ಒಪ್ಪೊದಿಂದ ಫಾಸ್ಟ್‌ ಚಾರ್ಜಿಂಗ್ ಪವರ್‌ಬ್ಯಾಂಕ್‌ ಬಿಡುಗಡೆ!.ಬೆಲೆ ಜಸ್ಟ್‌ 1499ರೂ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಅಧಿಕ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತಿದ್ದರು ಸಹ ಸ್ಮಾರ್ಟ್‌ಫೋನ್‌ಗಳಿಗೆ ಬ್ಯಾಕ್‌ಅಪ್‌ ಅಗತ್ಯ ಇದ್ದೇ ಇದೆ. ಅದಕ್ಕಾಗಿ ಸ್ಮಾರ್ಟ್‌ಫೋನ್‌ಗಳಿಗೆ ಪವರ್‌ಬ್ಯಾಂಕ್‌ಗಳು ನೆರವಾಗುತ್ತಿದ್ದು, ವಿವಿಧ ಶಕ್ತಿ ಸಾಮರ್ಥ್ಯದಲ್ಲಿ ಪವರ್‌ಬ್ಯಾಂಕ್‌ಗಳು ಲಭ್ಯಿವೆ. ಈಗಾಗಲೇ ಪ್ರಮುಖ ಮೊಬೈಲ್‌ ಕಂಪನಿಗಳು ಪವರ್‌ಬ್ಯಾಂಕ್‌ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅದೇ ರೀತಿ ಈಗ 'ಒಪ್ಪೊ' ಸಹ ಒಂದು ಹೇವಿ ಪವರ್‌ಬ್ಯಾಂಕ್ ಡಿವೈಸ್‌ ಅನ್ನು ಲಾಂಚ್ ಮಾಡಿದೆ.

ಒಪ್ಪೊ

ಹೌದು, ಚೀನಾ ಮೂಲದ ಒಪ್ಪೊ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಹೊಸದಾಗಿ 10,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಈ ಡಿವೈಸ್‌ 20W ಸಾಮರ್ಥ್ಯದ VOOC ಫ್ಲ್ಯಾಶ್‌ ಚಾರ್ಜ್‌ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಅಮೆಜಾನ್ ಇ-ಕಾಮರ್ಸ್‌ ತಾಣದಲ್ಲಿ ಮತ್ತು ಆಫ್‌ಲೈನ್‌ ಮಾರುಕಟ್ಟೆಯಲ್ಲಿಯೂ ಈ ನೂತನ ಪವರ್‌ಬ್ಯಾಂಕ್ ಗ್ರಾಹಕರ ಖರೀದಿಗೆ ದೊರೆಯಲಿದೆ. ಈ ಡಿವೈಸ್‌ ಬೆಲೆಯು ಜಸ್ಟ್‌ 1499ರೂ.ಗಳು ಆಗಿದೆ.

ಪವರ್‌ಬ್ಯಾಂಕ್

ಒಪ್ಪೊದ ಈ ಹೊಸ ಪವರ್‌ಬ್ಯಾಂಕ್ ಒಟ್ಟು ಎರಡು ಚಾರ್ಜಿಂಗ್ ಪೋರ್ಟ್‌ ಆಯ್ಕೆಯನ್ನು ಒಳಗೊಂಡಿದ್ದು, ಎಲ್ಲ ಬಗೆಯ ಸ್ಮಾರ್ಟ್‌ಫೋನ್‌ಗಳಿಗೂ ಪೂರಕವಾಗಿದೆ. ಒಳಗಡೆ 2x 5000mAh ಸಾಮರ್ಥ್ಯದ ಎರಡು ಅಲ್ಯುಮಿನಿಯಮ್ arc ಬಾಡಿಯ ರಚನೆಯನ್ನು ಪಡೆದಿದ್ದು, 1x USB ಟೈಪ್‌-A ಪೋರ್ಟ್‌ ಹಾಗೂ 1x USB ಟೈಪ್‌-C ಪೋರ್ಟ್‌ ಮಾದರಿಯನ್ನು ಹೊಂದಿದೆ. ಬಾಹ್ಯವಾಗಿ ಬಟನ್‌ ನೀಡಲಾಗಿದೆ.

ಸೌಲಭ್ಯ

ವೇಗದ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರುವ ಈ ಪವರ್‌ಬ್ಯಾಂಕ್ ಕೇವಲ 30 ನಿಮಿಷದಲ್ಲಿ ಫೋನಿಗೆ ಶೇ.60% ಪರ್ಸೆಂಟ್ ಚಾರ್ಜ್ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಪವರ್‌ಬ್ಯಾಂಕ್‌ನಲ್ಲಿ ಸ್ಮಾರ್ಟ್‌ ಚಿಪ್ ಅಳವಡಿಸಲಾಗಿದ್ದು, ಔಟ್‌ಪುಟ್‌ ವಿದ್ಯುತ್ ಪ್ರವಹಿಸುವುದನ್ನು ನಿಯಂತ್ರಿಸುತ್ತದೆ. ಜತೆಗೆ ಸರ್ಕ್ಯೂಟ್‌ನಂತಹ ಅವಘಡಗಳಿಂದ ರಕ್ಷಣೆಗಾಗಿ ಒಟ್ಟು 13 ಲೇಯರ್‌ಗಳ ರಕ್ಷಣೆಯನ್ನು ಒಳಗೊಂಡಿದೆ.

ಎಲ್‌ಇಡಿ ಲೈಟ್‌

ಪವರ್‌ಬ್ಯಾಂಕ್‌ನಲ್ಲಿರುವ ಬ್ಯಾಟರಿ ಬ್ಯಾಕ್‌ಅಪ್‌ ಸ್ಟೇಟಸ್‌ ತಿಳಿಸಲು ನಾಲ್ಕು ಎಲ್‌ಇಡಿ ಲೈಟ್‌ ಇಂಡಿಕೇಟರ್‌ಗಳನ್ನು ನೀಡಲಾಗಿದೆ. VOOK ಫಾಸ್ಟ್‌ ಚಾರ್ಜಿಂಗ್ ಬೆಂಬಲಿತ ಸ್ಮಾರ್ಟ್‌ಫೋನ್‌ಗಳಿಗೆ ಈ ಪವರ್‌ಬ್ಯಾಂಕ್ ಅತ್ಯುತ್ತಮ ಸಪೋರ್ಟ್‌ ಒದಗಿಸಲಿದೆ. ಇಂತಹ ಹಲವು ವೈಶಿಷ್ಟತೆಗಳಿಂದಾಗಿ ಮಾರುಕಟ್ಟೆಯಲ್ಲಿನ 10,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳಲ್ಲಿ ಒಪ್ಪೊದ ಈ ಪವರ್‌ಬ್ಯಾಂಕ್‌ ಭಿನ್ನವಾಗಿ ಕಾಣಿಸುತ್ತದೆ.

Most Read Articles
Best Mobiles in India

English summary
OPPO 10000mAH VOOC Flash Charge power bank is priced at Rs. 1499 and will be available on Amazon.in and offline stores. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X