Home
ಸುದ್ದಿಜಾಲ

ಒಪ್ಪೋದ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..ಅಗ್ಗದ ಬೆಲೆಗೆ ಲಭ್ಯ!

ಒಪ್ಪೋ ಸಂಸ್ಥೆಯ ಬಜೆಟ್‌ ದರದ ಮೊಬೈಲ್‌ಗಳ ಪೈಕಿ ಒಪ್ಪೋ A17k ಒಂದಾಗಿದ್ದು, ಈ ಫೋನ್‌ ಅಮೆಜಾನ್‌ ತಾಣದಲ್ಲಿ ಇದೀಗ ಭರ್ಜರಿ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.

ಹೌದು, ಜನಪ್ರಿಯ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಒಪ್ಪೋ A17k ಫೋನ್‌ ಶೇ. 31% ರಷ್ಟು ನೇರ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ 3GB + 64 GB ಸ್ಟೋರೇಜ್‌ ವೇರಿಯಂಟ್‌ ಬೆಲೆ 12,999ರೂ.ಗಳು ಆಗಿದ್ದು, ಕೊಡುಗೆಯಲ್ಲಿ 8,999ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಸಬಹುದು. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಕೆಲವು ಆಫರ್‌ ಸಹ ಇದ್ದು, ಜೊತೆಗೆ ಎಕ್ಸ್‌ಚೇಂಜ್ ಕೊಡುಗೆ ಸಹ ದೊರೆಯುತ್ತವೆ.

ಒಪ್ಪೋದ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..ಅಗ್ಗದ ಬೆಲೆಗೆ ಲಭ್ಯ!

ಅಂದಹಾಗೆ ಒಪ್ಪೋ A17k ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಒಳಗೊಂಡಿದೆ. ಹಾಗೆಯೇ ಆಂತರೀಕ ಸ್ಟೋರೇಜ್‌ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ಇದೆ. ಇನ್ನುಳಿದಂತೆ ಒಪ್ಪೋ A17k ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋದ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..ಅಗ್ಗದ ಬೆಲೆಗೆ ಲಭ್ಯ!

ಡಿಸ್‌ಪ್ಲೇ ಡಿಸೈನ್‌ ಮತ್ತು ವಿನ್ಯಾಸ ಹೀಗಿದೆ

ಒಪ್ಪೋ A17k ಸಂಸ್ಥೆಯ 6.56 ಇಂಚಿನ ಹೆಚ್‌ಡಿ + ರೆಸಲ್ಯೂಶನ್ ಜೊತೆಗೆ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 720 x 1612 ಪಿಕ್ಸೆಲ್‌ ರೆಸಲ್ಯೂಶನ್‌ ಒದಗಿಸಲಿದೆ. ಹಾಗೆಯೇ ಇದು 60Hz ರಿಫ್ರೆಶ್ ರೇಟ್‌, 600nits ಬ್ರೈಟ್‌ನೆಸ್‌ ನೀಡುವ ಫೀಚರ್ಸ್‌ ಹೊಂದಿದೆ.

ವೇಗದ ಪ್ರೊಸೆಸರ್‌ ಪವರ್ ಸೌಲಭ್ಯ

ಒಪ್ಪೋ ಸಂಸ್ಥೆಯ ಈ ಮೊಬೈಲ್‌ ಆಂಡ್ರಾಯ್ಡ್ 12 ಜೊತೆಗೆ Color OS 12.1 ಅನ್ನು ಪಡೆದಿದ್ದು, ಅಲ್ಲದೇ ಒಪ್ಪೋ A17k ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ನಿಂದ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ 3GB RAM ಜೊತೆಗೆ 64GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಹೊಂದಿದೆ.

ಒಪ್ಪೋದ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!..ಅಗ್ಗದ ಬೆಲೆಗೆ ಲಭ್ಯ!

ಇದರೊಂದಿಗೆ ಒಪ್ಪೋ A17k ಆಂತರೀಕ ಸ್ಟೋರೇಜ್‌ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಹಾಗೆಯೇ 4GB RAM ಅನ್ನು ವಿಸ್ತರಿಸುವ ಆಯ್ಕೆ ಸಹ ಪಡೆದುಕೊಂಡಿದೆ.

ಸಿಂಗಲ್‌ ರಿಯರ್‌ ಕ್ಯಾಮೆರಾ ರಚನೆ

ಒಪ್ಪೋ A17k ಫೋನ್‌ 8 ಮೆಗಾ ಪಿಕ್ಸೆಲ್‌ ಆಟೋಫೋಕಸ್ ಸೆನ್ಸರ್ ಹಾಗೂ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಫೀಕ್ಸೆಡ್‌ ಫೋಕಸ್ ಸೆನ್ಸರ್‌ ಕ್ಯಾಮೆರಾ ಸೌಲಭ್ಯ ಒಳಗೊಂಡಿದೆ. ಹಾಗೆಯೇ IPX4 ರೇಟಿಂಗ್‌ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್‌ ವಿಶೇಷತೆ ಒಳಗೊಂಡಿದ್ದು, ಇದು 189ಗ್ರಾಂ ತೂಕ ಹೊಂದಿದೆ.

ಅಧಿಕ ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳು

ಒಪ್ಪೋ A17k ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಸೈಡ್‌ ಫಿಂಗರ್ ಪ್ರಿಂಟ್‌ ಅನ್‌ಲಾಕ್‌ ಆಯ್ಕೆಯೊಂದಿಗೆ ಅಲ್ಟ್ರಾವಾಲ್ಯೂಮ್‌ ಮೋಡ್‌ ಫೀಚರ್ಸ್‌ ಕಾಣಬಹುದಾಗಿದೆ. ಹಾಗೆಯೇ ಈ ಫೋನ್‌ 3.5mm ಹೆಡ್‌ಫೋನ್ ಜ್ಯಾಕ್ ಪಡೆದುಕೊಂಡಿದೆ.

ಮೆಮೊರಿ ಹಾಗೂ ಕಲರ್‌ ಆಯ್ಕೆ

ಒಪ್ಪೋ A17k ಮೊಬೈಲ್‌ 3GB + 64 GB ಸ್ಟೋರೇಜ್‌ ಹಾಗೂ 4GB + 64GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ನಲ್ಲಿ ಖರೀದಿಗೆ ಸಿಗುತ್ತದೆ. ಗ್ರಾಹಕರು ಈ ಮೊಬೈಲ್‌ ಅನ್ನು ಗೋಲ್ಡ್ ಮತ್ತು ನೇವಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ.

Best Mobiles in India

English summary
Oppo a17k available at attractive price drop on amazon. specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+