂದ ಆಂಡ್ರಾಯ್ಡ್ ಕಡೆಗೆ ಎಲ್ಲಾ ಖರೀದಿದಾರರ ಚಿತ್ತ ಹರಿಯುವುದು ಸಾಮಾನ್ಯವಾಗಿದೆ. ಫೋನ್ ಯಾವುದೇ ಆಗಿರಲಿ ಆದರೆ ಅದರ ಕಾಳಜಿ ಮತ್ತು ಬಳಸುವಿಕೆಯ ಉತ್ತಮತೆಯನ್ನು ಗಮನಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ. ಫೋನ್ ಅನ್ನು ನಾವು ಬಳಸುವ ಮತ್ತು ಅದನ್ನು ಜೋಪಾನ ಮಾಡಿಕೊಳ್ಳುವ ಆಧಾರದ ಮೇಲೆ ಅದರ ಬಾಳಿಕೆ ಬರುತ್ತದೆ. ಹಾಗಿದ್ದರೆ ಫೋನ್‌ನ ಜಾಗರೂಕತೆಯನ್ನು ನಾವು ಹೇಗೆ ಮಾಡಬೇಕು ಎಂಬುದನ್ನು ಕೆಳಗಿನ ಸರಳ ವಿಧಾನದಲ್ಲಿ ಅರಿತುಕೊಳ್ಳೋಣ.

#1

#1

ನಿಮ್ಮ ಫೋನ್ ವೇಗವಾಗಿ ಕಾರ್ಯನಿರ್ವಹಿಸಬೇಕು ಎಂದಾದಲ್ಲಿ ಫೋನ್‌ನ ಬ್ರೌಸರ್ ಅನ್ನು ಜಾಗರೂಕತೆಯಿಂದ ಆಯ್ಕೆ ಮಾಡಿ. ಆಂಡ್ರಾಯ್ಡ್ ಬಳಕೆದಾರರು ಒಪೇರಾ ಮಿನಿಯ ಬದಲಿಗೆ ಒಪೇರಾ ಮೊಬೈಲ್ ಬಳಸುವುದು ಸೂಕ್ತವಾಗಿದೆ. ಇದು ಫ್ಲ್ಯಾಶ್ ಮತ್ತು 3ಡಿ ಗ್ರಾಫಿಕ್‌ಗಳಿಗೆ ಬೆಂಬಲವನ್ನು ಒದಗಿಸುತ್ತದೆ.

#2

#2

ಆಂಡ್ರಾಯ್ಡ್ ಬೂಸ್ಟರ್ ಮತ್ತು ಆಂಡ್ರಾಯ್ಡ್ ಅಸಿಸ್ಟೆಂಟ್‌ನಂತೆ ಕೆಲವೊಂದು ಅಪ್ಲಿಕೇಶನ್‌ಗಳು ಹಿನ್ನಲೆಯಲ್ಲಿ ಅಪ್ಲಿಕೇಶನ್ ರನ್ ಆಗದಂತೆ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ. ಇದು ನಿಮ್ಮ ಬ್ಯಾಟರಿ ಉಳಿಸುತ್ತದೆ.

#3

#3

ಜ್ಯೂಸ್ ಡಿಫೆಂಡರ್ ಹೆಸರಿನ ಹೆಚ್ಚು ಜನಪ್ರಿಯ ಬ್ಯಾಟರಿ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್‌ಗಳು ನಿಮ್ಮ ಬ್ಯಾಟರಿ ಉಳಿಕೆ ಮಾಡುವಲ್ಲಿ ನೆರವನ್ನು ಒದಗಿಸುತ್ತದೆ.

#4

#4

ನಿಮ್ಮ ಫೋನ್‌ನಲ್ಲಿ ಯಾವೆಲ್ಲಾ ಅಪ್ಲಿಕೇಶನ್‌ಗಳು ಎಷ್ಟು ಬ್ಯಾಟರಿಯನ್ನು ಕಬಳಿಸುತ್ತಿವೆ ಎಂಬುದನ್ನು ಮನಗಾಣಿರಿ. ಹೆಚ್ಚಿನ ಅಪ್ಲಿಕೇಶನ್‌ಗಳು ಬ್ಯಾಟರಿ ನುಂಗಿ ಹಾಕುವ ವಿಧದಲ್ಲಿರುತ್ತವೆ. ಆದ್ದರಿಂದ ಅಪ್ಲಿಕೇಶನ್‌ಗಳು ಹೆಚ್ಚು ಹೆಚ್ಚು ಬ್ಯಾಟರಿಯನ್ನು ನುಂಗಿ ಹಾಕುತ್ತವೆ ಎಂದಾದಲ್ಲಿ ಅಂತಹ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಿರಿ.

