ಒಪ್ಪೋ A17k ಮೊಬೈಲ್ ಡಿಸ್ಕೌಂಟ್ ತಿಳಿದ್ರೆ, ನೀವು ವಾವ್ ಅಂತೀರಾ!
ಒಪ್ಪೋ ಮೊಬೈಲ್ ಸಂಸ್ಥೆಯ ಜನಪ್ರಿಯ ಫೋನ್‌ಗಳ ಪೈಕಿ ಒಪ್ಪೋ A17k ಕೂಡಾ ಒಂದಾಗಿದ್ದು, ಈ ಫೋನ್ ಇದೀಗ ಭಾರೀ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, ಸಿಂಗಲ್ ಕ್ಯಾಮೆರಾ ಸೆನ್ಸಾರ್ ಸೌಲಭ್ಯ ಸಹ ಪಡೆದುಕೊಂಡಿದೆ.
ಹೌದು, ದೈತ್ಯ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಒಪ್ಪೋ A17k ಮೊಬೈಲ್ ಶೇ. 27% ರಷ್ಟು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್ 3GB + 64 GB ಸ್ಟೋರೇಜ್ ವೇರಿಯಂಟ್ ಬೆಲೆ 12,999 ರೂ.ಗಳು ಆಗಿದ್ದು, ಗ್ರಾಹಕರು ಅಮೆಜಾನ್ ಕೊಡುಗೆಯಲ್ಲಿ 9,499ರೂ. ಗಳ ಪ್ರೈಸ್‌ನಲ್ಲಿ ಖರೀದಿಸಬಹುದು. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ಕೆಲವು ಆಫರ್ ಸಹ ಇದ್ದು, ಎಕ್ಸ್‌ಚೇಂಜ್ ಕೊಡುಗೆ ಕೂಡಾ ಲಭ್ಯ.

ಒಪ್ಪೋ A17k ಮೊಬೈಲ್ ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಒಳಗೊಂಡಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಹಾಗೆಯೇ ಆಂತರೀಕ ಸ್ಟೋರೇಜ್ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ಇದೆ. ಹಾಗಾದರೇ ಒಪ್ಪೋ A17k ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೋ A17k ಡಿಸ್‌ಪ್ಲೇ ಮತ್ತು ವಿನ್ಯಾಸ ರಚನೆ :
ಒಪ್ಪೋ A17k ಮೊಬೈಲ್ 6.56 ಇಂಚಿನ ಹೆಚ್‌ಡಿ + ರೆಸಲ್ಯೂಶನ್ ಜೊತೆಗೆ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಫೋನ್ 720 x 1612 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಇದರೊಂದಿಗೆ ಇದು 60Hz ರಿಫ್ರೆಶ್ ರೇಟ್, 600 nits ಬ್ರೈಟ್‌ನೆಸ್ ನೀಡುವ ಫೀಚರ್ಸ್ ಪಡೆದಿದೆ.
ಒಪ್ಪೋ A17k ಪ್ರೊಸೆಸರ್ ಕಾರ್ಯವೈಖರಿ :
ಒಪ್ಪೋ A17k ಮೊಬೈಲ್ ಆಂಡ್ರಾಯ್ಡ್ 12 ಜೊತೆಗೆ Color OS 12.1 ಅನ್ನು ಪಡೆದಿದ್ದು, ಅಲ್ಲದೇ ಒಪ್ಪೋ A17k ಮೀಡಿಯಾ ಟೆಕ್ ಹಿಲಿಯೋ G35 ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ 3GB RAM ಜೊತೆಗೆ 64GB ಆಂತರೀಕ ಸ್ಟೋರೇಜ್ ಆಯ್ಕೆ ಕೂಡಾ ಪಡೆದಿದೆ. ಇದರೊಂದಿಗೆ ಆಂತರೀಖ ಸ್ಟೋರೇಜ್ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ಒದಗಿಸಲಾಗಿದೆ. ಇದರೊಂದಿಗೆ ಹಾಗೆಯೇ 4GB RAM ಅನ್ನು ವಿಸ್ತರಿಸುವ ಆಯ್ಕೆ ಸಹ ಒಳಗೊಂಡಿದೆ.
ಒಪ್ಪೋ A17k ಸಿಂಗಲ್ ಕ್ಯಾಮೆರಾ ಸೆನ್ಸಾರ್ ಇದೆ :
ಒಪ್ಪೋ A17k ಮೊಬೈಲ್ 8 ಮೆಗಾ ಪಿಕ್ಸೆಲ್ ಆಟೋಫೋಕಸ್ ಸೆನ್ಸರ್ ಹಾಗೂ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಫೀಕ್ಸೆಡ್ ಫೋಕಸ್ ಸೆನ್ಸರ್ ಕ್ಯಾಮೆರಾ ರಚನೆ ಪಡೆದಿದ್ದು, ಇವು OIS ಫೀಚರ್ಸ್ ಹೊಂದಿಲ್ಲ. ಹಾಗೆಯೇ IPX4 ರೇಟಿಂಗ್‌ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್ ವಿಶೇಷತೆ ಒಳಗೊಂಡಿದೆ.
ಒಪ್ಪೋ A17k ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳ ಆಯ್ಕೆ :
ಒಪ್ಪೋ A17k ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಸೈಡ್ ಫಿಂಗರ್ ಪ್ರಿಂಟ್ ಅನ್‌ಲಾಕ್ ಆಯ್ಕೆಯೊಂದಿಗೆ ಅಲ್ಟ್ರಾವಾಲ್ಯೂಮ್ ಮೋಡ್ ಫೀಚರ್ಸ್ ಇದರಲ್ಲಿ ಇದೆ. ಇನ್ನು ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್ ಒಳಗೊಂಡಿದೆ.
ಒಪ್ಪೋ A17k ಮೆಮೊರಿ ಹಾಗೂ ಕಲರ್ ಆಯ್ಕೆ ಮಾಹಿತಿ :
ಒಪ್ಪೋ A17k ಮೊಬೈಲ್ 3GB + 64 GB ಸ್ಟೋರೇಜ್ ಹಾಗೂ 4GB + 64GB ಆಂತರೀಕ ಸ್ಟೋರೇಜ್ ವೇರಿಯಂಟ್ ನಲ್ಲಿ ಖರೀದಿಗೆ ಸಿಗುತ್ತದೆ. ಖರೀದಿದಾರರು ಈ ಫೋನ್ ಅನ್ನು ಗೋಲ್ಡ್ ಮತ್ತು ನೇವಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








