Home
ಸುದ್ದಿಜಾಲ

ಒಪ್ಪೋದ ಈ ಜನಪ್ರಿಯ ಫೋನಿನ ಡಿಸ್ಕೌಂಟ್‌ ಬೆಲೆ ತಿಳಿದ್ರೆ, ವಾವ್‌ ಅನ್ನೋದು ಪಕ್ಕಾ!

ಇ ಕಾಮರ್ಸ್‌ ದೈತ್ಯ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಏನಾದರೊಂದು ಕೊಡುಗೆ ಲಭ್ಯ ಇರುತ್ತದೆ. ಈ ನಿಟ್ಟಿನಲ್ಲಿ ಬಹುತೇಕ ಖರೀದಿದಾರರು ಅಮೆಜಾನ್‌ ವೆಬ್‌ಸೈಟ್‌ ಆಯ್ಕೆ ಮಾಡುತ್ತಾರೆ. ಅಮೆಜಾನ್‌ ನಲ್ಲಿ ಇದೀಗ ಬಜೆಟ್‌ ಬೆಲೆಯ ಒಪ್ಪೋ A17 ಸ್ಮಾರ್ಟ್‌ಫೋನ್‌ ಸಖತ್ ರಿಯಾಯಿತಿ ಪಡೆದಿದ್ದು, ಗ್ರಾಹಕರು ಭರ್ಜರಿ ಖುಷಿ ನೀಡಿದೆ.

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ನಲ್ಲಿ ಒಪ್ಪೋ A17 ಫೋನ್‌ ಶೇ. 23% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನಿನ 4GB + 64GB ವೇರಿಯಂಟ್‌ ಬೆಲೆಯು 14,999ರೂ. ಆಗಿದ್ದು, ಆದರೆ ಅಮೆಜಾನ್‌ ಕೊಡುಗೆಯಲ್ಲಿ ಈ ಫೋನ್‌ ಸದ್ಯ 11,490ರೂ. ಗಳಿಗೆ ಖರೀದಿಗೆ ಲಭ್ಯವಾಗಲಿದೆ. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ದೊರೆಲಿದೆ.

ಒಪ್ಪೋದ ಈ ಜನಪ್ರಿಯ ಫೋನಿನ ಡಿಸ್ಕೌಂಟ್‌ ಬೆಲೆ ತಿಳಿದ್ರೆ, ವಾವ್‌ ಅನ್ನೋದು ಪಕ್ಕಾ!

ಅಂದಹಾಗೆ ಒಪ್ಪೋ A17 ಮೊಬೈಲ್‌ ಮೀಡಿಯಾ ಟೆಕ್ ಹಿಲಿಯೊ G35 ಪ್ರೊಸೆಸರ್‌ನಲ್ಲಿ ಕಾರ್ಯ ಮಾಡಲಿದ್ದು, ಇದು 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಅಲ್ಲದೇ ಈ ಮೊಬೈಲ್‌ ಲೇಕ್ ಬ್ಲೂ ಮತ್ತು ಮಿಡ್ನೈಟ್ ಬ್ಲಾಕ್ ಕಲರ್‌ ಆಯ್ಕೆಗಳನ್ನು ಹೊಂದಿದೆ. ಹಾಗಾದರೇ ಒಪ್ಪೋ A17 ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌ ಮತ್ತು ರಚನೆ ಹೀಗಿದೆ

ಒಪ್ಪೋ A17 ಫೋನ್‌ 6.56 ಇಂಚಿನ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಅನ್ನು ಪಡೆದಿದ್ದು, 100% DCI-P3 ಕಲರ್‌ ಗ್ಯಾಮಟ್‌ ರೇಂಜ್‌ ಅನ್ನು ಹೊಂದಿದೆ. ಇದು ವಾಟರ್ ಡ್ರಾಪ್ ನಾಚ್ ಡಿಸ್‌ಪ್ಲೇ ವಿನ್ಯಾಸವನ್ನು ಒಳಗೊಂಡಿದೆ.

ಒಪ್ಪೋದ ಈ ಜನಪ್ರಿಯ ಫೋನಿನ ಡಿಸ್ಕೌಂಟ್‌ ಬೆಲೆ ತಿಳಿದ್ರೆ, ವಾವ್‌ ಅನ್ನೋದು ಪಕ್ಕಾ!

ಯಾವ ಪ್ರೊಸೆಸರ್‌ ಲಭ್ಯವಿದೆ

ಒಪ್ಪೋದ ಈ ಮೊಬೈಲ್‌ ಮೀಡಿಯಾ ಟೆಕ್ ಹಿಲಿಯೊ G35 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್ ಬೆಂಬಲವನ್ನು ಹೊಂದಿದೆ. ಇದರೊಂದಿಗೆ 4GB RAM ಮತ್ತು 64GB ಆಂತರೀಕ ಸ್ಟೋರೇಜ್‌ ಅನ್ನು ಪಡೆದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 256 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಕೂಡ ಒಳಗೊಂಡಿದೆ.

ಒಪ್ಪೋದ ಈ ಜನಪ್ರಿಯ ಫೋನಿನ ಡಿಸ್ಕೌಂಟ್‌ ಬೆಲೆ ತಿಳಿದ್ರೆ, ವಾವ್‌ ಅನ್ನೋದು ಪಕ್ಕಾ!

ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ಒಪ್ಪೋ A17 ಮೊಬೈಲ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ ವೀಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಇದರ ಜೊತೆಗೆ ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI, 360 ಡಿಗ್ರಿ ಫಿಲ್ ಲೈಟ್, ಪೋರ್ಟ್ರೇಟ್ ರಿಟೌಚಿಂಗ್, HDR ಅನ್ನು ಆಯ್ಕೆಗಳು ಇವೆ.

ಅಧಿಕ ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಒಪ್ಪೋ A17 ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಮತ್ತು ಸೂಪರ್ ನೈಟ್‌ಟೈಮ್ ಸ್ಟ್ಯಾಂಡ್‌ಬೈ ಅನ್ನು ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, USB-C ಅನ್ನು ಹೊಂದಿದೆ. ಇದಲ್ಲದೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು ಆಕ್ಸಿಲೆರೋಮೀಟರ್‌ ಅನ್ನು ಪಡೆದುಕೊಂಡಿದೆ.

ಮೆಮೊರಿ ಆಯ್ಕೆ ಮತ್ತು ಕಲರ್‌ ಆಯ್ಕೆ

ಒಪ್ಪೋ A17 ಫೋನ್‌ 4GB + 64GB ವೇರಿಯಂಟ್‌ ಆಯ್ಕೆ ಹೊಂದಿದ್ದು, ಇನ್ನು ಈ ಫೋನ್‌ ಲೇಕ್ ಬ್ಲೂ ಮತ್ತು ಮಿಡ್ನೈಟ್ ಬ್ಲಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಖರೀದಿದಾರರು ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Oppo A17 price cut on amazon. check offer price and specifications details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+