Just In
Don't Miss
- News
ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ
- Finance
ಮಾರ್ಚ್ 08ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ದರ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Movies
ಬಿಗ್ಬಾಸ್: ಒಂದು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಬದಲಾಯಿಸಿರುವ ಬಟ್ಟೆ ಎಷ್ಟು ಗೊತ್ತೆ?
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಪ್ಪೋ A12 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಫೀಚರ್ಸ್ ಹೇಗಿವೆ?
ಒಪ್ಪೋ ಕಂಪೆನಿಯ ಬಜೆಟ್ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದಾದ ಒಪ್ಪೋ A12 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ ಇಳಿಕೆ ಕಂಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ P35 SoC ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್ ಹೊಂದಿದೆ.

ಹೌದು, ಒಪ್ಪೋ ಕಂಪನಿಯ ಒಪ್ಪೋ A12 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ 500ರೂ. ಇಳಿಕೆ ಆಗಿದೆ. ಹೀಗಾಗಿ 3GB RAM+32GB ಮತ್ತು 4GB RAM+64GB ಸ್ಟೋರೇಜ್ ವೇರಿಯಂಟ್ ಮಾಡೆಲ್‌ಗಳ ಆಯ್ಕೆ ಪಡೆದಿದೆ. 3GB + 32GB ಸ್ಟೋರೇಜ್ ವೇರಿಯಂಟ್ ಮಾಡೆಲ್ ಬೆಲೆಯು 8,490ರೂ.ಗಳಿಗೆ ಸಿಗಲಿದೆ ಹಾಗೂ 4GB RAM+64GB ಸ್ಟೋರೇಜ್ ವೇರಿಯಂಟ್ ಮಾಡೆಲ್ ಬೆಲೆಯು 10,990ರೂ.ಗಳಿಗೆ ಲಭ್ಯ. ಹಾಗಾದರೇ ಒಪ್ಪೋ A12 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ಒಪ್ಪೋ A12 ಸ್ಮಾರ್ಟ್‌ಫೋನ್ 720 x 1520 ಪಿಕ್ಸೆಲ್ ಸ್ಕ್ರಿನ್ ರೆಸಲ್ಯೂಶನ್ ಸಾಮರ್ಥ್ಯದ 6.2 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಈ ಡಿಸ್‌ಪ್ಲೇಯು ವಾಟರ್ ಡ್ರಾಪ್ ನಾಚ್ ಶೈಲಿಯನ್ನ ಹೊಂದಿದ್ದು, ಡಿಸ್‌ಪ್ಲೇ ಅನುಪಾತವು 19:9 ಆಗಿದೆ. ಡಿಸ್‌ಪ್ಲೇ 271ppi ಪಿಕ್ಸೆಲ್ ಸಾಂದ್ರತೆ ಯನ್ನ ಒಳಗೊಂಡಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು 89% ರಷ್ಟಾಗಿದೆ.

ಪ್ರೊಸೆಸರ್ ಯಾವುದು
ಒಪ್ಪೋ A12 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ 2.3GHz, ಕಾರ್ಟೆಕ್ಸ್A53 ಒಳಗೊಂಡಿರುವ ಮೀಡಿಯಾ ಟೆಕ್ ಹಿಲಿಯೋ P35 ಪ್ರೊಸೆಸರ್ ವೇಗವನ್ನ ಹೊಂದಿದ್ದು, ಆಂಡ್ರಾಯ್ಡ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 3GB RAM ಮತ್ತು 32GB, ಹಾಗೂ 4GB RAM ಮತ್ತು 64GB ಶೇಖರಣಾ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಯನ್ನ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್ ಮೂಲಕ 256GB ವೆರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸುವ ಆಯ್ಕೆ ಇದೆ.

ಡ್ಯುಯಲ್ ಕ್ಯಾಮೆರಾ
ಒಪ್ಪೋ A12 ಸ್ಮಾರ್ಟ್‌ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್ ಜೂಮ್, ಆಟೋ ಫ್ಲಾಶ್, ಟಚ್ ಟು ಫೋಕಸ್ ಆಯ್ಕೆಗಳು ಇವೆ.

ಬ್ಯಾಟರಿ ಮತ್ತು ಇತರೆ
ಒಪ್ಪೋ A12 ಸ್ಮಾರ್ಟ್‌ಫೋನ್ 4,230mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ದೀರ್ಘಾವಾಧಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್, ಸೌಲಭ್ಯಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಒಪ್ಪೋ A12 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. 3GB RAM ಮತ್ತು 32GB ಸ್ಟೋರೇಜ್ ಫೋನ್ ಬೆಲೆಯು 8,490ರೂ. ಆಗಿದೆ. ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆಯು 10,990ರೂ. ಆಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190