ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ ಸುವರ್ಣಾವಕಾಶ: ಈ ಫೋನ್‌ಗೆ 50% ಡಿಸ್ಕೌಂಟ್!
ಒಪ್ಪೋ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದ್ದು, ಈಗಾಗಲೇ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಅಗ್ಗದ ದರದಲ್ಲಿ ಮಾರಾಟ ಆಗುತ್ತಿವೆ. ಅದಾಗ್ಯೂ ನೀವು ಈ ಪ್ಲಾಟ್‌ಫಾರ್ಮ್ ಮೂಲಕ ಒಪ್ಪೋದ ಈ ಫೋನ್ ಅನ್ನು 50% ಗಿಂತಲೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ.
ಹೌದು, ಒಪ್ಪೋ ಫೋನ್‌ಗಳಿಗೆ ಬೇಡಿಕೆ ಹೆಚ್ಚಿರುವಂತೆಯೇ ಅವುಗಳ ಪೂರೈಕೆಯಲ್ಲೂ ಒಪ್ಪೋ ಕಂಪೆನಿ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇದರ ಭಾಗವಾಗಿಯೇ ಈ ಒಪ್ಪೋ A17 (oppo A17) ಸ್ಮಾರ್ಟ್‌ಫೋನ್ ಅನ್ನು ನೀವು 50% ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಫೋನ್ ಇಷ್ಟೊಂದು ಆಫರ್‌ಬೆಲೆಗೆ ಎಲ್ಲಿ ಲಭ್ಯ?, ಇದರ ಫೀಚರ್ಸ್ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಈ ಆಫರ್ ಎಲ್ಲಿ?: ಅಮೆಜಾನ್, ಫ್ಲಿಪ್‌ಕಾರ್ಟ್ ಶೈಲಿಯಲ್ಲಿಯೇ ಇದೀಗ ಜಿಯೋ ಮಾರ್ಟ್ ಪ್ರಸ್ತುತ ಎಲ್ಲಾ ಸ್ಮಾರ್ಟ್‌ಡಿವೈಸ್‌ಗಳಿಗೆ ಆಫರ್ ನೀಡಿದ್ದು, ಎಲೆಕ್ಟ್ರಾನಿಕ್ಸ್ ಫೆಸ್ಟ್ ಆರಂಭ ಮಾಡಿದೆ. ಈ ಮೂಲಕ ನೀವು ಯಾವುದೇ ಸ್ಮಾರ್ಟ್ ಡಿವೈಸ್ ಅನ್ನು ಅಗ್ಗದ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅದರಂತೆ ಈಗ 50% ಡಿಸ್ಕೌಂಟ್‌ಆಫರ್ ಪಡೆದುಕೊಂಡಿರುವ ಒಪ್ಪೋ A17 ಸ್ಮಾರ್ಟ್‌ಫೋನ್‌ನ ಫೀಚರ್ಸ್ ಕಡೆ ಕಣ್ಣಾಯಿಸೋಣ.
ಒಪ್ಪೋ A17 ಪ್ರಮುಖ ಫೀಚರ್ಸ್:ಈ ಸ್ಮಾರ್ಟ್ ಫೋನ್ 6.56 ಇಂಚಿನ ಹೆಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 720x1,612 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಜೊತೆಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಈ ಫೋನ್ ಮೀಡಿಯಾಟೆಕ್ ಹಿಲಿಯೋ G35 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಆಧಾರಿತ ಕಂಪೆನಿಯ ಸ್ವಂತ ಕಲರ್ ಓಎಸ್ 12.1.1 ನಲ್ಲಿ ರನ್ ಆಗಲಿದೆ.

ಇದರ ಸ್ಟೋರೇಜ್ ವಿಚಾರಕ್ಕೆ ಬಂದರೆ ಈ ಫೋನ್ 4GB RAM ಅನ್ನು ಹೊಂದಿದ್ದು ಇದನ್ನು 8GB ವರೆಗೆ ವಿಸ್ತರಣೆ ಮಾಡಬಹುದಾದ ಅವಕಾಶ ನೀಡಲಾಗಿದೆ. ಜೊತೆಗೆ 64GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಪ್ಯಾಕ್ ಆಗಿದೆ. ಇದಿಷ್ಟೇ ಅಲ್ಲದೆ, ಮೈಕ್ರೋ ಎಸ್‌ಡಿ ಕಾರ್ಡ್ ಬಳಕೆ ಮಾಡುವ ಮೂಲಕ ನೀವು 1TB ವರೆಗೂ ಸ್ಟೋರೇಜ್ ವಿಸ್ತರಿಸಬಹುದಾಗಿದೆ.
ಇನ್ನುಳಿದಂತೆ ಇದರ ಕ್ಯಾಮೆರಾ ವಿಶೇಷತೆ ಗಮನಿಸಿದರೆ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾ ಮತ್ತು f/2.8 ಆಯ್ಕೆಯೊಂದಿಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಸೆಲ್ಫಿಗಾಗಿ f/2.2 ಆಯ್ಕೆಯೊಂದಿಗೆ 5 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಇನ್ನು ಈ ಒಪ್ಪೋ A17 ಫೋನ್‌ನ ಬ್ಯಾಟರಿಬಗ್ಗೆ ಕಣ್ಣಾಡಿಸುವುದಾದರೆ ಇದು 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ದೀರ್ಘ ಸಮಯ ಬ್ಯಾಕಪ್ ನೀಡಲಿದೆ. ಜೊತೆಗೆ ವೈ-ಫೈ 5, ಬ್ಲೂಟೂತ್ ಆವೃತ್ತಿ v5.3, ಜಿಪಿಎಸ್, A-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಇದರ ಆಫರ್‌ಬೆಲೆಯ ಬಗ್ಗೆ ಕಣ್ಣಾಡಿಸೋಣ.
50% ಡಿಸ್ಕೌಂಟ್‌ನಲ್ಲಿ ಒಪ್ಪೋ A17: ಮೊದಲೇ ತಿಳಿಸಿದಂತೆ ಜಿಯೋ ಮಾರ್ಟ್‌ನಲ್ಲಿ ಈ ಆಫರ್ ಲಭ್ಯವಿದ್ದು, 50 % ಡಿಸ್ಕೌಂಟ್ ಪಡೆದುಕೊಳ್ಳುವ ಮೂಲಕ 24,999 ರೂ. ಗಳ ಮೂಲ ಬೆಲೆಯ ಫೋನ್ 12,000 ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ನೀವು ಹಲವಾರು ಬ್ಯಾಂಕ್‌ಗಳ ಕಾರ್ಡ್‌ಗಳ ಮೇಲೂ ಕ್ಯಾಶ್‌ಬ್ಯಾಕ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಐಸಿಐಸಿಐ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡಿದರೆ 2,500 ರೂ. ಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ಈ ಒಪ್ಪೋ A17 ಫೋನ್ ಅನ್ನು 10,000 ರೂ. ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಜಿಯೋ ಮಾರ್ಟ್‌ನಲ್ಲಿ ಮೊದಲ ಬಾರಿಗೆ ಖರೀದಿ ಮಾಡುತ್ತಿದ್ದೀರಿ ಎಂದಾದ್ರೆ ಅದಕ್ಕೂ ಆಫರ್ ಲಭ್ಯವಾಗುತ್ತಿದೆ. ಒಮ್ಮೆಲೆ ಇಷ್ಟು ಹಣ ಪಾವತಿ ಮಾಡಲು ಸಾಧ್ಯವಿಲ್ಲ ಎನ್ನುವವರಿಗೆ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗಿದೆ.


Click it and Unblock the Notifications