#5

#5

ನಿಮ್ಮ ಫೋನ್‌ನ ಮೂಲಕ ನೆಟ್‌ವರ್ಕ್ ಹಂಚುವುದು ದುಬಾರಿ ಪ್ಯಾಕೇಜ್‌ಗಳ ಗಂಟನ್ನು ನಿಮಗೆ ಒದಗಿಸಬಹುದು. ನಿಮ್ಮ ಫೋನ್‌ನಿಂದ ಲ್ಯಾಪ್‌ಟಾಪ್‌ಗೆ 4ಜಿಯನ್ನು ನೀವು ಸಂಪರ್ಕ ಪಡಿಸುತ್ತೀರಿ ಎಂದಾದಲ್ಲಿ ಇದು ಹೆಚ್ಚಿನ ದುಡ್ಡನ್ನು ವಿಧಿಸಬಹುದು ಆದ್ದರಿಂದ ಈ ವಿಷಯದಲ್ಲಿ ಜಾಗರೂಕರಾಗಿರಿ.

#6

#6

ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳು ಪೂರ್ವ ಇನ್‌ಸ್ಟಾಲ್ ಮಾಡಿರುವ ಸ್ವೈಪ್ ಅನ್ನು ಹೊಂದಿರುತ್ತವೆ. ಯಾವುದೇ ಪಠ್ಯ ಇನ್‌ಪುಟ್ ಪ್ರದೇಶದಲ್ಲಿ ಸ್ವಲ್ಪ ಸೆಕುಂಡುಗಳ ಕಾಲ ದೀರ್ಘವಾಗಿ ಒತ್ತಿಹಿಡಿಯಿರಿ ಆಗ ಅದು ಇನ್‌ಪುಟ್ ವಿಧಾನವನ್ನು ಆರಿಸಲು ಪಾಪ್ ಅಪ್ ಮೆನುವನ್ನು ತೋರಿಸುತ್ತದೆ.

#7

#7

ನಿಮ್ಮ ಫೋನ್‌ನ ಸ್ಕ್ರೀನ್ ಲಾಕ್‌ಗಾಗಿ ಪಿನ್ ಅಥವಾ ಪಾಸ್‌ವರ್ಡ್ ನಮೂದಿಸಿ.

#8

#8

ಒಮ್ಮೊಮ್ಮೆ ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಸ್ಟೋರ್‌ನಿಂದ ಅಲ್ಲದೇ ಇರುವ ಅಪ್ಲಿಕೇಶನ್‌ಗಳು ಡೌನ್‌ಲೋಡ್ ಆಗಿರಬಹುದು. ಈ ಸಮಯದಲ್ಲಿ ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕಾಗುತ್ತದೆ. ಆಪ್ ಸ್ಟೋರ್‌ನಿಂದ ನೀವು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಲ್ಲ ಎಂದಾದಲ್ಲಿ ಹೆಚ್ಚು ಜಾಗರೂಕತೆ ವಹಿಸಿ. ಮತ್ತು ಸುರಕ್ಷತೆಗಾಗಿ ಆಪ್ ಸ್ಟೋರ್‌ ಅನ್ನೇ ಅವಲಂಬಿಸಿ.

#9

#9

ಆಂಟಿವೈರಸ್ ಸಾಫ್ಟ್‌ವೇರ್ ನಿಮ್ಮ ಫೋನ್‌ಗೆ ಕಾವಲುಗಾರನಿದ್ದಂತೆ. ವೈರಸ್‌ಗಳ ಹಾವಳಿಯನ್ನು ತಡೆಗಟ್ಟುವ ಆಂಟಿವೈರಸ್ ಫೋನ್‌ನ ಒಳಾಂಗಣ ಸುರಕ್ಷತೆಯನ್ನು ಮಾಡುತ್ತದೆ. ಆದ್ದರಿಂದ ಫೋನ್‌ನಲ್ಲಿ ಆಂಟಿವೈರಸ್ ಇರುವುದು ಅತ್ಯವಶ್ಯಕವಾಗಿದೆ.

#10

#10

ಯುರೋಪ್ ಮತ್ತು ಏಷ್ಯಾದಲ್ಲಿ ಮೊಬೈಲ್ ಪಾವತಿಗಳು ಈಗ ಅಭಿವೃದ್ಧಿ ಹೊಂದುತ್ತಿದೆ. ಇವುಗಳು ನಿಮ್ಮ ಫೋನ್ ಬಿಲ್ಲಿಗೆ ಹೆಚ್ಚಿನ ದರವನ್ನು ವಿಧಿಸುವ ತಾಕತ್ತನ್ನು ಪಡೆದುಕೊಂಡಿರುತ್ತವೆ. ಆದ್ದರಿಂದ ಮೊಬೈಲ್ ಪಾವತಿಗಳಿಂದ ಆದಷ್ಟು ದೂರವಿರಿ.

Best Mobiles in India

English summary
This article tells about you can speed up and optimize Android, iPhone users so stunned. There are 10 kinds to make Android faster than the iPhone, more efficient and safer method.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X