Home
ಸುದ್ದಿಜಾಲ

Oppo: ಅಗ್ಗದ ಬೆಲೆಯ ಈ ಒಪ್ಪೋ ಸ್ಮಾರ್ಟ್‌ಫೋನ್‌ ಇನ್ನಷ್ಟು ಕಡಿಮೆ ಬೆಲೆಗೆ: 32 GB ಸ್ಟೋರೇಜ್‌

ಒಪ್ಪೋ ಫೋನ್‌ಗಳಿಗೆ (Oppo phone) ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಈ ಕಾರಣಕ್ಕೆ ಒಪ್ಪೋ ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಈ ನಡುವೆ ಒಪ್ಪೋದ ಬಜೆಟ್‌ ಬೆಲೆಯ ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಆಫರ್ ನೀಡುವ ಮೂಲಕ ಒಪ್ಪೋ ಗ್ರಾಹಕರು ಸಂತಸ ಪಡುವಂತೆ ಮಾಡಿದೆ.

ಹೌದು, ಒಪ್ಪೋ ಫೋನ್‌ಗಳಿಗೆ ಭಾರೀ ಬೇಡಿಕೆ ಇದೆ. ಅದರಲ್ಲೂ ಪ್ರಮುಖವಾಗಿ ಕ್ಯಾಮೆರಾ ಪ್ರಿಯರು ಈ ಫೋನ್‌ಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಈ ಬೆಳವಣಿಗೆ ನಡುವೆ ಒಪ್ಪೋ A16E ಸ್ಮಾರ್ಟ್‌ಫೋನ್‌ಗೆ (Oppo A16E smartphone) ಆಫರ್ ನೀಡಲಾಗಿದ್ದು, ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 32 GB ಸ್ಟೋರೇಜ್‌ ಆಯ್ಕೆ ಹಾಗೂ ಐ-ಕೇರ್ ಐಪಿಎಸ್ ಡಿಸ್‌ಪ್ಲೇನೊಂದಿಗೆ ಕಾಣಿಸಿಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ಎಷ್ಟು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಅಗ್ಗದ ಬೆಲೆಯ ಈ ಒಪ್ಪೋ ಸ್ಮಾರ್ಟ್‌ಫೋನ್‌ ಇನ್ನಷ್ಟು ಕಡಿಮೆ ಬೆಲೆಗೆ

ಒಪ್ಪೋ A16E ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಸ್ಮಾರ್ಟ್‌ಫೋನ್ 13,990ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 8,680ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ 37% ರಿಯಾಯಿತಿ ಘೋಷಣೆ ಮಾಡಲಾಗಿದೆ. ಪರಿಣಾಮ ನೀವು ಸಾಕಷ್ಟು ಹಣ ಉಳಿಸುವ ಮೂಲಕ ಈ ಫೋನ್‌ ಖರೀದಿ ಮಾಡಬಹುದು. ಅದಾಗ್ಯೂ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿಸಬೇಕು ಅಂದರೆ ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳಬಹುದು.

ಬ್ಯಾಂಕ್‌ ಆಫರ್ ಬಗ್ಗೆ ತಿಳಿಸುವುದಾದರೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ ಬ್ಯಾಂಕ್ 10% ರಿಯಾಯಿತಿ, ಫ್ಲಿಪ್‌ಕಾರ್ಟ್‌ (Flipkart) ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸೇರಿದಂತೆ ಅನೇಕ ಬ್ಯಾಂಕ್‌ ಆಫರ್‌ಗಳು ಲಭ್ಯ ಇವೆ.

ಅಗ್ಗದ ಬೆಲೆಯ ಈ ಒಪ್ಪೋ ಸ್ಮಾರ್ಟ್‌ಫೋನ್‌ ಇನ್ನಷ್ಟು ಕಡಿಮೆ ಬೆಲೆಗೆ

ಒಪ್ಪೋ A16E ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಇನ್ನು ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಕಡೆ ಕಣ್ಣಾಯಿಸುವುದಾದರೆ ಈ ಫೋನ್ 6.52 ಇಂಚಿನ ಹೆಚ್‌ಡಿ+ ಐ-ಕೇರ್ IPS ಡಿಸ್ಪ್ಲೇ 60Hz ನ ರಿಫ್ರೆಶ್ ದರವನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v3 20:9 ಆಕಾರ ಅನುಪಾತದೊಂದಿಗೆ ಪ್ರದರ್ಶನಕ್ಕೆ ರಕ್ಷಣೆ ನೀಡುತ್ತದೆ.ಇದು 720 x 1600 ರೆಸಲ್ಯೂಶನ್ ಮತ್ತು 269ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ.

ಒಪ್ಪೋ A16E ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಇನ್ನು ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಹಿಲಿಯೋ P22 ಚಿಪ್‌ಸೆಟ್ ಕಾರ್ಯಕ್ಷಮತೆಹೊಂದಿದ್ದು, ಇದು ಆಕ್ಟಾ-ಕೋರ್ ಕಾರ್ಟೆಕ್ಸ್ A53 ಸಿಪಿಯು ಅನ್ನು 2GHz ಗರಿಷ್ಠ ಆವರ್ತನದೊಂದಿಗೆ ರನ್‌ ಮಾಡಲಿದೆ. ಇದರೊಂದಿಗೆ ಪವರ್‌ ವಿಆರ್‌ GE8320 ಜಿಪಿಯು ಬಲದೊಂದಿಗೆ ಕೆಲಸ ಮಾಡಲಿದೆ. ಅಷ್ಟೇ ಅಲ್ಲದೆ 3GB RAM ಹಾಗೂ 32GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಈ ಫೋನ್‌ ಪಡೆದಿದೆ.

ಅಗ್ಗದ ಬೆಲೆಯ ಈ ಒಪ್ಪೋ ಸ್ಮಾರ್ಟ್‌ಫೋನ್‌ ಇನ್ನಷ್ಟು ಕಡಿಮೆ ಬೆಲೆಗೆ

ಒಪ್ಪೋ A16E ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್‌ನ ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದ್ದು, ಇದು ಡಿಜಿಟಲ್ ಜೂಮ್, ಬ್ಯಾಕ್‌ಲಿಟ್ ಹೆಚ್‌ಡಿಆರ್, ನೈಟ್ ಮೋಡ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 5 ಮೆಗಾಪಿಕ್ಸೆಲ್‌ ವೈಡ್ ಆಂಗಲ್ ಸೆನ್ಸರ್‌ ಅನ್ನು ಈ ಫೋನ್‌ಹೊಂದಿದೆ. ಹಾಗೆಯೇ 4230mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಈ ಫೋನ್‌ ಕಾಣಿಸಿಕೊಂಡಿದೆ.

Best Mobiles in India

English summary
Oppo A16E smartphone is on offer so you can save a lot of money. The smartphone comes with a 32 GB storage option and an i-Care IPS display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+